ಜಾರ್ಖಂಡ್: ಯುಪಿಎಸ್‌ಸಿಯಲ್ಲಿ (UPSC exam) ನಾಲ್ಕು ಬಾರಿ ಅನುತ್ತೀರ್ಣನಾಗಿ ಐಎಎಸ್ ಅಧಿಕಾರಿಯಂತೆ (IAS officer) ಏಳು ವರ್ಷಗಳ ಕಾಲ ನಟಿಸಿದ 35 ವರ್ಷದ ವ್ಯಕ್ತಿಯೊಬ್ಬನನ್ನು ಜಾರ್ಖಂಡ್‌ನ ಪೊಲೀಸರು (Jharkhand Police) ಬಂಧಿಸಿದ್ದಾರೆ. ಜಾರ್ಖಂಡ್‌ನ ಕುಖಿ ನಿವಾಸಿ ರಾಜೇಶ್ ಕುಮಾರ್ ಎಂಬಾತ ತನ್ನನ್ನು ತಾನು 2014 ರ ಬ್ಯಾಚ್ ಒಡಿಶಾ ಕೇಡರ್ ಅಧಿಕಾರಿ ಎಂದು ಪರಿಚಯಿಸಿಕೊಂಡ ಆತ ತನ್ನ ತಂದೆಯನ್ನು ಮೆಚ್ಚಿಸಲು ಐಎಎಸ್ ಅಧಿಕಾರಿಯಂತೆ ನಟಿಸಿದ್ದ ಎನ್ನಲಾಗಿದೆ. ಹುಸೈನಾಬಾದ್ ಪೊಲೀಸ್ ಠಾಣೆಗೆ (Hussainabad Police Station) ಆತ ಭೇಟಿ ನೀಡಿದ್ದ ವೇಳೆ ಆತನ ನಾಟಕ ಬಯಲಾಗಿದೆ.
ಜಾರ್ಖಂಡ್‌ನ ಕುಖಿ ನಿವಾಸಿ ರಾಜೇಶ್ ಕುಮಾರ್ ಸುಮಾರು ಏಳು ವರ್ಷಗಳ ಕಾಲ ಐಎಎಸ್ ಅಧಿಕಾರಿ ಎಂದು ಬಿಂಬಿಸಿಕೊಂಡು ತನ್ನ ಕಾರ್ಯ ನಿರ್ವಹಿಸಿದ್ದಾನೆ. ಇತ್ತೀಚೆಗೆ ಹುಸೈನಾಬಾದ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದ ಆತ ತಾನು 2014 ರ ಬ್ಯಾಚ್ ಒಡಿಶಾ ಕೇಡರ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದನು. ನಾಲ್ಕು ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಅನುತ್ತೀರ್ಣಗೊಂಡಿದ್ದ ರಾಜೇಶ್, ತಂದೆಯನ್ನು ಮೆಚ್ಚಿಸಲು ನಾಗರಿಕ ಸೇವಕನಂತೆ ನಟಿಸಿದ್ದಾಗಿ ತನಿಖೆ ವೇಳೆ ಹೇಳಿಕೊಂಡಿದ್ದಾನೆ.
ಗೋರಖ್‌ಪುರ-ಮುಂಬೈ ರೈಲಿಗೆ ಬಾಂಬ್ ಬೆದರಿಕೆ ಕರೆ; ಅನುಮಾನಾಸ್ಪದ ಬ್ಯಾಗ್ ಬರಿಕೈಯಲ್ಲೇ ಹಿಡಿದು ಹೊರಟ ಪೊಲೀಸ್ ಅಧಿಕಾರಿ
ಭಾರತೀಯ ಅಂಚೆ ಮತ್ತು ದೂರಸಂಪರ್ಕ ಖಾತೆ, ಹಣಕಾಸು ಸೇವೆ ಅಧಿಕಾರಿ ಎಂದು ಹೇಳಿಕೊಂಡು ಸುಮಾರು ಏಳು ವರ್ಷಗಳ ಕಾಲ ಆತ ತನ್ನನ್ನು ತಾನು ಹಿರಿಯ ನಾಗರಿಕ ಸೇವಕ ಎಂದು ಬಿಂಬಿಸಿಕೊಂಡು ಹಲವು ಕಚೇರಿಗಳಿಗೆ ಓಡಾಡಿಕೊಂಡಿದ್ದನು. ಜನವರಿ 2ರಂದು ಭೂ ವಿವಾದಕ್ಕೆ ಸಂಬಂಧಿಸಿ ರಾಜೇಶ್ ಹುಸೈನಾಬಾದ್ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದಾನೆ.
ಈ ವೇಳೆ ತಾನು ಒಡಿಶಾ ಕೇಡರ್‌ನ 2014 ರ ಬ್ಯಾಚ್‌ನ ಐಎಎಸ್ ಅಧಿಕಾರಿ ಎಂದು ಹೇಳಿ, ಪ್ರಸ್ತುತ ಭುವನೇಶ್ವರದಲ್ಲಿ ಮುಖ್ಯ ಲೆಕ್ಕಪತ್ರ ಅಧಿಕಾರಿಯಾಗಿ ಆಗಿ ನೇಮಕಗೊಂಡಿದ್ದೇನೆ ಎಂದು ಹೇಳಿದ್ದಾನೆ. ಅಲ್ಲದೇ ತಾನು ಡೆಹ್ರಾಡೂನ್, ಹೈದರಾಬಾದ್ ನಗರಗಳಲ್ಲಿ ಸೇವೆ ಸಲ್ಲಿಸಿರುವುದಾಗಿ ಕೂಡ ತಿಳಿಸಿದ್ದಾನೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಹಾಗಹಗಲೇ ಚಾಕು ಇರಿತ
ಈ ಬಗ್ಗೆ ಅನುಮಾನಗೊಂಡ ಹುಸೇನಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳು ತನಿಖೆ ನಡೆಸಿ ವಿಚಾರಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಬಳಿಕ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ತನಿಖೆ ವೇಳೆ ಕುಮಾರ್ ಬಳಿ ನಕಲಿ ಗುರುತು ಪತ್ರಗಳಿರುವುದು ಬೆಳಕಿಗೆ ಬಂದಿದೆ. ತಾನೊಬ್ಬ ಯಶಸ್ವಿ ವ್ಯಕ್ತಿಯಾಗಿ ತಂದೆಯೆದುರು ಗುರುತಿಸಲು ಈ ರೀತಿ ಮಾಡಿದ್ದಾಗಿ ಆತ ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆತನ ವಿರುದ್ಧ ಕಾನೂನಿನ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.