ಲಖನೌ, ಏ.3: ಟಯರ್‌ನಲ್ಲಿ ಗಾಳಿ ತುಂಬಿಸುವಾಗ ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಉತ್ತರ ಪ್ರದೇಶದ (Uttar Pradesh) ಅಜಮ್‌ಗಢ ಜಿಲ್ಲೆಯಲ್ಲಿ ನಡೆದಿದೆ. ಗಾಳಿ ತುಂಬಿಸುವಾಗ ಇದ್ದಕ್ಕಿದ್ದಂತೆ ಟೈರ್ ಸ್ಫೋಟಗೊಂಡಿದೆ (tyre explode). ಸ್ಫೋಟದ ಸದ್ದಿಗೆ ನೆರೆದಿದ್ದವರು ಭಯಭೀತಿಗೊಂಡಿದ್ದರು. ಸ್ಥಳೀಯ ಟಯರ್ ರಿಪೇರಿ ಅಂಗಡಿಯಲ್ಲಿ ಈ ಘಟನೆ ಸಂಭವಿಸಿದೆ. ವ್ಯಕ್ತಿಯೊಬ್ಬರು ಟೈರ್‌ಗೆ ಗಾಳಿ ತುಂಬಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ.
ಪ್ರತ್ಯಕ್ಷದರ್ಶಿಗಳ ಪ್ರಕಾರ, ಟಯರ್ ಜೋರಾಗಿ ಸಿಡಿಯುವವರೆಗೂ ಎಲ್ಲವೂ ಸಾಮಾನ್ಯವಾಗಿತ್ತು. ಸ್ಫೋಟದ ಶಕ್ತಿ ಎಷ್ಟು ತೀವ್ರವಾಗಿತ್ತು ಎಂದರೆ ಆ ವ್ಯಕ್ತಿ ಮೇಲಕ್ಕೆ ಎಸೆಯಲ್ಪಟ್ಟು, ನಂತರ ರಸ್ತೆಗೆ ಬಿದ್ದು, ಗಂಭೀರ ಗಾಯಗೊಂಡರು. ಅಪಘಾತದ ನಂತರ ಸ್ಥಳದಲ್ಲಿ ತಕ್ಷಣದ ಅವ್ಯವಸ್ಥೆ ಉಂಟಾಯಿತು. ಸುತ್ತಮುತ್ತಲಿನ ಜನರು ಸ್ಥಳಕ್ಕೆ ಧಾವಿಸಿ ವ್ಯಕ್ತಿಗೆ ಸಹಾಯ ಮಾಡಲು ಪ್ರಯತ್ನಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು.
ಹೃದಯವಿದ್ರಾವಕ ವಿಷಯವೆಂದರೆ ದುರಂತದ ಸಮಯದಲ್ಲಿ ಮೃತ ವ್ಯಕ್ತಿಯ ಚಿಕ್ಕ ಮಕ್ಕಳು ಕೂಡ ಅಲ್ಲೇ ಇದ್ದರು. ಈ ವೇಳೆ ಅವರಿಬ್ಬರು ಅಪ್ಪಾ ಎಂದು ಜೋರಾಗಿ ಕಿರುಚಿ ಅತ್ತಿದ್ದಾರೆ. ಈ ದೃಶ್ಯ ನೆರೆದವರಲ್ಲಿ ಕಣ್ಣೀರು ಹಾಕುವಂತೆ ಮಾಡಿದೆ. ಟಯರ್‌ಗಳಿಗೆ ಇಂಧನ ತುಂಬಿಸುವಾಗ ಸುರಕ್ಷತಾ ಕ್ರಮಗಳನ್ನು ಹೆಚ್ಚಾಗಿ ನಿರ್ಲಕ್ಷಿಸಲಾಗುತ್ತದೆ. ಇದರಿಂದ ಈ ರೀತಿ ಭೀಕರ ಅಪಘಾತ ಸಂಭವಿಸುತ್ತದೆ.
ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಕೆಯ ಮೇಲೆ ಆಸಿಡ್ ದಾಳಿ ಮಾಡಿದ ಪತ್ನಿ!
ತಲೆ ಮರೆಸಿಕೊಂಡಿದ್ದ ಆರೋಪಿಗೆ ಜೀವಾವಧಿ ಶಿಕ್ಷೆ
ಕೊಲೆ ಮತ್ತು ಮಾರಣಾಂತಿಕ ಹಲ್ಲೆ ಪ್ರಕರಣದಲ್ಲಿ ಸುಮಾರು 21 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಪರಶುರಾಮ ಅಲಿಯಾಸ್ ರಾಮಣ್ಣ (49)ಗೆ ಜೀವಾವಧಿ ಶಿಕ್ಷೆ ಹಾಗೂ 35 ಸಾವಿರ ರೂ. ದಂಡವನ್ನು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಿಧಿಸಿದೆ.
2004ರ ಜ.15ರಂದು ಮಧ್ಯಾಹ್ನ 3 ಗಂಟೆ ಸುಮಾರಿಗೆ, ದುರುಗಪ್ಪ ನಾಯಕ ಮೇಲೆ ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಬಳಿಕ ಅಲ್ಲಿದ್ದ ಆರೋಪಿಯ ಪತ್ನಿಯ ಮೇಲೂ ಹೊಟ್ಟೆ ಭಾಗಕ್ಕೆ ಮರಣಾಂತಿಕ ಹಲ್ಲೆ ನಡೆಸಲಾಗಿತ್ತು. ಈ ಕುರಿತು ಕನಕಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದ್ದ ವೇಳೆ ಆರೋಪಿ ಪರಾರಿಯಾಗಿ, ಬೇರೆ ಹೆಸರಿನಲ್ಲಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದನು. ದೀರ್ಘಕಾಲದ ಶೋಧದ ಬಳಿಕ 2025ರಲ್ಲಿ ಕನಕಗಿರಿ ಪೊಲೀಸರು ಆರೋಪಿಯನ್ನು ಪತ್ತೆ ಹಚ್ಚಿ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಸರಕಾರದ ಪರವಾಗಿ ಅಭಿಯೋಜಕರಾದ ನಾಗಲಕ್ಷ್ಮಿ ವಾದ ಮಂಡಿಸಿದ್ದರು. ಇದೀಗ ನ್ಯಾಯಾಲಯ ಆರೋಪಿಯನ್ನು ದೋಷಿ ಎಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿದೆ.