ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Girl Kidnapped: ಬಸ್‌ಸ್ಟ್ಯಾಂಡ್‌ನಲ್ಲಿ ನಿಂತಿದ್ದ ವಿದ್ಯಾರ್ಥಿನಿಯ ಲೈವ್‌ ಕಿಡ್ನಾಪ್! 20 ಕಿ.ಮೀ ಚೇಸ್ ಮಾಡಿದ ಜನ

Kidnapping Case: ಸಾರ್ವಜನಿಕರ ಮುಂದೆಯೇ ಹಾಡಹಗಲಿನಲ್ಲಿ 12ನೇ ತರಗತಿ ವಿದ್ಯಾರ್ಥಿನಿಯನ್ನು ಕಿಡ್ನಾಪ್ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಧಾರ್‌ನಲ್ಲಿ ನಡೆದಿದೆ. ಮೂವರು ಕಿಡಿಗೇಡಿಗಳು ಹುಡುಗಿಯನ್ನು ಅಪಹರಣ ಮಾಡಿದ್ದಾರೆ. ಕೂಡಲೇ ಅಲ್ಲಿದ್ದ ಸ್ಥಳೀಯರು ವಾಹನವನ್ನು ಬೆನ್ನಟ್ಟಿದ್ದಾರೆ.

ಹಾಡಹಗಲೇ ವಿದ್ಯಾರ್ಥಿನಿಯ ಕಿಡ್ನಾಪ್- ವಿಡಿಯೊ ನೋಡಿ

-

Priyanka P Priyanka P Sep 23, 2025 12:45 PM

ಇಂದೋರ್: ಹಾಡಹಗಲೇ 12ನೇ ತರಗತಿ ವಿದ್ಯಾರ್ಥಿನಿಯನ್ನು ಅಪಹರಣ (Kidnap) ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ (Madhya Pradesh) ಧಾರ್‌ನಲ್ಲಿ ನಡೆದಿದೆ. ಸಿಸಿಟಿವಿಯಲ್ಲಿ ಈ ದೃಶ್ಯ ಸೆರೆಯಾಗಿದ್ದು, ಸೋಮವಾರ ಗಂಧ್ವಾನಿ ಬಸ್ ನಿಲ್ದಾಣ ಪ್ರದೇಶದಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈ ಘಟನೆಯು ಜನರಲ್ಲಿ ಭಯಭೀತ ಮತ್ತು ಅಪನಂಬಿಕೆ ಮೂಡಿದೆ.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಹುಡುಗಿಯು ಎಟಿಎಂ ಬಳಿ ನಿಂತಿದ್ದಾಗ ಮಹೀಂದ್ರಾ ಬೊಲೆರೊ ಇದ್ದಕ್ಕಿದ್ದಂತೆ ಆಕೆಯ ಬಳಿ ನಿಂತಿದೆ. ಮೂವರು ಪುರುಷರು ಹೊರಗೆ ಹಾರಿ, ಆಕೆಯ ಬಾಯಿ ಮುಚ್ಚಿ, ವಾಹನಕ್ಕೆ ಎಳೆದುಕೊಂಡು ಹೋಗಿ ಪರಾರಿಯಾಗಿದ್ದಾರೆ (Girl Kidnapped). ಕೂಡಲೇ ಅಲ್ಲದ್ದ ಸ್ಥಳೀಯರೆಲ್ಲಾ ಸೇರಿ ಬೈಕ್‌ಗಳು ಮತ್ತು ಕಾರುಗಳಲ್ಲಿ ಅವರ ವಾಹನವನ್ನು ಬೆನ್ನಟ್ಟಿದರು.

ಅಪಹರಣಕಾರರ ವಾಹನ ಅಂಬಾಪುರ ರಸ್ತೆ ತಲುಪುತ್ತಿದ್ದಂತೆ, ಅದನ್ನು ತಡೆದರು. ಇದರಿಂದಾಗಿ ಆರೋಪಿಗಳು ತಪ್ಪಿಸಿಕೊಳ್ಳುವ ಪ್ರಯತ್ನದಲ್ಲಿ ಇತರ ವಾಹನಗಳಿಗೆ ಡಿಕ್ಕಿ ಹೊಡೆದರು. ಸುಮಾರು 20 ಕಿಲೋಮೀಟರ್‌ಗಳಷ್ಟು ದೂರ ಅಪಹರಣಕಾರರ ವಾಹನವನ್ನು ಸ್ಥಳೀಯರು ಬೆನ್ನಟ್ಟಿದ್ದಾರೆ. ಈ ವೇಳೆ ವೇಗವಾಗಿ ವಾಹನ ಚಲಾಯಿಸಿದ ಕಿಡ್ನಾಪರ್ಸ್, ಹಳ್ಳಿಗಳು ಮತ್ತು ಹೊಲಗಳಲ್ಲಿ ಎಲ್ಲೆಂದರಲ್ಲಿ ತಮ್ಮ ವಾಹನವನ್ನು ನುಗ್ಗಿಸಿದ್ದಾರೆ.

ಇದನ್ನೂ ಓದಿ: Republican leader's comment: ಅಮೆರಿಕದಲ್ಲಿ ಹನುಮಂತನ ಪ್ರತಿಮೆ ಬಗ್ಗೆ ಅವಹೇಳನ; ರಿಪಬ್ಲಿಕನ್ ನಾಯಕನ ಮಾತಿಗೆ ಭಾರಿ ಟೀಕೆ

ಒಂದು ಹಳ್ಳಿಯ ಬಳಿ ಬೊಲೆರೋ ವಾಹನವು ಮೇಕೆಗಳ ಹಿಂಡಿಗೆ ಡಿಕ್ಕಿ ಹೊಡೆದಿದೆ. ಸ್ವಲ್ಪ ಸಮಯದ ನಂತರ ವಾಹನವು ಕೆಟ್ಟುಹೋಯಿತು. ಆರೋಪಿಗಳು ವಾಹನವನ್ನು ಅಲ್ಲೇ ಬಿಟ್ಟು ಕಾಲ್ನಡಿಗೆಯಲ್ಲಿ ಪರಾರಿಯಾದರು. ಹುಡುಗಿಯನ್ನು ಅಲ್ಲಿಯೇ ಬಿಟ್ಟು ಓಡಿ ಹೋಗಿದ್ದಾರೆ. ಗ್ರಾಮಸ್ಥರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಯುವತಿಯನ್ನು ರಕ್ಷಿಸಿದ್ದಾರೆ.

ಯುವತಿಯ ಹೇಳಿಕೆಯ ಆಧಾರದ ಮೇಲೆ ಅಪರಾಧಿಗಳನ್ನು ಗುರುತಿಸಲಾಗಿದ್ದು, ಅವರನ್ನು ಬಂಧಿಸಲು ಬಹು ತಂಡಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಮಾಯಾಂಕ್ ಅವಸ್ಥಿ ತಿಳಿಸಿದ್ದಾರೆ. ಮೂವರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಅವರನ್ನು ಬಂಧಿಸಲು ಪೊಲೀಸ್ ತಂಡ ದಾಳಿ ನಡೆಸುತ್ತಿವೆ. ಹುಡುಗಿ ಈಗ ತನ್ನ ಕುಟುಂಬದೊಂದಿಗೆ ಸುರಕ್ಷಿತವಾಗಿದ್ದಾಳೆ ಎಂದು ಪೊಲೀಸ್ ಅಧಿಕಾರಿ ಹೇಳಿದರು.

ಡಾನ್ಸ್‌ ಮಾಡುತ್ತಿದ್ದಾಗ ಮಹಿಳೆಯನ್ನು ಎಳೆದೊಯ್ದ ಕುಟುಂಬಸ್ಥರು

ಮಧ್ಯಪ್ರದೇಶದ ಮಂದ್ಸೌರ್‌ನಲ್ಲಿ ಕಳೆದ ವಾರ ಇದೇ ರೀತಿಯ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಇದರಲ್ಲಿ 23 ವರ್ಷದ ಮಹಿಳೆಯೊಬ್ಬಳು ಗಾರ್ಬಾ ನೃತ್ಯ ಅಭ್ಯಾಸ ಮಾಡುತ್ತಿದ್ದಾಗ ಪುರುಷರು ಮತ್ತು ಮಹಿಳೆಯರ ಗುಂಪೊಂದು ಬಲವಂತವಾಗಿ ಆಕೆಯನ್ನು ಎಳೆದೊಯ್ದಿರುವುದನ್ನು ತೋರಿಸಲಾಗಿತ್ತು. ಶನಿವಾರ ರಾತ್ರಿ ನಡೆದ ಈ ಘಟನೆಯು ಅಲ್ಲಿದ್ದವರಲ್ಲಿ ಭೀತಿಯನ್ನು ಉಂಟುಮಾಡಿತು ಮತ್ತು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಆಕ್ರೋಶಕ್ಕೆ ಕಾರಣವಾಯಿತು.

ಮಹಿಳೆಯು ರಾಜಸ್ಥಾನದಿಂದ ಮಂದ್ಸೌರ್‌ಗೆ ಯುವಕನೊಂದಿಗೆ ಬಂದಿದ್ದು, ಕಳೆದ ಕೆಲವು ತಿಂಗಳುಗಳಿಂದ ಆ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಆಕೆ ಈಗಾಗಲೇ ವಿವಾಹಿತಳಾಗಿದ್ದು, ಕುಟುಂಬದಿಂದ ದೂರ ವಾಸಿಸುವ ಆಕೆಯ ನಿರ್ಧಾರವು ಆಕೆಯ ಸಂಬಂಧಿಕರನ್ನು ಕೆರಳಿಸಿತ್ತು ಎಂದು ಮೂಲಗಳು ತಿಳಿಸಿವೆ.

ಘಟನೆಯ ರಾತ್ರಿ, ಆಕೆಯ ಕುಟುಂಬ ಸದಸ್ಯರು ಭಾವಸರ್ ಧರ್ಮಶಾಲಾವನ್ನು ತಲುಪಿ, ಸಾರ್ವಜನಿಕರ ಮುಂದೆ ಮಹಿಳೆಯನ್ನು ಎಳೆದುಕೊಂಡು ಹೋಗಿದ್ದಾರೆ. ಪಕ್ಕದಲ್ಲಿ ನಿಂತಿದ್ದವರಿಗೆ ಬೆದರಿಕೆ ಹಾಕಲು ಪಿಸ್ತೂಲಿನಂತೆ ಕಾಣುವ ವಸ್ತುವನ್ನು ಪ್ರದರ್ಶಿಸಿದರು ಎಂದು ವರದಿಯಾಗಿದೆ.

ವಿಡಿಯೊ ವೀಕ್ಷಿಸಿ: