ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ರೈಲ್ವೇ ಹಳಿಯಲ್ಲಿ ಆತ್ಮಹತ್ಯೆಗೆ ಶರಣಾದ ತಾಯಿ-ಮಕ್ಕಳು; ಸಂಬಂಧಿಕರಲ್ಲಿ ಕ್ಷಮೆ ಕೇಳಿದ್ದೇಕೆ?

ರೈಲ್ವೇ ಹಳಿಯಲ್ಲಿ ತಾಯಿ ಮತ್ತು ಮಕ್ಕಳು ಆತ್ಮಹತ್ಯೆಗೆ ಶರಣಾದ ದುರ್ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಮಹಿಳೆ ತನ್ನ ಸಂಬಂಧಿಕರಿಗೆ ಕ್ಷಮೆ ಕೇಳಿ ಪತ್ರ ಬರೆದಿದ್ದು, ಡೆತ್ ನೋಟ್ ಅನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ಆರಂಭಿಸಿದ್ದು, ಈ ಹೃದಯ ವಿದ್ರಾವಕ ಘಟನೆಯ ಹಿಂದಿನ ಕಾರಣಗಳನ್ನು ಪತ್ತೆಹಚ್ಚಲು ಮುಂದಾಗಿದ್ದಾರೆ.

ರೈಲ್ವೇ ಹಳಿಯಲ್ಲಿ ಆತ್ಮಹತ್ಯೆಗೆ ಶರಣಾದ ತಾಯಿ-ಮಕ್ಕಳು

ರೈಲ್ವೇ ಹಳಿಯಲ್ಲಿ ಆತ್ಮಹತ್ಯೆಗೆ ಶರಣಾದ ತಾಯಿ-ಮಕ್ಕಳು -

Priyanka P
Priyanka P Feb 3, 2026 9:40 PM

ಹೈದರಾಬಾದ್, ಫೆ. 3: ತೆಲಂಗಾಣದ ಹೈದರಾಬಾದ್ (Hyderabad) ಹೊರವಲಯದಲ್ಲಿ ಮಹಿಳೆಯೊಬ್ಬಳು ಮತ್ತು ತನ್ನ ಇಬ್ಬರು ಮಕ್ಕಳ ಜತೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಗೂಡ್ಸ್ ರೈಲು ಸಮೀಪಿಸುತ್ತಿದ್ದಂತೆ ಚೆರ್ಲಪಲ್ಲಿ ಮತ್ತು ಘಟ್ಕೇಸರ್ ನಿಲ್ದಾಣಗಳ ನಡುವಿನ ರೈಲ್ವೆ ಹಳಿಗಳ ಮೇಲೆ ಕುಟುಂಬವು ಆತ್ಮಹತ್ಯೆಗೆ ಶರಣಾಗಿದೆ. ಮೃತರನ್ನು ಪಿನ್ನಿಂಟಿ ವಿಜಯ ಶಾಂತಿ ರೆಡ್ಡಿ (38), ಆಕೆಯ ಮಗಳು ಚೇತನಾ ರೆಡ್ಡಿ (18) ಮತ್ತು ಮಗ ವಿಶಾಲ್ ರೆಡ್ಡಿ (17) ಎಂದು ಗುರುತಿಸಲಾಗಿದೆ. ವಿಜಯಾ ಶಾಂತಿ ರೆಡ್ಡಿ ತೆಲಂಗಾಣದ ಮೆಡ್ಚಲ್-ಮಲ್ಕಜ್‌ಗಿರಿ ಜಿಲ್ಲೆಯವಳಾಗಿದ್ದು, ಐಟಿ ಕಂಪನಿಯೊಂದರಲ್ಲಿ ಉದ್ಯೋಗ ಮಾಡುತ್ತಿದ್ದಳು. ಅವರ ಇಬ್ಬರೂ ಮಕ್ಕಳು ಸ್ಥಳೀಯ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು.

ಶುಕ್ರವಾರ (ಜನವರಿ 30) ಸಂಜೆ 6 ಗಂಟೆ ಸುಮಾರಿಗೆ ವಿಜಯಾ ಮನೆಯಿಂದ ಹೊರಟು ತಮ್ಮ ಮಕ್ಕಳನ್ನು ಹಾಸ್ಟೆಲ್‌ಗಳಿಂದ ಕರೆದುಕೊಂಡು ಬಂದಿದ್ದಳು ಎಂದು ಸಿಕಂದರಾಬಾದ್ ಸರ್ಕಾರಿ ರೈಲ್ವೆ ಪೊಲೀಸರು (ಜಿಆರ್‌ಪಿ) ತಿಳಿಸಿದ್ದಾರೆ. ನಂತರ ಕುಟುಂಬವು ರೈಲ್ವೆ ಹಳಿಗಳಿಗೆ ಕಾರಿನಲ್ಲಿ ಹೋಗಿ ಅಲ್ಲೇ ಸಮೀಪದಲ್ಲಿ ವಾಹನವನ್ನು ನಿಲ್ಲಿಸಿತ್ತು. ಬಳಿಕ ತಾಯಿ-ಮಕ್ಕಳು ಹಳಿಗಳ ಮೇಲೆ ನಡೆದುಕೊಂಡು ಹೋಗಿದ್ದರು. ಈ ವೇಳೆ ಗೂಡ್ಸು ರೈಲು ಆಗಮಿಸಿದೆ. ಮೂರು ಮಂದಿ ಹಳಿಯಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಲೋಕೋ ಪೈಲಟ್ ನಿರಂತರವಾಗಿ ಹಾರ್ನ್ ಬಾರಿಸಿದ್ದಾರೆ. ಆದರೆ ಅವರು ಅಲ್ಲಿಂದ ಹೋಗಲಿಲ್ಲ. ಹೀಗಾಗಿ ರೈಲು ಡಿಕ್ಕಿ ಹೊಡೆದು ಮೂವರೂ ಮೃತಪಟ್ಟರು.

ಅನೈತಿಕ ಸಂಬಂಧ ವಿಚಾರಕ್ಕೆ ವ್ಯಕ್ತಿಯ ಕೊಲೆ; ಖ್ಯಾತ ಜ್ಯೋತಿಷಿ ಕಮಲಾಕರ ಭಟ್ ಗುರೂಜಿ ಸೇರಿ 7 ಮಂದಿ ಬಂಧನ

ಕಾರಿನಲ್ಲಿ ವಿಜಯಾ ಬರೆದಿದ್ದಾಳೆ ಎನ್ನಲಾದ ಕೈಬರಹದ ಪತ್ರವನ್ನು ಪೊಲೀಸರು ವಶಪಡಿಸಿಕೊಂಡರು. ಪತ್ರದಲ್ಲಿ ಆಕೆ ಸಂಬಂಧಿಕರಲ್ಲಿ ಕ್ಷಮೆಯಾಚಿಸಿದ್ದಾಳೆ. ತಾನು ಇನ್ನು ಮುಂದೆ ಬದುಕಲು ಬಯಸುವುದಿಲ್ಲ ಎಂದು ಬರೆದಿದ್ದಾಳೆ. ತನ್ನ ಮಕ್ಕಳನ್ನು ಒಂಟಿಯಾಗಿ ಬಿಡುವ ಭಯವನ್ನು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಪೊಲೀಸರು ಪತ್ರವನ್ನು ಕೂಲಂಕುಷವಾಗಿ ಪರಿಶೀಲಿಸುತ್ತಿದ್ದು, ಘಟನೆಗೆ ನಿಖರವಾದ ಉದ್ದೇಶ ಏನಿರಬಹುದು ಎಂಬ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ವಿಜಯಾಳ ಕರೆ ದಾಖಲೆಗಳನ್ನು ಕೂಡ ಪರಿಶೀಲಿಸುತ್ತಿದ್ದಾರೆ.

ದುಬೈನಲ್ಲಿ ಕೆಲಸ ಮಾಡುತ್ತಿರುವ ವಿಜಯಾ ಪತಿ, ಸಾವಿನ ಬಗ್ಗೆ ತಿಳಿದು ನಗರಕ್ಕೆ ಮರಳಿದ್ದು, ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಸಂಬಂಧಿಕರು ಮತ್ತು ನೆರೆಹೊರೆಯವರು, ಕುಟುಂಬವು ಆರ್ಥಿಕ ತೊಂದರೆ ಅಥವಾ ಗಲಾಟೆಯ ಯಾವುದೇ ಲಕ್ಷಣಗಳನ್ನು ತೋರಿಸಲಿಲ್ಲ ಎಂದು ಹೇಳಿದರು. ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಿಕಂದರಾಬಾದ್‌ನ ಆಸ್ಪತ್ರೆಗೆ ರವಾನಿಸಲಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕುಟುಂಬವು ಆತ್ಮಹತ್ಯೆಗೆ ಶರಣಾಗಲು ಕಾರಣವೇನು ಎಂಬುದನ್ನು ಕಂಡುಹಿಡಿಯಲು ಪ್ರತಿಯೊಂದು ದಿಕ್ಕಿನಿಂದಲೂ ತನಿಖೆ ನಡೆಸುತ್ತಿದ್ದಾರೆ.

ತಾಯಿಯ ಪ್ರಿಯಕರನನ್ನು ಕೊಚ್ಚಿ ಕೊಂದು ಪೊಲೀಸರು ಬರುವವರೆಗೂ ಶವದ ಮೇಲೆ ಕಾಲಿಟ್ಟು ನಿಂತ!

ಮಗಳನ್ನೇ ಕೊಂದ ತಂದೆ

ಆಸ್ತಿಗಾಗಿ ಹುಟ್ಟಿಕೊಂಡ ಕೌಟುಂಬಿಕ ಕಲಹದ ಪರಿಣಾಮ ತಂದೆಯೊಬ್ಬ ತನ್ನ ಮಗಳನ್ನೇ ಬಲಿ ತೆಗೆದುಕೊಂಡಿರುವ ಘಟನೆ ಕೇರಳದ ಕಾಸರಗೋಡಿನ ಮಂಜೇಶ್ವರದ ತುಮಿನಾಡಿನಲ್ಲಿ ಸಂಭವಿಸಿದೆ. 18 ವರ್ಷದ ಮಗಳು ಜುಮೈಲ ಕೊಲೆಯಾದ ದುರ್ದೈವಿ. ಜುಮೈಲಾ ತಂದೆ ಉಮರ್ ಫಾರೂಕ್ ಕೊಲೆ ಆರೋಪಿ. ಉಮರ್ ಮತ್ತು ಜುಮೈಲಾಳ ಚಿಕ್ಕಪ್ಪ ಶೇಕುಂ ನಡುವೆ ಆಸ್ತಿಗಾಗಿ ಜಗಳವಾಗುತ್ತಿತ್ತು. ಜಗಳ ತಾರಕಕ್ಕೇರುತ್ತಿದ್ದಂತೆ ಗಲಾಟೆ ಬಿಡಿಸಲು ಜುಮೈಲಾ ಮುಂದಾಗಿದ್ದಳು. ಈ ವೇಳೆ ಅಪ್ಪನಿಂದಲೇ ಕತ್ತಿ ಏಟು ತಗುಲಿ ಜುಮೈಲ ಸಾವಿಗೀಡಾಗಿದ್ದಾಳೆ. ಆರೋಪಿ ಉಮರ್ ಫಾರೂಕ್‌ನನ್ನು ಮಂಜೇಶ್ವರ ಠಾಣೆ ಪೋಲೀಸರು ಬಂಧಿಸಿದ್ದಾರೆ.