Viral Video: ನಡುರಸ್ತೆಯಲ್ಲಿ ಪತ್ರಕರ್ತೆಗೆ ಕಿರುಕುಳ ನೀಡಿದ ಕಿಡಿಗೇಡಿಗಳು; ಕೊನೆಗೆ ಆಗಿದ್ದೇನು?
ಸೂರ್ಯಾಂಶಿ ಪಾಂಡೆ ಎಂಬ ಪತ್ರಕರ್ತೆ ಸೋಮವಾರ (ಫೆಬ್ರವರಿ 17) ರಾತ್ರಿ 10: 30 ರ ಸುಮಾರಿಗೆ ಲಜಪತ್ ನಗರದಿಂದ ಮನೆಗೆ ಹಿಂದಿರುಗುವಾಗ ಯುವಕರ ಗುಂಪೊಂದು ಕಿರುಕುಳ ನೀಡಿದೆಯಂತೆ. ಈ ಘಟನೆಯ ಕುರಿತು ಆಕೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಈ ವಿಡಿಯೊ ಭಾರೀ ವೈರಲ್(Viral Video) ಆಗಿದೆ.

harassments case

ನವದೆಹಲಿ: ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಮೇಲೆ ನಡೆಯುವ ದೌರ್ಜನ್ಯ, ಕಿರುಕುಳ ಪ್ರಕರಣಗಳು ಆಗಾಗ ವರದಿಯಾಗುತ್ತಿರುತ್ತದೆ. ಇತ್ತೀಚೆಗೆ ಸೂರ್ಯಾಂಶಿ ಪಾಂಡೆ ಎಂಬ ಪತ್ರಕರ್ತೆ ಸೋಮವಾರ (ಫೆಬ್ರವರಿ 17) ರಾತ್ರಿ 10: 30 ರ ಸುಮಾರಿಗೆ ಲಜಪತ್ ನಗರದಿಂದ ಸಂತ ನಗರಕ್ಕೆ ಮನೆಗೆ ಹಿಂದಿರುಗುವಾಗ ಯುವಕರಿಂದ ಕಿರುಕುಳವನ್ನು ಅನುಭವಿಸಿದ್ದು, ಈ ಘಟನೆಯ ಕುರಿತು ಆಕೆ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾಳೆ. ಇದು ಸಿಕ್ಕಾಪಟ್ಟೆ ವೈರಲ್(Viral Video) ಆಗಿದೆ. ಜೊತೆಗೆ ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರು ಎದುರಿಸುತ್ತಿರುವ ಕಿರುಕುಳದ ವಿರುದ್ಧ ಮಾತನಾಡಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ.
ನಡೆದಿದ್ದೇನು?
ಪತ್ರಕರ್ತೆ ಮನೆಗೆ ಹಿಂತಿರುಗುವಾಗ ಕಾರಿನಲ್ಲಿದ್ದ ಯುವಕರ ಗುಂಪು ಆಕೆಯ ಜೊತೆ ಅನುಚಿತವಾಗಿ ವರ್ತಿಸಿತಂತೆ. ಕಾರಿನಲ್ಲಿ ಕುಳಿತಿದ್ದ ಯುವಕರು ಅವಳನ್ನು ಕರೆದು ತಮ್ಮ ಬಳಿಗೆ ಬರಲು ಹೇಳಿದ್ದಾರಂತೆ. ರಾಷ್ಟ್ರ ರಾಜಧಾನಿಯಲ್ಲಿ ಮಹಿಳೆಯರ ಸುರಕ್ಷತೆಯನ್ನು ಆಕೆ ಪ್ರಶ್ನಿಸಿದ್ದಾಳೆ. ಹಾಗೇ ಮಹಿಳೆಯರು ಬುರ್ಖಾ, ಮೈ ಮುಚ್ಚುವ ಉದ್ದದ ಬಟ್ಟೆ ಅಥವಾ ಬಿಕಿನಿ ಧರಿಸಿದ್ರೂ ಕಿರುಕುಳ ಎದುರಿಸುವುದು ಮಾತ್ರ ತಪ್ಪಲ್ಲ ಎಂದು ಹೇಳಿದ್ದಾಳೆ.
ಅವಳ ಪೋಸ್ಟ್ ವೈರಲ್ ಆಗಿದ್ದು, ದೆಹಲಿಯಲ್ಲಿ ಮಹಿಳೆಯರ ಸುರಕ್ಷತೆ ಮತ್ತು ರಸ್ತೆಯಲ್ಲಿ ಕಿರುಕುಳದ ನಿರಂತರ ಸಮಸ್ಯೆಯ ಬಗ್ಗೆ ಚರ್ಚೆಯನ್ನು ಹುಟ್ಟುಹಾಕಿದೆ. ಅನೇಕ ನೆಟ್ಟಿಗರು ಆಕೆಗೆ ಬೆಂಬಲವನ್ನು ವ್ಯಕ್ತಪಡಿಸಿದ್ದಾರೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ. ಈ ಘಟನೆಯು ಭಾರತದಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಮತ್ತೊಮ್ಮೆ ಕಳವಳವನ್ನು ಹುಟ್ಟುಹಾಕುತ್ತದೆ. ಭಾರತದಲ್ಲಿ ವಿವಿಧ ಕಾನೂನುಗಳು ಮತ್ತು ಜಾಗೃತಿ ಅಭಿಯಾನಗಳ ಹೊರತಾಗಿಯೂ, ಸಾರ್ವಜನಿಕ ಸ್ಥಳಗಳು ಅನೇಕರಿಗೆ ಅಸುರಕ್ಷಿತವಾಗಿವೆ ಎನ್ನಲಾಗಿದೆ.
ಹಾಗೇ ಈ ಸಂಬಂಧ ಮಹಿಳೆ ಪೊಲೀಸರಿಗೆ ದೂರು ನೀಡಿದ್ದು, ಪೊಲೀಸರು ದೂರು ದಾಖಲಿಸಿಕೊಂಡಿದ್ದರೂ ಇನ್ನೂ ಯಾರನ್ನೂ ಬಂಧಿಸಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Viral Video: ಬಸ್‌ನಲ್ಲಿ ಲೈಂಗಿಕ ಕಿರುಕುಳ ನೀಡಿದ ಕಿಡಿಗೇಡಿಗೆ ಬರೋಬ್ಬರಿ 26 ಬಾರಿ ಕಪಾಳಮೋಕ್ಷ ಮಾಡಿದ ಮಹಿಳೆ; ವಿಡಿಯೊ ಭಾರೀ ವೈರಲ್
ಬಸ್, ರೈಲು, ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡುವ ಪ್ರಕರಣ ಹೆಚ್ಚಾಗುತ್ತಿದೆ. ಕೆಲವು ಮಹಿಳೆಯರು ಮರ್ಯಾದೆಗೆ ಅಂಜಿ ಈ ಬಗ್ಗೆ ಸುಮ್ಮನಾದರೆ ಇನ್ನೂ ಕೆಲವರು ಕಿರುಕುಳ ನೀಡಿದ ವ್ಯಕ್ತಿಯನ್ನು ಧೈರ್ಯದಿಂದ ಎದುರಿಸುತ್ತಾರೆ. ಇದೀಗ ಅಂತಹದೊಂದು ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ. ಚಲಿಸುತ್ತಿರುವ ಬಸ್ಸಿನಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿಯೊಬ್ಬ ಮಹಿಳೆಯೊಬ್ಬಳಿಗೆ ಲೈಂಗಿಕ ಕಿರುಕುಳ ನೀಡಿದ್ದು, ಆ ಮಹಿಳೆ ಆತನನ್ನು ಬಸ್ಸಿನಲ್ಲಿ ಎಲ್ಲರ ಮುಂದೆ ಹಿಗ್ಗಾಮಗ್ಗಾ ಥಳಿಸಿದ್ದಾರೆ.
ವೈರಲ್ ವಿಡಿಯೊದಲ್ಲಿ ಕುಡಿದ ಮತ್ತಿನಲ್ಲಿದ್ದ ವ್ಯಕ್ತಿ ಮಹಿಳೆಯನ್ನು ಅನುಚಿತವಾಗಿ ಸ್ಪರ್ಶಿಸಲು ಪ್ರಯತ್ನಿಸಿದ್ದಾನೆ. ಆಗ ಕೋಪಗೊಂಡ ಮಹಿಳೆ ವ್ಯಕ್ತಿಗೆ ಒಂದು ಅಥವಾ ಎರಡು ಬಾರಿ ಅಲ್ಲ. 26ಕ್ಕೂ ಹೆಚ್ಚು ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ವಿಡಿಯೊದಲ್ಲಿ ವ್ಯಕ್ತಿ ತನ್ನ ಕೃತ್ಯಗಳಿಗೆ ಕ್ಷಮೆಯಾಚಿಸುವಾಗ ಮಹಿಳೆ ವ್ಯಕ್ತಿಗೆ ಪದೇ ಪದೇ ಕಪಾಳಮೋಕ್ಷ ಮಾಡಿದ್ದಾರೆ. ಗಲಾಟೆಯ ಹೊರತಾಗಿಯೂ, ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರು ಮಧ್ಯಪ್ರವೇಶಿಸಲಿಲ್ಲ, ಮಹಿಳೆಗೆ ಕಪಾಳಮೋಕ್ಷ ಮಾಡುವುದನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರು. ಅಂತಿಮವಾಗಿ, ಕಂಡಕ್ಟರ್ ಮಧ್ಯಪ್ರವೇಶಿಸಿ ಸಮಾಧಾನ ಮಾಡಲು ಮುಂದಾಗಿದ್ದಾರೆ. ಆದರೆ ಮಹಿಳೆ ಬಸ್ ಅನ್ನು ಹತ್ತಿರದ ಪೊಲೀಸ್ ಠಾಣೆಗೆ ಕರೆದೊಯ್ಯಬೇಕೆಂದು ಒತ್ತಾಯಿಸಿದ್ದಾರೆ.