ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಅಮೃತಸರ- ದೆಹಲಿ ರೈಲು ಮಾರ್ಗದಲ್ಲಿ ಸ್ಫೋಟ; ಸರಕು ರೈಲು ಹಳಿಗೆ ಹಾನಿ

ಪಂಜಾಬ್‌ನ ಫತೇಘರ್ ಸಾಹಿಬ್ ಜಿಲ್ಲೆಯ ಖಾನ್ಪುರ್ ಗ್ರಾಮದ ಸಿರ್ಹಿಂದ್ ಬಳಿ ಅಮೃತಸರ- ದೆಹಲಿ ರೈಲು ಮಾರ್ಗದಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಸರಕು ರೈಲು ಹಳಿಗೆ ಹಾನಿಯಾಗಿದೆ. ಘಟನೆಯಲ್ಲಿ ಲೋಕೋ ಪೈಲಟ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಕುರಿತು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಂಗ್ರಹ ಚಿತ್ರ

ಪಂಜಾಬ್‌: ಅಮೃತಸರ- ದೆಹಲಿ ರೈಲು ಮಾರ್ಗದಲ್ಲಿ (Amritsar–Delhi Rail Line) ಶುಕ್ರವಾರ ತಡರಾತ್ರಿ ಸಂಭವಿಸಿದ ಸ್ಫೋಟದಲ್ಲಿ ಸರಕು ರೈಲು (goods train) ಹಳಿಗೆ ಹಾನಿಯಾಗಿರುವ ಘಟನೆ ಪಂಜಾಬ್‌ನ (Punjab Blast) ಫತೇಘರ್ ಸಾಹಿಬ್ ಜಿಲ್ಲೆಯ ಖಾನ್ಪುರ್ ಗ್ರಾಮದ ಸಿರ್ಹಿಂದ್ ಬಳಿ ನಡೆದಿದೆ. ಘಟನೆಯಲ್ಲಿ ರೈಲು ಹಳಿಯ (train track) ಒಂದು ಭಾಗ ಹಾನಿಗೊಳಗಾಗಿದ್ದು, ಲೋಕೋ ಪೈಲಟ್ (Loco Pilot) ಗಂಭೀರವಾಗಿ ಗಾಯಗೊಂಡಿದ್ದಾರೆ. ಘಟನಾ ಸ್ಥಳದಲ್ಲಿ ಭದ್ರತಾ ಎಚ್ಚರಿಕೆ ನೀಡಲಾಗಿದ್ದು, ಈ ಕುರಿತು ಅಪರಿಚಿತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಸಿರ್ಹಿಂದ್ ಬಳಿ ಶುಕ್ರವಾರ ತಡರಾತ್ರಿ ಅಮೃತಸರ- ದೆಹಲಿ ರೈಲು ಮಾರ್ಗದಲ್ಲಿ ಸರಕು ರೈಲು ಹಾದುಹೋಗುತ್ತಿದ್ದಾಗಲೇ ಸ್ಫೋಟ ಉಂಟಾಗಿ ಹಳಿಯ ಒಂದು ಭಾಗ ಹರಿದು, ಲೋಕೋ ಪೈಲಟ್ ಗಾಯಗೊಂಡಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.



ಕಡಬದಲ್ಲಿ ಶಾಕಿಂಗ್‌ ಘಟನೆ; ತಂದೆಗೆ ಚಾಕು ಇರಿದ ಬಳಿಕ ಕೋವಿಯಿಂದ ಗುಂಡು ಹಾರಿಸಿಕೊಂಡು ಬಾಲಕ ಆತ್ಮಹತ್ಯೆ!

ಈ ಕುರಿತು ತನಿಖೆ ಪ್ರಾರಂಭಿಸಲಾಗಿದ್ದು ಪ್ರಾಥಮಿಕ ಮಾಹಿತಿ ಪ್ರಕಾರ ಶನಿವಾರ ಬೆಳಗಿನ ಜಾವ 12.30 ರ ಸುಮಾರಿಗೆ ರೈಲ್ವೆ ಹಳಿಯ 1208/15 ಕಿಲೋ ಮೀಟರ್ ಬಳಿ ಉನ್ನತ ದರ್ಜೆಯ ಸ್ಫೋಟಕವನ್ನು ಸ್ಫೋಟಿಸಲಾಗಿದೆ. ಇದನ್ನು ಯಾರು ಮಾಡಿದ್ದಾರೆ, ಸ್ಪೋಟಕ್ಕೆ ಯಾವ ವಸ್ತುಗಳನ್ನು ಬಳಸಲಾಗಿದೆ ಎನ್ನುವ ಕುರಿತು ತನಿಖೆ ಮುಂದುವರಿಸಲಾಗಿದೆ.

ಹಿಂದೂ ವಿದ್ಯಾರ್ಥಿನಿಗೆ ಬುರ್ಖಾ ಧರಿಸಲು ಸಹಪಾಠಿಗಳಿಂದಲೇ ಒತ್ತಾಯ; ಯೋಗಿ ನಾಡಲ್ಲಿ ಆಘಾತಕಾರಿ ಘಟನೆ

ಘಟನೆಯಿಂದಾಗಿ ಗಂಭೀರವಾಗಿ ಗಾಯಗೊಂಡಿರುವ ರೈಲಿನ ಲೋಕೋ ಪೈಲಟ್‌ ಅವರಿಗೆ ತಕ್ಷಣ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ. ಸದ್ಯ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಸರಕು ರೈಲು ಖಾನ್ಪುರ ರೈಲ್ವೆ ಗೇಟ್‌ಗಳನ್ನು ಸಮೀಪಿಸುತ್ತಿದ್ದಂತೆ ಉಂಟಾದ ಸ್ಫೋಟದ ಪರಿಣಾಮ ಹಳಿಯ ಸುಮಾರು 12 ಅಡಿಗಳಷ್ಟು ಹರಿದುಹೋಗಿದೆ. ಈ ಹಳಿಯ ಪ್ರದೇಶವನ್ನು ಸರಕು ರೈಲು ಸಂಚಾರಕ್ಕಾಗಿ ಮಾತ್ರ ಬಳಸಲಾಗುತ್ತದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ವಿದ್ಯಾ ಇರ್ವತ್ತೂರು

View all posts by this author