ಇದೆಂಥ ದುರಂತ? ಕೋಟಿ ರುಪಾಯಿ ಕೊಟ್ಟು ಖರೀದಿಸಿದ ಕನಸಿನ ಮನೆ ಜಲಾವೃತ: ಬಿಲ್ಡರ್ ಭ್ರಷ್ಟಾಚಾರಕ್ಕೆ ದೆಹಲಿ ಕುಟುಂಬ ಬೇಸರ
Viral Video: ಜೀವಮಾನದಲ್ಲಿ ದುಡಿದ ಹಣವನ್ನೆಲ್ಲ ಉಳಿತಾಯ ಮಾಡಿ, ಇಲ್ಲವೇ ಸಾಲ ಮಾಡಿಯಾದರೂ ಸ್ವಂತ ಮನೆ ನಿರ್ಮಾಣ ಮಾಡುವವರು ಇದ್ದಾರೆ. ಆದರೆ ಇಷ್ಟೆಲ್ಲ ಶ್ರಮಪಟ್ಟ ಮನೆಯಲ್ಲಿ ಕಳಪೆ ಕಾಮಗಾರಿ ನಡೆದರೆ ಹೇಗಾಗಬೇಡ ಅಲ್ಲವೆ? ದೆಹಲಿಯ ಕುಟುಂಬವೊಂದು ಕೋಟ್ಯಂತರ ರುಪಾಯಿ ಹೂಡಿಕೆ ಮಾಡಿ ಖರೀದಿಸಿದ ಮನೆಯೊಂದರಿಂದ ನೀರು ಜಲಧಾರೆಯಂತೆ ಸುರಿದಿದೆ. ಫ್ಲಾಟ್‌ನ ಮೇಲ್ಛಾವಣಿ ಒಡೆದು ಮನೆಯೊಳಗೇ ನೀರು ತುಂಬಿಕೊಂಡಿದೆ.
ಕಳಪೆ ಕಾಮಗಾರಿಯಿಂದ ಸೋರುತ್ತಿರುವ ದುಬಾರಿ ವೆಚ್ಚದ ಮನೆ -
ನವದೆಹಲಿ, ಜು. 22: ಸ್ವಂತ ಮನೆ ಖರೀದಿ ಮಾಡೋದು ಎಲ್ಲರ ಕನಸು. ಜೀವಮಾನದಲ್ಲಿ ದುಡಿದ ಹಣವನ್ನೆಲ್ಲ ಉಳಿತಾಯ ಮಾಡಿ, ಇಲ್ಲವೇ ಸಾಲ ಮಾಡಿಯಾದರೂ ಸ್ವಂತ ಮನೆ ನಿರ್ಮಾಣ ಮಾಡುವವರು ಇದ್ದಾರೆ. ಆದರೆ ಇಷ್ಟೆಲ್ಲ ಶ್ರಮ ಪಟ್ಟ ಮನೆಯಲ್ಲಿ ಕಳಪೆ ಕಾಮಗಾರಿ ನಡೆದರೆ ಹೇಗಾಗಬೇಡ ಅಲ್ಲವೆ? ಇದೀಗ ದೆಹಲಿಯ ಕುಟುಂಬವೊಂದು ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಿ ಖರೀದಿ ಮಾಡಿದ ಮನೆಯೊಂದು ಸೋರಿದೆ. ಫ್ಲಾಟ್‌ನ ಮೇಲ್ಛಾವಣಿ ಒಡೆದು ಮನೆಯೊಳಗೇ ನೀರು ತುಂಬಿಕೊಂಡಿದೆ. ನೀರಿನ ನಿರಂತರ ಹರಿವಿನಿಂದ ಸೀಲಿಂಗ್ ಮತ್ತು ಗೋಡೆಗಳು ಹಾನಿಗೆ ಒಳಗಾಗಿವೆ. ಸದ್ಯ ಈ ವಿಚಾರ ವೈರಲ್ (Viral News) ಆಗಿದೆ.
ಕೆಲಸ ಮುಗಿಸುವ ಉದ್ದೇಶದಿಂದ ಅಥವಾ ಹೆಚ್ಚು ಲಾಭಗಳಿಸುವ ನಿಟ್ಟಿನಲ್ಲಿ ಬಿಲ್ಡರ್‌ಗಳು ಕಳಪೆ ವಸ್ತುಗಳನ್ನು ಬಳಸಿ ಇಡೀ ಮನೆಯನ್ನು ನಿರ್ಮಿಸಿದ್ದಾರೆ. ಇದರಿಂದ ಫ್ಲ್ಯಾಟ್‌ನ ಚಾವಣಿ ಮೂಲಕ ಇದ್ದಕ್ಕಿದ್ದಂತೆ ನೀರು ಸುರಿಯಲು ಪ್ರಾರಂಭಿಸಿದೆ. 13ನೇ ಮಹಡಿಯಲ್ಲಿರುವ ಫ್ಲ್ಯಾಟ್‌ಗೆ ಸಂಪರ್ಕ ಹೊಂದಿದ್ದ ಫೈರ್ ಅಲಾರ್ಮ್ ಪೈಪ್‌ಲೈನ್ ಇದ್ದಕ್ಕಿದ್ದಂತೆ ಒಡೆದಿದೆ. ಪರಿಣಾಮವಾಗಿ, ಕೆಳಗಿನ ಫ್ಲ್ಯಾಟ್‌ಗೆ ನೀರು ಸುರಿದಿದೆ.
ವಿಡಿಯೊ ನೋಡಿ:
कितने दुर्भाग्य की बात है कि इंसान अपने पूरे जीवन की पूंजी लगाकर लगभग ₹1.5 से ₹2
— SanjuGoyal01 (@SanjuGoyel) July 21, 2026
Cr खर्च करके जब घर खरीदना है तो उसके साथ इस तरह से हो रहा है
दरअसल Fire alarm pipe का काम इतना घटिया तरीके से किया जाता है कि एकदम से पाइप टूट गया और पूरे घर का फर्नीचर भी खराब हो गया
घटना मेरी… pic.twitter.com/rHnDbuooJ5
ವೈರಲ್ ಆದ ವಿಡಿಯೊದಲ್ಲಿ ಬೆಡ್‌ರೂಂ ಸಂಪೂರ್ಣವಾಗಿ ಜಲವೃತಗೊಂಡಿದ್ದು ಪೀಠೋಪಕರಣಗಳು ಮತ್ತು ಇತರ ವಸ್ತುಗಳಿಗೆ ಹಾನಿಯಾಗಿದೆ. ಲಕ್ಷಾಂತರ ರುಪಾಯಿ ಬೆಲೆಬಾಳುವ ಸೋಫಾ, ಟೇಬಲ್ ಸೇರಿ ಇಡೀ ಗೃಹೋಪಯೋಗಿ ವಸ್ತುಗಳು ನೀರಿನಲ್ಲಿ ಮುಳುಗಿವೆ. ಕಳಪೆ ಗುಣಮಟ್ಟದ ಪೈಪ್‌ಲೈನ್ ಕೆಲಸದಿಂದಾಗಿ ಪೈಪ್ ಹಾನಿಯಾಗಿ ಅಪಾರ್ಟ್ ಮೆಂಟ್ ಒಳಗೆ ನೀರು ಬರುತ್ತಿದೆ ಎಂದು ಕುಟುಂಬವು ದೂರಿದೆ. ಈ ಫ್ಲಾಟ್ ಖರೀದಿಸಲು ಮಾಲಕರು 1.5 ಕೋಟಿ ರುಪಾಯಿಯಿಂದ 2 ಕೋಟಿ ರುಪಾಯಿವರೆಗೆ ಖರ್ಚು ಮಾಡಿದೆ ಎಂದು ಬೇಸರ ವ್ಯಕ್ತ ಪಡಿಸಿದ್ದಾರೆ.
ಮಲಗಿದ್ದ ಮಕ್ಕಳ ನಡುವೆ ಕಾಣಿಸಿಕೊಂಡ ಬೃಹತ್ ನಾಗರಹಾವು
ಸಂಜು ಗೋಯಲ್ ಈ ಪೋಸ್ಟ್ ಶೇರ್ ಮಾಡಿದ್ದು, ʼʼಜನರು ಕಷ್ಟಪಟ್ಟು ದುಡಿದ ಹಣದಲ್ಲಿ ಮನೆ ಖರೀದಿಸಿ ಈ ಪರಿಸ್ಥಿತಿ ಉಂಟಾಗುವುದು ಬೇಸರದ ವಿಚಾರ. ಬೀಲ್ಡರ್‌ಗಳ ಕಳಪೆ ಕಾಮಗಾರಿ ಹಾಗೂ ಭ್ರಷ್ಟಾಚಾರವೇ ಕಾರಣʼʼ ಎಂದು ಬರೆದಿದ್ದಾರೆ. ಸದ್ಯ ನಿರ್ವಹಣಾ ಸಂಸ್ಥೆಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ನಾನಾ ರೀತಿಯಲ್ಲಿ ಕಮೆಂಟ್ ಮಾಡಿದ್ದಾರೆ. ಒಬ್ಬರು. ʼʼನಿರ್ಮಾಣದಲ್ಲಿ ನಿರ್ಲಕ್ಷ್ಯ ಅಥವಾ ಕಳಪೆ ಗುಣಮಟ್ಟದ ವಸ್ತುಗಳ ಬಳಕೆ ಮಾಡಿದ್ದರೆ ನ್ಯಾಯಯುತ ತನಿಖೆ ನಡೆಸಬೇಕುʼʼ ಎಂದಿದ್ದಾರೆ. ಮತ್ತೊಬ್ಬರು "ಇದು ಭ್ರಷ್ಟಾಚಾರದ ಮತ್ತೊಂದು ರೂಪ" ಎಂದು ಟೀಕಿಸಿದ್ದಾರೆ.