ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಹಿಂದೂ ವಿದ್ಯಾರ್ಥಿನಿಗೆ ಬುರ್ಖಾ ಧರಿಸಲು ಸಹಪಾಠಿಗಳಿಂದಲೇ ಒತ್ತಾಯ; ಯೋಗಿ ನಾಡಲ್ಲಿ ಆಘಾತಕಾರಿ ಘಟನೆ

ಹಿಂದೂ ವಿದ್ಯಾರ್ಥಿನಿಯೊಬ್ಬಳಿಗೆ ಸಹಪಾಠಿಗಳೇ ಬುರ್ಖಾ ಧರಿಸಲು ಒತ್ತಾಯಿಸಿ ಮತಾಂತರಕ್ಕೆ ಒತ್ತಡ ಹೇರಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್‌ನ ಬಿಲ್ಲಾರಿ ಪಟ್ಟಣದಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಿಸಿ ಐವರು ಮುಸ್ಲಿಂ ವಿದ್ಯಾರ್ಥಿನಿಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವಿದ್ಯಾರ್ಥಿನಿಯರು ಅಪ್ರಾಪ್ತರಾಗಿರುವುದರಿಂದ ಯಾರನ್ನೂ ವಶಕ್ಕೆ ಪಡೆದಿಲ್ಲ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುರ್ಖಾ ಧರಿಸಲು ಸಹಪಾಠಿಗಳಿಂದಲೇ ಒತ್ತಾಯ

ಸಂಗ್ರಹ ಚಿತ್ರ -

ಉತ್ತರಪ್ರದೇಶ: ಹಿಂದೂ ವಿದ್ಯಾರ್ಥಿನಿಯೊಬ್ಬಳನ್ನು (Hindu girl) ಸಹಪಾಠಿಗಳು ಸೇರಿ ಬುರ್ಖಾ (Burqa) ಧರಿಸಲು ಒತ್ತಾಯಿಸಿದ್ದು ಮಾತ್ರವಲ್ಲದೆ ಮುಸ್ಲಿಂ (Muslim) ಧರ್ಮಕ್ಕೆ ಮತಾಂತರವಾಗುವಂತೆ ಒತ್ತಡ ಹೇರಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಮೊರಾದಾಬಾದ್ ನಲ್ಲಿ ನಡೆದಿದೆ. ಈ ಕುರಿತು ಆಕೆಯ ಐವರು ಸಹಪಾಠಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಮೊರಾದಾಬಾದ್‌ನ ಬಿಲ್ಲಾರಿ ಪಟ್ಟಣದ ಒಂದೇ ಶಾಲೆಯಲ್ಲಿ ಓದುತ್ತಿದ್ದ ವಿದ್ಯಾರ್ಥಿನಿಯರು ತಮ್ಮದೇ ತರಗತಿಯ ಅನ್ಯ ವಿದ್ಯಾರ್ಥಿನಿಗೆ ಮತಾಂತರವಾಗಲು ಕಿರುಕುಳ ನೀಡಿದ್ದರು. ಈ ಕುರಿತು ಸಂತ್ರಸ್ತೆಯ ಸಹೋದರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾನೆ.

ಬಿಲ್ಲಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಶಹಕುಂಜ್ ಕಾಲೋನಿಯ ಕೋಚಿಂಗ್ ಸೆಂಟರ್ ಗೆ ಬರುತ್ತಿದ್ದ ದ್ವಿತೀಯ ಪಿಯುಸಿಯ ಹಿಂದೂ ವಿದ್ಯಾರ್ಥಿನಿಯೊಬ್ಬಳಿಗೆ ಐವರು ಮುಸ್ಲಿಂ ಸಹಪಾಠಿಗಳು ಬುರ್ಖಾ ಧರಿಸುವಂತೆ ಒತ್ತಾಯಿಸಿ ಇಸ್ಲಾಂಗೆ ಮತಾಂತರಗೊಳ್ಳುವಂತೆ ಒತ್ತಡ ಹೇರಿದ್ದಾರೆ. ಈ ಘಟನೆ ಡಿಸೆಂಬರ್ 20 ರಂದು ನಡೆದಿದ್ದು, ಸಂತ್ರಸ್ತೆಯ ಸಹೋದರ ಜನವರಿ 22 ರಂದು ಔಪಚಾರಿಕವಾಗಿ ದೂರು ದಾಖಲಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ.

ರಾಜ್ಯದ ಜೈಲುಗಳಲ್ಲಿ ಹೊಸ ರೂಲ್ಸ್‌; ದರ್ಶನ್ ಸೇರಿ ಇತರ ಕೈದಿಗಳಿಗೆ ವಿಶೇಷ ಸೌಲಭ್ಯಕ್ಕೆ ಕುತ್ತು

ವಸತಿ ಲೇನ್ ನಲ್ಲಿ ಕೋಚಿಂಗ್ ತರಗತಿಯಿಂದ ಹಿಂದಿರುಗುತ್ತಿದ್ದ ವಿದ್ಯಾರ್ಥಿನಿಯನ್ನು ಸುತ್ತುವರಿದ ಐವರು ಮುಸ್ಲಿಂ ವಿದ್ಯಾರ್ಥಿನಿಯರಲ್ಲಿ ಒಬ್ಬಳು ತನ್ನ ಬ್ಯಾಗ್‌ನಿಂದ ಬುರ್ಖಾವನ್ನು ತೆಗೆದುಕೊಂಡು ಆಕೆಗೆ ಬಲವಂತವಾಗಿ ಧರಿಸುವಂತೆ ಮಾಡಿ, ಇಸ್ಲಾಂ ಧರ್ಮವನ್ನು ಸ್ವೀಕರಿಸು. ಇದರಿಂದ ನಿನ್ನ ಭವಿಷ್ಯ ಬದಲಾಗುತ್ತದೆ ಎಂದು ಹೇಳಿದ್ದಾಳೆ. ವಿದ್ಯಾರ್ಥಿನಿಯರು 16 ರಿಂದ 18 ವರ್ಷ ವಯಸ್ಸಿನವರಾಗಿದ್ದು, ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ಸಂತ್ರಸ್ತೆಯ ಸಹೋದರ ನೀಡಿರುವ ದೂರಿನ ಪ್ರಕಾರ, ತನ್ನ ಸಹೋದರಿ ಪ್ರಥಮ ಪಿಯುಸಿಯ ಆರೋಪಿ ಬಾಲಕಿಯರೊಂದಿಗೆ ಸ್ನೇಹ ಬೆಳೆಸಿಕೊಂಡಿದ್ದಳು. ಅವರು ನೆರೆಹೊರೆಯವರಾಗಿದ್ದು, ಸಹೋದರಿಯ ಮೇಲೆ ತಮ್ಮ ಪ್ರಭಾವ ಬೀರಲು ಪ್ರಾರಂಭಿಸಿದ್ದರು. ಆಕೆ ಹಿಂದೂ ಧರ್ಮವನ್ನು ತೊರೆದು ಇಸ್ಲಾಂ ಧರ್ಮವನ್ನು ಸ್ವೀಕರಿಸುವಂತೆ ಕೇಳಿಕೊಂಡಿದ್ದರು. ಇದರ ಹಿಂದೆ ಯಾವುದೋ ಪಿತೂರಿ ಇದೆ ಎಂದು ಆರೋಪಿಸಿರುವ ದೂರುದಾರ ಈ ಕುರಿತು ಸಮಗ್ರ ತನಿಖೆಗೆ ಒತ್ತಾಯಿಸಿದ್ದಾರೆ.

ಟಾಟಾ ಏಸ್-ಸ್ಕೂಟರ್‌ ಮುಖಾಮುಖಿ ಡಿಕ್ಕಿಯಾಗಿ ತಾಯಿ-ಮಗ ಸ್ಥಳದಲ್ಲೇ ಸಾವು

ಈ ಕುರಿತು ಪ್ರತಿಕ್ರಿಯಿಸಿರುವ ಗ್ರಾಮೀಣ ವಿಭಾಗದ ಪೊಲೀಸ್ ವರಿಷ್ಠಾಧಿಕಾರಿ ಕುನ್ವರ್ ಆಕಾಶ್, ಪ್ರಕರಣ ದಾಖಲಿಸಲಾಗಿದೆ. ವಿಷಯ ತನಿಖೆಯಲ್ಲಿದೆ. ಅಪರಾಧಿಗಳ ವಿರುದ್ಧ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಇದು ಸೂಕ್ಷ್ಮ ವಿಷಯವಾಗಿದ್ದು, ತನಿಖೆ ಪೂರ್ಣಗೊಳ್ಳುವವರೆಗೆ ಧಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಸಂಯಮದಿಂದ ವರ್ತಿಸುವಂತೆ ಹೇಳಿದ ಅವರು ಯಾವುದೇ ರೀತಿಯ ದುಷ್ಕ್ರತ್ಯಗಳನ್ನು ನಡೆಸದಂತೆ ಎಚ್ಚರಿಕೆ ನೀಡಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2021 ರ ಸೆಕ್ಷನ್ 3 ಮತ್ತು 5 (1) ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ.