ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಆಸ್ತಿಯನ್ನು ತಮ್ಮಲ್ಲೇ ಉಳಿಸಿಕೊಳ್ಳಲು ಈ ಕುಟುಂಬ ಮಾಡಿದ ಮಾಸ್ಟರ್‌ ಪ್ಲ್ಯಾನ್‌ ಏನ್‌ ಗೊತ್ತಾ?

ಅತ್ಯಂತ ಕಠಿಣ ಪ್ರಕರಣಗಳನ್ನು ಭೇದಿಸಿರುವ ತನಿಖಾಧಿಕಾರಿ ಬಲದೇವ್ ಪುರಿ ಅವರು ವಿಚಿತ್ರವಾದ ಕಥೆಯೊಂದನ್ನು ರಾಜ್ ಶಮಾನಿ ಅವರ ಶೋನಲ್ಲಿ ಹಂಚಿಕೊಂಡಿದ್ದಾರೆ. ಆಸ್ತಿಯನ್ನು ಕುಟುಂಬದಲ್ಲೇ ಉಳಿಸಿಕೊಳ್ಳಲು ಅಣ್ಣನ ಹೆಂಡತಿ ಜೊತೆ ತಮ್ಮ ಸಂಬಂಧ ಬೆಳೆಸಿರುವ ವಿಚಿತ್ರ ಪ್ರಕರಣ ಇದಾಗಿದೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (Viral News) ಆಗಿದೆ.

ಅತ್ತಿಗೆಯೊಂದಿಗೆ ಸಂಬಂಧ.. ತನಿಖೆ ವೇಳೆ ಬಯಲಾಯ್ತು ಆಘಾತಕಾರಿ ಸತ್ಯ!

-

ಮುಂಬೈ: ಆಸ್ತಿಯನ್ನು (property) ಕುಟುಂಬದಲ್ಲೇ ಉಳಿಸಿಕೊಳ್ಳಲು ಹಿರಿಯ ಮಗನ ಹೆಂಡತಿಯೊಂದಿಗೆ ಕಿರಿಯ ಮಗ ಸಂಬಂಧ ಬೆಳೆಸಿರುವ ಪ್ರಕರಣವೊಂದು ಫಿಗರಿಂಗ್ ಔಟ್ ವಿತ್ ರಾಜ್ ಶಮಾನಿ (Raj Shamani began ) ಅವರ ಪಾಡ್‌ಕ್ಯಾಸ್ಟ್‌ನಲ್ಲಿ ಬಹಿರಂಗವಾಗಿದೆ. ಶಮಾನಿ ಅವರ ಸಂಚಿಕೆಯೊಂದರಲ್ಲಿ ಖಾಸಗಿ ತನಿಖಾಧಿಕಾರಿ ಬಲದೇವ್ ಪುರಿ (Investigator Baldev Puri) ಅವರು ತಮ್ಮ ವೃತ್ತಿಜೀವನದ ಅತ್ಯಂತ ಕೊಳಕು ಮತ್ತು ವಿಚಿತ್ರ ಪ್ರಕರಣ ಇದು ಎಂದು ಹೇಳಿಕೊಂಡಿದ್ದಾರೆ. ಇದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ (Viral News) ಆಗಿದೆ.

ಅತ್ಯಂತ ಕಠಿಣ ಪ್ರಕರಣಗಳನ್ನು ಭೇದಿಸಿರುವ ತನಿಖಾಧಿಕಾರಿ ಬಲದೇವ್ ಪುರಿ ಅವರು ವಿಚಿತ್ರವಾದ ಕಥೆಯೊಂದನ್ನು ರಾಜ್ ಶಮಾನಿ ಅವರೊಂದಿಗೆ ಹಂಚಿಕೊಂಡಿದ್ದಾರೆ. ಒಬ್ಬ ತಂದೆ ತನ್ನ ಹಿರಿಯ ಮಗನ ಬಳಿ ಬಂದು ಕಿರಿಯ ಮಗನಿಗೆ ಯಾವುದಾದರೂ ಸಂಬಂಧವಿದೆಯೇ, ಅವನಲ್ಲಿ ಈ ಬಗ್ಗೆ ಕೇಳು ಎಂದು ಹೇಳಿದರು. ಯಾಕೆಂದರೆ ಅವನು ಮದುವೆಯಾಗಲು ಸಿದ್ದವಿಲ್ಲ. ನೀನು ಮಾತನಾಡು. ಇದರಿಂದ ಸಹಾಯವಾಗುತ್ತದೆ ಎಂದಿದ್ದರು.



ಬಳಿಕ ಅವರು ಏನೋ ವಿಚಿತ್ರವಾದದ್ದನ್ನು ಗಮನಿಸಿದರು. ಬಳಿಕ ಅವನ ಮೇಲೆ ಕಣ್ಣಿಡಲು ನನಗೆ ತಿಳಿಸಿದರು. ಮೇಲ್ನೋಟಕ್ಕೆ ಇದು ಕುಟುಂಬದ ಮೇಲಿನ ಕಾಳಜಿಯಂತೆ ಕಾಣುತ್ತಿತ್ತು. ಆದರೆ ಯಾವಾಗ ಇದು ನನ್ನ ಜವಾಬ್ದಾರಿಗೆ ಬಂತೋ ಆಗ ಎಲ್ಲವೂ ಬದಲಾಯಿತು. ನನ್ನ ವೃತ್ತಿಜೀವನದ ಅತ್ಯಂತ ಆಘಾತಕಾರಿ ಪ್ರಕರಣಗಳಲ್ಲಿ ಒಂದಾಯಿತು ಎಂದು ಅವರು ತಿಳಿಸಿದರು.

ಕೆಲವೇ ದಿನಗಳಲ್ಲಿ ಪುರಿ ಅವರ ತಂಡವು ಕಿರಿಯ ಮಗನನ್ನು ಹಿಂಬಾಲಿಸಿತು. ಅನಂತರ ಆ ವ್ಯಕ್ತಿ ನಿಯಮಿತವಾಗಿ ಒಬ್ಬ ಮಹಿಳೆಯನ್ನು ಭೇಟಿಯಾಗುತ್ತಿದ್ದ. ವಾರದಲ್ಲಿ ಹಲವಾರು ಬಾರಿ ಹೊಟೇಲ್ ಗೂ ಕರೆದೊಯ್ಯುತ್ತಿದ್ದ. ಇದಕ್ಕೆ ಸಂಬಂಧಿಸಿ ತನಿಖಾಧಿಕಾರಿಗಳು ಸಾಕ್ಷಿಗಳನ್ನು ಸಂಗ್ರಹಿಸಿದರು. ಕುಟುಂಬಕ್ಕೆ ಸಾಕ್ಷಿಯಾಗಿ ಅವಳ ಫೋಟೋವನ್ನು ಒಪ್ಪಿಸಿದರು. ಬಳಿಕ ಅಲ್ಲಿನ ಚಿತ್ರಣ ಸಂಪೂರ್ಣ ಬದಲಾಯಿತು ಎನ್ನುತ್ತಾರೆ ಪುರಿ.

ತಂದೆ ನನ್ನನ್ನು ನೋಡಿ ಅವಳು ನನ್ನ ಹಿರಿಯ ಮಗನ ಹೆಂಡತಿ. ನನ್ನ ಸೊಸೆ ಎಂದರು. ನಾನು ಆಘಾತಕ್ಕೊಳಗಾಗಿದ್ದೆ. ಇದು ಕೇವಲ ಸಂಬಂಧವಾಗಿರಲಿಲ್ಲ. ಇದು ಕುಟುಂಬದ ಪಿತೂರಿಯಾಗಿತ್ತು ಎಂದು ಪುರಿ ತಿಳಿಸಿದರು. ಅವರ ಕುಟುಂಬಕ್ಕೆ ಈ ಸಂಬಂಧದ ಬಗ್ಗೆ ಮೊದಲೇ ತಿಳಿದಿತ್ತು. ಸತ್ಯವನ್ನು ಎದುರಿಸಲು ಅವರು ಪುರಾವೆಗಳನ್ನು ಬಯಸಿದ್ದರು. ಇದಕ್ಕಾಗಿ ತನಿಖಾ ತಂಡವನ್ನು ಮಾಡಿದ್ದರು. ಯಾಕಾಗಿ ಹೀಗಾಯಿತು ಎನ್ನುವ ಕುರಿತು ಪುರಿ ಅವರು ಸತ್ಯವನ್ನು ಶೋ ನಲ್ಲಿ ಬಹಿರಂಗಪಡಿಸಿದರು.

ಈ ಸಂಬಂಧವು ಪ್ರೀತಿಯಿಂದ ಹುಟ್ಟಿಕೊಂಡಿರಲಿಲ್ಲ. ಬದಲಿಗೆ ಹಣ, ಅಧಿಕಾರ ಮತ್ತು ಆಸ್ತಿಯ ಮೇಲಿನ ಗೀಳಿನಿಂದಾಗಿತ್ತು. ಹಿರಿಯ ಮಗ ಮತ್ತು ಅವನ ಹೆಂಡತಿ ತಮ್ಮ ಸಂಪತ್ತು ತಮ್ಮ ಕೈಯಲ್ಲೇ ಉಳಿಯುವಂತೆ ಮಾಡಲು ಇಡೀ ಪ್ರಕರಣವನ್ನು ರೂಪಿಸಿದ್ದರು.

ಈ ಸುದ್ದಿಯನ್ನೂ ಓದಿ: Stone-Pelting Case: 2020ರ ಗಲಭೆ ಪ್ರಕರಣ- ಉಮರ್ ಖಾಲಿದ್‌ಗೆ ಬಿಗ್‌ ಶಾಕ್‌; ಜಾಮೀನು ತಿರಸ್ಕಾರ

ಇವರಿಗೆ ಹಣವು ಎಷ್ಟು ಮುಖ್ಯವಾಗಿತ್ತೆಂದರೆ ಈ ಒಪ್ಪಂದಕ್ಕೆ ಅವರು ಒಪ್ಪಿದ್ದರು. ಅವರು ತಮ್ಮ ಕಿರಿಯ ಸಹೋದರ ಬೇರೆಯವರನ್ನು ಮದುವೆಯಾಗುವುದು ಬಯಸಲಿಲ್ಲ. ಒಂದು ವೇಳೆ ಅವನು ಬೇರೆ ಮದುವೆಯಾದರೆ ಸಂಪತ್ತನ್ನು ಹಂಚಿಕೊಳ್ಳಬೇಕಾಗುತ್ತದೆ ಎಂದರು ಪುರಿ. ನಾನು ಪರಿಹರಿಸಿದ ಅತ್ಯಂತ ಕೊಳಕು ಪ್ರಕರಣಗಳಲ್ಲಿ ಇದು ಒಂದಾಗಿದೆ ಎಂದು ಪುರಿ ಹೇಳಿದ್ದು, ಇದಕ್ಕೆ ರಾಜ್ ಶಮಾನಿ ಆಶ್ಚರ್ಯ ವ್ಯಕ್ತಪಡಿಸಿದರು.