ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CCB Raid: ಡ್ರಗ್ಸ್ ಬಳಕೆ; ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​ ಮೇಲೆ ಸಿಸಿಬಿ ದಾಳಿ

ನಗರದ ಪ್ರತಿಷ್ಠಿತ ಹೋಟೆಲ್ ಮೇಲೆ ಸಿಸಿಬಿ ದಾಳಿ ನಡೆಸಿದೆ. ಅವಧಿ ಮೀರಿ ಹೋಟೆಲ್ ನಲ್ಲಿ ಪಾರ್ಟಿ ಮತ್ತು ಡ್ರಗ್ಸ್ ಬಳಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ JW ಮಾರಿಯೆಟ್ ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.

ಬೆಂಗಳೂರು: ನಗರದ ಪ್ರತಿಷ್ಠಿತ ಹೋಟೆಲ್ ಮೇಲೆ ಸಿಸಿಬಿ ದಾಳಿ ನಡೆಸಿದೆ. (CCB Raid) ಅವಧಿ ಮೀರಿ ಹೋಟೆಲ್ ನಲ್ಲಿ ಪಾರ್ಟಿ ಮತ್ತು ಡ್ರಗ್ಸ್ ಬಳಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ ಬೆಂಗಳೂರು ನಗರದ JW ಮಾರಿಯೆಟ್ ಹೋಟೆಲ್ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ. ಸಿಸಿಬಿ ಎಸಿಪಿ ಮಹಾನಂದ ನೇತೃತ್ವದಲ್ಲಿ ದಾಳಿ ಮಾಡಿ ಪರಿಶೀಲನೆ ಮಾಡಲಾಗಿದೆ. ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸುಮಾರು 50ಕ್ಕೂ ಹೆಚ್ಚು ಜನ ಪಾರ್ಟಿ ಮಾಡುತ್ತಿದ್ದ ಬಗ್ಗೆ ನಿಖರ ಮಾಹಿತಿ ಪಡೆದು ಸಿಸಿಬಿ ಪೊಲೀಸರು ತಡರಾತ್ರಿ ಅವಧಿ ಮೀರಿ ಪಾರ್ಟಿ ಮಾಡುತ್ತಿದ್ದಾಗ ದಾಳಿ ಮಾಡಿದ್ದಾರೆ. ಸದ್ಯ ದಾಳಿ ವೇಳೆ ಓರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದ್ದಾರೆ. ಪೊಲೀಸರು ಸಂಪೂರ್ಣ ಹೊಟೇಲ್‌ನ್ನು ಪರಿಶೀಲನೆ ನಡೆಸುತ್ತಿದ್ದಾರೆ.

ಡ್ರಗ್ಸ್ ಜಪ್ತಿ

ಡ್ರಗ್ಸ್ ಸಂಗ್ರಹಿಸಿದ್ದ ಇಬ್ಬರು ಮಹಿಳೆ ಸೇರಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಯಲಹಂಕ ಉಪನಗರ ಠಾಣೆ ಪೊಲೀಸರಿಂದ ಕಾರ್ಯಾಚರಣೆ ಮಾಡಿ ಇಬ್ಬರು ವಿದೇಶಿ ಮಹಿಳೆಯರು ಸೇರಿದಂತೆ 9 ಜನರನ್ನು ಬಂಧಿಸಲಾಗಿದೆ. ಅಡ್ಮಾಕೊ ಬ್ರೈಟ್, ಎನ್ಕೇಟೈ ಕೋಫಿ, ಬೆನೆಡಿಕ್ಟ್, ಪ್ರಿಸ್ಕಿಲ್​​ ಸೇರಿ ಇತರರು ಬಂಧಿತರು. ದಾಳಿ ವೇಳೆ ಪಾಸ್​ಪೋರ್ಟ್ ಅವಧಿ ಮೀರಿ ವಾಸವಿರುವುದು ಕೂಡ ಪತ್ತೆ ಆಗಿದೆ. ಯಲಹಂಕದ ದೊಡ್ಡಬೆಟ್ಟಹಳ್ಳಿ ಮನೆಯೊಂದರಲ್ಲಿ ಗಾಂಜಾ ಜಪ್ತಿ ಮಾಡಲಾಗಿದೆ. ಬಂಧಿತರಿಂದ 70 ಲಕ್ಷ ರೂ. ಮೌಲ್ಯದ 700 ಗ್ರಾಂ. ಎಂಡಿಎಂಎ ಸೀಜ್ ಮಾಡಲಾಗಿದೆ.

ಇತ್ತೀಚೆಗೆ ಸಿಲಿಕಾನ್ ಸಿಟಿಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಸೀಜ್ ಆಗಿದ್ದ ಬರೋಬ್ಬರಿ 38 ಕೋಟಿ ರೂ ಮೌಲ್ಯದ ಡ್ರಗ್ಸ್​ನ್ನು ಬೆಂಕಿಗೆ ಹಾಕುವ ಮೂಲಕ ನಾಶಪಡಿಸಲಾಗಿತ್ತು. ವೀಕೆಂಡ್ ಬಂತ್ತು ಅಂದ್ರೆ ಸಾಕು ಟೆಕ್ಕಿಗಳು, ಯುವಕ, ಯುವತಿಯರು ಗಾಂಜಾ, ಡ್ರಗ್ಸ್ ಅಂತಹ ಮತ್ತೆರಿಸುವ ಪದಾರ್ಥಗಳ ಮೂಲಕ ಪಾರ್ಟಿ ಮಾಡಲು ಹೋಗಿ ಪೊಲೀಸರ ಬಲೆಗೆ ಬಿದ್ದಿದ್ದರು.

ಈ ಸುದ್ದಿಯನ್ನೂ ಓದಿ: HIV Infected Girl: ಡ್ರಗ್ಸ್‌ ಚಟಕ್ಕೆ ಬಿದ್ದ ಬಾಲಕಿ ಸಿಕ್ಕ ಸಿಕ್ಕವ್ರ ಜೊತೆ ಸೆಕ್ಸ್‌! ಈಕೆಯ ಸಹವಾಸ ಮಾಡಿದವ್ರಿಗೆ HIV

ಕಳೆದ ವಾರ, ಎಲೆಕ್ಟ್ರಾನಿಕ್‌ ಸಿಟಿ, ಎಚ್‌ಎಸ್ಆರ್‌ ಲೇಔಟ್‌, ಕೋರಮಂಗಲ, ಸಂಪಿಗೆಹಳ್ಳಿ, ಯಲಹಂಕ ಠಾಣೆ ಪೊಲೀಸರು ಹಾಗೂ ಸಿಸಿಬಿಯ ಮಾದಕ ದ್ರವ್ಯ ನಿಗ್ರಹ ದಳದ ಪೊಲೀಸರು ನಗರದ ಹಲವೆಡೆ ಕಾರ್ಯಾಚರಣೆ ನಡೆಸಿದ್ದರು. ಆಫ್ರಿಕಾದ ಪ್ರಜೆ ಜೋಯಲ್ ಕಬಾಂಗ್ (28), ಮೂರು ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಲ್ಲಿ ಬೆಂಗಳೂರಿಗೆ ಆಗಮಿಸಿದ್ದ ಈತನ ಸ್ನೇಹಿತೆ ಜೋಯ್ ಸಂಡೇ (22) ಎಂಬುವವರನ್ನು ಬಂಧಿಸಿಲಾಗಿತ್ತು.