ಫೋಟೋ ಗ್ಯಾಲರಿ ಐಪಿಎಲ್​ ಅಕ್ಷಯ ತೃತೀಯ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Madhya Pradesh Crime: ಹೆಂಡತಿಯನ್ನು ಕೊಂದು ಮನೆಯಲ್ಲೇ ಹೂತಿಟ್ಟ ಗಂಡ; ಸಮಾಧಿಯಿಂದ ಹೊರ ಬಂದ ಕೈ ಕಂಡು ಆತ್ಮಹತ್ಯೆ

Madhya Pradesh Crime: ಮಧ್ಯಪ್ರದೇಶದ ಖರ್ಗೋನ್ ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿಯೊಬ್ಬ ತನ್ನ 40 ವರ್ಷದ ಪತ್ನಿಯನ್ನು ಕೊಂದು ತಮ್ಮ ಮನೆಯಲ್ಲೇ ಗುಂಡಿ ತೆಗೆದು ಹೂತುಹಾಕಿದ ಘಟನೆ ನಡೆದಿದೆ. ನಂತರ ಶವದ ಕೈ ಗುಂಡಿಯಿಂದ ಹೊರಗೆ ಕಂಡುಬಂದಿದ್ದು, ಭಯಗೊಂಡ ಆರೋಪಿಯು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಮನೆಯಲ್ಲೇ ಹೂತಿಟ್ಟ ಹೆಂಡ್ತಿ ಶವದ ಕೈ ಇದ್ದಕ್ಕಿದ್ದಂತೆ ಹೊರ ಬಿತ್ತು!

Profile Sushmitha Jain May 3, 2025 5:02 PM

ಭೋಪಾಲ್‌: ಮಧ್ಯಪ್ರದೇಶದ (Madhya Pradesh) ಖರ್ಗೋನ್ (Khargone) ಜಿಲ್ಲೆಯಲ್ಲಿ 45 ವರ್ಷದ ವ್ಯಕ್ತಿಯೊಬ್ಬ ತನ್ನ 40 ವರ್ಷದ ಪತ್ನಿಯನ್ನು ಕೊಂದು ತಮ್ಮ ಮನೆಯಲ್ಲೇ ಗುಂಡಿ ತೆಗೆದು ಹೂತುಹಾಕಿದ ಘಟನೆ ನಡೆದಿದೆ. ನಂತರ ಶವದ ಕೈ ಗುಂಡಿಯಿಂದ ಹೊರಗೆ ಕಂಡುಬಂದಿದ್ದು, ಆರೋಪಿಯು ಕೀಟನಾಶಕ ಸೇವಿಸಿ ಆತ್ಮಹತ್ಯೆ (Suicide Case) ಮಾಡಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮಸ್ಥರು ಮನೆಯಿಂದ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿ ಅಲ್ಲಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಮನೆಯ ಬಾಗಿಲನ್ನು ಮುರಿದು ಒಳಗೆ ಪ್ರವೇಶಿಸಿದಾಗ ಕೊಲೆಯ ವಿಷಯ ಬೆಳಕಿಗೆ ಬಂದಿದೆ. ಲಕ್ಷ್ಮಣನ ಶವವು ಹಾಸಿಗೆಯ ಮೇಲೆ ಕಂಡುಬಂದಿದ್ದು, ಮನೆಯ ಹಾಲ್‌ನಲ್ಲಿ ಅವನ ಪತ್ನಿ ರುಕ್ಮಿಣಿ ಬಾಯಿಯ ಶವವನ್ನು ತೋಡಿದ ಗುಂಡಿಯಲ್ಲಿ ಹೂತಾಕಿರುವುದು ಕಂಡುಬಂದಿದೆ.

ಈ ಸುದ್ದಿಯನ್ನು ಓದಿ: Suhas Shetty Murder: ಸುಹಾಸ್‌ ಶೆಟ್ಟಿ ಕೊಲೆ 8 ಆರೋಪಿಗಳ ಬಂಧನ, ಕೋಮು ವಿರೋಧಿ ಕಾರ್ಯಪಡೆ ರಚನೆ: ಜಿ ಪರಮೇಶ್ವರ

ಕಳೆದ ನಾಲ್ಕೈದು ದಿನಗಳಿಂದ ಆರೋಪಿಯು ತನ್ನ ಪತ್ನಿಯನ್ನು ಹೂತಾಕಿದ ಗುಂಡಿಯ ಬಳಿಯೇ ಹಾಸಿಗೆ ಹಾಸಿಕೊಂಡು ಮಲಗಿದ್ದನೆಂದು ಪೊಲೀಸರು ತಿಳಿಸಿದ್ದಾರೆ. ರುಕ್ಮಿಣಿ ಬಾಯಿಯ ಶವವು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದ್ದು, ಇದು ಕೆಲವು ದಿನಗಳ ಹಿಂದೆ ಹೂಳಲ್ಪಟ್ಟಿತ್ತು. ಘಟನೆಯ ಮಾಹಿತಿ ತಿಳಿದ ತಕ್ಷಣ, ಬರ್ವಾಹ್ ಪೊಲೀಸ್ ಠಾಣೆಯ ಉಸ್ತುವಾರಿ ಬಲರಾಮ್ ರಾಠೋರ್ ಮತ್ತು ತಂಡ ಸ್ಥಳಕ್ಕೆ ಆಗಮಿಸಿ, ದಂಪತಿಯ ಶವಗಳನ್ನು ವಶಪಡಿಸಿಕೊಂಡಿದೆ. ರುಕ್ಮಿಣಿ ಬಾಯಿಯ ಶವದ ಕೈ ಭೂಮಿಯ ಮೇಲೆ ಕಂಡುಬಂದಿತು, ಆದರೆ ಶವವನ್ನು ಸರಿಯಾಗಿ ಹೂಳದ ಕಾರಣ ದುರ್ವಾಸನೆ ಬಂದಿತ್ತು ಎಂದು ರಾಠೋರ್ ಹೇಳಿದರು.

ಕೊಲೆಯ ಭಯದಿಂದ ಲಕ್ಷ್ಮಣನು ಕೀಟನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎಂದು ರಾಠೋರ್ ತಿಳಿಸಿದ್ದಾರೆ. ಆತನೇ ಗುಂಡಿಯನ್ನು ತೋಡಿ ತನ್ನ ಪತ್ನಿಯನ್ನು ಹೂತಾಕಿದ್ದ, ಆದರೆ ಶವವನ್ನು ಸರಿಯಾಗಿ ಮುಚ್ಚದ ಕಾರಣ ಕೈ ಗೋಚರಿಸಿತ್ತು, ಇದರಿಂದ ದುರ್ವಾಸನೆ ಹರಡಿತ್ತು. ಎರಡೂ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಸಾವಿನ ನಿಖರ ಕಾರಣವನ್ನು ಪೊಲೀಸರು ಪತ್ತೆ ಮಾಡುತ್ತಿದ್ದಾರೆ.