ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪತ್ನಿಯನ್ನು ಹತ್ಯೆ ಮಾಡಿ ಬೆರಳುಗಳನ್ನು ಕತ್ತರಿಸಿ, ರುಂಡ ಫ್ರಿಡ್ಜ್‌ನಲ್ಲಿಟ್ಟ ಪಾಪಿ ಪತಿ; ಮನೆಯೊಳಗೆ ಹೋದವರಿಗೆ ಕಾದಿತ್ತು ಶಾಕ್‌!

Husband Kills Wife: ಮನೆಯನ್ನು ಶೋಧಿಸಿದ ಪೊಲೀಸರು, ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿದ್ದ ಪಾಲಿಥಿನ್ ಚೀಲದಲ್ಲಿದ್ದ ಮಹಿಳೆಯ ತಲೆಯನ್ನು ವಶಪಡಿಸಿಕೊಂಡರು. ಆಕೆಯ ಪತಿ ಎಲ್ಲಿಯೂ ಪತ್ತೆಯಾಗಿಲ್ಲ. ಸೆಪ್ಟೆಂಬರ್ 4ರಂದು ಆತನನ್ನು ಕೊನೆಯ ಬಾರಿಗೆ ನೋಡಿರುವುದಾಗಿ ನೆರೆಹೊರೆಯವರು ಹೇಳಿದರು. ಬಳಿಕ ಪೊಲೀಸರಿಗೆ ಆರೋಪಿ ಶರಣಾಗಿದ್ದಾನೆ.

ಪತ್ನಿಯನ್ನು ಹತ್ಯೆ ಮಾಡಿ ತಲೆಯನ್ನು ಫ್ರಿಡ್ಜ್‌ನಲ್ಲಿಟ್ಟ ಪಾಪಿ ಪತಿ

ಸಾಂದರ್ಭಿಕ ಚಿತ್ರ -

Priyanka P
Priyanka P Sep 7, 2026 1:32 PM

ಗುವಾಹಟಿ, ಸೆ.7: ಮದುವೆಯಾದ ಕೆಲವೇ ತಿಂಗಳುಗಳ ನಂತರ ಅಪಾರ್ಟ್‌ಮೆಂಟ್‌ವೊಂದರಲ್ಲಿ 25 ವರ್ಷದ ಮಹಿಳೆಯೊಬ್ಬರು ಶವವಾಗಿ ಪತ್ತೆಯಾಗಿದ್ದು, ಪೊಲೀಸರು ಆಕೆಯ ಪತಿಗಾಗಿ ಹುಡುಕಾಟ ಆರಂಭಿಸಿದ್ದಾರೆ. ಅಸ್ಸಾಂನ (Assam) ಗುವಾಹಟಿಯಲ್ಲಿ ಈ ಘಟನೆ (crime news) ನಡೆದಿದೆ. ಸೆಪ್ಟೆಂಬರ್ 6 ರಂದು, ದುರ್ವಾಸನೆ ಬರುತ್ತಿದೆ ಎಂದು ನೆರೆಹೊರೆಯವರು ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಕೊಲೆಯಾದ ದುರ್ದೈವಿ ಮಹಿಳೆಯನ್ನು ರಿಯಾ ತಾಲೂಕ್ದಾರ್ (25) ಎಂದು ಗುರುತಿಸಲಾಗಿದೆ. ಈಕೆಯನ್ನು ಕೊಲೆ ಮಾಡಿದ ಆರೋಪಿ ಆಕೆಯ ಪತಿ ರಾಮಾನುಜನ್ ಗೋಸ್ವಾಮಿ ಎಂದು ಗುರುತಿಸಲಾಗಿದೆ.

ಕೆಲವು ತಿಂಗಳ ಹಿಂದಷ್ಟೇ ದಂಪತಿ ವಿವಾಹವಾಗಿ ಮನೆಗೆ ಬಂದಿದ್ದರು. ಎರಡು ದಿನಗಳಿಂದ ದಂಪತಿಯನ್ನು ನೋಡಿಲ್ಲ, ಅವರ ಫೋನ್‌ಗಳು ಸ್ವಿಚ್ ಆಫ್ ಆಗಿವೆ ಎಂದು ನೆರೆಹೊರೆಯವರು ಪೊಲೀಸರಿಗೆ ದೂರು ನೀಡಿದರು. ನಂತರ ಪೊಲೀಸರು ಅಪಾರ್ಟ್ಮೆಂಟ್‌ನ ಬೀಗವನ್ನು ಮುರಿದು ಒಳಗೆ ಹೋದಾಗ ಮಹಿಳೆಯ ಮೃತದೇಹ ಕಂಡುಬಂದಿದೆ. ಆಕೆಯ ಬೆರಳುಗಳು ಅರ್ಧ ಕತ್ತರಿಸಲ್ಪಟ್ಟಿದ್ದವು, ದೇಹವು ಕೊಳೆಯಲು ಪ್ರಾರಂಭಿಸಿತ್ತು. ಆಕೆಯ ತಲೆ ಕಾಣೆಯಾಗಿತ್ತು.

ಮೃತ ಮಹಿಳೆಯನ್ನು ರಿಯಾ ತಾಲ್ಲೂಕುದಾರ್ ಎಂದು ಗುರುತಿಸಲಾಗಿದೆ. ಮನೆಯನ್ನು ಶೋಧಿಸಿದ ಪೊಲೀಸರು, ರೆಫ್ರಿಜರೇಟರ್‌ನಲ್ಲಿ ಇರಿಸಲಾಗಿದ್ದ ಪಾಲಿಥಿನ್ ಚೀಲದಲ್ಲಿದ್ದ ಮಹಿಳೆಯ ತಲೆಯನ್ನು ವಶಪಡಿಸಿಕೊಂಡರು. ಆಕೆಯ ಪತಿ ಎಲ್ಲಿಯೂ ಪತ್ತೆಯಾಗಿಲ್ಲ. ಸೆಪ್ಟೆಂಬರ್ 4ರಂದು ಆತನನ್ನು ಕೊನೆಯ ಬಾರಿಗೆ ನೋಡಿರುವುದಾಗಿ ನೆರೆಹೊರೆಯವರು ಹೇಳಿದರು.

ಗುಡಿಬಂಡೆ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ವೇಳೆ ಮಹಿಳೆ ಸಾವು

ನಂತರ ಕತ್ತರಿಸಿದ ತಲೆಯೊಂದಿಗೆ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಭಾನುವಾರ (ಸೆ.6) ರಾತ್ರಿ ಆಕೆಯ ಪತಿ ಪೊಲೀಸರಿಗೆ ಶರಣಾಗಿದ್ದು, ಆತನನ್ನು ಬಂಧಿಸಲಾಗಿದೆ. ತನಿಖಾಧಿಕಾರಿಗಳು ಆರೋಪಿಯ ಹೇಳಿಕೆಯನ್ನು ದಾಖಲಿಸಿಕೊಂಡು, ಇಲ್ಲಿಯವರೆಗೆ ಸಂಗ್ರಹಿಸಿದ ಸಾಕ್ಷ್ಯಗಳೊಂದಿಗೆ ಅದನ್ನು ಪರಿಶೀಲಿಸುವ ಸಾಧ್ಯತೆಯಿದೆ.

ಆಪಾದಿತ ಹತ್ಯೆಯ ಹಿಂದಿನ ಉದ್ದೇಶವನ್ನು ಪೊಲೀಸರು ಇನ್ನೂ ಬಹಿರಂಗಪಡಿಸಿಲ್ಲ. ಪತಿ-ಪತ್ನಿ ಮಧ್ಯೆ ಏನಾದರೂ ಭಿನ್ನಾಭಿಪ್ರಾಯವಿತ್ತೇ ಎಂಬುದು ತಿಳಿದುಬಂದಿಲ್ಲ. ಆರೋಪಿ ಶರಣಾಗಲು ಏನು ಕಾರಣ ಎಂಬುದು ಕೂಡ ಇನ್ನೂ ತಿಳಿದುಬಂದಿಲ್ಲ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

ಅಡುಗೆ ಮಾಡಲು ನಿರಾಕರಿಸಿದ್ದಕ್ಕೆ ಪತ್ನಿಯನ್ನು ಕೊಂದ ಪಾಪಿ ಪತಿ

ಡ್ಯಾನ್ಸ್‌ ತರಗತಿಗೆ ಹೋಗಲು ಅಡುಗೆ ಮಾಡಲು ನಿರಾಕರಿಸಿದ್ದಕ್ಕೆ ಪತಿಯೊಬ್ಬ ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನೇ ಹತ್ಯೆ ಮಾಡಿದ್ದಾನೆ. ಮಹಾರಾಷ್ಟ್ರದ ನಾಗ್ಪುರದಲ್ಲಿ ಈ ಘಟನೆ ನಡೆದಿದೆ. ಅಡುಗೆ ಮಾಡುವ ಬದಲು ಪತ್ನಿ ಡ್ಯಾನ್ಸ್‌ ತರಗತಿಗೆ ಹಾಜರಾಗಲು ಮುಂದಾಗಿದ್ದಕ್ಕೆ ದಂಪತಿ ಮಧ್ಯೆ ವಾಗ್ವಾದ ನಡೆದಿದೆ. ಜಗಳ ಅತಿರೇಕಕ್ಕೆ ಹೋಗಿ ಪತಿಯು ಪತ್ನಿ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದಾನೆ. ಪರಿಣಾಮ 38 ವರ್ಷದ ಮಹಿಳೆ ಮೃತಪಟ್ಟಿದ್ದಾಳೆ.

ಆರೋಪಿ ಪತಿಯನ್ನು ಬಂಧಿಸಿದ ಪೊಲೀಸರು, ಆತನ ವಿರುದ್ಧ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಮೃತಳನ್ನು ಯಾಮಿನಿ ಕೃಷ್ಣ ಲಾಲ್ ಯಾದವ್ ಎಂದು ಗುರುತಿಸಲಾಗಿದ್ದು, ಆರೋಪಿಯನ್ನು 41 ವರ್ಷದ ಕೃಷ್ಣ ಲಾಲ್ ಯಾದವ್ ಎಂದು ಗುರುತಿಸಲಾಗಿದೆ. ದಂಪತಿಗೆ ಇಬ್ಬರು ಚಿಕ್ಕ ಮಕ್ಕಳಿದ್ದಾರೆ.