ಲಖನೌ, ಏ. 13: ಉತ್ತರ ಪ್ರದೇಶದ (Uttar Pradesh) ಮೀರತ್‌ನಲ್ಲಿ ಆಘಾತಕಾರಿ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಪ್ರಿಯಾಂಕಾ ಎಂಬ 34 ವರ್ಷದ ಮಹಿಳೆಯ ಅಸ್ಥಿಪಂಜರದ ಅವಶೇಷಗಳು ಮನೆಯೊಳಗೆ ಪತ್ತೆಯಾಗಿವೆ. ತಮ್ಮ ಮನೆಯಲ್ಲಿ ಮಹಿಳೆಯ ಮೃತದೇಹವು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಬಹುತೇಕ ಅಸ್ಥಿಪಂಜರವಾಗಿ ಮಾರ್ಪಟ್ಟಿದೆ (Crime News). ಪ್ರಿಯಾಂಕಾ ತನ್ನ ತಂದೆ ಉದಯ್ ಭಾನ್ ಬಿಸ್ವಾಸ್ ಜೊತೆ ವಾಸಿಸುತ್ತಿದ್ದರು. ಸಂಬಂಧಿಕರ ಪ್ರಕಾರ, ಮನೆ ಸುಮಾರು ನಾಲ್ಕು ತಿಂಗಳಿನಿಂದ ಬೀಗ ಹಾಕಲಾಗಿತ್ತು. ಆ ಅವಧಿಯಲ್ಲಿ ತಂದೆ ಮತ್ತು ಮಗಳು ಇಬ್ಬರೂ ನಾಪತ್ತೆಯಾಗಿದ್ದರು. ಅವರನ್ನು ಪತ್ತೆಹಚ್ಚಲು ಪದೇ ಪದೆ ಪ್ರಯತ್ನಿಸಿದ ನಂತರ, ಕುಟುಂಬ ಸದಸ್ಯರು ಬೇಗಂ ಬಾಗ್‌ನ ಚಹಾ ಅಂಗಡಿಯಲ್ಲಿ ಉದಯ್ ಭಾನ್‌ವನ್ನು ಪತ್ತೆಹಚ್ಚಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರಶ್ನಿಸಿದಾಗ, ಪ್ರಿಯಾಂಕಾ ಅವರನ್ನು ಅನಾರೋಗ್ಯದ ಕಾರಣ ಡೆಹ್ರಾಡೂನ್‌ನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆರಂಭದಲ್ಲಿ ಹೇಳಿದ್ದ. ಆದರೆ ಸಂಬಂಧಿಕರು ಹೆಚ್ಚು ಪ್ರಶ್ನಿಸಿದಾಗ, ಆಕೆ ಮೃತಪಟ್ಟಿದ್ದು, ಅವಳ ಮೃತದೇಹವು ಇನ್ನೂ ಮನೆಯೊಳಗೆ ಇದೆ ಎಂದು ಒಪ್ಪಿಕೊಂಡಿದ್ದ ಎಂದು ಮೂಲಗಳು ತಿಳಿಸಿವೆ.
ಪೊಲೀಸರಿಗೆ ತಕ್ಷಣ ಮಾಹಿತಿ ನೀಡಲಾಯಿತು. ಅವರು ಮನೆಯ ಬೀಗವನ್ನು ಒಡೆದು ಒಳಗೆ ಪ್ರವೇಶಿಸಿದರು. ಅಲ್ಲಿ ಪ್ರಿಯಾಂಕಾ ಅವರ ಅವಶೇಷಗಳು ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿವೆ. ಮನೆಯು ಹಳೆಯ ಕಾಗದಗಳು ಮತ್ತು ತುಣುಕುಗಳಿಂದ ತುಂಬಿತ್ತು ಎಂದು ಕುಟುಂಬ ಸದಸ್ಯರು ಹೇಳಿದರೆ, ವಾಸನೆ ಬರದಂತೆ ತಡೆಯಲು ಮನೆಯೊಳಗೆ ಸುಗಂಧ ದ್ರವ್ಯವನ್ನು ಸಿಂಪಡಿಸಿದ್ದಾಗಿ ತಂದೆ ಹೇಳಿದ್ದಾನೆ. ಆಕೆಯ ಮರಣದ ನಂತರ ತಂದೆ ಮೂರು ನಾಲ್ಕು ದಿನಗಳ ಕಾಲ ಶವದೊಂದಿಗೆ ಮನೆಯೊಳಗೆ ಇದ್ದ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
ಗಂಡ ಕಪ್ಪಗಿದ್ದಾನೆಂದು ಪ್ರಿಯಕರನೊಟ್ಟಿಗೆ ಸೇರಿಗೆ ಪತಿಯನ್ನೇ ಕೊಂದ ಪತ್ನಿ!
ನೆರೆಹೊರೆಯವರು ಹೇಳುವಂತೆ, ಪ್ರಿಯಾಂಕಾ ಅವರ ಕುಟುಂಬದೊಂದಿಗೆ ಯಾರೂ ಅಷ್ಟಾಗಿ ಮಾತನಾಡುತ್ತಿರಲಿಲ್ಲ ಆದರೆ ಪ್ರಿಯಾಂಕಾ ಅನಾರೋಗ್ಯದಿಂದ ಬಳಲುತ್ತಿದ್ದರು. ಆಕೆಯ ತಂದೆ ಆಗಾಗ ಆಕೆಯನ್ನು ರಿಕ್ಷಾದಲ್ಲಿ ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ಎಂದು ಅವರಿಗೆ ತಿಳಿದಿತ್ತು. ಕಳೆದ ನಾಲ್ಕು ತಿಂಗಳಿನಿಂದ ಅವರಿಬ್ಬರೂ ನಾಪತ್ತೆಯಾಗಿದ್ದರು ಎಂದು ಅವರು ಹೇಳಿದರು.
ಪ್ರಿಯಾಂಕಾ ದೀರ್ಘಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಮಾನಸಿಕ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆಯುತ್ತಿದ್ದರು ಎಂದು ಅವರ ಸೋದರಸಂಬಂಧಿ ಬಿಸ್ವಜಿತ್ ಬಿಸ್ವಾಸ್ ಹೇಳಿದರು. ಪ್ರಿಯಾಂಕಾ ಅವರ ತಾಯಿ 2013 ರಲ್ಲಿ ಇದೇ ರೀತಿ ನಿಧನರಾದರು. ನಂತರ ತಂದೆ ಮತ್ತು ಮಗಳು ಇಬ್ಬರೂ ಖಿನ್ನತೆಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ವಿಷಯ ತನಿಖೆ ಹಂತದಲ್ಲಿದ್ದು, ಪ್ರಮುಖ ಸಾಕ್ಷ್ಯಗಳು ಹೊರಬಂದ ನಂತರ ಹೆಚ್ಚಿನ ವಿವರಗಳನ್ನು ಹಂಚಿಕೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.