ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮದ್ಯ ಖರೀದಿಗೆ ಹಣ ನಿರಾಕರಿಸಿದ್ದೇ ತಪ್ಪಾಯ್ತು: ನವವಧು-ವರನ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ

Viral Video: ಇಲ್ಲೊಂದು ಮದುವೆ ಸಂಭ್ರಮದ ನಡುವೆ ಮದ್ಯದ ವಿಚಾರವಾಗಿ ವಧು ವರನಿಗೆ ನೆರೆ ಮನೆಯ ಗುಂಪೊಂದು ಥಳಿಸಿರುವ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗಳು ವಧು-ವರರ ಮೇಲೆ ಹಲ್ಲೆ ಮಾಡಿದ್ದಾರೆ. ಈ ದೃಶ್ಯ ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮದ್ಯಕ್ಕೆ ಹಣ ನೀಡದಿದ್ದಕ್ಕೆ ನವವಧು-ವರನ ಮೇಲೆ ಹಲ್ಲೆ

ಸಾಂದರ್ಭಿಕ ಚಿತ್ರ -

Profile
Pushpa Kumari Apr 1, 2026 10:14 PM

ಭೋಪಾಲ್‌, ಏ. 1: ಮದುವೆ ಅಂದಾಗ ಸಂಭ್ರಮದ ವಾತಾವರಣ ಮನೆ ಮಾಡಿರುತ್ತದೆ. ಆದರೆ ಇಲ್ಲೊಂದು ಸಂಭ್ರಮದ ನಡುವೆ ದುರಂತ ನಡೆದಿದೆ. ಮದ್ಯದ ವಿಚಾರವಾಗಿ ವಧು-ವರನಿಗೆ ನೆರೆ ಮನೆಯ ಗುಂಪೊಂದು ಥಳಿಸಿರುವ ಘಟನೆ ನಡೆದಿದೆ. ಮದ್ಯದ ಅಮಲಿನಲ್ಲಿದ್ದ ವ್ಯಕ್ತಿಗಳು ವಧು- ವರನನ್ನು ಥಳಿಸಿ ಹಲ್ಲೆ ನಡೆಸಿದ್ದಾರೆ. ಈ ದೃಶ್ಯ (Viral News) ನೋಡಿದ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ

ಮಧ್ಯ ಪ್ರದೇಶದ ಗ್ವಾಲಿಯರ್ ಜಿಲ್ಲೆಯ ಪಟಾಯಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವರದಿಗಳ ಪ್ರಕಾರ‌ ಮಹೇಶ್ ಜಾತವ್ ಅವರ ವಿವಾಹ ನಡೆದಿತ್ತು. ಮದುವೆಯಾದ ಬಳಿಕ ಮಹೇಶ್ ಪತ್ನಿಯೊಂದಿಗೆ ಗ್ರಾಮಕ್ಕೆ ಮರಳಿದ್ದು ಅಲ್ಲಿ ಔತಣ ಕೂಟ ನೆರೆವೇರಿಸಲಾಗಿತ್ತು.

ಮದುವೆ ಸಂಭ್ರಮ ಮತ್ತು ನವ ವಧುವಿನ ಆಗಮನವನ್ನು ಉಲ್ಲೇಖಿಸಿ, ಮಹೇಶ್ ಅವರ ಕುಟುಂಬದಿಂದ ಮದ್ಯ ಖರೀದಿಸಲು ನೆರೆಮನೆಯ ವ್ಯಕ್ತಿಗಳು ಹಣ ಕೇಳಿದ್ದರು. ಆದರೆ ಮಹೇಶ್ ಅವರ ಕುಟುಂಬ ಹಣ ನೀಡಲು ನಿರಾಕರಿಸಿದಾಗ ಆರೋಪಿಗಳು ಕೆಟ್ಟ ಪದಗಳಿಂದ ನಿಂದಿಸಲು ಶುರು ಮಾಡಿದರು.

ವಿಡಿಯೊ ನೋಡಿ:



ಕುಟುಂಬ ಸದಸ್ಯರು ಈ ನಿಂದನೆಗೆ ಆಕ್ಷೇಪ ವ್ಯಕ್ತಪಡಿಸಿದಾಗ, ಪರಿಸ್ಥಿತಿ ದೈಹಿಕ ಹಲ್ಲೆಗೆ ಕಾರಣವಾಯಿತು. ಮಧ್ಯ ಪ್ರವೇಶಿಸಲು ಮುಂದಾದ ವರನ ತಾಯಿ ಶೀಲಾ ಜಾತವ್ ಮತ್ತು ಇತರರನ್ನು ದುಷ್ಕರ್ಮಿಗಳು ಥಳಿಸಿದ್ದಾರೆ. ಹಾಗೆಯೇ ವಧುವಿನ ಮೇಲೂ ಹಲ್ಲೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ ಆರೋಪಿಗಳು ಮನೆಯೊಳಗೆ ನುಗ್ಗಿ ನಗದು, ಗೃಹೋಪಯೋಗಿ ವಸ್ತುಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದಾರೆ.

ನವ ಜೋಡಿಗಳಿಗೆ ಶುಭ ಹಾರೈಸುತ್ತಿದ್ದಾಗಲೇ ದಿಢೀರ್ ಆಗಿ ಕುಸಿದ ವೇದಿಕೆ

ಈ ಘಟನೆ ನಂತರ, ವರನ ತಾಯಿ ಶೀಲಾ ಜಾತವ್ ಮತ್ತು ಇತರ ಕುಟುಂಬ ಸದಸ್ಯರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲು ಎಸ್‌ಪಿ ಕಚೇರಿಗೆ ಭೇಟಿ ನೀಡಿದರು. ಸದ್ಯ ಅಧಿಕಾರಿಗಳು ತನಿಖೆ ಮುಂದುವರಿದಿದ್ದು, ಎರಡೂ ಕಡೆಯಿಂದ ಹೇಳಿಕೆ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.