ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Lucknow Murder: 10 ವರ್ಷಗಳ ಹಿಂದೆ ತಾಯಿಯನ್ನು ಅವಮಾನಿಸಿದ್ದ ವ್ಯಕ್ತಿಯ ಕೊಲೆ; ಆರೋಪಿಗಳು ಸಿಕ್ಕಿಬಿದ್ದಿದೇ ರೋಚಕ

ತಾಯಿಯ ಮೇಲೆ ದಶಕದ ಹಿಂದೆ ದೌರ್ಜನ್ಯ ಎಸಗಿದ್ದ ವ್ಯಕ್ತಿಯನ್ನು ಯುವಕನೊಬ್ಬ ಕೊಲೆಗೈದ ಘಟನೆ ಲಖನೌನಲ್ಲಿ ನಡೆದಿದೆ. ಸೋನು ಕಶ್ಯಪ್ ಎಂಬಾತ ತಾಯಿಯ ಅವಮಾನಕ್ಕೆ ಪ್ರತೀಕಾರವಾಗಿ 10 ವರ್ಷಗಳ ಕಾಲ ಮನೋಜ್ ಎಂಬಾತನನ್ನು ಹುಡುಕಾಡಿದ್ದ. ತನ್ನ ಸ್ನೇಹಿತರಾದ ರಂಜೀತ್, ಆದಿಲ್, ಸಲಾಮು ಮತ್ತು ರೆಹಮತ್ ಅಲಿಯೊಂದಿಗೆ ಸೇರಿ ಮನೋಜ್‌ನನ್ನು ಕೊಂದಿದ್ದಾನೆ.

ಲಖನೌ: ತಾಯಿಯ ಮೇಲೆ ದಶಕದ ಹಿಂದೆ ದೌರ್ಜನ್ಯ ಎಸಗಿದ್ದ ವ್ಯಕ್ತಿಯನ್ನು ಯುವಕನೊಬ್ಬ ಕೊಲೆಗೈದ (Murder) ಘಟನೆ ಲಖನೌನಲ್ಲಿ (Lucknow) ನಡೆದಿದೆ. ಸೋನು ಕಶ್ಯಪ್ ಎಂಬಾತ ತಾಯಿಯ ಅವಮಾನಕ್ಕೆ ಪ್ರತೀಕಾರವಾಗಿ 10 ವರ್ಷಗಳ ಕಾಲ ಮನೋಜ್ ಎಂಬಾತನನ್ನು ಹುಡುಕಾಡಿದ್ದ. ತನ್ನ ಸ್ನೇಹಿತರಾದ ರಂಜಿತ್, ಆದಿಲ್, ಸಲಾಮು ಮತ್ತು ರೆಹಮತ್ ಅಲಿಯೊಂದಿಗೆ ಸೇರಿ ಸೋನು ಕೊಲೆ ಮಾಡಿದ್ದಾನೆ. ಕೊಲೆಯ ನಂತರ ಪಾರ್ಟಿ ಕೊಡುವ ಭರವಸೆ ನೀಡಿ ಪ್ಲ್ಯಾನ್‌ ಮಾಡಿ ಮನೋಜ್‌ನನ್ನು ಕೊಂದಿದ್ದಾನೆ. ಆದರೆ ಸೋಶಿಯಲ್ ಮೀಡಿಯಾ ಪೋಸ್ಟ್‌ನಿಂದಾಗಿ ಆರೋಪಿಗಳು ಪೊಲೀಸರ ಬಲೆಗೆ ಸಿಲುಕಿದ್ದಾರೆ.

ಕೊಲೆಯ ಕಥೆ

10 ವರ್ಷಗಳ ಹಿಂದೆ ಮನೋಜ್, ಸೋನುವಿನ ತಾಯಿಯೊಂದಿಗೆ ಜಗಳವಾಡಿ, ಆಕೆಯ ಮೇಲೆ ದೌರ್ಜನ್ಯ ಎಸಗಿ ಪರಾರಿಯಾಗಿದ್ದ. ಈ ಅವಮಾನದಿಂದ ಕುಪಿತನಾದ ಸೋನು, ಮನೋಜ್‌ನನ್ನು ಹುಡುಕಲು ಲಖನೌ ಬೀದಿಗಳಲ್ಲಿ ಅಲೆದಾಡಿದ್ದ. ಆದರೆ ಆತ ಕಣ್ಣಿಗೆ ಬಿದ್ದಿರಲಿಲ್ಲ. ಮೂರು ತಿಂಗಳ ಹಿಂದೆ ಮುನ್ಶಿ ಪುಲಿಯಾ ಪ್ರದೇಶದಲ್ಲಿ ಮನೋಜ್‌ನನ್ನು ಗುರುತಿಸಿದ್ದ ಸೋನು ಪ್ರತೀಕಾರದ ಯೋಜನೆ ರೂಪಿಸಿದ.

ಮನೋಜ್ ಪ್ರತಿದಿನ ಎಲ್ಲಿಗೆ ಹೋಗುತ್ತಾನೆ, ಏನು ಮಾಡುತ್ತಾನೆಂದು ಗಮನಿಸಿ, ರಂಜಿತ್, ಆದಿಲ್, ಸಲಾಮು ಮತ್ತು ರೆಹಮತ್‌ ಜತೆ ಸೇರಿಕೊಂಡು ಕೊಲೆಗೆ ಪ್ಲ್ಯಾನ್ ಮಾಡಿದ್ದ. ಮೇ 22ರಂದು ಮನೋಜ್ ತನ್ನ ಎಳನೀರಿನ ಅಂಗಡಿಯನ್ನು ಮುಚ್ಚಿದ ಬಳಿಕ, ಆರೋಪಿಗಳು ಕಬ್ಬಿಣದ ರಾಡ್‌ಗಳಿಂದ ಆತನ ದಾಳಿ ನಡೆಸಿದ್ದು, ಚಿಕಿತ್ಸೆಯ ವೇಳೆ ಮನೋಜ್ ಸಾವನ್ನಪ್ಪಿದ.

ಈ ಸುದ್ದಿಯನ್ನು ಓದಿ: Murder Case: ದೃಶ್ಯಂ ಸಿನಿಮಾ ಸ್ಟೈಲ್​ನಲ್ಲಿ ಪತಿಯನ್ನು ಕೊಂದು ರೂಮ್‌ನಲ್ಲೇ ಹೂತು ಹಾಕಿದ ಪತ್ನಿ..!

ಪಾರ್ಟಿಯಿಂದ ಬಂಧನ

ಪೊಲೀಸರಿಗೆ ಈ ಕೊಲೆ ತಲೆನೋವಾಗಿತ್ತು. ಅಪರಾಧಿಗಳ ಯಾವುದೇ ಸುಳಿವು ಸಿಗದೆ ಕಂಗಾಲಾಗಿದ್ದರು. ಸಿಸಿಟಿವಿಯಲ್ಲಿ ಆರೋಪಿಗಳು ಕಂಡುಬಂದಿದ್ದರೂ ಅವರನ್ನು ಗುರುತಿಸುವುದು ಕಷ್ಟವಾಗಿತ್ತು. ಆದರೆ ಕೊಲೆಯ ಬಳಿಕ ಸೋನು ತನ್ನ ಸ್ನೇಹಿತರಿಗಾಗಿ ಮದ್ಯದ ಪಾರ್ಟಿ ಆಯೋಜಿಸಿದ್ದ. ಈ ಪಾರ್ಟಿಯ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡು ಪೊಲೀಸರಿಗೆ ಸುಳಿವು ನೀಡಿದವು. ಸಿಸಿಟಿವಿಯಲ್ಲಿ ಕಂಡ ಒಬ್ಬ ಆರೋಪಿಯು ಕಿತ್ತಳೆ ಬಣ್ಣದ ಟಿ-ಶರ್ಟ್ ಧರಿಸಿದ್ದ, ಅದೇ ಶರ್ಟ್‌ನಲ್ಲಿ ಆತ ಸೋಶಿಯಲ್ ಮೀಡಿಯಾ ಫೋಟೊದಲ್ಲೂ ಕಾಣಿಸಿಕೊಂಡಿದ್ದ. ಇದರಿಂದ ಪೊಲೀಸರು ಐದೂ ಆರೋಪಿಗಳನ್ನು ಗುರುತಿಸಿ, ಬಂಧಿಸಿದರು.