ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bigg Boss Kannada 12: ಗಿಲ್ಲಿ ಬಗ್ಗೆ ಅತ್ತೆ ಮಗಳ ಕಂಪ್ಲೆಂಟು! ಅಶ್ವಿನಿ-ಗಿಲ್ಲಿ ಕಾಮಿಡಿಗೆ ಮನೆಮಂದಿ ನಕ್ಕೂ ನಕ್ಕೂ ಸುಸ್ತು

Gilli Nata: ಈ ವಾರ ಬಿಗ್‌ ಬಾಸ್‌ ಮನೆಯಲ್ಲಿ ಫ್ಯಾಮಿಲಿ ವೀಕ್‌ ನಡೆಯುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದವರು ಒಬ್ಬೊಬ್ಬರಾಗಿಯೇ ದೊಡ್ಮನೆಗೆ ಬಂದು ಹೋಗುತ್ತಿದ್ದಾರೆ. ಅಶ್ವಿನಿ ಗೌಡ ಅವರ ತಾಯಿ ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರು ಬಂದ ಕ್ಷಣ ಅಶ್ವಿನಿ ಗೌಡ ತುಂಬಾ ಎಮೋಷನಲ್ ಆದರು. ಅಶ್ವಿನಿ ತಾಯಿ ಅವರು ಗಿಲ್ಲಿಗೆ, ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ ಚೆನ್ನಾಗಿರಿ ಎಂದಿದ್ದಾರೆ.

ಅಶ್ವಿನಿ ತಾಯಿಯನ್ನ 'ಅತ್ತೆ' ಎಂದ ಗಿಲ್ಲಿ!  ಕಾಮಿಡಿಗೆ ಮನೆಮಂದಿ  ಸುಸ್ತು

ಬಿಗ್‌ ಬಾಸ್‌ ಕನ್ನಡ -

Yashaswi Devadiga
Yashaswi Devadiga Dec 24, 2025 6:36 PM

ಈ ವಾರ ಬಿಗ್‌ ಬಾಸ್‌ (Bigg Boss Kannada 12) ಮನೆಯಲ್ಲಿ ಫ್ಯಾಮಿಲಿ ವೀಕ್‌ (Family Week) ನಡೆಯುತ್ತಿದೆ. ಬಿಗ್ ಬಾಸ್ ಸ್ಪರ್ಧಿಗಳ ಕುಟುಂಬದವರು ಒಬ್ಬೊಬ್ಬರಾಗಿಯೇ ದೊಡ್ಮನೆಗೆ ಬಂದು ಹೋಗುತ್ತಿದ್ದಾರೆ. ಅಶ್ವಿನಿ ಗೌಡ (Ashwini Gowda) ಅವರ ತಾಯಿ ಕೂಡ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಅವರು ಬಂದ ಕ್ಷಣ ಅಶ್ವಿನಿ ಗೌಡ ತುಂಬಾ ಎಮೋಷನಲ್ (Emotional) ಆದರು. ಅಶ್ವಿನಿ ತಾಯಿ ಅವರು ಗಿಲ್ಲಿಗೆ, ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ ಚೆನ್ನಾಗಿರಿ ಎಂದಿದ್ದಾರೆ.

ಅಶ್ವಿನಿ ತಾಯಿ ಅವರು ಗಿಲ್ಲಿಗೆ, ಒಬ್ಬರಿಗೊಬ್ಬರು ಮನಸ್ತಾಪ ಮಾಡಿಕೊಳ್ಳಬೇಡಿ ಚೆನ್ನಾಗಿರಿ ಎಂದಿದ್ದಾರೆ. ಆ ಬಳಿಕ ಅಶ್ವಿನಿ ಅವರು ತಾಯಿ ಬಳಿ ತಮಾಷೆಗೆ, ವಿಗ್‌ ಹಾಕಿಕೊಳ್ಳುತ್ತೀರ, ಹಲ್ಲು ಸೆಟ್‌ ಅಂತೆಲ್ಲ‌ ರೆಗಿಸ್ತಾನೆ ಎಂದಿದ್ದಾರೆ. ಅದಕ್ಕೆ ಗಿಲ್ಲಿ, ಅತ್ತೆ ಮಗಳಿಗೆ ಇಷ್ಟೂ ಹೇಳದಿದ್ರೆ ಹೇಗೆ? ಅಂತ ತಮಾಷೆ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12: ರಕ್ಷಿತಾ ಅಮ್ಮನಿಗೆ ಧ್ರುವಂತ್ ಸಾಷ್ಟಾಂಗ ನಮಸ್ಕಾರ! ಡೊಡ್ಮನೆಯಲ್ಲಿ ಪುಟ್ಟಿ ತಾಯಿ ಜೊತೆ ವ್ಲಾಗ್‌

ಮನೆಮಂದಿ ನಕ್ಕೂ ನಕ್ಕೂ ಸುಸ್ತು

ಆಗ ಗಿಲ್ಲಿ ನಟ ಅವರು, ಅತ್ತೆ ಮಗಳು ಎಂದ ಮೇಲೆ ಅಷ್ಟು ಸಲುಗೆ ಇಲ್ಲ ಎಂದರೆ ಹೇಗೆ ಎಂದಿದ್ದಾರೆ. ಕೊನೆಗೆ ಅಶ್ವಿನಿ ಗೌಡ ಅಮ್ಮನನ್ನು ಅತ್ತೆ ಅತ್ತೆ ಎಂದೇ ಮಾತನಾಡಿಸಿದ್ದಾರೆ. ಇದನ್ನು ಕೇಳಿ ಬಿಗ್​ಬಾಸ್​ ಮನೆಯಲ್ಲಿ ಎಲ್ಲರೂ ನಕ್ಕೂ ನಕ್ಕೂ ಸುಸ್ತಾಗಿದ್ದಾರೆ.ಅಷ್ಟಕ್ಕೂ ಗಿಲ್ಲಿ ನಟ ಮತ್ತು ಅಶ್ವಿನಿ ಗೌಡ ಆಗಾಗ್ಗೆ ಜಗಳವಾಡುತ್ತಲೇ ಇರುತ್ತಾರೆ. ಇದರ ನಡುವೆಯೇ ಇವರಿಬ್ಬರ ನಡುವೆ ಪ್ರೀತಿಯೂ ಹಾಗೆಯೇ ಇದೆ.

ಈಗಾಗಲೇ ಸೂರಜ್‌ ಅವರ ತಾಯಿ ಅಕ್ಕ, ರಾಶಿಕಾ ಅವರ ತಮ್ಮ ಅಮ್ಮ , ಧನುಷ್‌ ಅವರ ತಾಯಿ ಎಂಟ್ರಿ ಕೊಟ್ಟಿದ್ದಾಗಿದೆ. ರಕ್ಷಿತಾ ಅವರ ತಾಯಿ ಕೂಡ ಬಂದಿದ್ದಾರೆ. ರಕ್ಷಿತಾ ಅಮ್ಮ ಎಂಟ್ರಿ ಕೊಡುತ್ತಲೇ ಯಾರೊಂದಿಗೂ ಜಗಳ ಮಾಡಬೇಡ ಎಂದಿದ್ದಾರೆ. ಧ್ರುವಂತ್‌ ಬೆತ್ತ ತರಲಿಲ್ವಾ ಅಂತ ಕೇಳಿದ್ದಾರೆ. ಅದಕ್ಕೆ ಗಿಲ್ಲಿ, ಬೆತ್ತ ತಂದಿದ್ದರೆ ನಿನಗೆ ಹೊಡಿತಾ ಇದ್ದರು ಎಂದು ತಮಾಷೆ ಮಾಡಿದ್ದಾರೆ.

ಇನ್ನು ರಕ್ಷಿತಾ ಅವರಿಗೆ ಬಿಗ್‌ ಬಾಸ್‌ ಒಂದು ಸರ್‌ಪ್ರೈಸ್‌ ಕೊಟ್ಟಿದ್ದಾರೆ. ಮನೆಯಲ್ಲಿ ಮೀನು , ಕ್ಯಾಮೆರಾ ಎಲ್ಲವೂ ಇದೆ. ಲೈವ್‌ ಬ್ಲಾಗಿಂಗ್‌ ಶುರು ಮಾಡಿ ಎಂದಿದ್ದಾರೆ. ರಕ್ಷಿತಾ ಲೈವ್‌ ಬ್ಲಾಗಿಂಗ್‌ ಮಾಡುತ್ತ ಮೀನು ಫ್ರೈ ಮಾಡಿದ್ದಾರೆ.ಬಿಗ್‌ಬಾಸ್ ಮನೆಗೆ ಬರುತ್ತಿದ್ದಂತೆ ರಕ್ಷಿತಾ ಶೆಟ್ಟಿಗೆ ತಾಯಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕೂದಲು ಸಹ ಸರಿ ಮಾಡಿಕೊಳ್ಳಲ್ಲ ಎಂದು ಹೇಳಿ ಬಾಚಣಿಗೆ ಮಾಡಿದ್ದಾರೆ.

ಇದನ್ನೂ ಓದಿ: Bigg Boss Kannada 12 : ಮಗ ಇರಲಿಲ್ಲ ಅಂದ್ರೆ ನನ್ನ ವೋಟ್‌ ಗಿಲ್ಲಿಗೆ, ಅವನಂದ್ರೆ ಇಷ್ಟ ಎಂದ ಧನುಷ್ ಅಮ್ಮ! ಸೂರಜ್‌ ತಾಯಿ ಏನಂದ್ರು?‌

ಮಕ್ಕಳು ಕೂದಲು ಹರಡಿಕೊಂಡು ಹೇಗೆ ಬೇಕೋ ಹಾಗಿದ್ರೆ ತಾಯಂದಿರಿಗೆ ಖಂಡಿತ ಇಷ್ಟವಾಗಲ್ಲ. ಮನೆಗೆ ಬರುತ್ತಿದ್ದಂತೆ ಮಗಳ ಕೂದಲನ್ನು ತಾಯಿ ಸರಿ ಮಾಡಿದ್ದಾರೆ. ಧ್ರುವಂತ್ ಸಾಷ್ಟಂಗ ನಮಸ್ಕಾರ ಹಾಕಿ ರಕ್ಷಿತಾ ತಾಯಿ ಬಳಿ ಕ್ಷಮೆ ಕೇಳಿದ್ದಾರೆ.