ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral News: ಮದರಸಾದ ಶೌಚಾಲಯದಲ್ಲಿ 40 ಬಾಲಕಿಯರನ್ನು ಬಂಧಿಸಿ ಚಿತ್ರಹಿಂಸೆ; ಹೊರಬಿತ್ತು ಶಾಕಿಂಗ್‌ ನ್ಯೂಸ್‌

ಈ ಹಿಂದೆ ಮದರಸಾದಲ್ಲಿ ಅತ್ಯಾಚಾರ ಆಗಿದ್ದ ಪ್ರಕರಣಗಳು ಕೇಳಿ ಬಂದಿತು. ಇದೀಗ ಇಂತದೇ ಮತ್ತೊಂದು ಹೀನ ಕೃತ್ಯ ನಡೆದಿದ್ದು, ಅಪ್ರಾಪ್ತ ಬಾಲಕಿಯರನ್ನು ಬಾತ್ರೂಮ್ ಅಲ್ಲಿ ಕೂಡಿ ಹಾಕಿದ ಅಮಾನಿಯ ಘಟನೆ ಉತ್ತರ ಪ್ರದೇಶದ ಲ್ಲಿ ನಡೆದಿದೆ.

ಮದರಸಾದ ಶೌಚಾಲಯದಲ್ಲಿ 40 ಬಾಲಕಿಯರ ಬಂಧನ

ಘಟನೆಯ ದೃಶ್ಯ -

Profile Sushmitha Jain Sep 26, 2025 9:42 PM

ಬಹ್ರೈಚ್: ಉತ್ತರ ಪ್ರದೇಶದ (Uttar Pradesh) ಬಹ್ರೈಚ್‌ನ (Bahraich) ಪಯಾಗಪುರದ ಪಹಲ್ವಾರಾ ಗ್ರಾಮದಲ್ಲಿ ನೋಂದಣಿಯಾಗದ ಮದರಸಾದ (Madrasa) ಶೌಚಾಲಯದಲ್ಲಿ (Toilet) 9 ರಿಂದ 14 ವರ್ಷದ 40 (Viral News) ಬಾಲಕಿಯರು ಬಂಧಿಯಾಗಿರುವುದು ಬೆಳಕಿಗೆ ಬಂದಿದೆ. ಸ್ಥಳೀಯ ಆಡಳಿತಕ್ಕೆ ದೂರುಗಳು ಬಂದ ಬಳಿಕ ಈ ಘಟನೆ ಬೆಳಕಿಗೆ ಬಂದಿದ್ದು, ತನಿಖೆ ಆರಂಭವಾಗಿದೆ.

ಪಯಾಗಪುರ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಅಶ್ವಿನಿ ಕುಮಾರ್ ಪಾಂಡೆ ಅವರು, ಮೂರು ಅಂತಸ್ತಿನ ಕಟ್ಟಡದಲ್ಲಿ ಅಕ್ರಮ ಮದರಸಾ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದವು ಎಂದು ತಿಳಿಸಿದ್ದಾರೆ. ಬುಧವಾರ ಪರಿಶೀಲನೆಗೆ ತೆರಳಿದಾಗ, ಮದರಸಾ ನಿರ್ವಾಹಕರು ಅಧಿಕಾರಿಗಳನ್ನು ಮೇಲಿನ ಅಂತಸ್ಥಿಗೆ ಬಿಡದಂತೆ ತಡೆಯಲು ಯತ್ನಿಸಿದರು. ಪೊಲೀಸರ ಸಮ್ಮುಖದಲ್ಲಿ ಒಳಗೆ ಪ್ರವೇಶಿಸಿದಾಗ, ಟೆರೇಸ್‌ನ ಶೌಚಾಲಯಕ್ಕೆ ಬೀಗ ಹಾಕಿರುವುದು ಕಂಡುಬಂದಿತು. ಮಹಿಳಾ ಪೊಲೀಸರು ಬಾಗಿಲು ತೆರೆದಾಗ 40 ಬಾಲಕಿಯರು ಭಯಭೀತರಾಗಿ ಹೊರಬಂದರು. ಅವರು ಏನನ್ನೂ ಸ್ಪಷ್ಟವಾಗಿ ಹೇಳಲು ಸಾಧ್ಯವಾಗಲಿಲ್ಲ.

ಮದರಸಾದ ಕಾನೂನುಬಾಹಿರ ಕಾರ್ಯ

ಜಿಲ್ಲಾ ಅಲ್ಪಸಂಖ್ಯಾತ ಕಲ್ಯಾಣ ಅಧಿಕಾರಿ ಮೊಹಮ್ಮದ್ ಖಾಲಿದ್ ಅವರು, ಮದರಸಾ ಕಳೆದ ಮೂರು ವರ್ಷಗಳಿಂದ ನೋಂದಣಿಯಿಲ್ಲದೆ ಕಾರ್ಯನಿರ್ವಹಿಸುತ್ತಿತ್ತು ಎಂದು ತಿಳಿಸಿದ್ದಾರೆ. “ನಿರ್ವಾಹಕರು ಯಾವುದೇ ದಾಖಲೆಗಳನ್ನು ಒದಗಿಸಲಿಲ್ಲ. 2023ರ ಸಮೀಕ್ಷೆಯಲ್ಲಿ ಬಹ್ರೈಚ್‌ನಲ್ಲಿ 495 ಅಕ್ರಮ ಮದರಸಾಗಳು ಕಂಡುಬಂದಿವೆ, ಆದರೆ ಇದು ಗಮನಕ್ಕೆ ಬಂದಿರಲಿಲ್ಲ” ಎಂದರು. ರಾಜ್ಯ ಸರ್ಕಾರ ಇಂತಹ ಮದರಸಾಗಳಿಗೆ ಸ್ಪಷ್ಟ ನೀತಿಯನ್ನು ರೂಪಿಸಿಲ್ಲ. ಕೆಲವನ್ನು ಮುಚ್ಚಲಾಗಿತ್ತಾದರೂ, ಹೈಕೋರ್ಟ್‌ನಿಂದ ತಡೆಯಾಜ್ಞೆ ಪಡೆಯಲಾಗಿತ್ತು.

ಈ ಸುದ್ದಿಯನ್ನು ಓದಿ: Crime News: ಅಮೆರಿಕದಲ್ಲಿ ಮಕ್ಕಳಿಗೆ ಕಿರುಕುಳ ನೀಡಿದ್ದ ಕಿಡಿಗೇಡಿಯನ್ನು ಕೊಂದ ಭಾರತೀಯ

ಬಾಲಕಿಯರ ರಕ್ಷಣೆ

ಅಧಿಕಾರಿಗಳು ಮದರಸಾದ ದಾಖಲೆಗಳನ್ನು ಪರಿಶೀಲಿಸುತ್ತಿದ್ದು, ಅದನ್ನು ಮುಚ್ಚಲು ಆದೇಶಿಸಲಾಗಿದೆ. ಬಾಲಕಿಯರನ್ನು ಸುರಕ್ಷಿತವಾಗಿ ಅವರ ಮನೆಗಳಿಗೆ ಕಳುಹಿಸಲಾಗಿದೆ ಎಂದು ಖಾಲಿದ್ ತಿಳಿಸಿದ್ದಾರೆ. “ಎಂಟು ಕೊಠಡಿಗಳಿದ್ದರೂ, ಬಾಲಕಿಯರು ಶೌಚಾಲಯದಲ್ಲಿ ಏಕೆ ಅಡಗಿದ್ದರು ಎಂದು ಕೇಳಿದಾಗ, ಶಿಕ್ಷಕಿ ತಕ್ಸೀಮ್ ಫಾತಿಮಾ, ಗದ್ದಲದಿಂದ ಭಯಗೊಂಡು ಬೀಗ ಹಾಕಿಕೊಂಡರು ಎಂದು ಹೇಳಿದರು” ಎಂದು ತಿಳಿಸಿದ್ದಾರೆ.