ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ವೀಕ್‌ ಡೇಸ್‌ನಲ್ಲಿ ಕನ್ನಡ ಪ್ರೊಫೆಸರ್, ವೀಕೆಂಡ್‌ನಲ್ಲಿ ಕಿಲಾಡಿ ಕಳ್ಳಿ; 32 ಲಕ್ಷ ಮೌಲ್ಯದ ಚಿನ್ನ, ನಗದು ಕಳ್ಳತನ!

ಬೆಂಗಳೂರಿನ ಬೆಳ್ಳಂದೂರು ಬಳಿಯ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿದ್ದ ಆರೋಪಿ, ವಾರಪೂರ್ತಿ ಪಾಠ ಮಾಡುತ್ತಿದ್ದಳು. ಆದರೆ ಭಾನುವಾರ ಮಾತ್ರ ಸಂಬಂಧಿಕರ ರೀತಿಯಲ್ಲಿ ಕಲ್ಯಾಣ ಮಂಟಪ ಪ್ರವೇಶಿಸಿ, ನಗದು ಮತ್ತು ಚಿನ್ನಾಭರಣ ಕದಿಯುತ್ತಿದ್ದಳು.

ಈಕೆ ವೀಕ್‌ ಡೇಸ್‌ನಲ್ಲಿ ಕನ್ನಡ ಪ್ರೊಫೆಸರ್, ವೀಕೆಂಡ್‌ನಲ್ಲಿ ಕಿಲಾಡಿ ಕಳ್ಳಿ!

ಬಂಧಿತ ಆರೋಪಿ ಪ್ರೊಫೆಸರ್‌ ರೇವತಿ. -

Prabhakara R
Prabhakara R Dec 23, 2025 9:17 PM

ಬೆಂಗಳೂರು: ಶುಭ ಸಮಾರಂಭಗಳಿಗೆ ನೆಂಟರಂತೆ ಹೋಗಿ ನಗದು, ಚಿನ್ನಾಭರಣ ಕದಿಯುತ್ತಿದ್ದ ಕಿಲಾಡಿ ಮಹಿಳೆಯನ್ನು ಬಸವನಗುಡಿ ಪೊಲೀಸರು ಬಂಧಿಸಿದ್ದಾರೆ. ಕೆ.ಆರ್.ಪುರಂ ನಿವಾಸಿಯಾದ ಪ್ರೊಫೆಸರ್‌ ರೇವತಿ ಬಂಧಿತ ಆರೋಪಿ. ಕಿಲಾಡಿ ಮಹಿಳೆಯು ವಾರದ ದಿನಗಳಲ್ಲಿ ಪ್ರೊಫೆಸರ್ ಹಾಗೂ ವಾರಾಂತ್ಯದಲ್ಲಿ ಖರ್ತನಾಕ್ ಕಳ್ಳಿಯಾಗಿ ಬದಲಾಗುತ್ತಿದ್ದಳು. ಸಿಕ್ಕ ಸಿಕ್ಕ ಕಲ್ಯಾಣ ಮಂಟಪ, ಕಾರ್ಯಕ್ರಮ ಪ್ರವೇಶಿಸಿ ಹೊಟ್ಟೆ ತುಂಬಾ ತಿಂದು, ನಗದು ಹಾಗೂ ಚಿನ್ನಾಭರಣ ದೋಚಿ ಪರಾರಿಯಾಗುತ್ತಿದ್ದಳು.

ಮೂಲತ: ಶಿವಮೊಗ್ಗ ಮೂಲದ ರೇವತಿ ಬೆಂಗಳೂರಿನ ಕೆ.ಆರ್.ಪುರಂ ನಲ್ಲಿ ವಾಸವಾಗಿದ್ದಳು. ಬೆಳ್ಳಂದೂರು ಬಳಿಯ ಖಾಸಗಿ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಕನ್ನಡ ಪ್ರೊಫೆಸರ್ ಆಗಿರುವ ಆರೋಪಿ, ವಾರಪೂರ್ತಿ ಪಾಠ ಮಾಡುತ್ತಿದ್ದಳು. ಆದರೆ ಭಾನುವಾರ ಮಾತ್ರ ಸಂಬಂಧಿಕರ ರೀತಿಯಲ್ಲಿ ಕಲ್ಯಾಣ ಮಂಟಪ ಪ್ರವೇಶಿಸುತ್ತಿದ್ದಳು. ಅನುಮಾನ ಬಾರದಂತೆ ಎಲ್ಲರನ್ನೂ ಮಾತಾಡಿಸಿ, ನಗದು, ಚಿನ್ನಾಭರಣ ಎಗರಿಸುತ್ತಿದ್ದಳು.

ಚಿಕ್ಕಬಳ್ಳಾಪುರದ ಜ್ಯುವೆಲ್ಲರಿ ಶಾಪ್‌ನಲ್ಲಿ ಕಳ್ಳರ ಕರಾಮತ್ತು; 3 ಕೋಟಿ ಮೌಲ್ಯದ 140 ಕೆ.ಜಿ ಬೆಳ್ಳಿ ಆಭರಣ ಕಳವು

ಕಳೆದ ನವೆಂಬರ್ 25 ರಂದು ಬಸವನಗುಡಿಯ ದ್ವಾರಕನಾಥ್ ಕಲ್ಯಾಣಮಂಟಪದಲ್ಲಿ ಈಕೆ ಸಂಬಂಧಿಕರ ರೀತಿ ತೆರಳಿ, ಮದುವೆ ಮನೆಯವರ ಚಿನ್ನಾಭರಣ ಕದ್ದಿದ್ದಳು. ಭಾನುವಾರದ ದಿನ ಬೆಂಗಳೂರನ್ನು ರೌಂಡ್ಸ್ ಹಾಕುತ್ತಿದ್ದ ಈಕೆ, ಮದುವೆ ಇರುವ ಹಾಲ್‌ಗಳಿಗೆ ಕೈಚಳಕ ತೋರುತ್ತಿದ್ದಳು. ಬಸವನಗುಡಿ ಪೊಲೀಸರ ವಿಚಾರಣೆ ವೇಳೆ ಈಕೆ ಮೂರು ಕಳ್ಳತನ ಪ್ರಕರಣಗಳಲ್ಲಿ ಬಾಗಿಯಾಗಿರುವುದು ಬೆಳಕಿಗೆ ಬಂದಿದೆ. ಬಂಧಿತಳಿಂದ 32 ಲಕ್ಷ ರೂ. ಮೌಲ್ಯದ 262 ಗ್ರಾಂ ಚಿನ್ನಾಭರಣ ಹಾಗೂ ನಗದನ್ನು ವಶಕ್ಕೆ ಪಡೆಯಲಾಗಿದೆ.

ಬ್ರೆಡ್ ಪ್ಯಾಕೆಟ್​​ನಲ್ಲಿ ಡ್ರಗ್ಸ್ ಇಟ್ಟು ಸಾಗಾಟ; ನೈಜೀರಿಯಾ ಯುವತಿ ಅರೆಸ್ಟ್

Drugs Seized in Bengaluru

ಬೆಂಗಳೂರು: ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರದಲ್ಲಿ ಮಾದಕ ವಸ್ತುಗಳ ಸಾಗಾಟ ಪ್ರಕರಣಗಳು ಹೆಚ್ಚಳವಾಗಿವೆ. ಈ ನಡುವೆ ಬ್ರೆಡ್ ಪ್ಯಾಕೆಟ್​​ನಲ್ಲಿ ಡ್ರಗ್ಸ್ ಇಟ್ಟು ಮುಂಬೈನಿಂದ ಬೆಂಗಳೂರಿಗೆ ಸಾಗಿಸುತ್ತಿದ್ದ ವಿದೇಶಿ ಯುವತಿಯನ್ನು ಸಿಸಿಬಿ ಪೊಲೀಸರು ಬಂಧಿಸಿ, 1.20 ಕೋಟಿ ರೂ ಮೌಲ್ಯದ ಕೊಕೇನ್ ವಶಕ್ಕೆ ಪಡೆದಿದ್ದಾರೆ.

ನೈಜೀರಿಯಾ ಮೂಲದ ಒಲಾಜಿಡೆ ಎಸ್ತಾರ್ ಬಂಧಿತ ಆರೋಪಿ. ಈಕೆಯಿಂದ 1.20 ಕೋಟಿ ಮೌಲ್ಯದ 121 ಗ್ರಾಂ ಕೊಕೇನ್ ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಆರೋಪಿತೆಯ ವಿರುದ್ಧ ಎನ್​​ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಕೊಂಡು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ಧಾರೆ.

Murder Case: ಸಿನಿಮೀಯವಾಗಿ ಪತ್ನಿಯ ಕೊಲೆ ಮಾಡಿ ಅಪಘಾತದ ಡ್ರಾಮಾ, ಪತಿಯ ಸೆರೆ

ಬಂಧಿತ ಯುವತಿ ವಿದ್ಯಾರ್ಥಿ ವೀಸಾದಡಿ 2024ರಲ್ಲಿ ವ್ಯಾಸಂಗಕ್ಕಾಗಿ ದೆಹಲಿಗೆ ಬಂದಿದ್ದಳು. ಆದರೆ, ಕಾಲೇಜಿಗೆ ಹೋಗದೆ ಡ್ರಗ್ಸ್‌ ದಂಧೆಕೋರರ ನಂಟು ಬೆಳೆಸಿ ಮುಂಬೈನಲ್ಲಿ ವಾಸವಾಗಿದ್ದಳು. ಮುಂಬೈನಲ್ಲಿದ್ದ ಸ್ನೇಹಿತ ನೀಡುವ ಮಾದಕವಸ್ತುಗಳನ್ನು ಹೇಳಿದ ಜಾಗಕ್ಕೆ ಸಾಗಣೆ ಮಾಡಿ ಹಣ ಸಂಪಾದನೆ ಮಾಡುತ್ತಿದ್ದಳು. ಅದೇ ರೀತಿ ಬೆಂಗಳೂರಿಗೆ ಕೊಕೇನ್ ಸಾಗಿಸಲು ಸಲುವಾಗಿ ಖಾಸಗಿ ಬಸ್ ಮೂಲಕ ಮುಂಬೈನಿಂದ ಬೆಂಗಳೂರಿಗೆ ಬಂದಿದ್ದಳು. ಡ್ರಗ್ಸ್‌ ಸಾಗಣೆ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಿಸಿಬಿಯ ಮಾದಕದ್ರವ್ಯ ನಿಗ್ರಹ ದಳದ ಇನ್​​ಸ್ಪೆಕ್ಟರ್ ರಕ್ಷಿತ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಯುವತಿಯನ್ನು ಬಂಧಿಸಿದೆ.