ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ದೆಹಲಿ ಸ್ಪೋಟಕ್ಕೆ ವೈದ್ಯರಿಂದಲೇ ಫಂಡಿಂಗ್; 26 ಲಕ್ಷ ರೂ. ದೇಣಿಗೆ ನೀಡಿದ 5 ಡಾಕ್ಟರ್ಸ್

ದೆಹಲಿಯ ಕೆಂಪು ಕೋಟೆಯ ಬಳಿ ಇತ್ತೀಚೆಗೆ ನಡೆದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ವೇಳೆ ಹಣ ಸಂಗ್ರಹದ ಕುರಿತು ಬಂಧಿತ ಆರೋಪಿಗಳಲ್ಲಿ ಒಬ್ಬನಾದ ಮುಜಮ್ಮಿಲ್ ಗನೈ ಸ್ಪೋಟಕ ಮಾಹಿತಿಯನ್ನು ಬಾಯ್ಬಿಟ್ಟಿದ್ದಾನೆ. ದೆಹಲಿಯ ಸ್ಪೋಟಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳ ಖರಿದಿಗೆ ಐವರು ವೈದ್ಯರು ಹಣ ನೀಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.

ದೆಹಲಿ ಸ್ಪೋಟಕ್ಕೆ ಹಣ ನೀಡಿದ್ದು ವೈದ್ಯರು !

ಸಂಗ್ರಹ ಚಿತ್ರ -

ನವದೆಹಲಿ: ಕೆಂಪು ಕೋಟೆಯ (red fort) ಬಳಿ ನಡೆದ ಬಾಂಬ್ ಸ್ಫೋಟದ (Bomb blast) ಸಂಚಿಗೆ ಐವರು ವೈದ್ಯರು ಹಣ ನೀಡಿದ್ದಾರೆ ಎಂದು ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ಮುಜಮ್ಮಿಲ್ ಗನೈ ಸ್ಪೋಟಕ ಮಾಹಿತಿಯನ್ನು ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ. ಬಾಂಬ್ ಸ್ಪೋಟಕ್ಕೆ (Delhi blast) ಮುಜಮ್ಮಿಲ್ ಗನೈ ಸ್ವತಃ 5 ಲಕ್ಷ ನೀಡಿದ್ದು, ಉಳಿದಂತೆ ಅದೀಲ್ ಅಹ್ಮದ್ ರಾಥರ್ 8 ಲಕ್ಷ ಮತ್ತು ಮುಜಫರ್ ಅಹ್ಮದ್ ರಾಥರ್ 6 ಲಕ್ಷ ರೂ. ನೀಡಿದ್ದಾರೆ ಎಂದು ಗನೈ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ತನಿಖಾಧಿಕಾರಿಗಳಿಗೆ ತಿಳಿಸಿದ್ದಾನೆ ಎನ್ನಲಾಗಿದೆ.

ಹಲವಾರು ನಗರಗಳಲ್ಲಿ ಸಂಘಟಿತ ಭಯೋತ್ಪಾದಕ ದಾಳಿಗಳನ್ನು ನಡೆಸಲು ಹಣ ಹೇಗೆ ಸಂಗ್ರಹಿಸಲಾಗಿದೆ ಎನ್ನುವ ಕುರಿತು ವೈಟ್ ಕಾಲರ್ ಭಯೋತ್ಪಾದನಾ ಮಾಡ್ಯೂಲ್ ಪ್ರಕರಣದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾದ ಮುಜಮ್ಮಿಲ್ ಗನೈ ಹಲವು ಸ್ಪೋಟಕ ಮಾಹಿತಿಗಳನ್ನು ತನಿಖಾಧಿಕಾರಿಗಳ ಮುಂದೆ ಬಾಯ್ಬಿಟ್ಟಿದ್ದಾನೆ.

ಇದನ್ನೂ ಓದಿ: Bengaluru Robbery Case: 7.11 ಕೋಟಿ ದರೋಡೆಗೆ ಅಸಲಿ ಕಾರಣ ಬಹಿರಂಗ; ವಿಚಾರಣೆ ವೇಳೆ ಸತ್ಯ ಬಾಯ್ಬಿಟ್ಟ ಖದೀಮರು!

ಭಯೋತ್ಪಾದಕ ದಾಳಿಗಳನ್ನು ನಡೆಸಲು ಕಳೆದ ಎರಡು ವರ್ಷಗಳಿಂದ ಯೋಜನೆ ನಡೆಯುತ್ತಿದೆ. ಇದಕ್ಕಾಗಿ ಐವರು ವೈದ್ಯರಿಂದ 26 ಲಕ್ಷ ರೂ. ಹಣವನ್ನು ಸಂಗ್ರಹಿಸಲಾಗಿದೆ. ಸ್ಫೋಟಕಗಳು ಮತ್ತು ರಿಮೋಟ್-ಟ್ರಿಗ್ಗರಿಂಗ್ ಸಾಧನಗಳನ್ನು ಖರೀದಿಸಲು ಹಣವನ್ನು ಬಳಸಲಾಗಿದೆ ಎಂಬುದು ವಿಚಾರಣೆಯಲ್ಲಿ ತಿಳಿದುಬಂದಿದೆ.

ಬಾಂಬ್ ಸ್ಪೋಟಕ್ಕೆ ಗನೈ ಸ್ವತಃ 5 ಲಕ್ಷ ರೂ. ನೀಡಿದ್ದು, ಅದೀಲ್ ಅಹ್ಮದ್ ರಾಥರ್ 8 ಲಕ್ಷ ಮತ್ತು ಮುಜಫರ್ ಅಹ್ಮದ್ ರಾಥರ್ 6 ಲಕ್ಷ ರೂ. ನೀಡಿದ್ದಾರೆ. ಶಾಹೀನ್ ಶಾಹಿದ್ 5 ಲಕ್ಷ, ಡಾ. ಉಮರ್ ಉನ್-ನಬಿ ಮೊಹಮ್ಮದ್ 2 ಲಕ್ಷ ರೂ. ನೀಡಿದ್ದಾರೆ. ಬಾಂಬ್ ಸ್ಪೋಟಕ್ಕೂ ಮುನ್ನ ಎಲ್ಲ ಹಣವನ್ನು ಉಮರ್‌ಗೆ ಹಸ್ತಾಂತರಿಸಲಾಯಿತು.

ಬಾಂಬ್ ಸ್ಪೋಟಕ್ಕೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ಗುರುಗ್ರಾಮ್ ಮತ್ತು ನುಹ್‌ನಿಂದ ಸುಮಾರು 3 ಲಕ್ಷ ರೂ. ನೀಡಿ ಖರೀದಿ ಮಾಡಲಾಗಿದೆ. ಸ್ಫೋಟಕಗಳನ್ನು ತಯಾರಿಸಲು ಹಲವು ದಿನಗಳು ಬೇಕಾಗಿತ್ತು. ಅದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಮಾಡಲಾಗಿತ್ತು ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸ್ಪೋಟಕ ತಯಾರಿಯ ಮೇಲ್ವಿಚಾರಣೆಯನ್ನು ಸ್ವತಃ ಉಮರ್ ಉನ್-ನಬಿಯೇ ನೋಡಿಕೊಳ್ಳುತ್ತಿದ್ದ. ಆತ ರಿಮೋಟ್ ಡಿಟೋನೇಟರ್‌ಗಳು ಮತ್ತು ಸರ್ಕ್ಯೂಟ್ರಿಯ ವ್ಯವಸ್ಥೆ ನೋಡಿಕೊಳ್ಳುತ್ತಿದ್ದನು. ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ಜವಾಬ್ದಾರಿಗಳನ್ನು ಸ್ಪಷ್ಟ ವಿಭಜನೆ ಮಾಡಲಾಗಿತ್ತು. ಇದರ ಮೇಲುಸ್ತುವಾರಿಯನ್ನು ಸ್ವತಃ ಉಮರ್ ನೋಡಿಕೊಳ್ಳುತ್ತಿದ್ದ ಎಂದು ತನಿಖಾಧಿಕಾರಿ ಹೇಳಿದ್ದಾರೆ.

ಇದನ್ನೂ ಓದಿ: Bengaluru Kidnap Case: ಕೋರಮಂಗಲ ಕಾಲ್‌ ಸೆಂಟರ್‌ ಉದ್ಯೋಗಿಗಳ ಕಿಡ್ನ್ಯಾಪ್‌ ಕೇಸ್‌; ಪೊಲೀಸ್‌ ಪೇದೆ ಸೇರಿ 8 ಮಂದಿ ಅರೆಸ್ಟ್‌

ಪ್ರಕರಣಕ್ಕೆ ಸಂಬಂಧಿಸಿ ಮೂವರು ವೈದ್ಯರು, ಗನೈ, ಶಾಹಿದ್ ಮತ್ತು ಅದೀಲ್ ರಾಥರ್ ನನ್ನುಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎನ್ನಲಾದ ರಾಥರ್ ನ ಸಹೋದರ ಮುಜಾಫರ್ ಅಫ್ಘಾನಿಸ್ತಾನದಲ್ಲಿದ್ದಾನೆ. ಇನ್ನು ಉಮರ್, ಗನೈ ಮತ್ತು ಶಾಹಿದ್ ಜೊತೆಗೆ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಕೆಲಸ ಮಾಡುತ್ತಿದ್ದ ನಿಸ್ಸಾರ್ ಉಲ್-ಹಸನ್‌ಗಾಗಿ ಹುಡುಕಾಟ ನಡೆಸಲಾಗುತ್ತಿದೆ.