IND vs NZ: ಬೆಂಚ್ ಕಾಯುತ್ತಿರುವ ವೈಭವ್ ಸೂರ್ಯವಂಶಿಗೆ ದಿನೇಶ್ ಕಾರ್ತಿಕ್ ಸಂದೇಶ!
ವೈಭವ್ ಸೂರ್ಯವಂಶಿ ಭಾರತ ತಂಡದಲ್ಲಿ ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ಗೆ ಬ್ಯಾಕಪ್ ಆಟಗಾರನಾಗಿದ್ದಾರೆ ಎಂದು ಮಾಜಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಆರಂಭಿಕ ಆಟಗಾರರಿಗೆ ಸಮಸ್ಯೆಯಾದರೆ ಅವಕಾಶ ಸಿಗಬಹುದು. ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ ಮೀಸಲು ಆಟಗಾರರನ್ನು ದೇಶಿ ಕ್ರಿಕೆಟ್ಗೆ ಕಳುಹಿಸುವುದು ಕಷ್ಟ ಎಂದು ಕಾರ್ತಿಕ್ ವಿವರಿಸಿದ್ದಾರೆ.
ವೈಭವ್ ಸೂರ್ಯವಂಶಿಗೆ ದಿನೇಶ್ ಕಾರ್ತಿಕ್ ಸಂದೇಶ. -
ನವದೆಹಲಿ: ಭಾರತೀಯ ಕ್ರಿಕೆಟ್ನ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi) ಸದ್ಯ ರಾಷ್ಟ್ರೀಯ ತಂಡದಲ್ಲಿ ಆಡುವ ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಕೇವಲ 15ನೇ ವಯಸ್ಸಿನಲ್ಲೇ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ವೈಭವ್ಗೆ ಸತತವಾಗಿ ಪಂದ್ಯಗಳಲ್ಲಿ ಅವಕಾಶ ಸಿಗದಿರುವುದು ಚರ್ಚೆಗೆ ಕಾರಣವಾಗಿದೆ. ಈ ನಡುವೆ ಭಾರತದ ಮಾಜಿ ವಿಕೆಟ್ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ (Dinesh Karthik) ಯುವ ಆಟಗಾರನಿಗೆ ಮಹತ್ವದ ಸಲಹೆ ನೀಡಿದ್ದಾರೆ.
ರಾಷ್ಟ್ರೀಯ ತಂಡದ ಭಾಗವಾಗಿರುವಾಗ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಗದಿದ್ದರೂ ತಾಳ್ಮೆಯಿಂದ ಕಾಯಬೇಕು ಮತ್ತು ತಂಡದೊಂದಿಗೆ ಉಳಿದುಕೊಂಡು ಕಲಿಯುವುದನ್ನು ಮುಂದುವರಿಸಬೇಕು ಎಂಬುದು ಕಾರ್ತಿಕ್ ಅವರ ಅಭಿಪ್ರಾಯ. ಅವಕಾಶಕ್ಕಾಗಿ ಕಾಯುವುದು ಯುವ ಆಟಗಾರನ ಬೆಳವಣಿಗೆಗೆ ಸವಾಲಾಗಬಹುದು ಎಂಬುದನ್ನು ಒಪ್ಪಿಕೊಂಡರೂ, ತಂಡದ ಆಯ್ಕೆ ಪ್ರಕ್ರಿಯೆಯ ವಾಸ್ತವವನ್ನೂ ಅರ್ಥಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ.
IND vs NZ: ಸಂಜು-ನಮನ್ ಸ್ಪೋಟಕ ಬ್ಯಾಟಿಂಗ್, ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಜಯ!
ಬೆಂಚ್ನಲ್ಲಿ ಕುಳಿತರೂ ತಂಡದೊಂದಿಗೆ ಇರುವುದೇ ಮುಖ್ಯ
ದಿನೇಶ್ ಕಾರ್ತಿಕ್ ಪ್ರಕಾರ, ರಾಷ್ಟ್ರೀಯ ತಂಡದಲ್ಲಿ ಕೇವಲ 11 ಆಟಗಾರರಿಗೆ ಮಾತ್ರ ಮೈದಾನದಲ್ಲಿ ಆಡುವ ಅವಕಾಶ ಸಿಗುತ್ತದೆ. ಉಳಿದ ಆಟಗಾರರು ಅವಕಾಶಕ್ಕಾಗಿ ಕಾಯಬೇಕಾಗುತ್ತದೆ. ವೈಭವ್ ಪ್ರತಿಭಾವಂತ ಆಟಗಾರ ಎಂಬ ಕಾರಣಕ್ಕೆ ಅವರಿಗೆ ಮಾತ್ರ ವಿಶೇಷ ನಿಯಮ ಅನ್ವಯಿಸಬೇಕು ಎಂದು ಹೇಳುವುದು ಸರಿಯಲ್ಲ ಎಂಬುದು ಅವರ ಅಭಿಪ್ರಾಯ.
ಕ್ರಿಕ್ಬಜ್ನಲ್ಲಿ ಮಾತನಾಡಿದ ಕಾರ್ತಿಕ್, ದೇಶೀಯ ಕ್ರಿಕೆಟ್ನಲ್ಲಿ ಆಡಲು ವೈಭವ್ ಅವರನ್ನು ವಾಪಸ್ ಕಳುಹಿಸುವ ಬದಲು ರಾಷ್ಟ್ರೀಯ ತಂಡದೊಂದಿಗೇ ಉಳಿಸಿಕೊಳ್ಳುವುದನ್ನು ಬೆಂಬಲಿಸಿದ್ದಾರೆ.
“ಆಡಲು ಅವಕಾಶ ಸಿಗದ ಆಟಗಾರರು ಬೆಂಚ್ನಲ್ಲಿ ಕುಳಿತುಕೊಳ್ಳುವುದಕ್ಕಿಂತ ದೇಶಿ ಕ್ರಿಕೆಟ್ನಲ್ಲಿ ಆಡಲು ಹೋಗುವುದು ಉತ್ತಮ ಎಂದು ಹೇಳಿದರೆ, ಪ್ರವಾಸಕ್ಕೆ ಕೇವಲ 11 ಆಟಗಾರರು ಮಾತ್ರ ಹೋಗಬೇಕಾಗುತ್ತದೆ. ಹಾಗೆ ಮಾಡಲು ಸಾಧ್ಯವಿಲ್ಲ. ವೈಭವ್ ವಿಶೇಷ ಪ್ರತಿಭೆ ಎಂಬ ಕಾರಣಕ್ಕೆ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಸಿಗದಿದ್ದರೆ ಮನೆಗೆ ಕಳುಹಿಸಬೇಕು ಎಂದಾದರೆ, ಉಳಿದ ಆಟಗಾರರ ವಿಷಯದಲ್ಲಿ ಏನು ಮಾಡಬೇಕು? ಈ ಚರ್ಚೆಗೆ ಕೊನೆಯೇ ಇರುವುದಿಲ್ಲ,” ಎಂದು ದಿನೇಶ್ ಕಾರ್ತಿಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
15 ಎಸೆತಗಳಲ್ಲಿ 42 ರನ್ ಸಿಡಿಸಿದ ನಮನ್ ಧೀರ್ ಬಗ್ಗೆ ದೊಡ್ಡ ಹೇಳಿಕೆ ಕೊಟ್ಟ ಶ್ರೇಯಸ್ ಅಯ್ಯರ್!
ಆರಂಭಿಕ ಆಟಗಾರರಿಗೆ ವೈಭವ್ ಸೂರ್ಯವಂಶಿ ಬ್ಯಾಕಪ್ ಆಟಗಾರ: ಕಾರ್ತಿಕ್
ತಂಡದಲ್ಲಿ ಬ್ಯಾಕಪ್ ಆಟಗಾರರನ್ನು ಹೊಂದಿರುವುದು ಅತ್ಯಂತ ಮುಖ್ಯ ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ. ಅಭಿಷೇಕ್ ಶರ್ಮಾ ಮತ್ತು ಸಂಜು ಸ್ಯಾಮ್ಸನ್ ಅವರ ಆರಂಭಿಕ ಜೋಡಿಗೆ ವೈಭವ್ ಸೂರ್ಯವಂಶಿ ಬ್ಯಾಕಪ್ ಆಟಗಾರನಾಗಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಟೆಸ್ಟ್ ಸರಣಿಯಾಗಿದ್ದರೆ ವೈಭವ್ ದೇಶಿ ಕ್ರಿಕೆಟ್ನಲ್ಲಿ ಆಡಲು ಅವಕಾಶವಿರುತ್ತಿತ್ತು. ಆದರೆ ಸೀಮಿತ ಓವರ್ಗಳ ಕ್ರಿಕೆಟ್ನಲ್ಲಿ ಅದು ಸಾಧ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.
“ಅತ್ಯುತ್ತಮ 16 ಆಟಗಾರರನ್ನು ಆಯ್ಕೆ ಮಾಡುವುದು ಸೂಕ್ತ. ಆರಂಭಿಕ ಆಟಗಾರರಿಗೆ ಅಥವಾ ಇಶಾನ್ ಕಿಶನ್ಗೆ ಏನಾದರೂ ಸಮಸ್ಯೆಯಾದರೆ ವೈಭವ್ ತಂಡಕ್ಕೆ ಬರಲಿದ್ದಾರೆ. ಅವರು ಬ್ಯಾಕಪ್ ಆಟಗಾರರಾಗಿದ್ದು, ತಂಡದಲ್ಲಿ ಅವರ ಪಾತ್ರವೂ ಮಹತ್ವದ್ದಾಗಿದೆ. ಭಾರತದಲ್ಲಿ ಐದು ದಿನಗಳ ಟೆಸ್ಟ್ ಪಂದ್ಯಗಳ ಸರಣಿ ನಡೆಯುತ್ತಿದ್ದರೆ, ಕೆಲವೊಮ್ಮೆ ಆಡುವ ಬಳಗದಲ್ಲಿ ಸ್ಥಾನ ಪಡೆಯದ ಆಟಗಾರರನ್ನು ದೇಶೀಯ ಕ್ರಿಕೆಟ್ ಆಡಲು ಕಳುಹಿಸಲಾಗುತ್ತದೆ. ಆದರೆ ಟಿ20 ಮತ್ತು ಏಕದಿನ ಪಂದ್ಯಗಳಲ್ಲಿ, ಅದರಲ್ಲೂ ತಂಡ ವಿದೇಶ ಪ್ರವಾಸದಲ್ಲಿರುವಾಗ, ಆಟಗಾರರನ್ನು ದೇಶೀಯ ಕ್ರಿಕೆಟ್ ಆಡಲು ಕಳುಹಿಸುವುದು ಸಾಧ್ಯವಿಲ್ಲ,” ಎಂದು ದಿನೇಶ್ ಕಾರ್ತಿಕ್ ಹೇಳಿದ್ದಾರೆ.