Kerala Horror: 5 ವರ್ಷದ ಹಿಂದೆ ಮಹಿಳೆಯ ಹತ್ಯೆ... ಜಾಮೀನು ಪಡೆದು ಗಂಡ ಮತ್ತು ಅತ್ತೆಯನ್ನು ಕೊಲೆಗೈದ ಸೈಕೋ ಕಿಲ್ಲರ್!
ಐದು ವರ್ಷದ ಹಿಂದೆ ಮಹಿಳೆಯ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿದ್ದ ಆರೋಪಿಯೋರ್ವ ಜಾಮೀನು ಪಡೆದು ಹೊರಬಂದು ಮಹಿಳೆಯ ಗಂಡ ಮತ್ತು ಆಕೆಯ ಅತ್ತೆಯನ್ನು ಕೊಲೆಗೈದಿರುವ ಘಟನೆ ಕೇರಳದಲ್ಲಿ ನಡೆದಿದೆ. ಇನ್ನು ಜೋತಿಷಿಯ ಮಾತು ನಂಬಿ 2019ರಲ್ಲಿ ಹಂತಕ ಮಹಿಳೆಯನ್ನು ಕೊಲೆಗೈದಿದ್ದ ಎನ್ನಲಾಗಿದೆ.

Kerala Horror

ತಿರುವನಂತಪುರಂ: ಮಹಿಳೆಯ ಕೊಲೆ ಪ್ರಕರಣದಲ್ಲಿ ಜೈಲುಪಾಲಾಗಿರುವ ಹಂತಕನೋರ್ವ ಜಾಮೀನು ಪಡೆದು ಹೊರಬಂದು ಆಕೆಯ ಪತಿ ಮತ್ತು ಅತ್ತೆಯನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕೇರಳದಲ್ಲಿ ನಡೆದಿದೆ. ಪಾಲಕ್ಕಾಡ್‌ನ ಪೋತುಂಡಿಯಲ್ಲಿರುವ ಈ ಜೋಡಿ ಕೊಲೆ ನಡೆದಿದ್ದು, 72 ವರ್ಷದ ವಯೋ ವೃದ್ಧ ಮಹಿಳೆ ಮತ್ತು ಆಕೆಯ 53 ವರ್ಷದ ಮಗನನ್ನುಆರೋಪಿ ಚೆಂತಾಮಾರ ಭೀಕರವಾಗಿ ಕೊಲೆ(Kerala Horror) ಮಾಡಿದ್ದಾನೆ. ಇನ್ನು ಕೊಲೆಯಾದ ದುರ್ದೈವಿಗಳನ್ನು ಲಕ್ಷ್ಮಿ ಮತ್ತು ಆಕೆಯ ಮಗ ಸುಧಾಕರನ್ ಎಂದು ಗುರುತಿಸಲಾಗಿದೆ. ಇದೀಗ ಆರೋಪಿ ಚೆಂತಾಮಾರನನ್ನು ಹೆಡೆಮುರಿಕಟ್ಟುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಚೆಂತಾಮಾರನನ್ನು(Chenthamara) ನೆನ್ಮಾರ( Nenmara) ಪೊಲೀಸ್ ಠಾಣೆಗೆ ಕರೆದೊಯ್ಯುವ ದೃಶ್ಯಗಳು ಸೆರೆ ಸಿಕ್ಕಿವೆ. ಈ ಹಿಂದೆ 2019ರಲ್ಲಿ ಸುಧಾಕರನ್ ಅವರ ಪತ್ನಿಯ ಕೊಲೆ ಪ್ರಕರಣದಲ್ಲಿ ಬಂಧಿತನಾಗಿದ್ದ. ಬಳಿಕ ಜಾಮೀನಿನ ಮೇಲೆ ಹೊರಗಿದ್ದನು ಎಂದು ಮೂಲಗಳು ತಿಳಿಸಿವೆ.
ಏನಿದು ಘಟನೆ?
ಚೆಂತಾಮಾರ ಸೋಮವಾರ(ಜ.27) ಬೆಳಗ್ಗೆ ಪೋತುಂಡಿಯಲ್ಲಿರುವ ತನ್ನ ಮನೆಯ ಹೊರಗೆ ಲಕ್ಷ್ಮಿ ಮತ್ತು ಆಕೆಯ ಮಗ ಸುಧಾಕರನ್‌ನನ್ನು ದಾರುಣವಾಗಿ ಕೊಲೆ ಮಾಡಿದ್ದಾನೆ. ಸುಧಾಕರನ್ ಕುಟುಂಬದ ಮೇಲಿನ ಹಳೆಯ ದ್ವೇಷದಿಂದಾಗಿ ಈ ಕೃತ್ಯ ಎಸಗಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಚೆಂತಾಮಾರ ತನ್ನ ಪತ್ನಿ ಮತ್ತು ಮಕ್ಕಳನ್ನು ತೊರೆದು ಹಲವು ವರ್ಷಗಳಾಗಿವೆ ಎನ್ನಲಾಗಿದೆ. ಸಂತ್ರಸ್ತರ ಶವಗಳನ್ನು ಅದೇ ದಿನ ಅಂತ್ಯಸಂಸ್ಕಾರ ಮಾಡಲಾಗಿದೆ.
Murderer Chenthamara arrested; Police team nabs Nenmara double murder suspect from Pothundi Hill
— Anisha (@Anisha_Annamala) January 28, 2025
https://t.co/4U77PXrRxQ pic.twitter.com/tI5pImB3PB
ಚೆಂತಾಮಾರನಿಗೆ ಸುಧಾಕರ್ ಕುಟುಂಬದ ಮೇಲೆ ಹಳೆಯ ದ್ವೇಷವಿತ್ತು ಎಂದು ತಿಳಿದು ಬಂದಿದೆ. ಈತ 2019ರಲ್ಲಿ ಸುಧಾಕರ್‌ನ ಪತ್ನಿಯನ್ನು ಭಯಾನಕವಾಗಿ ಕೊಲೆ ಮಾಡಿ ಜೈಲು ಸೇರಿದ್ದನು. ಇತ್ತೀಚೆಗಷ್ಟೇ ಅವನಿಗೆ ನ್ಯಾಯಾಲಯವು ಷರತ್ತುಬದ್ಧ ಜಾಮೀನನ್ನು ನೀಡಿತ್ತು. ಆದರೆ ಜಾಮೀನಿನ ಮೇಲೆ ಹೊರಬಂದ ಕೆಲವೇ ದಿನಗಳಲ್ಲಿ ಜೋಡಿ ಕೊಲೆ ಮಾಡಿದ್ದಾನೆ. ಈ ಕೃತ್ಯವು ಸ್ಥಳೀಯ ನಿವಾಸಿಗಳಲ್ಲಿ ಆತಂಕ ಸೃಷ್ಟಿಸಿದೆ. ಕೃತ್ಯ ಎಸಗಿದ ಬಳಿಕ ಚೆಂತಾಮಾರ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ: Crime News: ತನ್ನ ಸಹಪಾಠಿಯನ್ನು ಅತ್ಯಾಚಾರ ಮಾಡಿ ಕೊಲೆ ಮಾಡಲು ಸುಪಾರಿ ಕೊಟ್ಟ 7ನೇ ತರಗತಿ ವಿದ್ಯಾರ್ಥಿ!
ಜ್ಯೋತಿಷಿಯ ಮಾತು ನಂಬಿ ಕೊಲೆ ಮಾಡಿದ್ನಾ?
ಇನ್ನು ಚೆಂತಾಮಾರ ಹಲವು ವರ್ಷಗಳ ಹಿಂದೆಯೇ ಪತ್ನಿ ಮತ್ತು ಮಗುವಿನಿಂದ ದೂರ ಆಗಿದ್ದ. ತನ್ನ ಕುಟುಂಬ ಈ ರೀತಿ ಛಿದ್ರ ಆಗಿರುವ ಬಗ್ಗೆ ತೀರ ಬೇಸರಗೊಂಡಿದ್ದ. ಹೀಗಾಗಿ ಆತ ಜ್ಯೋತಿಷಿಯ ಮೊರೆ ಹೋಗಿದ್ದ. ಉದ್ಧ ಕೂದಲಿರುವ ನೆರೆ ಮನೆಯ ಮಹಿಳೆಯಿಂದಲೇ ಕುಟುಂಬ ಹಾಳಾಗಿದೆ ಎಂದು ಹೇಳಿದ್ದಾನೆ. ಇದನ್ನು ನಂಬಿದ ಚೆಂತಾಮಾರ 2019ರಲ್ಲಿ ಸುಧಾಕರ್‌ನ ಪತ್ನಿಯನ್ನು ಕೊಲೆಗೈದಿದ್ದ. ಬಳಿಕ ಆತನನ್ನು ಅರೆಸ್ಟ್ ಮಾಡಲಾಗಿತ್ತು.
ಇನ್ನು ನೆನ್ಮಾರ ಪೊಲೀಸರ ನಿರ್ಲಕ್ಷ್ಯವೇ ಈ ಕೊಲೆಗೆ ಕಾರಣ ಎಂದು ಕಾಂಗ್ರೆಸ್ ಪಕ್ಷ ಮತ್ತು ಸುಧಾಕರನ್ ಮಕ್ಕಳು ಆಕ್ರೋಶ ಹೊರ ಹಾಕಿದ್ದಾರೆ. ಜಾಮೀನು ನಿಯಮಗಳನ್ನು ಉಲ್ಲಂಘಿಸಿದ ಚೆಂತಾಮಾರ ಗ್ರಾಮಕ್ಕೆ ಮರಳಿರುವ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ದೂರಿದ್ದಾರೆ. ಷರತ್ತುಬದ್ಧ ಜಾಮೀನಿನ ಮೇಲೆ ಹೊರಗಿದ್ದ ಚೆಂತಾಮಾರನನ್ನು ವಿಚಾರಣೆಗೆ ಒಳಪಡಿಸಲಾಗಿದೆ.