ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆ; ಮುಂದೇನಾಯ್ತು? ಇಲ್ಲಿದೆ ಭಯಾನಕ ವಿಡಿಯೊ

ಚಲಿಸುತ್ತಿದ್ದ ರೈಲಿನಿಂದ ಬಿದ್ದ ಮಹಿಳೆಯನ್ನು ರೈಲ್ವೇ ಉದ್ಯೋಗಿ ರಕ್ಷಿಸಿದ ಘಟನೆ ತಮಿಳುನಾಡಿನ ಚೆನ್ನೈನ ತಾಂಬರಂ ನಿಲ್ದಾಣದಲ್ಲಿ ನಡೆದಿದೆ. ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಮಹಿಳೆ ಸಿಲುಕಿಕೊಂಡಿದ್ದು, ಇದನ್ನು ನೋಡಿ ತ್ವರಿತವಾಗಿ ಸ್ಪಂದಿಸಿದ ರೈಲ್ವೇ ಉದ್ಯೋಗಿಯ ಆಕೆಯನ್ನು ರಕ್ಷಿಸಿದರು. ಇದರ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ರೈಲಿನಿಂದ ಬಿದ್ದ ಮಹಿಳೆಯನ್ನು ರಕ್ಷಿಸಿದ ರೈಲ್ವೇ ಉದ್ಯೋಗಿ

(ಸಂಗ್ರಹ ಚಿತ್ರ) -

ಚೆನ್ನೈ: ಚಲಿಸುತ್ತಿದ್ದ ರೈಲಿನಿಂದ (Moving train) ಬಿದ್ದ ಮಹಿಳೆಯನ್ನು ರೈಲ್ವೇ (railway) ಉದ್ಯೋಗಿಯು ರಕ್ಷಿಸಿದ ಘಟನೆ ತಮಿಳುನಾಡಿನ (tamilnadu) ಚೆನ್ನೈ (chennai) ತಾಂಬರಂ ನಿಲ್ದಾಣದಲ್ಲಿ (Tambaram Station) ನಡೆದಿದೆ. ಮಹಿಳೆಯೊಬ್ಬರು ಚಲಿಸುವ ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿಕೊಂಡಿದ್ದು, ಇದನ್ನು ಗಮನಿಸಿದ ರೈಲ್ವೇ ಉದ್ಯೋಗಿಯೂ ತ್ವರಿತ ಕಾರ್ಯಾಚರಣೆ ನಡೆಸಿ ಮಹಿಳೆಯನ್ನು ರಕ್ಷಿಸಿದರು. ಮಹಿಳೆ ಅಪಾಯದಿಂದ ಪಾರಾಗಿದ್ದಾರೆ. ಇದರ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ (Viral video) ಆಗಿದೆ. ಚಲಿಸುವ ರೈಲುಗಳನ್ನು ಹತ್ತದಂತೆ ಪದೇ ಪದೇ ಎಚ್ಚರಿಕೆ ನೀಡಿದರೂ ಇಂತಹ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ಇದು ಈಗ ಸಾಮಾಜಿಕ ಮಾಧ್ಯಮದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ತಾಂಬರಂ ನಿಲ್ದಾಣದಲ್ಲಿ ರೈಲು ಹತ್ತುವಾಗ ಜಾರಿಬಿದ್ದ ಮಹಿಳಾ ಪ್ರಯಾಣಿಕರೊಬ್ಬರನ್ನು ರೈಲ್ವೇ ಸಿಬ್ಬಂದಿ ತ್ವರಿತ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರೈಲ್ವೇ ಉದ್ಯೋಗಿ ನಿತೀಶ್ ಕುಮಾರ್ ಅವರು ರೈಲು ಮತ್ತು ಪ್ಲಾಟ್‌ಫಾರ್ಮ್ ನಡುವೆ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಿದ್ದಾರೆ. ಪ್ರಯಾಣಿಕರ ಸುರಕ್ಷತೆಗೆ ಅವರ ಜಾಗರೂಕತೆ ಮತ್ತು ಸಮರ್ಪಣೆಯನ್ನು ದಕ್ಷಿಣ ರೈಲ್ವೇ ಶ್ಲಾಘಿಸಿದೆ.

ಬೆಂಗಳೂರಿನ ಜೀವನ ಶೈಲಿಗೆ ಮನಸೋತ ರಷ್ಯಾ ಕುಟುಂಬ: ಇಲ್ಲಿನ ಜನರ ನಗುವೇ ನಮಗೆ ಆಸ್ತಿ ಎಂದು ಗುಣಗಾನ



ಈ ಘಟನೆ ಡಿಸೆಂಬರ್ 20ರಂದು ಶನಿವಾರ ನಡೆದಿದೆ ಎನ್ನಲಾಗಿದೆ. ತಾಂಬರಂನಲ್ಲಿ ಟಿಕೆಟ್ ತಪಾಸಣಾ ಸಿಬ್ಬಂದಿ ನಿತೀಶ್ ಕುಮಾರ್ ಅವರ ತ್ವರಿತ ಕಾರ್ಯಾಚರಣೆ ನಡೆಸಿ ಬೀಚ್‌ಗೆ ಹೋಗುವ ರೈಲು ಹತ್ತುವಾಗ ಆಕಸ್ಮಿಕವಾಗಿ ಜಾರಿಬಿದ್ದ ಮಹಿಳಾ ಪ್ರಯಾಣಿಕಳನ್ನು ರಕ್ಷಿಸಿತು ಎಂದು ದಕ್ಷಿಣ ರೈಲ್ವೇಯು ಸಾಮಾಜಿಕ ಮಾಧ್ಯಮವಾದ ಎಕ್ಸ್ ನಲ್ಲಿ ಪೋಸ್ಟ್ ಮಾಡಿದೆ.

ಮಹಿಳೆಯ ಬೊಬ್ಬೆ ಕೇಳಿ ತಕ್ಷಣ ಅವರು ಓಡಿ ಮಹಿಳೆಯನ್ನು ರಕ್ಷಿಸಿದರು. ಅವರ ಸಕಾಲಿಕ ಕ್ರಮದಿಂದ ದೊಡ್ಡ ಅನಾಹುತವನ್ನು ತಪ್ಪಿಸಿತು. ಚಲಿಸುವ ರೈಲುಗಳನ್ನು ಹತ್ತಬೇಡಿ ಅಥವಾ ಇಳಿಯಬೇಡಿ ಎಂದು ರೈಲ್ವೆ ಅಧಿಕಾರಿಗಳು ಪದೇ ಪದೇ ಮನವಿ ಮಾಡಿದರೂ ಇತ್ತೀಚಿನ ದಿನಗಳಲ್ಲಿ ಇಂತಹ ಘಟನೆಗಳು ಆಗಾಗ್ಗೆ ನಡೆಯುತ್ತಿವೆ.

ಅಂತರ ಕಾಯ್ದುಕೊಳ್ಳಿ...ಇಎಂಐ ಬಾಕಿ ಇದೆ! ಮಂಗಳೂರಿನ ಆಲ್ಟೋ ಕಾರಿನ ಬರಹಕ್ಕೆ ನೆಟ್ಟಿಗರು ಫಿದಾ

ಕಳೆದ ತಿಂಗಳು ತೆಲಂಗಾಣದ ಹೈದರಾಬಾದ್‌ನ ಕಾಚೆಗುಡ ರೈಲ್ವೆ ನಿಲ್ದಾಣದಲ್ಲಿ ಇದೇ ರೀತಿಯ ಘಟನೆ ನಡೆತ್ತು. ರೈಲ್ವೆ ರಕ್ಷಣಾ ಪಡೆ ಕಾನ್‌ಸ್ಟೆಬಲ್ ಪಂಕಜ್ ಕುಮಾರ್ ಶರ್ಮಾ ಅವರು ಪ್ರಯಾಣಿಕರೊಬ್ಬರನ್ನು ರಕ್ಷಿಸಿದ್ದರು.