ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Jaggu Bhagwanpuria: ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯ ತಾಯಿ, ಚಾಲಕನ ಹತ್ಯೆ; ಅಪರಿಚಿತರಿಂದ ಗುಂಡಿನ ದಾಳಿ

Harjit Kaur: ಪಂಜಾಬ್‌ನ ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯ ತಾಯಿ ಹಾಗೂ ಮಾಜಿ ಗ್ರಾಮ ಸರಪಂಚ್ ಹರ್ಜಿತ್ ಕೌರ್ ಮತ್ತು ಅವರ ಚಾಲಕ ಕರಣ್‌ ವೀರ್ ಸಿಂಗ್ ಗುರುವಾರ ರಾತ್ರಿ ಬಟಾಲಾದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. ರಾತ್ರಿ 10:45ರ ಸುಮಾರಿಗೆ ಈ ಘಟನೆ ನಡೆದಿದೆ.

ಅಪರಿಚಿತರ ದಾಳಿಗೆ ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯ ತಾಯಿ, ಚಾಲಕ ಬಲಿ

Profile Sushmitha Jain Jun 27, 2025 7:07 PM

ಚಂಡೀಗಢ: ಪಂಜಾಬ್‌ನ (Punjab) ಗ್ಯಾಂಗ್‌ಸ್ಟರ್ ಜಗ್ಗು ಭಗವಾನ್‌ಪುರಿಯ (Jaggu Bhagwanpuria) ತಾಯಿ ಹಾಗೂ ಮಾಜಿ ಗ್ರಾಮ ಸರಪಂಚ್ ಹರ್ಜಿತ್ ಕೌರ್ (Harjit Kaur) ಮತ್ತು ಅವರ ಚಾಲಕ ಕರಣ್‌ವೀರ್ ಸಿಂಗ್ ಗುರುವಾರ ರಾತ್ರಿ ಪಂಜಾಬ್‌ನ ಬಟಾಲಾದಲ್ಲಿ ಅಪರಿಚಿತರ ಗುಂಡಿನ ದಾಳಿಗೆ ಬಲಿಯಾಗಿದ್ದಾರೆ. ಘಟನೆಯ ಸಿಸಿಟಿವಿ ದೃಶ್ಯಗಳು ವೈರಲ್ ಆಗಿವೆ. ರಾತ್ರಿ 10:45ರ ಸುಮಾರಿಗೆ ಕದಿಯನ್ ರಸ್ತೆಯ ಬೇಕರಿ ಬಳಿ ಎರಡು ಬೈಕ್‌ಗಳಲ್ಲಿ ಬಂದ ದಾಳಿಕೋರರು, ಇವರಿದ್ದ ಬಿಳಿ ಸ್ಕಾರ್ಪಿಯೋ ಎಸ್‌ಯುವಿಯ ಮೇಲೆ ಗುಂಡಿನ ಸುರಿಮಳೆಗೈದಿದ್ದಾರೆ. ಭಗವಾನ್‌ಪುರ ಗ್ರಾಮದವರಾದ ಹರ್ಜಿತ್ ಕೌರ್ ಪ್ರಸ್ತುತ ಅರ್ಬನ್ ಎಸ್ಟೇಟ್‌ನಲ್ಲಿ ವಾಸಿಸುತ್ತಿದ್ದರು.

ಗಂಭೀರವಾಗಿ ಗಾಯಗೊಂಡ ಕೌರ್ ಅವರನ್ನು ಅಮೃತಸರದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಚಿಕಿತ್ಸೆ ವೇಳೆ ಮೃತಪಟ್ಟರು. ಚಾಲಕ ಕರಣ್‌ವೀರ್ ಸಿಂಗ್, ಭಿಖೋವಾಲ್ ಗ್ರಾಮದವರಾಗಿದ್ದು ಬಟಾಲಾ ಸಿವಿಲ್ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮೃತರಾಗಿದ್ದರು ಎಂದು ಡಾ. ಸುಖರಾಜ್ ಸಿಂಗ್ ದೃಢಪಡಿಸಿದ್ದಾರೆ.

ವೈರಲ್‌ ವಿಡಿಯೊ ಇಲ್ಲಿದೆ:



ಈ ಸುದ್ದಿಯನ್ನೂ ಓದಿ: Viral Video: ಕಚ್ಚಿದ ಹಾವನ್ನೇ ಜೀವಂತವಾಗಿ ಹಿಡಿದುಕೊಂಡು ಆಸ್ಪತ್ರೆಗೆ ಓಡೋಡಿ ಬಂದ ವ್ಯಕ್ತಿ

ಡಿಎಸ್‌ಪಿ ಪರಮ್‌ವೀರ್ ಸಿಂಗ್ ಘಟನೆ ಬಗ್ಗೆ ಮಾತನಾಡಿ, "ರಾತ್ರಿ 10:45ಕ್ಕೆ ಗುಂಡಿನ ದಾಳಿಯ ಬಗ್ಗೆ ಕರೆ ಬಂತು. ಹಿರಿಯ ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಧಾವಿಸಿದೆವು. ತನಿಖೆ ಆರಂಭವಾಗಿದೆ" ಎಂದು ತಿಳಿಸಿದ್ದಾರೆ. ಪೊಲೀಸರು ಚೆಕ್‌ಪೋಸ್ಟ್‌ಗಳನ್ನು ಸ್ಥಾಪಿಸಿ, ದಾಳಿ ನಡೆಸಿದವರಿಗಾಗಿ ಶೋಧ ನಡೆಸುತ್ತಿದ್ದಾರೆ. ದಾಳಿಯ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲವಾದರೂ, ಗ್ಯಾಂಗ್ ದ್ವೇಷ ಅಥವಾ ಜಗ್ಗು ಭಗವಾನ್‌ಪುರಿಯ ಒಡನಾಟದಿಂದ ಉಂಟಾದ ದಾಳಿಯ ಸಾಧ್ಯತೆಯನ್ನು ತಳ್ಳಿ ಹಾಕಿಲ್ಲ.

ಹರ್ಜಿತ್ ಕೌರ್ ಸ್ಥಳೀಯ ರಾಜಕೀಯದಲ್ಲಿ ಸಕ್ರಿಯರಾಗಿದ್ದರು ಮತ್ತು ಭಗವಾನ್‌ಪುರದಲ್ಲಿ ಚುನಾಯಿತ ಪಂಚಾಯತ್ ಸದಸ್ಯರಾಗಿದ್ದರು. ಅವರು ಮತದಾರರ ಮೇಲೆ ಪ್ರಭಾವ ಬೀರಲು ಯತ್ನಿಸಿದ ಆರೋಪ ಮತ್ತು ಜೈಲಿನಲ್ಲಿರುವ ತಮ್ಮ ಮಗನಿಗೆ ಭದ್ರತೆಗಾಗಿ ಕೋರ್ಟ್‌ಗೆ ಮನವಿ ಸಲ್ಲಿಸಿದ್ದಕ್ಕೆ ವಿವಾದಕ್ಕೆ ಒಳಗಾಗಿದ್ದರು. 2022ರಲ್ಲಿ ಜಗ್ಗುಗೆ ಬುಲೆಟ್‌ಪ್ರೂಫ್ ಜಾಕೆಟ್ ಕೊಡಬೇಕೆಂದು ಒತ್ತಾಯಿಸಿದ್ದರು.

ಜಗ್ಗು ಭಗವಾನ್‌ಪುರಿಯ ಪಂಜಾಬ್‌ನ ಭಯಾನಕ ಗ್ಯಾಂಗ್‌ಸ್ಟರ್, ಕೊಲೆ, ಮಾದಕ ದ್ರವ್ಯ ಕಳ್ಳಸಾಗಾಣಿಕೆ, ದರೋಡೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ. ಈ ವರ್ಷ ಆರಂಭದಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಅವನನ್ನು ಬಠಿಂಡಾ ಜೈಲಿನಿಂದ ಅಸ್ಸಾಂನ ಸಿಲ್ಚಾರ್ ಜೈಲಿಗೆ ವರ್ಗಾಯಿಸಿತ್ತು.