ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Koppala News: ಕೊಪ್ಪಳದಲ್ಲಿ ಸುಟ್ಟ ಸ್ಥಿತಿಯಲ್ಲಿ ಇಬ್ಬರು ಯುವಕರ ಶವ ಪತ್ತೆ, ಕೊಲೆ ಶಂಕೆ

ರುದ್ರೇಶ್ ಗಂಗಾವತಿ (23) ಹಾಗೂ ರವಿರಾಮಣ್ಣ ತಟ್ಟಿ (22) ಮೃತ ದುರ್ದೈವಿಗಳು. ಇಬ್ಬರು ಯುವಕರನ್ನು ಬೇರೆಡೆ ಕೊಂದು ಕಾಲುವೆಗೆ ತಂದು ಸುಟ್ಟು ಹಾಕಲಾಗಿದೆ ಎಂದು ಶಂಕಿಸಲಾಗಿದೆ. ಇಬ್ಬರ ವೈಯಕ್ತಿಕ ದ್ವೇಷ ಹೊಂದಿದ್ದವರು, ಇವರು ಕೊನೆಯ ಬಾರಿಗೆ ಕಾಣಿಸಿಕೊಂಡ ಸ್ಥಳಗಳ ಸಿಸಿಟಿವಿ ಕ್ಯಾಮೆರಾ ಇತ್ಯಾದಿ ಪರಿಶೀಲಿಸಲಾಗುತ್ತಿದೆ.

ಕೊಪ್ಪಳದಲ್ಲಿ ಸುಟ್ಟ ಸ್ಥಿತಿಯಲ್ಲಿ ಯುವಕರಿಬ್ಬರ ಶವ ಪತ್ತೆ, ಕೊಲೆ ಶಂಕೆ

ಸಾಂದರ್ಭಿಕ ಚಿತ್ರ -

ಹರೀಶ್‌ ಕೇರ
ಹರೀಶ್‌ ಕೇರ Apr 13, 2026 12:38 PM

ಕೊಪ್ಪಳ, ಏ.13 : ಸುಟ್ಟುಹಾಕಿದ (burnt) ಸ್ಥಿತಿಯಲ್ಲಿ ಇಬ್ಬರು ಯುವಕರ ಮೃತ ದೇಹಗಳು ಪತ್ತೆ (body found) ಆಗಿರುವ ಘಟನೆ ಕೊಪ್ಪಳ (koppala news) ಜಿಲ್ಲೆಯ ಕುಕನೂರು ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಳಿ ನಡೆದಿದೆ. ಗ್ರಾಮದ ಬಳಿಯ ಕಾಲುವೆಯಲ್ಲಿ ಇಬ್ಬರು ಯುವಕರ ಮೃತ ದೇಹಗಳು ಪತ್ತೆಯಾಗಿವೆ. ರುದ್ರೇಶ್ ಗಂಗಾವತಿ (23) ಹಾಗೂ ರವಿರಾಮಣ್ಣ ತಟ್ಟಿ (22) ಮೃತ ದುರ್ದೈವಿಗಳು.

ಕಾಲುವೆಯಲ್ಲಿ ಇಬ್ಬರ ಮೃತ ದೇಹಗಳು ಅರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕುಕನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಇಬ್ಬರು ಯುವಕರನ್ನು ಬೇರೆಡೆ ಕೊಂದು ಕಾಲುವೆಗೆ ತಂದು ಸುಟ್ಟು ಹಾಕಲಾಗಿದೆ ಎಂದು ಶಂಕಿಸಲಾಗಿದೆ. ಇಬ್ಬರ ವೈಯಕ್ತಿಕ ದ್ವೇಷ ಹೊಂದಿದ್ದವರು, ಇವರು ಕೊನೆಯ ಬಾರಿಗೆ ಕಾಣಿಸಿಕೊಂಡ ಸ್ಥಳಗಳ ಸಿಸಿಟಿವಿ ಕ್ಯಾಮೆರಾ ಇತ್ಯಾದಿ ಪರಿಶೀಲಿಸಲಾಗುತ್ತಿದೆ.

ವೈದ್ಯರ ನಿರ್ಲಕ್ಷ್ಯದಿಂದ ಗರ್ಭಿಣಿ, ಮಗು ಸಾವು

ಬೆಳಗಾವಿ : ಬಿಮ್ಸ್ ಆಸ್ಪತ್ರೆ ವೈದ್ಯರ ನಿರ್ಲಕ್ಷದಿಂದ ಗರ್ಭಿಣಿ ಸಾವಿಗೀಡಾಗಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಗರ್ಭಿಣಿ ಈರಮ್ಮ ಈರಪ್ಪ ಶೀಗಿಹಳ್ಳಿ (21) ಸಾವನ್ನಪ್ಪಿದ್ದು ಅಲ್ಲದೆ ಆಕೆಯ ಹೊಟ್ಟೆಯಲ್ಲಿದ್ದ ಶಿಶು ಸಹ ಸಾವನ್ನಪ್ಪಿದೆ. ವೈದ್ಯರ ನಿರ್ಲಕ್ಷದಿಂದ ಈರಮ್ಮ ಸಾವನಪ್ಪಿದ್ದಾಳೆ ಎಂದು ಕುಟುಂಬಸ್ಥರು ಆಕ್ರೋಶ ಹೊರ ಹಾಕಿದ್ದಾರೆ.

Lokayuta Raid: 14 ಕೋಟಿ ರೂ. ಆಸ್ತಿ, 11 ಕೆಜಿ ಚಿನ್ನ ಬೆಳ್ಳಿ, ಹತ್ತಾರು ಮನೆ, ಕಾರು: ಲೋಕಾಯುಕ್ತ ದಾಳಿಯಲ್ಲಿ ಪತ್ತೆಯಾದ ಇಂಜಿನಿಯರ್‌ ಆಸ್ತಿ!

ಬೆಳಗಾವಿ ತಾಲೂಕಿನ ತುರಮರಿ ಗ್ರಾಮದ ನಿವಾಸಿಯಾದ ಈರಮ್ಮ ಏಪ್ರಿಲ್ 10ರಂದು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಗೆ ದಾಖಲಾದಾಗ ವೈದ್ಯರು ಸರಿಯಾಗಿ ಚಿಕಿತ್ಸೆ ನೀಡಿಲ್ಲ. ಸರಿಯಾಗಿ ಚಿಕಿತ್ಸೆ ನೀಡದ ಪರಿಣಾಮ ಸತ್ತಿದ್ದಾಳೆ ಎಂದು ಆಕೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

ತಡರಾತ್ರಿ ಆಸ್ಪತ್ರೆಯಲ್ಲಿ ಈರಮ್ಮ ಹಾಗೂ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದ್ದಾರೆ. ಸಾವಿನ ಬಳಿಕ ಮಧ್ಯರಾತ್ರಿ ಸಹಿ ಮಾಡಿಸಿಕೊಂಡು ಕಳುಹಿಸಲು ಸಿಬ್ಬಂದಿಗಳು ಯತ್ನಿಸಿದ್ದಾರೆ. ನಿರ್ಲಕ್ಷ್ಯ ವಹಿಸಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಆಸ್ಪತ್ರೆಗೆ ಎಪಿಎಂಸಿ ಠಾಣೆ ಪೋಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ರಂಗಭೂಮಿಯ ಭರವಸೆಯ ನಟ ಮುರಳಿ ಆತ್ಮಹತ್ಯೆ; ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆ