ಕರ್ನಾಟಕ ಬಜೆಟ್​ ಮಹಿಳಾ ದಿನಾಚರಣೆ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

UP Horror: ಉತ್ತರ ಪ್ರದೇಶದಲ್ಲಿ ಪತ್ರಕರ್ತನ ಹತ್ಯೆ; ಹೆದ್ದಾರಿಯಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ದುಷ್ಕರ್ಮಿಗಳು

ಉತ್ತರ ಪ್ರದೇಶದ ಸೀತಾಪುರದ ಲಕ್ನೋ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಪತ್ರಕರ್ತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃತ ಪತ್ರಕರ್ತನನ್ನು ರಾಘವೇಂದ್ರ ಬಾಜ್‌ಪೈ ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶದ ಹಿಂದಿ ದಿನಪತ್ರಿಕೆಯ ಸ್ಥಳೀಯ ವರದಿಗಾರ ಹಾಗೂ ಆರ್‌ಟಿಐ ಕಾರ್ಯಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದರು

ಉತ್ತರ ಪ್ರದೇಶದಲ್ಲಿ ಪತ್ರಕರ್ತನ ಹತ್ಯೆ

ಕೊಲೆಯಾದ ಪತ್ರಕರ್ತ

Profile Vishakha Bhat Mar 9, 2025 3:36 PM

ಲಖನೌ: ಉತ್ತರ ಪ್ರದೇಶದ (UP Horror) ಸೀತಾಪುರದ ಲಕ್ನೋ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಶನಿವಾರ ಪತ್ರಕರ್ತನನ್ನು ಗುಂಡಿಕ್ಕಿ ಕೊಲ್ಲಲಾಗಿದೆ. ಮೃತ ಪತ್ರಕರ್ತನನ್ನು ರಾಘವೇಂದ್ರ ಬಾಜ್‌ಪೈ ಎಂದು ಗುರುತಿಸಲಾಗಿದ್ದು, ಉತ್ತರ ಪ್ರದೇಶದ ಹಿಂದಿ ದಿನಪತ್ರಿಕೆಯ ಸ್ಥಳೀಯ ವರದಿಗಾರ ಹಾಗೂ ಆರ್‌ಟಿಐ ಕಾರ್ಯಕರ್ತನಾಗಿ ಕಾರ್ಯ ನಿರ್ವಹಿಸುತ್ತಿದ್ದರು. ವರದಿಯ ಪ್ರಕಾರ, ದುಷ್ಕರ್ಮಿಗಳು ಮೊದಲು ರಾಘವೇಂದ್ರ ಅವರ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ. ವರದಿಗಾರ ಕೆಳಗೆ ಬಿದ್ದ ನಂತರ ಅವರ ಮೇಲೆ ಗುಂಡು ಹಾರಿಸಲಾಗಿದೆ. ಮೊದಲು ಇದನ್ನು ಅಪಘಾತ ಎಂದು ಪರಿಗಣಿಸಲಾಗಿತ್ತು. ಆದರೆ ಶವ ಪರೀಕ್ಷೆಯ ನಂತರ ಇದು ಕೊಲೆ ಎಂದು ತಿಳಿದು ಬಂದಿದೆ.

ಶನಿವಾರ ಮಧ್ಯಾಹ್ನ ಫೋನ್ ಕರೆ ಬಂದ ನಂತರ 35 ವರ್ಷದ ಪತ್ರಕರ್ತ ಮನೆಯಿಂದ ಹೊರಟಿದ್ದರು. ನಂತರ ಸೀತಾಪುರದ ಲಕ್ನೋ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನೊಂದು ಅವರ ಅವರ ಬೈಕಿಗೆ ಡಿಕ್ಕಿ ಹೊಡೆದಿದೆ. ವರದಿಗಾರ ಕೆಳಗೆ ಬಿದ್ದ ನಂತರ ಅವರ ಮೇಲೆ ಗುಂಡು ಹಾರಿಸಲಾಗಿದೆ. ಕೊಲೆಯ ಹಿಂದಿನ ಉದ್ದೇಶವನ್ನು ಪೊಲೀಸರು ಇನ್ನೂ ಪತ್ತೆಹಚ್ಚಿಲ್ಲ. ಇನ್ನೂ ಯಾವುದೇ ಎಫ್‌ಐಆರ್ ದಾಖಲಾಗಿಲ್ಲ. ಪೊಲೀಸರ ಪ್ರಕಾರ, ಆರೋಪಿಗಳನ್ನು ಬಂಧಿಸಲು ನಾಲ್ಕು ತಂಡಗಳನ್ನು ರಚಿಸಲಾಗಿದೆ. ಮಹೋಲಿ, ಇಮಾಲಿಯಾ ಮತ್ತು ಕೊತ್ವಾಲಿಯ ಪೊಲೀಸ್ ತಂಡಗಳು ಆರೋಪಿಗಳನ್ನು ಹುಡುಕುತ್ತಿದ್ದಾರೆ.

ಮರಣೋತ್ತರ ಪರೀಕ್ಷೆಯ ಪ್ರಕಾರ ಮೂರು ಗುಂಡುಗಳು ಅವರ ಭುಜ ಮತ್ತು ಎದೆಗೆ ಹೊಕ್ಕಿವೆ. ಪೊಲೀಸರು ನಿವಾಸಿಗಳ ಸಹಾಯದಿಂದ ಬಾಜ್ಪೈ ಅವರನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಿದರು ಎಂದು ಸೀತಾಪುರದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‌ಪಿ) ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ. ಇತ್ತೀಚಿನ ದಿನಗಳಲ್ಲಿ ಬಾಜ್ಪೈ ಅವರಿಗೆ ಬೆದರಿಕೆ ಫೋನ್ ಕರೆಗಳು ಬಂದಿವೆ ಎಂದು ಅವರ ಕುಟುಂಬ ಮಾಧ್ಯಮಗಳಿಗೆ ತಿಳಿಸಿದೆ.

ಈ ಸುದ್ದಿಯನ್ನೂ ಓದಿ: Viral Video: ನಡುರಸ್ತೆಯಲ್ಲಿ ಪತ್ರಕರ್ತೆಗೆ ಕಿರುಕುಳ ನೀಡಿದ ಕಿಡಿಗೇಡಿಗಳು; ಕೊನೆಗೆ ಆಗಿದ್ದೇನು?

ಛತ್ತೀಸ್‌ಗಡದಲ್ಲಿ ಗುತ್ತಿಗೆದಾರನೊಬ್ಬನ ಬ್ರಹ್ಮಾಂಡ ಭ್ರಷ್ಟಾಚಾರ ಬಯಲಿಗೆಳೆದಿದ್ದ 28 ವರ್ಷದ ಪತ್ರಕರ್ತ ಮುಖೇಶ್‌ ಚಂದ್ರಕಾರ್ ಎಂಬುವವರನ್ನು ಕೊಲೆ ಮಾಡಲಾಗಿದೆ. . ಜನವರಿ 1ರಿಂದ ನಾಪತ್ತೆಯಾಗಿದ್ದ ಹವ್ಯಾಸಿ ಪತ್ರಕರ್ತ ಮುಕೇಶ್ ಚಂದ್ರಕಾರ್ ಮೃತದೇಹ ಬಿಜಾಪುರ್ ಜಿಲ್ಲೆಯ ಚಟ್ಟನಪರ ಬಸ್ತಿಯಲ್ಲಿ ಪತ್ತೆ ಮಾಡಲಾಗಿದೆ. ಗುತ್ತಿಗೆದಾರ ಸುರೇಶ್ ಚಂದ್ರಕಾರ್ ಎಂಬಾತನ ಅಕ್ರಮಗಳ ವಿರುದ್ಧ ತನಿಖಾ ವರದಿಗಳನ್ನು ಪ್ರಕಟಿಸಿದ್ದ ಮುಕೇಶ್, ಬಸ್ತಾರ್‌ನಲ್ಲಿನ 120 ಕೋಟಿ ರೂ ಮೊತ್ತದ ರಸ್ತೆ ನಿರ್ಮಾಣ ಯೋಜನೆಯಲ್ಲಿ ಭಾರಿ ಅವ್ಯವಹಾರ ನಡೆದಿರುವುದನ್ನು ಬಯಲಿಗೆಳೆದಿದ್ದರು. ಈ ವರದಿಯು ಗುತ್ತಿಗೆದಾರನ ಚಟುವಟಿಕೆಗಳ ಕುರಿತಂತೆ ತನಿಖೆ ನಡೆಸಲು ಆದೇಶಿಸಲು ಸರ್ಕಾರದ ಮೇಲೆ ಒತ್ತಡ ಹೇರಲು ಯಶಸ್ವಿಯಾಗಿತ್ತು. ಅದೇ ಕಾರಣಕ್ಕೆ ಪತ್ರಕರ್ತನನ್ನು ಕೊಲೆ ಮಾಡಲಾಗಿದೆ.