Haryana Crime: ಸ್ನೇಹಿತನ ಖಾಸಗಿ ಭಾಗಕ್ಕೆ ಪೈಪ್ ಇಟ್ಟು ನೀರು ಬಿಟ್ಟ ಯುವಕರು; ಮುಂದೆ ಆಗಿದ್ದು ಮಾತ್ರ ಘೋರ ದುರಂತ
ಹರಿಯಾಣದ ಫರೀದಾಬಾದ್‌ನ ಸೆಕ್ಟರ್ 58 ಪ್ರದೇಶದಲ್ಲಿ ಸ್ನೇಹಿತನ ಖಾಸಗಿ ಭಾಗಕ್ಕೆ ಪೈಪ್ ತುರುಕಿ ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಸಂಜಯ್ ಕಾಲೋನಿಯ ನಿವಾಸಿ ಮನೋಜ್ ಚೌಹಾಣ್ ಎಂಬಾತನನ್ನು ಅವನ ನಾಲ್ವರು ಸ್ನೇಹಿತರಾದ ಅತಿಂದರ್, ಕಾರ್ತಿಕ್, ಸಂದೀಪ್ ಮತ್ತು ರಾಹುಲ್ ಫಾರ್ಮ್‌ಹೌಸ್‌ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕೊಲೆ ಮಾಡಿದ್ದಾರೆ.

ಸಾಂದರ್ಭಿಕ ಚಿತ್ರ.

ಚಂಡೀಗಢ: ಹರಿಯಾಣದ (Haryana) ಫರೀದಾಬಾದ್‌ನ (Faridabad) ಸೆಕ್ಟರ್ 58 ಪ್ರದೇಶದಲ್ಲಿ ಸ್ನೇಹಿತನ (Friend) ಖಾಸಗಿ ಭಾಗಕ್ಕೆ ಹಲ್ಲೆ ನಡೆಸಿ ಕೊಲೆ ಮಾಡಿದ ಆರೋಪದ ಮೇಲೆ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಸಂಜಯ್ ಕಾಲೋನಿಯ ನಿವಾಸಿ ಮನೋಜ್ ಚೌಹಾಣ್ ಎಂಬಾತನನ್ನು ಆತನ ನಾಲ್ವರು ಸ್ನೇಹಿತರಾದ ಅತಿಂದರ್, ಕಾರ್ತಿಕ್, ಸಂದೀಪ್ ಮತ್ತು ರಾಹುಲ್ ಫಾರ್ಮ್‌ಹೌಸ್‌ನಲ್ಲಿ ಸ್ನಾನ ಮಾಡುತ್ತಿದ್ದ ವೇಳೆ ಕೊಲೆ ಮಾಡಿದ್ದಾರೆ. ಆರೋಪಿಗಳು ಮನೋಜ್‌ನ ಖಾಸಗಿ ಭಾಗಕ್ಕೆ ನೀರಿನ ಪೈಪ್ ತೂರಿಸಿ, ಅಧಿಕ ಒತ್ತಡದ ನೀರನ್ನು ಬಿಡುಗಡೆ ಮಾಡಿದ್ದು, ಇದರಿಂದ ಆಂತರಿಕ ಗಾಯಗಳಾಗಿ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾನೆ.
ಬಂಧಿತ ಆರೋಪಿಗಳಾದ ಸಂದೀಪ್ ಮತ್ತು ರಾಹುಲ್ ಸಂಜಯ್ ಕಾಲೋನಿಯ ನಿವಾಸಿಗಳು. ಇತರ ಇಬ್ಬರು ಆರೋಪಿಗಳಾದ ಅತಿಂದರ್ ಮತ್ತು ಕಾರ್ತಿಕ್‌ರನ್ನು ಹಿಡಿಯಲು ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಮನೋಜ್‌ನ ಸಹೋದರ ಆನಂದ್ ಚೌಹಾಣ್ ಸಲ್ಲಿಸಿದ ದೂರಿನ ಆಧಾರದ ಮೇಲೆ, ಸೆಕ್ಟರ್ 58 ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ದೂರಿನ ಪ್ರಕಾರ, ಮೇ 17ರ ಬೆಳಗ್ಗೆ, ಆರೋಪಿಗಳು ಮನೋಜ್‌ನನ್ನು ಫಾರ್ಮ್‌ಹೌಸ್‌ಗೆ ಕರೆದೊಯ್ದಿದ್ದರು. ಬೆಳಗ್ಗೆ 9 ಗಂಟೆ ಸುಮಾರಿಗೆ, ಆತನ ಆರೋಗ್ಯ ಹದಗೆಟ್ಟಿದೆ ಎಂದು ಹೇಳಿ ಗಂಭೀರ ಸ್ಥಿತಿಯಲ್ಲಿ ಮನೆಗೆ ಕರೆತಂದಿದ್ದರು. ಚಿಕಿತ್ಸೆಯ ವೇಳೆ ಮನೋಜ್ ತನ್ನ ಸಹೋದರನಿಗೆ ಸ್ನೇಹಿತರ ಕೃತ್ಯದ ಬಗ್ಗೆ ತಿಳಿಸಿದ್ದ ಎಂದು ಆನಂದ್ ದೂರಿನಲ್ಲಿ ತಿಳಿಸಿದ್ದಾನೆ.
ಈ ಸುದ್ದಿಯನ್ನು ಓದಿ: Odisha Crime: ಅನಾಥ ಮಗುವನ್ನು ರಕ್ಷಿಸಿದ್ದೇ ಜೀವಕ್ಕೆ ಮುಳುವಾಯ್ತು; ದತ್ತು ಮಗಳಿಂದಲೇ ಕೊಲೆಯಾದ ತಾಯಿ
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ, ಆರೋಪಿಗಳು ಮನೋಜ್‌ನ ಸ್ನೇಹಿತರಾಗಿದ್ದರು. ಮೇ 16ರ ರಾತ್ರಿ ಅವರೆಲ್ಲರೂ ಒಟ್ಟಿಗೆ ಮದುವೆಯ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಮರುದಿನ ಬೆಳಗ್ಗೆ ಡಂಪಿಂಗ್ ಯಾರ್ಡ್ ಬಳಿಯ ಫಾರ್ಮ್‌ಹೌಸ್‌ಗೆ ಫ್ರೆಷ್ ಆಗಲು ತೆರಳಿದ್ದರು. ಘಟನೆಯ ವೇಳೆ ಸಂದೀಪ್ ಮನೋಜ್‌ನನ್ನು ಹಿಡಿದುಕೊಂಡಿದ್ದ, ರಾಹುಲ್ ಸಬ್‌ಮರ್ಸಿಬಲ್‌ಗೆ ಸಂಪರ್ಕ ಹೊಂದಿದ್ದ ಪೈಪ್ ಅನ್ನು ಆತನ ಖಾಸಗಿ ಭಾಗಕ್ಕೆ ತೂರಿಸಿದ್ದಾನೆ. ಅಧಿಕ ಒತ್ತಡದ ನೀರಿನಿಂದ ಆಂತರಿಕ ಗಾಯಗಳಾಗಿ, ಮನೋಜ್ ಗಂಭೀರ ಸ್ಥಿತಿಗೆ ತಲುಪಿದ್ದಾನೆ. ನಂತರ ಆರೋಪಿಗಳು ಆತನನ್ನು ಮನೆಗೆ ಕರೆತಂದಿದ್ದಾರೆ. ಆದರೆ ಚಿಕಿತ್ಸೆಯ ವೇಳೆ ಆತ ಮೃತಪಟ್ಟಿದ್ದಾನೆ.
ಉಳಿದ ಇಬ್ಬರು ಆರೋಪಿಗಳನ್ನು ಬಂಧಿಸಲು ಪೊಲೀಸರು ಬಲೆ ಬೀಸಿದ್ದಾರೆ. "ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ತಪ್ಪಿತಸ್ಥರನ್ನು ಶೀಘ್ರದಲ್ಲೇ ಬಂಧಿಸುತ್ತೇವೆ" ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.