ಫೋನ್ ಬಳಸಿದ್ದಕ್ಕಾಗಿ ಹೆಂಡತಿಯನ್ನು ಕೊಂದು ಮನೆ ಬಳಿಯೇ ಹೂತು ಹಾಕಿದ ಪತಿ
ಮಗಳಿಗೆ ತೊಂದರೆ ಕೊಟ್ಟ ಯುವಕನನ್ನು ಕೊಂದು ಹೂತು ಹಾಕಿರುವ ದೃಶ್ಯಂ ಚಿತ್ರ ನೋಡಿರುವವರಿಗೆ ಇದರ ಕಥೆ ಇನ್ನೂ ನೆನಪಿನಲ್ಲಿ ಉಳಿದಿದೆ. ಇದೇ ರೀತಿಯ ಘಟನೆ ಈಗ ಉತ್ತರಪ್ರದೇಶದಲ್ಲಿ ನಡೆದಿದೆ. ಇಲ್ಲಿ ಹೆಂಡತಿ ತನಗೆ ಗೊತ್ತಿಲ್ಲದಂತೆ ಮೊಬೈಲ್ ಬಳಸಿದ ಎನ್ನುವ ಕಾರಣಕ್ಕೆ ಆಕೆಯನ್ನು ಕೊಂದ ಪತಿ ಬಳಿಕ ಶವವನ್ನು ಹಾಸಿಗೆಯಲ್ಲಿ ಸುತ್ತಿ ಮನೆಯ ಹಿಂದೆ ಹೂತು ಹಾಕಿದ್ದಾನೆ. ಬಳಿಕ ಪೊಲೀಸರ ದಾರಿ ತಪ್ಪಿಸಲು ಸಾಕಷ್ಟು ಕಥೆ ಹೆಣೆದು ಕೊನೆಗೆ ಸಿಕ್ಕಿಬಿದ್ದಿದ್ದಾನೆ.
(ಸಂಗ್ರಹ ಚಿತ್ರ) -
ಉತ್ತರಪ್ರದೇಶ: ಹೆಂಡತಿ ಗೋಪ್ಯವಾಗಿ ಫೋನ್ ಬಳಸಿದಳು ಎನ್ನುವ ಕಾರಣಕ್ಕೆ ಆಕೆಯನ್ನು ಹೊಡೆದು ಕೊಂದೇ ಬಿಟ್ಟ ಘಟನೆ ಉತ್ತರಪ್ರದೇಶದಲ್ಲಿ (Uttar pradesh) ನಡೆದಿದೆ. ದೃಶ್ಯಂ (Drishyam) ಚಿತ್ರಕಥೆಯನ್ನು ಹೋಲುವ ಈ ಮರ್ಡರ್ ಸ್ಟೋರಿಯಲ್ಲಿ (Murder story) ಕೂಡ ಆರೋಪಿಯು ಪೊಲೀಸರ ದಾರಿ ತಪ್ಪಿಸಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದರೆ ಇದು ಸಿನಿಮಾ ಅಲ್ಲ ಜೀವನ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ. ಯಾಕೆಂದರೆ ಆತನ ಆಟಗಳು ಪೊಲೀಸರ ಮುಂದೆ ನಡೆಯಲಿಲ್ಲ. ತಾನು ಹೆಣೆದ ಜಾಲದಲ್ಲಿ ಸಿಕ್ಕಿ ಬಿದ್ದು ಈಗ ಪೊಲೀಸರ (Up police) ಅತಿಥಿಯಾಗಿದ್ದಾನೆ.
ಉತ್ತರ ಪ್ರದೇಶದ ಗೋರಖ್‌ಪುರದಲ್ಲಿ ಡಿಸೆಂಬರ್ 21ರಂದು ಈ ಘಟನೆ ನಡೆದಿದೆ. ಹೆಂಡತಿ ರಹಸ್ಯವಾಗಿ ಮೊಬೈಲ್ ಬಳಸಿದ್ದಾಳೆ ಎನ್ನುವ ಕಾರಣಕ್ಕೆ ವ್ಯಕ್ತಿಯೊಬ್ಬ ಹೆಂಡತಿಯನ್ನು ಕೊಂದು, ಬಳಿಕ ಆಕೆಯ ಶವವನ್ನು ಮನೆಯ ಹಿಂದಿನ ಗುಂಡಿಯಲ್ಲಿ ಹೂತುಹಾಕಿದ್ದಾನೆ. ಇದು ದೃಶ್ಯಂ ಚಿತ್ರ ಕಥೆಯನ್ನು ಹೋಲುವಂತೆ ಮಾಡಿದೆ.
ಅನುಮಾನದ ರೋಗ; ಮಕ್ಕಳೆದುರೇ ಪತ್ನಿಗೆ ಬೆಂಕಿ ಹಚ್ಚಿ ಕೊಂದ ಪಾಪಿ
ಘಟನೆಯ ಬಳಿಕ ವ್ಯಕ್ತಿಯು ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಹೇಳಿ ತನಿಖೆಯ ದಾರಿ ತಪ್ಪಿಸಿದ್ದಾನೆ. ಸಾಕಷ್ಟು ಬಾರಿ ಪೊಲೀಸರನ್ನೇ ಮೂರ್ಖರನ್ನಾಗಿ ಮಾಡಿದ ಆರೋಪಿ ಕೊನೆಗೆ ತಾನೇ ಕೃತ್ಯ ಎಸಗಿರುವುದಾಗಿ ಹೇಳಿ ಅಪರಾಧವನ್ನು ಒಪ್ಪಿಕೊಂಡಿದ್ದಾನೆ.
ಲುಧಿಯಾನದಲ್ಲಿ ಕಾರ್ಮಿಕನಾಗಿದ್ದ ಅರ್ಜುನ್ ಡಿಸೆಂಬರ್ 21ರಂದು ಗೋರಖ್‌ಪುರದ ಮನೆಗೆ ಹಿಂದಿರುಗಿದ್ದಾನೆ. ಆತ ಮನೆಗೆ ಬಂದಾಗ ಹೆಂಡತಿ ಖುಷ್ಬೂ ರಹಸ್ಯವಾಗಿ ಮೊಬೈಲ್ ಬಳಸುತ್ತಿರುವುದನ್ನು ನೋಡಿದ್ದಾನೆ. ಇದು ಇಬ್ಬರ ನಡುವೆ ಜಗಳಕ್ಕೆ ಕಾರಣವಾಗಿದೆ. ಈ ಸಂದರ್ಭದಲ್ಲಿ ಕೋಪದಲ್ಲಿ ಅರ್ಜುನ್ ತನ್ನ ಹೆಂಡತಿಯನ್ನು ಕೊಂದು ಹಾಕಿದ್ದಾನೆ. ಬಳಿಕ ಆತ ಹಾಸಿಗೆಯಲ್ಲಿ ಆಕೆಯ ಶವವನ್ನು ಇಟ್ಟು ಮಡಚಿ ಮನೆಯ ಹಿಂದಿನ ಗುಂಡಿಯಲ್ಲಿ ಹೂತುಹಾಕಿದ್ದಾನೆ.
ಇದರ ಬಳಿಕ ಹೆಂಡತಿ ಮನೆ ಬಿಟ್ಟು ಹೋಗಿದ್ದಾಳೆ ಎಂದು ಅರ್ಜುನ್ ಎಲ್ಲರ ಬಳಿ ಹೇಳಿದ್ದಾನೆ. ಸಾಕಷ್ಟು ಹುಡುಕಿದರೂ ಅವಳ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗದೇ ಇದ್ದುದರಿಂದ ಅರ್ಜುನ್‌ನ ಮಾವ ಆಕೆ ನಾಪತ್ತೆಯಾಗಿದ್ದಾಳೆ ಎಂದು ಪೊಲೀಸ್ ದೂರು ದಾಖಲಿಸಿದರು. ಈ ವೇಳೆ ಅವರು ಮಗನೇ ಅವಳನ್ನು ಕೊಂದಿರಬಹುದು ಎನ್ನುವ ಶಂಕೆ ವ್ಯಕ್ತಪಡಿಸಿದ್ದರು.
ಈ ಕುರಿತು ತನಿಖೆ ನಡೆಸಿದ ಪೊಲೀಸರು ಮನೆಗೆ ಆಗಮಿಸಿ ಅರ್ಜುನ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಆಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿದ್ದಾಳೆ. ಅವಳ ಶವವನ್ನು ನದಿಗೆ ಎಸೆದಿರುವುದಾಗಿ ಹೇಳಿದ್ದಾನೆ. ಇದರ ಬಳಿಕ ನಿರಂತರ ಪೋಲೀಸರ ದಾರಿ ತಪ್ಪಿಸಿದ ಅರ್ಜುನ ಕೊನೆಗೆ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.
Belagavi News: ಕಾಲುವೆಯಲ್ಲಿ ಈಜಲು ಹೋಗಿ ಇಬ್ಬರು ಬಾಲಕರು ನೀರುಪಾಲು
ಬಳಿಕ ಮನೆಯ ಹಿಂದೆ ಗುಂಡಿಯಲ್ಲಿದ್ದ ಖುಷ್ಬೂ ಶವವನ್ನು ವಶಕ್ಕೆ ಪಡೆದ ಪೊಲೀಸರು, ಆಕೆಗೆ ಅಕ್ರಮ ಸಂಬಂಧವಿದೆ ಎಂಬ ಅನುಮಾನದಲ್ಲಿ ಈ ಕೊಲೆ ನಡೆದಿದೆ. ಇಬ್ಬರಿಗೂ ಮದುವೆಯಾಗಿ ಎರಡು ವರ್ಷಗಳಾಗಿವೆ. ಮಕ್ಕಳಿರಲಿಲ್ಲ ಎಂದು ತಿಳಿಸಿದ್ದಾರೆ.
ಮೃತಳ ಕಿರಿಯ ಸಹೋದರ ನೀಡಿರುವ ದೂರಿನ ಆಧಾರದ ಮೇಲೆ ಅರ್ಜುನ್‌ನನ್ನು ಬಂಧಿಸಲಾಗಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಗೋರಖ್‌ಪುರದ ವೃತ್ತ ಅಧಿಕಾರಿ ಶಿಲ್ಪಾ ಕುಮಾರಿ ತಿಳಿಸಿದ್ದಾರೆ.