ಕೇತನ್ ಜೊತೆ ನಿಶ್ಚಿತಾರ್ಥಕ್ಕೂ ಮುನ್ನ ಸಿಯಾ- ಚೇತನ್ ಉದಯಪುರ ಪ್ರವಾಸ; ತನಿಖೆಯಲ್ಲಿ ಬಯಲಾಯ್ತು ರಹಸ್ಯ
Ketan Agarwal murder case: ಕೇತನ್ ಜೊತೆ ನಿಶ್ಚಿತಾರ್ಥವಾಗುವ ಕೆಲವೇ ವಾರಗಳ ಮೊದಲು, ಸಿಯಾ ಮತ್ತು ಚೇತನ್ ಉದಯಪುರಕ್ಕೆ ತೆರಳಿದ್ದರು. ಅವರು ಹಲವಾರು ದಿನಗಳನ್ನು ಒಟ್ಟಿಗೆ ಕಳೆದರು. ಘಟನೆಗೂ ಮುನ್ನ ಆರೋಪಿಗಳು ಉದಯಪುರಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ, ಅಲ್ಲಿ ಯಾರನ್ನು ಭೇಟಿಯಾಗಿದ್ದರು ಮತ್ತು ಪಿತೂರಿಯ ಯೋಜನೆ ಅಲ್ಲಿಯೇ ರೂಪಿತವಾಗಿದೆಯೇ ಎಂಬ ಬಗ್ಗೆ ತೀವ್ರ ಶೋಧ ನಡೆಯುತ್ತಿದೆ.
ಉದಯಪುರ ಪ್ರವಾಸ ಕೈಗೊಂಡಿದ್ದ ಸಿಯಾ ಗೋಯಲ್-ಪ್ರೇಮಿ -
ಪುಣೆ, ಜೂ.29: ಪುಣೆಯ ಲೋಹಗಢ ಕೋಟೆಯಲ್ಲಿ ತನ್ನ ನಿಶ್ಚಿತ ವರ ಕೇತನ್ ಅಗರ್ವಾಲ್ (Ketan Agarwal) ಅವರನ್ನು ಬೆಟ್ಟದಿಂದ ತಳ್ಳಿದ ಆರೋಪ ಎದುರಿಸುತ್ತಿರುವ ಸಿಯಾ ಗೋಯಲ್ (Siya Goyal) ಮತ್ತು ಚೇತನ್ ಚೌಧರಿಯ ಪ್ರಯಾಣದ ವಿವರಗಳನ್ನು ಮಹಾರಾಷ್ಟ್ರ ಪೊಲೀಸರು ತನಿಖೆ ನಡೆಸಿದ್ದಾರೆ. ಇದರಲ್ಲಿ ರಾಜಸ್ಥಾನದ (Rajasthan) ಉದಯಪುರಕ್ಕೆ ಅವರು ಕೈಗೊಂಡಿದ್ದ ಪ್ರವಾಸವೂ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರದ ಶ್ರೀಮಂತ ಉದ್ಯಮಿಯೊಬ್ಬರ ಪುತ್ರ ಕೇತನ್ ಅಗರ್ವಾಲ್ ಮತ್ತು ಸಿಯಾ ಗೋಯಲ್ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ಸಾಮಾಜಿಕ ಮಾಧ್ಯಮದಲ್ಲಿ, ಅವರ ರೀಲ್ಗಳು, ಪೋಸ್ಟ್ಗಳು ಹರಿದಾಡುತ್ತಿವೆ. ಪೋಸ್ಟ್ ನೋಡುತ್ತಿದ್ದರೆ ಸಿಯಾಗೆ ಮದುವೆ ಇಷ್ಟವಿರಲಿಲ್ಲ ಎಂದು ಅನಿಸೋದೇ ಇಲ್ಲ. ಸಾರ್ವಜನಿಕವಾಗಿ ಆಕೆ ತನ್ನ ಪ್ರೀತಿಯನ್ನು ವ್ಯಕ್ತಪಡಿಸಿದ್ದಳು. ಇದರ ಹಿಂದೆಯೂ ಆಕೆಯ ದುಷ್ಟ ಯೋಚನೆ ಇತ್ತು ಎಂಬುದು ಗೊತ್ತಾಗಿದೆ.
ಕೇತನ್ ಜೊತೆ ನಿಶ್ಚಿತಾರ್ಥವಾಗುವ ಕೆಲವೇ ವಾರಗಳ ಮೊದಲು, ಸಿಯಾ ಮತ್ತು ಚೇತನ್ ಉದಯಪುರಕ್ಕೆ ತೆರಳಿದ್ದರು. ಅವರು ಹಲವಾರು ದಿನಗಳನ್ನು ಒಟ್ಟಿಗೆ ಕಳೆದರು. ಘಟನೆಗೂ ಮುನ್ನ ಆರೋಪಿಗಳು ಉದಯಪುರಕ್ಕೆ ಭೇಟಿ ನೀಡಿದ್ದ ಹಿನ್ನೆಲೆಯಲ್ಲಿ, ಅಲ್ಲಿ ಯಾರನ್ನು ಭೇಟಿಯಾಗಿದ್ದರು ಮತ್ತು ಪಿತೂರಿಯ ಯೋಜನೆ ಅಲ್ಲಿಯೇ ರೂಪಿತವಾಗಿದೆಯೇ ಎಂಬ ಬಗ್ಗೆ ತೀವ್ರ ಶೋಧ ನಡೆಯುತ್ತಿದೆ.
ಸಿಯಾ ಗೋಯಲ್–ಕೇತನ್ ಅಗರ್ವಾಲ್ ಮದುವೆಯಲ್ಲಿ ಮಿತ್ತಲ್ ಕುಟುಂಬದ ಪಾತ್ರ ಏನು? ದಿಢೀರ್ ಸುದ್ದಿಯಾಗಿದ್ದೇಕೆ?
ಸಿಯಾ ಗೋಯಲ್ ಪೊಲೀಸರಿಗೆ ಹೇಳಿದ್ದೇನು?
ಪೊಲೀಸ್ ವಿಚಾರಣೆಯ ಸಮಯದಲ್ಲಿ, ಸಿಯಾ ಕೇತನ್ ಅಗರ್ವಾಲ್ ಅವರನ್ನು ಮದುವೆಯಾಗಲು ಎಂದಿಗೂ ಬಯಸಿರಲಿಲ್ಲ ಎಂದು ಹೇಳಿದ್ದಾಳೆ. ಕೇತನ್ ಕೊಲೆಯಾದರೆ, ಮದುವೆಯ ಬಗ್ಗೆ ಮರುಪರಿಶೀಲಿಸಲು ಕನಿಷ್ಠ ಮೂರು ವರ್ಷಗಳ ಕಾಲಾವಕಾಶ ಸುಲಭವಾಗಿ ಸಿಗುತ್ತದೆ ಎಂದು ಸಿಯಾ ನಂಬಿದ್ದಳು ಎಂಬ ವಿಷಯ ತನಿಖೆಯಿಂದ ಬೆಳಕಿಗೆ ಬಂದಿದೆ. ಅಲ್ಲದೆ, ಮದುವೆ ಬೇಡ ಎಂದರೆ ತಮಗೆ ಅಪಕೀರ್ತಿ ಬರುತ್ತದೆ ಎಂದು ಸಿಯಾ ಮತ್ತು ಚೇತನ್ ಇಬ್ಬರೂ ಭಯಪಟ್ಟಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಮೂಲಗಳ ಪ್ರಕಾರ, ಮೂರು ವರ್ಷಗಳ ನಂತರ ತಾನು ಚೇತನ್ನನ್ನು ಮದುವೆಯಾಗಲು ಸಿಯಾ ಬಯಸಿದ್ದಳು. ಈ ಪಿತೂರಿಯ ಭಾಗವಾಗಿ, ಸಿಯಾ ಗೋಯಲ್ ಶಾಪಿಂಗ್ ಮಾಡುವ ನೆಪದಲ್ಲಿ ಕೇತನ್ ಅಗರ್ವಾಲ್ನಿಂದ 1 ಕೋಟಿ ರೂಪಾಯಿ ಪೀಡಿಸಿ ಪಡೆದಿದ್ದಾಳೆ ಎನ್ನಲಾಗಿದೆ. ನಂತರ ಆ ಹಣವನ್ನು ಆಕೆ ನೇರವಾಗಿ ಚೇತನ್ಗೆ ತಲುಪಿಸಿದ್ದಾಳೆ. ಚೇತನ್ ತನ್ನ ವೃತ್ತಿಜೀವನ ಮತ್ತು ವ್ಯವಹಾರವನ್ನು ಸ್ಥಿರಗೊಳಿಸಲು ಈ ಹಣವನ್ನು ಬಳಸಲು ಬಯಸಿದ್ದನು. ಹಣ ಕೈ ಸೇರಿದ ನಂತರ, ತಾನು ಆರ್ಥಿಕವಾಗಿ ನೆಲೆನಿಲ್ಲಲು ಕನಿಷ್ಠ ಮೂರು ವರ್ಷಗಳ ಸಮಯ ಬೇಕಾಗುತ್ತದೆ ಎಂದು ಚೇತನ್ ಸಿಯಾಗೆ ಭರವಸೆ ನೀಡಿದ್ದನು.
ಕೇತನ್ ಸಾವಿಗೀಡಾದ ಕೆಲವು ತಿಂಗಳುಗಳ ನಂತರ, ಚೇತನ್ ಸಿಯಾಳ ಕುಟುಂಬವನ್ನು ಭೇಟಿಯಾಗಿ ಆಕೆಯನ್ನು ಮದುವೆಯಾಗಲು ಅವರ ಅನುಮತಿ ಕೇಳಬೇಕು ಎಂಬುದು ಇವರ ಯೋಜನೆಯಾಗಿತ್ತು. ಮೂಲಗಳ ಪ್ರಕಾರ, ಜೂನ್ 18 ರಂದು ಪುಣೆ ಜಿಲ್ಲೆಯ ಲೋಹರ್ಗಢ ಕೋಟೆಗೆ ಭೇಟಿ ನೀಡುವಂತೆ ಸಿಯಾ, ಕೇತನ್ನನ್ನು ಮನವೊಲಿಸಿದಳು. ಚೇತನ್ ಅವರಿಬ್ಬರನ್ನು ಹಿಂಬಾಲಿಸಿದಳು. ನಿರ್ಜನ ಸ್ಥಳದಲ್ಲಿ, ಅವಳು ತನ್ನ ಪ್ರಿಯತಮನಿಗೆ ಸಂಕೇತ ನೀಡಿದಾಗ, ಆತ ಕೇತನ್ನನ್ನು ಬೆಟ್ಟದ ಕೆಳಕ್ಕೆ ತಳ್ಳಿದ್ದಾನೆ.
ಕೇತನ್ ಅಗರ್ವಾಲ್ ಹತ್ಯೆ ಪ್ರಕರಣಕ್ಕೆ ಹೊಸ ಟ್ವಿಸ್ಟ್..! ಸಿಯಾ-ಚೇತನ್ ಸಂಬಂಧದ ಶಾಕಿಂಗ್ ಮಾಹಿತಿ ಬಹಿರಂಗ
ತನ್ನ ಕೃತ್ಯವನ್ನು ಮುಚ್ಚಿಡಲು ಚೇತನ್ ತನ್ನ ಫೋನ್ ಅನ್ನು ತನ್ನ ಅಂಗಡಿಯಲ್ಲಿಯೇ ಬಿಟ್ಟು ಹೋಗಿದ್ದ. ಲೋಹಗಡ್ ಕೋಟೆಗೆ ಹೋಗುವ ದಾರಿಯಲ್ಲಿ ಅಗತ್ಯ ಸಂವಹನಗಳನ್ನು ನಿರ್ವಹಿಸಲು ಅವನು ಒಬ್ಬ ಉದ್ಯೋಗಿಯ ಮೊಬೈಲ್ ಫೋನ್ ಅನ್ನು ಎರವಲು ಪಡೆದಿದ್ದ. ತನ್ನ ಗುರುತನ್ನು ಮರೆಮಾಡಲು ಅವನು ಹುಡ್ ಜಾಕೆಟ್ ಅನ್ನು ಸಹ ಧರಿಸಿದ್ದ.
ಆರಂಭದಲ್ಲಿ ಸಿಯಾ ಈ ಅಪರಾಧವನ್ನು ಅಪಘಾತ ಎಂದು ಬಿಂಬಿಸುವಲ್ಲಿ ಯಶಸ್ವಿಯಾದಳು. ಆದರೆ, ಆಕೆಯ ಅನುಮಾನಾಸ್ಪದ ವರ್ತನೆ ಮೃತ ಕೇತನ್ ಅಗರ್ವಾಲ್ ಅವರ ಸಹೋದರಿಗೆ ಅನುಮಾನ ಹುಟ್ಟಿಸಿತು. ಕೊಲೆಯಾದ ಮೂರು ದಿನಗಳ ನಂತರ, ಜೂನ್ 21 ರಂದು, ಕೇತನ್ ಅಗರ್ವಾಲ್ ಅವರ ತಂದೆ ಮತ್ತು ಸಂಬಂಧಿಕರು ಆ ಸ್ಥಳಕ್ಕೆ ಭೇಟಿ ನೀಡಿ, ಆ ಸ್ಥಳವು ಆಕಸ್ಮಿಕವಾಗಿ ಜಾರಿ ಬಿದ್ದಿರುವುದು ಸಾಧ್ಯವಿಲ್ಲ ಎಂಬುದನ್ನು ಕಂಡುಕೊಂಡರು.