ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಸೇನಾ ಶಿಬಿರದಲ್ಲಿ ಗುಂಡಿನ ದಾಳಿ ಓರ್ವ ಅಧಿಕಾರಿ ಹುತಾತ್ಮ

ಜಮ್ಮು ಮತ್ತು ಕಾಶ್ಮೀರದ ಸೇನಾ ಶಿಬಿರದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ. ಓರ್ವ ಜವಾನ ನಾಪತ್ತೆಯಾಗಿದ್ದಾನೆ. ಈ ದಾಳಿಯಲ್ಲಿ ಭಯೋತ್ಪಾದಕರ ಪಾತ್ರವನ್ನು ತಳ್ಳಿ ಹಾಕಲಾಗಿದೆ. ಘಟನೆಯ ಕಾರಣ ಪತ್ತೆ ಹಚ್ಚಲು ತನಿಖೆ ನಡೆಸಲಾಗುತ್ತಿದೆ.

ಗುಂಡಿನ ದಾಳಿ: ಸೇನಾಧಿಕಾರಿ ಸಾವು

ಸಾಂದರ್ಭಿಕ ಚಿತ್ರ -

ಸಾಂಬಾ: ಸೇನಾ ಶಿಬಿರದೊಳಗೆ (army camp) ಗುಂಡಿನ ದಾಳಿಯಲ್ಲಿ ಓರ್ವ ಸೇನಾಧಿಕಾರಿ ಸಾವನ್ನಪ್ಪಿರುವ ಘಟನೆ ಜಮ್ಮು ಮತ್ತು ಕಾಶ್ಮೀರದಲ್ಲಿ (jammu and kashmir) ಮಂಗಳವಾರ ರಾತ್ರಿ ನಡೆದಿದೆ. ಓರ್ವ ಜವಾನ ನಾಪತ್ತೆಯಾಗಿದ್ದಾರೆ. ಮೃತ ಅಧಿಕಾರಿಯನ್ನು ರಿಯಾಸಿ ಜಿಲ್ಲೆಯ (Reasi district) ನಿವಾಸಿ ಸುರ್ಜೀತ್ ಸಿಂಗ್ ಎಂದು ಗುರುತಿಸಲಾಗಿದೆ. ಭಯೋತ್ಪಾದಕರು (terror attack) ಈ ದಾಳಿ ನಡೆಸಿರುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಸಾಂಬಾ ಜಿಲ್ಲೆಯ ಸೇನಾ ಶಿಬಿರದೊಳಗೆ ನಡೆದ ಈ ದಾಳಿಯ ಹಿಂದಿನ ಕಾರಣವನ್ನು ಪತ್ತೆ ಹಚ್ಚಲು ತನಿಖೆ ತೀವ್ರಗೊಳಿಸಲಾಗಿದೆ. ಈ ಕುರಿತು ಸೇನೆಯು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಸೇನಾ ಶಿಬಿರದೊಳಗೆ ನಡೆದ ಗುಂಡಿನ ದಾಳಿಯಲ್ಲಿ ಸೇನೆಯ ಕಿರಿಯ ಸುಬೇದಾರ್ ಸುರ್ಜೀತ್ ಸಿಂಗ್ ಸಾವನ್ನಪ್ಪಿದ್ದಾರೆ. ಮಂಗಳವಾರ ರಾತ್ರಿ ನಡೆದ ಈ ದಾಳಿಗೆ ಕಾರಣವನ್ನು ಪತ್ತೆ ಹಚ್ಚಲು ತನಿಖೆ ಆರಂಭಿಸಲಾಗಿದೆ.

ವಿಜಯ್‌ ಹಜಾರೆ; 32, 33, 35 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ ಬ್ಯಾಟರ್‌ಗಳು

ಮೃತರ ಕುಟುಂಬದೊಂದಿಗೆ ಭಾರತೀಯ ಸೇನೆಯು ದೃಢವಾಗಿ ನಿಂತಿದೆ. ಈ ದುಃಖದ ಸಮಯದಲ್ಲಿ ಅವರಿಗೆ ಅಚಲವಾದ ಬೆಂಬಲವನ್ನು ನೀಡುತ್ತದೆ ಎಂದು ಸೇನೆಯು ತಿಳಿಸಿದೆ.



ಸೇನಾ ಶಿಬಿರದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಭಯೋತ್ಪಾದಕರ ಸಂಪರ್ಕವನ್ನು ತಳ್ಳಿಹಾಕಲಾಗಿದೆ. ಆದರೂ ದಾಳಿಯ ಕುರಿತು ಸಕ್ರಿಯವಾಗಿ ತನಿಖೆ ನಡೆಸಲಾಗುತ್ತದೆ.

ಸಾಂಬಾ ಜಿಲ್ಲೆಯ ಬರಿ ಬ್ರಾಹ್ಮಣ ಶಿಬಿರದಲ್ಲಿ ಮಂಗಳವಾರ ರಾತ್ರಿ ನಡೆದ ಗುಂಡು ಹಾರಾಟದಲ್ಲಿ ಕರ್ತವ್ಯದಲ್ಲಿದ್ದ ಕಿರಿಯ ಅಧಿಕಾರಿ ಸುಬೇದಾರ್ ಸುರ್ಜೀತ್ ಸಿಂಗ್ ತೀವ್ರವಾಗಿ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಬಂದ ತಕ್ಷಣ ಅಲ್ಲಿಗೆ ಧಾವಿಸಿದ ರಕ್ಷಣಾ ತಂಡ ಅವರನ್ನು ಕೂಡಲೇ ಹತ್ತಿರದ ವೈದ್ಯಕೀಯ ಸೌಲಭ್ಯ ಕೇಂದ್ರಕ್ಕೆ ಕರೆದುಕೊಂಡು ಹೋಯಿತು. ಆದರೆ ಅಲ್ಲಿಗೆ ಹೋಗುವ ದಾರಿ ಮಧ್ಯೆಯೇ ಅವರು ಸಾವನ್ನಪ್ಪಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಯಾವಾಗ ಭಾರತಕ್ಕೆ ಮರಳಿ ಬರುತ್ತಿರಿ... ಉದ್ಯಮಿ ವಿಜಯ್ ಮಲ್ಯಗೆ ಬಾಂಬೆ ಹೈಕೋರ್ಟ್ ಪ್ರಶ್ನೆ

ಘಟನೆಯಲ್ಲಿ ಇನ್ನೋರ್ವ ಜವಾನ ಜಮ್ಮು ನಿವಾಸಿ ನಾಪತ್ತೆಯಾಗಿದ್ದಾನೆ. ಆತನೇ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ನಾಪತ್ತೆಯಾಗಿರುವ ಜವಾನ ಕೆಲವು ಶಸ್ತ್ರಾಸ್ತ್ರಗಳು ಮತ್ತು ಮದ್ದುಗುಂಡುಗಳೊಂದಿಗೆ ಪರಾರಿಯಾಗಿದ್ದಾನೆ ಎನ್ನಲಾಗಿದ್ದು, ಆತನನ್ನು ಹಿಡಿಯಲು ಶೋಧ ಕಾರ್ಯ ಆರಂಭಿಸಲಾಗಿದೆ. ಘಟನೆ ಕುರಿತು ಎಫ್‌ಐಆರ್ ದಾಖಲಿಸಲಾಗಿದ್ದು, ತನಿಖೆ ಆರಂಭಿಸಲಾಗಿದೆ.