#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Kerala Ragging: ಕೇರಳದಲ್ಲಿ ಮತ್ತೊಂದು ರ‍್ಯಾಗಿಂಗ್- ಖಾಸಗಿ ಅಂಗಕ್ಕೆ ಡಂಬಲ್ಸ್‌ ನೇತುಹಾಕಿ ಹಿಂಸಿಸಿದ ರಾಕ್ಷಸರು!

ಕೇರಳದ ಸರ್ಕಾರಿ ಕಾಲೇಜಿನಲ್ಲಿ ಮತ್ತೊಂದು ಭಯಾನಕ ರ‍್ಯಾಗಿಂಗ್ ಘಟನೆ ನಡೆದಿದ್ದು, ಹಿರಿಯ ವಿದ್ಯಾರ್ಥಿಗಳು ತಮ್ಮ ಜೂನಿಯರ್ಸ್‌ಗಳನ್ನು ಸತತವಾಗಿ ಮೂರು ತಿಂಗಳುಗಳ ಕಾಲ ಕ್ರೂರವಾಗಿ ದೈಹಿಕ ಮತ್ತು ಮಾನಸಿಕ ಕಿರುಕುಳಕ್ಕೆ ಒಳಪಡಿಸಿದ ಆರೋಪದ ಮೇಲೆ ಐವರನ್ನು ಬಂಧಿಸಲಾಗಿದೆ. ಕೊಟ್ಟಾಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ಕೇರಳ ರ‍್ಯಾಗಿಂಗ್-  ಖಾಸಗಿ ಅಂಗಕ್ಕೆ ಡಂಬಲ್ಸ್‌ ನೇತುಹಾಕಿ ಕ್ರೌರ್ಯ!

ಕೇರಳ ರ‍್ಯಾಗಿಂಗ್ ಕೇಸ್‌ನಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳು

Profile Deekshith Nair Feb 12, 2025 12:25 PM

ತಿರುವನಂತಪುರಂ: ಕಳೆದ ವಾರವಷ್ಟೇ ಕೇರಳದ ಖಾಸಗಿ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಸಹಪಾಠಿಗಳು ರ‍್ಯಾಗಿಂಗ್(Kerala Ragging) ಮಾಡಿದ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದ. ಇದೀಗ ಮತ್ತೊಂದು ರ‍್ಯಾಗಿಂಗ್ ಘಟನೆ ನಡೆದಿದೆ. ಕಾಲೇಜಿನ ಹಿರಿಯ ವಿದ್ಯಾರ್ಥಿಗಳು ತಮ್ಮ ಕಿರಿಯ ವಿದ್ಯಾರ್ಥಿಗಳನ್ನು ರ‍್ಯಾಗಿಂಗ್ ಮಾಡಿದ್ದು, ಅವರನ್ನು ವಿವಸ್ತ್ರಗೊಳಿಸಿ ಖಾಸಗಿ ಭಾಗಗಳಿಗೆ ಇರಿದು ಚಿತ್ರಹಿಂಸೆ ನೀಡಿದ್ದಾರೆ. ಈ ಭಯಾನಕ ಘಟನೆಯು ಕೇರಳದ ಕೊಟ್ಟಾಯಂನ(Kottayam) ಸರ್ಕಾರಿ ನರ್ಸಿಂಗ್ ಕಾಲೇಜಿನಲ್ಲಿ ನಡೆದಿದ್ದು, ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಹಿರಿಯ ವಿದ್ಯಾರ್ಥಿಗಳು ಮೊದಲ ವರ್ಷದ ವಿದ್ಯಾರ್ಥಿಗಳನ್ನು ಬೆತ್ತಲೆಯಾಗಿ ನಿಲ್ಲುವಂತೆ ಒತ್ತಾಯಿಸಿದ್ದಾರೆ. ನಂತರ ಅವರ ಖಾಸಗಿ ಭಾಗಗಳಿಗೆ ಡಂಬಲ್ಸ್ ನೇತುಹಾಕಿ ಕ್ರೂರವಾಗಿ ಹಿಂಸಿಸಿದ್ದಾರೆ. ಅಷ್ಟೇ ಅಲ್ಲದೆ ಜ್ಯಾಮಿಟ್ರಿ ಬಾಕ್ಸ್‌ನಲ್ಲಿರುವ ಕಂಪಾಸ್ ಸೇರಿದಂತೆ‌ ಇನ್ನಿತರ ಚೂಪಾದ ವಸ್ತುಗಳಿಂದ ಇರಿದಿದ್ದು,ಗಾಯಗಳಿಗೆ ಲೋಷನ್‌ ಸವರಿ ರಾಕ್ಷಸ ಪ್ರವೃತ್ತಿ ಮೆರೆದಿದ್ದಾರೆ. ವಿದ್ಯಾರ್ಥಿಗಳು ಸತತವಾಗಿ ಮೂರು ತಿಂಗಳುಗಳ ಕಾಲ ಈ ಕ್ರೌರ್ಯದಿಂದ ನರಳಿದ್ದಾರೆ ಎನ್ನಲಾಗಿದೆ.



ಮದ್ಯ ಖರೀದಿಸಲು ಹಿರಿಯ ವಿದ್ಯಾರ್ಥಿಗಳು ಜೂನಿಯರ್ ವಿದ್ಯಾರ್ಥಿಗಳಿಂದ ನಿರಂತರವಾಗಿ ಹಣ ಸುಲಿಗೆ ಮಾಡುತ್ತಿದ್ದರು ಎಂದು ದೂರಿನಲ್ಲಿ ಹೇಳಲಾಗಿದೆ. ಅದನ್ನು ನಿರಾಕರಿಸಿದವರನ್ನು ಹಿಂಸಿಸಲಾಗಿದೆ . ಕಿರುಕುಳವನ್ನು ಸಹಿಸಲಾಗದ ಒಬ್ಬ ವಿದ್ಯಾರ್ಥಿ ತನ್ನ ತಂದೆಗೆ ವಿಷಯ ತಿಳಿಸಿದ್ದು, ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

ಈ ಸುದ್ದಿಯನ್ನೂ ಓದಿ:Self Harming: ಕೇರಳ ಮೂಲದ ನರ್ಸಿಂಗ್‌ ವಿದ್ಯಾರ್ಥಿನಿ ನೇಣು ಬಿಗಿದುಕೊಂಡು ಆತ್ಮಹತ್ಯೆ

ಐವರು ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲಿದ್ದು, ಇಂದು(ಫೆ.12) ಮಧ್ಯಾಹ್ನದ ವೇಳೆಗೆ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸುವ ಸಾಧ್ಯತೆಯಿದೆ.

ಟಾಯ್ಲೆಟ್‌ ನೆಕ್ಕುವಂತೆ ಕಿರುಕುಳ ಕೊಟ್ಟ ಸಹಪಾಠಿಗಳು; ವಿದ್ಯಾರ್ಥಿ ಆತ್ಮಹತ್ಯೆ!

ಕಳೆದ ವಾರವಷ್ಟೇ ಕೇರಳದಲ್ಲಿ 15 ವರ್ಷದ ವಿದ್ಯಾರ್ಥಿಯೊಬ್ಬನಿಗೆ ಸಹಪಾಠಿಗಳು ರ್‍ಯಾಗಿಂಗ್‌ ಮಾಡಿದ ಕಾರಣಕ್ಕೆ ಅವಮಾನ ತಾಳಲಾರದೆ ಅವನು ಮನೆಯ ಮಹಡಿಯಿಂದ ಜಿಗಿದು ದಾರುಣವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದ. ವಿದ್ಯಾರ್ಥಿಯ ಹೆಸರು ಅಹಮ್ಮದ್ ಎಂದು ತಿಳಿದು ಬಂದಿತ್ತು. ಎರ್ನಾಕುಲಂನ ತಿರುವಾನಿಯೂರಿನ ಗ್ಲೋಬಲ್ ಪಬ್ಲಿಕ್ ಶಾಲೆಯಲ್ಲಿ ವಿದ್ಯಾರ್ಥಿಯು ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿತ್ತು.

ಕೇರಳದಲ್ಲಿ ಎಸ್‌ಎಸ್‌ಎಲ್‌ಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬನ ಮೈ ಬಣ್ಣವನ್ನು ಸಹಪಾಠಿಗಳು ಹಂಗಿಸಿದ್ದರು. ಅಷ್ಟೇ ಅಲ್ಲದೆ ಟಾಯ್ಲೆಟ್‌ ಸೀಟನ್ನು ನೆಕ್ಕುವಂತೆ ಕಿರುಕುಳ ಕೊಟ್ಟಿದ್ದರು. ವಿದ್ಯಾರ್ಥಿ ಅವಮಾನ ತಾಳಲಾರದೆ ನೋವಿನಿಂದ ತನ್ನ ಮನೆಯ ಮಹಡಿಯ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದ.

ತ್ರಿಪುಣಿತುರಾದ ಹಿಲ್ ಪ್ಯಾಲೇಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ಶಾಲೆಯ ಉಪ ಪ್ರಾಂಶುಪಾಲ ಜೆಇಎಂಎಸ್ ಕೊಚ್ಚಿನ್‌ನಲ್ಲಿ ಕಿರುಕುಳ ನೀಡಿರುವ ಕುರಿತು ತನಿಖೆ ನಡೆಸುವಂತೆ ಕೋರಿ ಮಕ್ಕಳ ಆಯೋಗಕ್ಕೆ ಮನವಿ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿದ್ದವು. ಮಗನ ಆತ್ಮಹತ್ಯೆಯಿಂದಾಗಿ ಆತನ ತಾಯಿ ತೀರಾ ನೊಂದಿದ್ದು,ಸಾವಿಗೆ ನ್ಯಾಯ ದೊರಕಿಸಿಕೊಡುವಂತೆ ಕೋರಿ ಮನವಿ ಮಾಡಿದ್ದರು.