Mohan Vishwa Column: ಕೇಸರಿ ಭಯೋತ್ಪಾದನೆಯ ಪಿತೂರಿ ಬಯಲಾಯಿತು
2008ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಬ್ಲಾ ಪ್ರಕರಣವನ್ನು ಹಿಂದೂಗಳ ತಲೆಗೆ ಕಟ್ಟಿದ್ದ ಕಾಂಗ್ರೆಸ್ ಪಕ್ಷ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಶ್ರೀಕಾಂತ್ ಪುರೋಹಿತ್, ಮೇಜರ್ ರಮೇಶ್ ಮತ್ತಿತರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು. ಕೇಸರಿ ಭಯೋತ್ಪಾದನೆ ಎಂಬ ನಿರೂಪಣೆಯನ್ನು ದೇಶದಲ್ಲಿ ಹರಿಬಿಡಲಾಗಿತ್ತು


ವೀಕೆಂಡ್ ವಿತ್ ಮೋಹನ್
camohanbn@gmail.com
2008ನವೆಂಬರ್ 26ರ ರಾತ್ರಿ ಮುಂಬೈ ಕಡಲತೀರಕ್ಕೆ ಬಂದಿಳಿದ ಪಾಕಿಸ್ತಾನದ ಭಯೋತ್ಪಾದಕರು, ದೇಶದ ಆರ್ಥಿಕ ರಾಜಧಾನಿಯ ಜನನಿಬಿಢ ಪ್ರದೇಶಗಳ ಮೇಲೆ ಎಕೆ-47 ಬಂದೂಕಿನ ಮೂಲಕ ದಾಳಿ ನಡೆಸಿ 168 ಜನರನ್ನು ಕೊಂದರು. ಅಷ್ಟಕ್ಕೂ ಏನಾಗುತ್ತಿದೆಯೆಂದು ಪೊಲೀಸರಿಗೆ ತಿಳಿಯು ವಷ್ಟರಲ್ಲಿ ಮುಂಬೈ ನಗರ ಶೋಕದಲ್ಲಿ ಮುಳುಗಿತ್ತು. ಮುಂಬೈನಲ್ಲಿ ಭೂಗತ ಪಾತಕಿಗಳ ಗ್ಯಾಂಗ್ ವಾರ್ ನಡೆಯುತ್ತಿದೆಯೆಂದು ಪೊಲೀಸರು ಅಂದುಕೊಂಡಿದ್ದರು. ಆದರೆ ಛತ್ರಪತಿ ಶಿವಾಜಿ ರೈಲು ನಿಲ್ದಾಣ, ಲಿಯೋ ಪೋಲ್ಡ್ ಕೆಫೆ, ತಾಜ್ ಹೋಟೆಲುಗಳ ಮೇಲೆ ದಾಳಿ ನಡೆಸಿದ ಭಯೋತ್ಪಾದಕರು ಅಮಾಯಕರನ್ನು ಕೊಂದುಬಿಟ್ಟಿದ್ದರು.
ಪೊಲೀಸರು ಮುಂಬೈ ನಗರದ ಬೀದಿಗಳಲ್ಲಿ ನಾಕಾಬಂದಿ ಹಾಕಿ ವಾಹನಗಳನ್ನು ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿ, ಪ್ರಾಣವನ್ನೂ ಲೆಕ್ಕಿಸದೆ ಪಾಕಿಸ್ತಾನಿ ಭಯೋತ್ಪಾದಕ ಅಜ್ಮಲ್ ಕಸಬನನ್ನು ಬಂಧಿಸಿದರು ಪೊಲೀಸ್ ಪೇದೆ ತುಕಾರಾಂ ಓಂಬ್ಳೆ. 2008ರಲ್ಲಿ ಕೇಂದ್ರದಲ್ಲಿ ಅಧಿಕಾರ ದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಬಂಧಿತ ಅಜ್ಮಲ್ ಕಸಬ್‌ನನ್ನು ವಿಚಾರಣೆಗೊಳ ಪಡಿಸಿದಾಗ ಆತ ಪಾಕಿಸ್ತಾನದ ಪ್ರಜೆ ಎಂಬ ವಿಷಯ ತಿಳಿಯಿತು.
ಆದರೆ ಆತ ತನ್ನ ಕೈಗೆ ಕೇಸರಿ ಬಣ್ಣದ ದಾರವನ್ನು ಕಟ್ಟಿಕೊಂಡಿದ್ದ. ಪಾಕಿಸ್ತಾನದ ಐಎಸ್‌ಐ ಆತನಿಗೆ ಉಗ್ರ ತರಬೇತಿ ನೀಡುವಾಗ, ಆತ ನಡೆಸುವ ಭಯೋತ್ಪಾದಕ ಕೃತ್ಯವನ್ನು ಹಿಂದೂಗಳ ತಲೆಗೆ ಕಟ್ಟಲು ಕೈಗೆ ಕೇಸರಿ ದಾರವನ್ನು ಕಟ್ಟಿತ್ತು.
ಅಜ್ಮಲ್ ಕಸಬ್ ಬಂಧನದ ನಂತರ, ಪಾಕಿಸ್ತಾನದ ಐಎಸ್ ಐಗಿಂತಲೂ ಅಪಾಯಾಕಾರಿಯಾಗಿ ನಡೆದುಕೊಂಡ ಕಾಂಗ್ರೆಸ್, ಅಜ್ಮಲ್ ಕಸಬ್‌ನನ್ನು ಹಿಂದೂವನ್ನಾಗಿ ಬಿಂಬಿಸುವ ಕೆಲಸ ಮಾಡಿತು. ಕಾಂಗ್ರೆಸ್ಸಿನ ದಿಗ್ವಿಜಯ ಸಿಂಗ್ ‘ಕೇಸರಿ ಭಯೋತ್ಪಾದನೆ’ ಎಂಬ ನೂತನ ಪದವನ್ನು ಬಳಸಿದರು.
ಹಿಂದೂ ಸಂಘಟನೆಗಳ ಜನರನ್ನು ರಾತ್ರೋರಾತ್ರಿ ಭಯೋತ್ಪಾದಕರಂತೆ ಬಿಂಬಿಸುವ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕಾಂಗ್ರೆಸ್ಸಿನ ದಿಗ್ವಿಜಯ್ ಸಿಂಗ್ “೨೬/೧೧ರ ಭಯೋತ್ಪಾದಕ ಕೃತ್ಯದಲ್ಲಿ ಪಾಕಿಸ್ತಾನದ ಕೈವಾಡ ಕಾಣುತ್ತಿಲ್ಲ" ಎಂದು ಹೇಳುವ ಮೂಲಕ ಐಎಸ್‌ಐಗೆ ಕ್ಲೀನ್ ಚಿಟ್ ನೀಡಿ ಬಿಟ್ಟರು.
ದೇಶದಾದ್ಯಂತ ಹಿಂದೂ ಭಯೋತ್ಪಾದನೆ ಎಂಬ ಹೊಸ ದೊಂದು ವ್ಯಾಖ್ಯಾನವನ್ನು ಪ್ರಾರಂಭಿಸಿ ದರು. ಕಾಂಗ್ರೆಸ್ಸಿಗರು ಹೀಗೆ ಹೇಳಿದ ಮೇಲೆ, ಎಡಚರರಿಗೆ ಆನೆಬಲ ಬಂದಂತಾಯಿತು. ಅವರು ಯಥಾಪ್ರಕಾರ ತಮ್ಮ ಸಿಂಡಿಕೇಟ್ ಮೂಲಕ ರಾಷ್ಟ್ರೀಯ ಸ್ವಯಂಸೇವಕ ಸಂಘ ಮತ್ತು ಅದರ ಮಿತ್ರ ಸಂಘಟನೆಗಳ ಮೇಲೆ ತಲೆಬುಡವಿಲ್ಲದ ಆರೋಪಗಳ ಸುರಿಮಳೆಯನ್ನು ಸುರಿಸಿದರು.
ಬಹುಸಂಖ್ಯಾತ ಹಿಂದೂಗಳ ಮನೋಸ್ಥೈರ್ಯವನ್ನು ಕುಗ್ಗಿಸುವ ದೊಡ್ಡ ಷಡ್ಯಂತ್ರವನ್ನು ಕಾಂಗ್ರೆಸ್ ಮಾಡಿತ್ತು. 2008ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಬ್ಲಾ ಪ್ರಕರಣವನ್ನು ಹಿಂದೂಗಳ ತಲೆಗೆ ಕಟ್ಟಿದ್ದ ಕಾಂಗ್ರೆಸ್ ಪಕ್ಷ, ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್, ಶ್ರೀಕಾಂತ್ ಪುರೋಹಿತ್, ಮೇಜರ್ ರಮೇಶ್ ಮತ್ತಿತರನ್ನು ಬಂಧಿಸಿ ಜೈಲಿಗೆ ಕಳುಹಿಸಿತ್ತು. ಸಾಧ್ವಿ ಪ್ರಜ್ಞಾ ಸಿಂಗ್ ಠಾಕೂರ್ ಅವರಿಗೆ ಜೈಲಿನಲ್ಲಿ ಚಿತ್ರಹಿಂಸೆ ನೀಡಲಾಯಿತು. ಕೇಸರಿ ಭಯೋತ್ಪಾದನೆ ಎಂಬ ನಿರೂಪಣೆಯನ್ನು ದೇಶದಲ್ಲಿ ಹರಿಬಿಡಲಾಗಿತ್ತು. ಆದರೆ ಸುದೀರ್ಘವಾಗಿ ವಿಚಾರಣೆ ನಡೆಸಿದ ಎನ್‌ಐಎ ವಿಶೇಷ ನ್ಯಾಯಾಲಯ ಅಷ್ಟೂ ಜನರನ್ನು ನಿರಪರಾಧಿಗಳು ಎಂದು ಖುಲಾಸೆ ಮಾಡಿದೆ. ಪೊಲೀಸರು ಮತ್ತು ಎಟಿಎಸ್‌ನವರು ಕಾಂಗ್ರೆಸ್ ನಾಯಕರ ಅಪ್ಪಣೆಯ ಮೇರೆಗೆ ಸಾಧ್ವಿಯವರನ್ನು ಅಪರಾಧಿಯನ್ನಾಗಿಸಿದ್ದರು.
ನ್ಯಾಯಾಲಯದಲ್ಲಿ ಪೊಲೀಸರು ಮತ್ತು ಎಟಿಎಸ್‌ನವರು ಮಾಡಿದ ಆರೋಪಕ್ಕೆ ಸಾಕ್ಷಿ ಒದಗಿಸ ಲಾಗಲಿಲ್ಲ. ಸಾಧ್ವಿಯವರ ಬೈಕ್‌ನಲ್ಲಿ ಬಾಂಬ್ ಇಡಲಾಗಿತ್ತೆಂದು ಹೇಳಿದ್ದ ಪೊಲೀಸರಿಗೆ ನ್ಯಾಯಾ ಲಯ ಛೀಮಾರಿ ಹಾಕಿ ಸಾಕ್ಷಿ ಇಲ್ಲವೆಂದು ಹೇಳಿದೆ. ಬಾಂಬ್ ಬ್ಲಾಸ್ಟ್ ಆದ ನಂತರ ಅಲ್ಲಿಗೆ ಬೈಕ್ ತರಲಾಗಿದೆಯೆಂದು ಹೇಳಿದೆ. ಮೇಜರ್ ರಮೇಶ್ ಅವರ ಮನೆಯಲ್ಲಿ ಆರ್ ಡಿಎಕ್ಸ್ ಸಂಗ್ರಹಿಸಿದ್ದಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲ.
ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಪ್ರಕರಣವನ್ನು ಸಾಧ್ವಿ ಪ್ರಜ್ಞಾ ಸಿಂಗ್ ಅವರ ತಲೆಗೆ ಕಟ್ಟಿ, ಹಿಂದೂ ಭಯೋತ್ಪಾದನೆ ಎಂಬ ನಿರೂಪಣೆಯನ್ನು ಗಟ್ಟಿಗೊಳಿಸಲು ಕಾಂಗ್ರೆಸ್ ಸತತವಾಗಿ ಪ್ರಯತ್ನಿಸಿತ್ತು. ಕೊನೆಗೂ ಅವರ ಪ್ರಯತ್ನಕ್ಕೆ ಯಶಸ್ಸು ಸಿಗಲಿಲ್ಲ. ಪ್ರಕರಣದಲ್ಲಿ ಸಾಕ್ಷಿಗಳನ್ನು ಒದಗಿಸದ ಕಾರಣ ಎಲ್ಲರನ್ನೂ ಖುಲಾಸೆ ಮಾಡಲಾಗಿದೆ.
ಸಾಧ್ವಿ ಪ್ರಜ್ಞಾ ಸಿಂಗ್ ಪ್ರಕರಣದಲ್ಲಿ ಬಂಧಿತರನ್ನು ಹಿಂದೂ ಭಯೋತ್ಪಾದಕರೆಂದು ಕರೆದದ್ದು ಕಾಂಗ್ರೆಸ್ಸಿನ ಘಟಾನುಘಟಿ ನಾಯಕರು. ಬಂಧಿತರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಜತೆ ಗುರುತಿಸಿಕೊಂಡಿದ್ದರೆಂದು ಅವರು ಹೇಳಿದ್ದರು. ಕಾಂಗ್ರೆಸ್ಸಿನ ಸುಶೀಲ್ ಕುಮಾರ್ ಶಿಂಧೆಯವರು, “ರಾಷ್ಟ್ರೀಯ ಸ್ವಯಂಸೇವಕ ಸಂಘವು ಹಿಂದೂ ಭಯೋತ್ಪಾದಕ ತರಬೇತಿ ನೀಡುವ ಕೇಂದ್ರ ಗಳನ್ನು ಸ್ಥಾಪಿಸಿದೆ" ಎಂದಿದ್ದರು.
ಪಿ.ಚಿದಂಬರಂ ಅವರು, “ಕೇಸರಿ ಭಯೋತ್ಪಾದನೆ ದೇಶದಲ್ಲಿದೆ" ಎಂದು ಹೇಳಿದ್ದರು. ರಾಹುಲ್ ಗಾಂಧಿಯವರು, “ದೇಶಕ್ಕೆ ಹಿಂದೂ ಸಂಘಟನೆಗಳು ಅಪಾಯಕಾರಿ" ಎಂದಿದ್ದರು. ಅಲ್ಪಸಂಖ್ಯಾತ ರನ್ನು ಓಲೈಸಿ ತನ್ನ ಮುಸ್ಲಿಂ ಮತಬ್ಯಾಂಕನ್ನು ಗಟ್ಟಿ ಮಾಡಿಕೊಳ್ಳಲು ಕೇಸರಿ ಭಯೋತ್ಪಾದನೆ ಎಂಬ ದೊಡ್ಡ ಪಿತೂರಿಯೊಂದನ್ನು ಮಾಲೇಗಾಂವ್ ಬ್ಲಾಸ್ಟ್ ಪ್ರಕರಣದಲ್ಲಿ ಕಾಂಗ್ರೆಸ್ ಮಾಡಿತ್ತು.
ಮಾಲೇಗಾಂವ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಸುಳ್ಳುಸಾಕ್ಷಿಗಳನ್ನು ಸೃಷ್ಟಿಸುವ ಮೂಲಕ ಸಾಧ್ವಿ ಪ್ರಜ್ಞಾ ಸಿಂಗ್ ಅವರನ್ನು ಬಲಿಪಶು ಮಾಡಲಾಗಿತ್ತು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಹ ಈ ಪ್ರಕರಣವು ಚರ್ಚೆಗೆ ಗ್ರಾಸವಾಗುವಂತೆ ಅದು ಮಾಡಿದ್ದು ಪಿತೂರಿಯ ಮತ್ತೊಂದು ಭಾಗ. ವಿದೇಶಿ ಪತ್ರಿಕೆಗಳಲ್ಲಿ ಕೇಸರಿ ಭಯೋತ್ಪಾದನೆ ಎಂಬ ಸುಳ್ಳು ನಿರೂಪಣೆಯ ಬಗ್ಗೆ ಅಂಕಣಗಳು ಪ್ರಕಟ ವಾಗುವಂತೆ ನೋಡಿಕೊಳ್ಳಲಾಯಿತು.
ಕಾಲೇಜುಗಳಲ್ಲಿ ಚರ್ಚೆಗಳಾಗುವಂತೆ ಮಾಡಲಾಯಿತು. ದೆಹಲಿಯ ಜೆಎನ್‌ಯು ವಿಶ್ವವಿದ್ಯಾಲಯ ದಲ್ಲಿ ಕೇಸರಿ ಭಯೋತ್ಪಾದನೆ ಎಂಬ ನಿರೂಪಣೆಯ ಮೂಲಕ ವಿದ್ಯಾರ್ಥಿಗಳ ಬ್ರೈನ್ ವಾಶ್ ಮಾಡಲಾಯಿತು.
ಮಾಲೇಗಾಂವ್ ಬಾಂಬ್ ಬ್ಲಾಸ್ಟ್ ಪ್ರಕರಣದಲ್ಲಿ ಮಹಾರಾಷ್ಟ್ರದ ಎಟಿಎಸ್ ತಾನು ಮಾಡಿದ ಆರೋಪಗಳಿಗೆ ಸಾಕ್ಷಿಗಳನ್ನು ಒದಗಿಸಲು ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಶೇಷ ‘ರಾಷ್ಟ್ರೀಯ ತನಿಖಾ ದಳ’ ನ್ಯಾಯಾಲಯ ಸ್ಪಷ್ಟವಾಗಿ ಹೇಳಿದೆ. ಘಟನೆ ನಡೆದ 18 ವರ್ಷಗಳ ನಂತರ ತೀರ್ಪು ಹೊರಬಿದ್ದಿದೆ. ಆದರೆ ಈ 18 ವರ್ಷಗಳಲ್ಲಿ ಸಾಧ್ವಿ ಪ್ರಜ್ಞಾ ಸಿಂಗ್ ಮತ್ತು ತಂಡ ಅನುಭವಿಸಿದ ಮಾನಸಿಕ ಹಿಂಸೆಗೆ ಯಾರು ಹೊಣೆ? ಹಿಂದೂಗಳನ್ನು ಟಾರ್ಗೆಟ್ ಮಾಡಿ ಕೇಸರಿ ಭಯೋತ್ಪಾದನೆ ಎಂಬ ಪಿತೂರಿ ನಡೆಸಿ ಜನರ ತಲೆಯಲ್ಲಿ ಸುಳ್ಳು ನಿರೂಪಣೆ ತುಂಬಿದ ಕಾಂಗ್ರೆಸ್ ಪಕ್ಷಕ್ಕೆ ಎನ್‌ಐಎ ತೀರ್ಪು ಕಪಾಳಮೋಕ್ಷ ಮಾಡಿದಂತಾಗಿದೆ.
ಮುಸಲ್ಮಾನರನ್ನು ಓಲೈಸಲು ಬಹುಸಂಖ್ಯಾತ ಹಿಂದೂಗಳ ಹಣೆಗೆ ಭಯೋತ್ಪಾದಕರ ಪಟ್ಟಕಟ್ಟು ವಷ್ಟು ಕೆಳಮಟ್ಟಕ್ಕೆ ಇಳಿದ ಕಾಂಗ್ರೆಸ್ ಪಕ್ಷದ ಡಿಎನ್‌ಎನಲ್ಲಿ ಹಿಂದೂ ವಿರೋಧಿ ಧೋರಣೆ ಇದೆ. ‘ಕೇಸರಿ ಭಯೋತ್ಪಾದನೆ’ ಎಂದು ಕಾಂಗ್ರೆಸ್ ನಡೆಸಿದ ನಿರೂಪಣೆಯು ಸ್ವತಂತ್ರ ಭಾರತದ ಇತಿಹಾಸದಲ್ಲಿನ ಅತಿ ದೊಡ್ಡ ಪಿತೂರಿಯಾಗಿದೆ.
ಹಿಂದೂ ಧರ್ಮದಲ್ಲಿ ಆಯುಧಪೂಜೆಯಂದು ನಡೆಸುವ ಆಯುಧಗಳ ಪೂಜೆಯನ್ನು ಕಾಂಗ್ರೆಸ್ಸಿ ಗರು ಟೀಕಿಸಿದರು. ಆತ್ಮರಕ್ಷಣೆಗಾಗಿ ಹೆಣ್ಣುಮಕ್ಕಳಿಗೆ ಹೇಳಿಕೊಡುವ ದಂಡದ ಅಭ್ಯಾಸವನ್ನು ಟೀಕಿಸಿದರು. ಹಿಂದೂ ಧರ್ಮದ ಸಾವಿರಾರು ವರ್ಷದ ಆಚರಣೆಗಳನ್ನು ಟೀಕಿಸಿ ಜಗತ್ತಿನ ಭಯೋತ್ಪಾದಕ ಸಂಘಟನೆಗಳ ಜತೆಗೆ ಹೋಲಿಕೆ ಮಾಡಿದರು.
ಹಿಂದೂಗಳ ಧಾರ್ಮಿಕ ಕೇಂದ್ರಗಳನ್ನು ಟಾರ್ಗೆಟ್ ಮಾಡಿ ಹಲವು ಕಡೆ ಸುಳ್ಳು ನಿರೂಪಣೆಗಳ ಷಡ್ಯಂತ್ರ ಮಾಡಿಸಿದರು. ಭಗವದ್ಗೀತೆ, ರಾಮಾಯಣ, ಮಹಾಭಾರತ ಎಲ್ಲಿಯೂ ಇತರ ಧರ್ಮ ದವರನ್ನು ಶತ್ರುಗಳಂತೆ ಕಾಣಬೇಕೆಂದು ಹೇಳಿಲ್ಲ. ಹಿಂದೂ ಧರ್ಮದ ಆಚರಣೆಗಳನ್ನು ಆಚರಿಸ ದವರನ್ನು ಕೊಲ್ಲಬೇಕೆಂದು ಹೇಳಿಲ್ಲ. ಹಿಂದೂ ಧರ್ಮಗ್ರಂಥಗಳನ್ನು ಓದುವಾಗ ಗೌರವದ ಭಾವನೆ ಮೂಡುತ್ತದೆಯೇ ಹೊರತು ಭಯವಾಗುವುದಿಲ್ಲ.
ಮಾಲೇಗಾಂವ್ ಬ್ಲಾಸ್ಟ್ ಪ್ರಕರಣದಲ್ಲಿ ಕೇಸರಿ ಭಯೋತ್ಪಾದನೆಯ ಸುಳ್ಳು ನಿರೂಪಣೆಯನ್ನು ಮತ್ತಷ್ಟು ಗಟ್ಟಿಗೊಳಿಸಲು ಯಾವ ಮಟ್ಟಕ್ಕೆ ಹೋಗಲಾಗಿತ್ತೆಂದರೆ, ಎಟಿಎಸ್ ಅಧಿಕಾರಿಯಾಗಿದ್ದ ಮೆಹಬೂಬ್ ಮುಜಾವರ್ ಅವರಿಗೆ ಅವರ ಉನ್ನತಾಧಿಕಾರಿಗಳು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಮೋಹನ್ ಭಾಗವತ್ ಅವರನ್ನು ಬಂಧಿಸಲು ಒತ್ತಾಯಿಸಿದ್ದ ರೆಂದು ಸ್ವತಃ ಮೆಹಬೂಬ್ ಮುಜಾವರ್ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಹತ್ತು ಜನ ಪೊಲೀಸರ ತಂಡವನ್ನು ಅವರಿಗೆ ನೀಡಿ ಮೋಹನ್ ಭಾಗವತ್ ಅವರನ್ನು ಬಂಧಿಸು ವಂತೆ ಹೇಳಲಾಗಿತ್ತೆಂದು ಹೇಳಿದ್ದಾರೆ. ಆದರೆ ಮೆಹಬೂಬ್ ಮುಜಾವರ್ ಆ ಕೆಲಸ ಮಾಡಲು ಒಪ್ಪಿರಲಿಲ್ಲ. ಪರಿಣಾಮ ಅವರ ಮೇಲೆ ಸುಳ್ಳು ಕೇಸನ್ನು ದಾಖಲಿಸಿ 40 ವರ್ಷಗಳ ಜೀವನವನ್ನು ಹಾಳುಮಾಡಲಾಗಿದೆ.
ಮಾಲೇಗಾಂವ್ ಬ್ಲಾಸ್ಟ್ ಪ್ರಕರಣದಲ್ಲಿ ಹಿಂದೂ ನಾಯಕರನ್ನು ಟಾರ್ಗೆಟ್ ಮಾಡಿದ್ದು ಕೇವಲ ಹಗರಣವಲ್ಲ; ಅದು ಅಧಿಕಾರದ ದುರುಪಯೋಗ ಮತ್ತು ಮತಬ್ಯಾಂಕ್ ಓಲೈಕೆಯ ಪರಮಾವಧಿ. 26/11ರಂದು ಮುಂಬೈನಲ್ಲಿ ನಡೆದ ದಾಳಿಯಲ್ಲಿ ಅಜ್ಮಲ್ ಕಸಬ್ ಅಪ್ಪಿತಪ್ಪಿ ಸತ್ತಿದ್ದರೆ, ಇವರೆಲ್ಲಾ ಅಷ್ಟೂ ಭಯೋತ್ಪಾದಕರನ್ನು ಹಿಂದೂಗಳು ಎಂದು ಕರೆದು ಅವರನ್ನು ಯಾವುದಾದರೂ ಒಂದು ಹಿಂದೂ ಸಂಘಟನೆಯ ಸದಸ್ಯರೆಂಬಂತೆ ಸುಳ್ಳು ಸಾಕ್ಷಿ ಸೃಷ್ಟಿಸಿ ಕೇಸರಿ ಭಯೋತ್ಪಾದನೆ ಎಂಬ ಸುಳ್ಳು ನಿರೂಪಣೆಯನ್ನು ಸಮಾಜದಲ್ಲಿ ಗಟ್ಟಿಗೊಳಿಸಿ ಬಿಡುತ್ತಿದ್ದರು.
ಮಾಲೇಗಾಂವ್ ಬಾಂಬ್ ಬ್ಲಾಸ್ಟ್ ಕೇಸಿನಲ್ಲಿ ‘ಅಭಿನವ ಭಾರತ’ ಸಂಘಟನೆಯ ಹೆಸರನ್ನು ಸೇರಿಸಲಾಗಿತ್ತು. ಕಾರಣ ಸ್ವಾತಂತ್ರ್ಯ ವೀರ ಸಾವರ್ಕರ್ ಸ್ಥಾಪಿಸಿದ ಸಂಘಟನೆ ಇದು. ಸಾವರ್ಕರ್ ವಿಚಾರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ನೆಹರು ಕಾಲದಿಂದಲೂ ದ್ವೇಷವಿದೆ. ಇಲ್ಲಸಲ್ಲದ ಸುಳ್ಳುಗಳನ್ನು ಅವರ ವಿರುದ್ಧ ಹಬ್ಬಿಸಿ ಇತಿಹಾಸದ ಪುಟಗಳಲ್ಲಿ ಬರೆಸಲಾಗಿದೆ.
ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಕೇಸಿನಲ್ಲಿ ವೀರ ಸಾವರ್ಕರ್ ಸ್ಥಾಪಿಸಿದ ಸಂಘಟನೆಯ ಹೆಸರನ್ನು ಸೇರಿಸಿ, ಮತ್ತೊಮ್ಮೆ ಸಾವರ್ಕರ್ ಅವರ ಹೆಸರಿಗೆ ಮಸಿ ಬಳಿಯುವ ಷಡ್ಯಂತ್ರ ನಡೆದಿತ್ತು. ಮತಬ್ಯಾಂಕ್ ಓಲೈಕೆಗಾಗಿ ಅಧಿಕಾರವನ್ನು ದುರುಪಯೋಗಪಡಿಸಿಕೊಂಡು ‘ಕೇಸರಿ ಭಯೋತ್ಪಾ ದನೆ’ ಎಂಬ ಸುಳ್ಳು ನಿರೂಪಣೆಯನ್ನು ಸೃಷ್ಟಿಸಿದ ಕಾಂಗ್ರೆಸ್ ಪಕ್ಷದ ಷಡ್ಯಂತ್ರವು ಎನ್‌ಐಎ ನ್ಯಾಯಾಲಯದ ಮುಂದೆ ಬಟಾಬಯಲಾಗಿದೆ.
ಆದ್ದರಿಂದ, ಪ್ರತಿಯೊಬ್ಬ ಹಿಂದೂ ಕೂಡ ಎದೆತಟ್ಟಿ ಹೇಳಬೇಕಾದ ಮಾತೆಂದರೆ- “ಹಿಂದೂಗಳು ಎಂದಿಗೂ ಭಯವನ್ನು ಸೃಷ್ಟಿಸುವುದಿಲ್ಲ".