Hassan news: ದೇವಸ್ಥಾನದಿಂದ ಮರಳುತ್ತಿದ್ದ ದಂಪತಿ ಮೇಲೆ ಶಾಸಕ ಶಿವಲಿಂಗೇಗೌಡರ ಬಂಟನ ಪುತ್ರ ಸಮಿವುಲ್ಲಾನಿಂದ ಮಾರಕ ಹಲ್ಲೆ
ಸಣ್ಣ ವಿಚಾರವನ್ನೇ ಮುಂದಿಟ್ಟುಕೊಂಡು ದಂಪತಿ ತೆರಳುತ್ತಿದ್ದ ಬೈಕ್ ಅಡ್ಡಗಟ್ಟಿ ಸೂಫಿಯಾನ್ ಸಮಿವುಲ್ಲಾ ವ್ಯಕ್ತಿಯನ್ನು ಹಿಡಿದು ಎಳೆದಾಡಿ ಮನಬಂದಂತೆ ಥಳಿಸಿದ್ದಾನೆ. ಇಷ್ಟಕ್ಕೂ ಸುಮ್ಮನಾಗದೇ ಫೋನ್ ಮಾಡಿ ತನ್ನ ಪುಂಡರ ಗ್ಯಾಂಗ್ ಕರೆಸಿ ಹಲ್ಲೆ ಮಾಡಿಸಿದ್ದಾನೆ. ಪತ್ನಿ ಕೈಮುಗಿದು ಬೇಡಿಕೊಂಡರೂ ಬಿಡದೇ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ,
ಹಲ್ಲೆ ಮಾಡುತ್ತಿರುವ ಸಮಿವುಲ್ಲಾ -
ಹಾಸನ, ಏ.04: ಶಾಸಕ ಕೆ.ಎಂ ಶಿವಲಿಂಗೇಗೌಡರ (Shivalinge Gowda) ಬಲಗೈ ಬಂಟನ ಪುತ್ರ ಸೂಫಿಯಾನ್ ಸಮಿವುಲ್ಲಾ ಎಂಬಾತ ಕ್ಷುಲ್ಲಕ ಕಾರಣಕ್ಕೆ ದಂಪತಿಗಳ ಮೇಲೆ ಮನಸ್ಸೋಯಿಚ್ಛೆ ಹಲ್ಲೆ ನಡೆಸಿ ಕ್ರೌರ್ಯ ಮೆರೆದ ಘಟನೆ ಅರಸೀಕೆರೆ (Arsikere) ಪಟ್ಟಣದಲ್ಲಿ ನಡೆದಿದೆ. ದೇವಸ್ಥಾನಕ್ಕೆ (Temple) ತೆರಳಿ ವಾಪಸ್ ಬರುತ್ತಿದ್ದ ದಂಪತಿಯೊಂದಿಗೆ ಸಣ್ಣ ವಿಚಾರಕ್ಕೆ ಕಿರಿಕ್ ತೆಗೆದು ಹಲ್ಲೆ (Assault case) ನಡೆಸಿದ್ದಾನೆ. ಕೈಮುಗಿದು ಬೇಡಿಕೊಂಡರೂ ಬಿಡದೇ ತನ್ನ ಪುಂಡರ ಗ್ಯಾಂಗ್ ಕರೆಸಿ ರಕ್ತ ಬರುವಂತೆ ಥಳಿಸಿದ್ದಾನೆ.
ಈ ದೃಶ್ಯಗಳು ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ದಂಪತಿಗಳು ಅರಸೀಕೆರೆ ಪಟ್ಟಣದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಜೇನುಕಲ್ಲು ಸಿದ್ದೇಶ್ವರಸ್ವಾಮಿ ರಥೋತ್ಸವದಲ್ಲಿ ಭಾಗಿಯಾಗಲು ಬಂದಿದ್ದರು. ರಥೋತ್ಸವ, ದೇವರ ಪೂಜೆ ಮುಗಿಸಿಕೊಂಡು ವಾಪಸ್ ತೆರಳುತ್ತಿದ್ದರು. ಈ ವೇಳೆ ತನ್ನ ಬೈಕ್‌ನಲ್ಲಿ ವೇಗವಾಗಿ ಬರುತ್ತಿದ್ದ ಸಮಿವುಲ್ಲಾ ಅರಸೀಕೆರೆ ಪಟ್ಟಣದ ಎಪಿಎಂಸಿ ಮುಂಭಾಗ ದಂಪತಿ ತೆರಳುತ್ತಿದ್ದ ಬೈಕ್‌ಗೆ ಟಚ್ ಮಾಡಿದ್ದಾನೆ. ಇದನ್ನು ಪ್ರಶ್ನೆ ಮಾಡಿದ್ದಕ್ಕೆ ದಂಪತಿಗಳ ಮೇಲೆ ಹಲ್ಲೆ ಮಾಡಿದ್ದಾನೆ.
ಸಣ್ಣ ವಿಚಾರವನ್ನೇ ಮುಂದಿಟ್ಟುಕೊಂಡು ದಂಪತಿ ತೆರಳುತ್ತಿದ್ದ ಬೈಕ್ ಅಡ್ಡಗಟ್ಟಿ ಸೂಫಿಯಾನ್ ಸಮಿವುಲ್ಲಾ ವ್ಯಕ್ತಿಯನ್ನು ಹಿಡಿದು ಎಳೆದಾಡಿ ಮನಬಂದಂತೆ ಥಳಿಸಿದ್ದಾನೆ. ಇಷ್ಟಕ್ಕೂ ಸುಮ್ಮನಾಗದೇ ಫೋನ್ ಮಾಡಿ ತನ್ನ ಪುಂಡರ ಗ್ಯಾಂಗ್ ಕರೆಸಿ ಹಲ್ಲೆ ಮಾಡಿಸಿದ್ದಾನೆ. ಪತ್ನಿ ಕೈಮುಗಿದು ಬೇಡಿಕೊಂಡರೂ ಬಿಡದೇ ರಕ್ತ ಬರುವಂತೆ ಹಲ್ಲೆ ಮಾಡಿದ್ದಾರೆ ಪುಂಡರು. ಅಮಾಯಕ ವ್ಯಕ್ತಿಗೆ ಥಳಿಸುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದ್ದು, ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಮದ್ಯ ಖರೀದಿಗೆ ಹಣ ನಿರಾಕರಿಸಿದ್ದೇ ತಪ್ಪಾಯ್ತು: ನವವಧು-ವರನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ
ಪೊಲೀಸ್ ಠಾಣೆ ಎದುರು ಪ್ರತಿಭಟನೆ
ಇನ್ನು ಅಮಾಯಕ ದಂಪತಿ ಮೇಲೆ ಸೂಫಿಯಾನ್ ಮತ್ತವನ ಪಟಾಲಂನಿಂದ ಹಲ್ಲೆ ಘಟನೆ ಅರಸೀಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೀಗಾಗಿ ನೂರಾರು ಸಂಖ್ಯೆಯ ಜನ ಪೊಲೀಸ್ ಠಾಣೆ ಎದುರು ಜಮಾಯಿಸಿದ್ದು, ಆರೋಪಿಗಳ ಬಂಧನಕ್ಕೆ ಒತ್ತಾಯಿಸಿದ್ದಾರೆ. ಇತ್ತ ಹಲ್ಲೆಗೊಳಗಾದ ದಂಪತಿ ಸ್ಥಳದಿಂದ ತೆರಳಿದ್ದು, ಅವರ ಹುಡುಕಾಟಕ್ಕೆ ಪೊಲೀಸರು ಮುಂದಾಗಿದ್ದಾರೆ.