ದೆಹಲಿ ಕಾರು ಬಾಂಬ್ ಸ್ಫೋಟ ಪ್ರಕರಣ; ಎರಡನೇ ಆತ್ಮಹತ್ಯಾ ಬಾಂಬರ್ ನೇಮಕಕ್ಕೆ ಮುಂದಾಗಿದ್ದ ಮಾಸ್ಟರ್ ಮೈಂಡ್
ಕಳೆದ ನವೆಂಬರ್ 10ರಂದು ದೆಹಲಿಯ ಕೆಂಪು ಕೋಟೆ ಬಳಿ ನಡೆದ ಕಾರು ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆತ್ಮಹತ್ಯಾ ಬಾಂಬರ್ ಅನ್ನು ನೇಮಿಸಲುಸಂಚಿನ ಮಾಸ್ಟರ್‌ಮೈಂಡ್ ಕಾಶ್ಮೀರ ನಿವಾಸಿಯೊಬ್ಬನನ್ನು ಸಂಪರ್ಕಿಸಿದೆ. ಆದರೆ ಸೇಬು ಸುಗ್ಗಿಯ ಕಾಲವಾದ್ದರಿಂದ ಆತ ತನ್ನ ಕುಟುಂಬಕ್ಕೆ ಸಹಾಯದ ಅಗತ್ಯವಿದೆ ಎಂದು ಹೇಳಿ ನಿರಾಕರಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಂಗ್ರಹ ಚಿತ್ರ -
ಶ್ರೀನಗರ: ದೆಹಲಿಯ (delhi) ಕೆಂಪು ಕೋಟೆಯ (red fort) ಬಳಿ ನಡೆದ ಕಾರು ಬಾಂಬ್ ಸ್ಪೋಟಕ್ಕೆ ಸಂಬಂಧಿಸಿ ಹೊಸ ಹೊಸ ಮಾಹಿತಿಗಳು ಬೆಳಕಿಗೆ ಬರುತ್ತಲೇ ಇದೆ. ಇದೀಗ ಈ ಪ್ರಕರಣಕ್ಕೆ ಆತ್ಮಹತ್ಯಾ ಬಾಂಬರ್ (suicide bomber) ಆಗಲು ಕಾಶ್ಮೀರದ (Kashmir) ಯುವಕನೊಬ್ಬನನ್ನು ಸಂಚಿನ ಮಾಸ್ಟರ್ ಮೈಂಡ್ (mastermind Dr Umar-un Nabi) ಸಂಪರ್ಕಿಸಿರುವುದು ತನಿಖೆ ವೇಳೆ ತಿಳಿದು ಬಂದಿದೆ. ದೆಹಲಿ ಕಾರು ಬಾಂಬ್ ಸ್ಫೋಟ (Delhi car bomb blast case) ಪ್ರಕರಣದ ಮಾಸ್ಟರ್‌ಮೈಂಡ್ ಡಾ. ಉಮರ್-ಉನ್ ನಬಿ ಎರಡನೇ ಆತ್ಮಹತ್ಯಾ ಬಾಂಬರ್‌ನನ್ನು ನೇಮಿಸಿಕೊಳ್ಳಲು ಕಾಶ್ಮೀರದ ನಿವಾಸಿಯೊಬ್ಬನನ್ನು ಸಂಪರ್ಕಿಸಿದ್ದಾನೆ. ಆದರೆ ಆತ ಸೇಬು ಸುಗ್ಗಿಯ ಸಮಯ. ತನ್ನ ಕುಟುಂಬಕ್ಕೆ ಸಹಾಯ ಮಾಡುವ ಅಗತ್ಯವಿದೆ ಎಂದು ಹೇಳಿ ಭಯೋತ್ಪಾದಕ ಸಂಚಿನಿಂದ ಹಿಂದೆ ಸರಿದಿದ್ದಾನೆ ಎಂದು ತನಿಖಾಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
ಕಳೆದ ನವೆಂಬರ್ 10ರಂದು ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಸಮೀಪದಲ್ಲಿ ಕಾರು ಬಾಂಬ್ ಸ್ಫೋಟಗೊಂಡು 12ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. ಸ್ಫೋಟಕ ತುಂಬಿದ ಕಾರನ್ನು ನಬಿ ಚಲಾಯಿಸುತ್ತಿದ್ದನು. ಆದರೆ ಇದಕ್ಕೆ ಆತ ಇನ್ನೋರ್ವ ಆತ್ಮಹತ್ಯಾ ಬಾಂಬರ್ ಅನ್ನು ನೇಮಕ ಮಾಡಲು ಯೋಜನೆ ಮಾಡಿಕೊಂಡಿದ್ದ ಎಂದು ಶ್ರೀನಗರ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ ತಿಳಿಸಿದೆ.
ಪತಿಯೊಂದಿಗೆ ಕಲಹ: 4 ವರ್ಷದ ಮಗಳಿಗೆ ಬೆಂಕಿ ಹಚ್ಚಿ ಆತ್ಮಹತ್ಯೆ ಮಾಡಿಕೊಂಡ ಪತ್ನಿ
ವಿಚಾರಣೆಯ ಸಮಯದಲ್ಲಿ ಉಮರ್ ನಬಿ ವೈದ್ಯನಿಂದ ಭಯೋತ್ಪಾದಕನಾದ ಬಗ್ಗೆ ಹಲವಾರು ಮಾಹಿತಿಗಳನ್ನು ತಿಳಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಶೋಪಿಯಾನ್ ನಿವಾಸಿ ಯಾಸಿರ್ ಅಹ್ಮದ್ ದಾರ್ ಎಂಬಾತನನ್ನು ಕೂಡ ರಾಷ್ಟ್ರೀಯ ತನಿಖಾ ಸಂಸ್ಥೆ ಬಂಧಿಸಿದೆ.
ಉಮರ್ ನಬಿ ಆತನನ್ನು ಆತ್ಮಹತ್ಯಾ ಬಾಂಬರ್ ಆಗಿ ನೇಮಕ ಮಾಡಲು ಮುಂದಾಗಿದ್ದ. ಆದರೆ ಆತ ಸೇಬು ಸುಗ್ಗಿಯ ಕಾಲ ಮತ್ತು ಮನೆಯಲ್ಲಿ ದುರಸ್ತಿ ಕಾರ್ಯವಿದೆ ಎಂದು ಹೇಳಿ ಕೊನೆಯ ಕ್ಷಣದಲ್ಲಿ ಯೋಜನೆಯಿಂದ ಹಿಂದೆ ಸರಿದಿದ್ದನು.
ಯಾಸಿರ್ ಅಹ್ಮದ್ ದಾರ್ 2023ರಿಂದ ನಬಿಯೊಂದಿಗೆ ಸಂಪರ್ಕದಲ್ಲಿದ್ದನು. ವೈದ್ಯನಾಗಿರುವ ನಬಿಯ ವೃತ್ತಿಪರ ಸ್ಥಾನಮಾನ ಆತನ ಮೇಲೆ ಪ್ರಭಾವ ಬೀರಿದೆ ಎಂದು ಆತ ತನಿಖೆ ವೇಳೆ ತಿಳಿಸಿದ್ದಾನೆ. ನಬಿ ಕೇವಲ ಭಯೋತ್ಪಾದಕನಲ್ಲ. ಆತ ಯೋಜನೆಗೆ ನೇಮಕಾತಿದಾರ ಕೂಡ ಆಗಿದ್ದನು ಎಂದು ತನಿಖೆಯಿಂದ ತಿಳಿದು ಬಂದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಶಾಲೆ ಬಿಟ್ಟಿದ್ದ ದಾರ್ ಟೆಲಿಗ್ರಾಮ್ ಮೂಲಕ ನಬಿಯೊಂದಿಗೆ ಸಂಪರ್ಕದಲ್ಲಿದ್ದನು. ಆತ ಅವನಿಗೆ ಯಾವಾಗಲೂ ಉತ್ತಮ ದೈಹಿಕ ತರಬೇತಿ ಪಡೆಯಲು ಪ್ರೇರೇಪಿಸುತ್ತಿದ್ದನು. ಆತ ನಬಿ ಭಯೋತ್ಪಾದಕ ಮಾಡ್ಯೂಲ್‌ಗೆ ಸೇರಲು ಪ್ರಯತ್ನಿಸುತ್ತಿದ್ದ ಎರಡನೇ ಆತ್ಮಹತ್ಯಾ ಬಾಂಬರ್ ಆಗಿದ್ದನು.
ಕಳೆದ ವರ್ಷ ಶ್ರೀನಗರ ಪೊಲೀಸರು ಭಯೋತ್ಪಾದಕ ಮಾಡ್ಯೂಲ್ ಅನ್ನು ಬಹಿರಂಗ ಪಡಿಸುತ್ತಿದ್ದಂತೆ ದಕ್ಷಿಣ ಕಾಶ್ಮೀರದ ಖಾಜಿಗುಂಡ್‌ನಿಂದ ಜಾಸಿಯರ್ ಅಲಿಯಾಸ್ ಡ್ಯಾನಿಶ್ ಎಂದು ಗುರುತಿಸಲಾದ ಒಬ್ಬ ವ್ಯಕ್ತಿಯನ್ನು ಬಂಧಿಸಲಾಗಿತ್ತು. ರಾಜಕೀಯ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದ ಆತ 2024 ರ ಅಕ್ಟೋಬರ್‌ನಲ್ಲಿ ಕುಲ್ಗಾಮ್‌ನ ಮಸೀದಿಯಲ್ಲಿ 'ಡಾಕ್ಟರ್ ಮಾಡ್ಯೂಲ್' ಅನ್ನು ಭೇಟಿಯಾಗಿದ್ದಾಗಿ ಹೇಳಿದ್ದನು. ಬಳಿಕ ಆತನನ್ನು ಫರಿದಾಬಾದ್‌ನ ಅಲ್-ಫಲಾಹ್ ವಿಶ್ವವಿದ್ಯಾಲಯಕ್ಕೆ ಕರೆದುಕೊಂಡು ಹೋಗಲಾಯಿತು. ಅಲ್ಲಿ ನಬಿ ಹಲವಾರು ತಿಂಗಳುಗಳ ಕಾಲ ಆತ್ಮಹತ್ಯಾ ಬಾಂಬರ್ ಆಗಲು ತನಗೆ ಬ್ರೈನ್ ವಾಶ್ ಮಾಡಿದ್ದಾಗಿ ಜಾಸಿರ್ ವಿಚಾರಣೆ ವೇಳೆ ತಿಳಿಸಿದ್ದನು.
ಭಟ್ಕಳದಲ್ಲಿ ವಿದ್ಯುತ್ ಕಂಬಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಯುವಕರ ಸಾವು
ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಡಾ. ಜಿ.ವಿ. ಸುಂದೀಪ್ ಚಕ್ರವರ್ತಿ ನೇತೃತ್ವದ ಪೊಲೀಸ್ ತಂಡ ಈ ಪ್ರಕರಣವನ್ನು ಭೇದಿಸಿದ್ದು, ಜೈಶ್ ಎ ಮೊಹಮ್ಮದ್ ಸಂಘಟನೆಗೆ ಸೇರಿದ ಅಂತರ್ ರಾಜ್ಯ ಭಯೋತ್ಪಾದನಾ ಜಾಲವನ್ನು ಬಹಿರಂಗಪಡಿಸಿತ್ತು.