ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಕೆಯ ಮೇಲೆ ಆಸಿಡ್‌ ದಾಳಿ ಮಾಡಿದ ಪತ್ನಿ!

ಪತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯ ಮೇಲೆ ಪತ್ನಿ ಆಸಿಡ್ ಎರೆಚಿದ ಘಟನೆ ಕೋಲಾರದ ಆಜಾದ್ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಆರೋಪಿ ಆಯೇಷಾ ಹಾಗೂ ಗಾಯಾಳು ಮುಸ್ಕಾನ್ ಇಬ್ಬರೂ ಪರಸ್ಪರ ಸಂಬಂಧಿಕರು ಎಂದು ಹೇಳಲಾಗಿದೆ.

ಗಂಡನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಕೆಯ ಮೇಲೆ ಆಸಿಡ್‌ ಹಾಕಿದ ಪತ್ನಿ

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 2, 2026 8:59 AM

ಕೋಲಾರ: ಪತಿಯ ಜತೆ ಅಕ್ರಮ ಸಂಬಂಧ ಹೊಂದಿದ್ದಾಕೆಯ ಮೇಲೆ ಪತ್ನಿ ಆಸಿಡ್ ಎರೆಚಿದ ಘಟನೆ ಕೋಲಾರದ ಆಜಾದ್ ನಗರದಲ್ಲಿ ಬುಧವಾರ ರಾತ್ರಿ ನಡೆದಿದೆ. ಆರೋಪಿ ಆಯೇಷಾ ಹಾಗೂ ಗಾಯಾಳು ಮುಸ್ಕಾನ್ ಇಬ್ಬರೂ ಪರಸ್ಪರ ಸಂಬಂಧಿಕರು. ಆಯೇಷಾಳ ಪತಿ ಶಾಬಾಜ್ ಅಹಮದ್‌ನ ತಮ್ಮನ ಪತ್ನಿ ಮುಸ್ಕಾನ್ ಎನ್ನಲಾಗಿದೆ. ಮುಸ್ಕಾನ್ ಪತಿ ಕುಡಿತದ ವ್ಯಸನಿಯಾಗಿದ್ದು, ಸಂಸಾರ ನೋಡಿಕೊಳ್ಳುತ್ತಿರಲಿಲ್ಲ ಎನ್ನಲಾಗಿದೆ. ಶಾಬಾಜ್ ಅಹಮದ್ ಹಣಕಾಸಿನ ನೆರವು ನೀಡುತ್ತಿದ್ದ. ಅಲ್ಲದೆ, ಆ ನೆಪದಲ್ಲಿ ಮುಸ್ಕಾನ್ ಜೊತೆಗೆ ಅಕ್ರಮ ಸಂಬಂಧ ಬೆಳೆಸಿದ್ದ ಎಂಬ ಆರೋಪವಿದೆ.

ಈ ಹಿಂದೆ ಮುಸ್ಕಾನ್ ಮತ್ತು ಶಾಬಾಜ್ ಅಹಮದ್ ಓಡಿಹೋಗಿ ಬೆಂಗಳೂರಿನಲ್ಲಿ ವಾಸವಿದ್ದರು. ಇತ್ತೀಚೆಗಷ್ಟೇ ಅವರನ್ನು ಕೋಲಾರಕ್ಕೆ ಕರೆ ತರಲಾಗಿತ್ತು. ಬಳಿಕ ರಾಜಿ ಮಾಡಿಸಲು ಹಲವು ಪ್ರಯತ್ನಗಳು ನಡೆದಿದ್ದವು. ಬುಧವಾರ ರಾತ್ರಿ ಸಂಬಂಧಿಕರ ಮನೆಯೊಂದರಲ್ಲಿ ‘ರಾಜಿ ಪಂಚಾಯ್ತಿ’ ಹಮ್ಮಿಕೊಳ್ಳಲಾಗಿತ್ತು. ಮಾತಿನ ಚಕಮಕಿ ನಡೆಯುತ್ತಿರುವಾಗಲೇ ಆಕ್ರೋಶಗೊಂಡ ಆಯೇಷಾ, ತಾನು ಮೊದಲೇ ಸಿದ್ಧಪಡಿಸಿಕೊಂಡು ತಂದಿದ್ದ ಬಾತ್ ರೂಂ ಕ್ಲೀನಿಂಗ್ ಆಸಿಡ್ ಅನ್ನು ಮುಸ್ಕಾನ್ ಮುಖಕ್ಕೆ ಎರಚಿದ್ದಾಳೆ. ದಾಳಿಯ ಬಳಿಕ ಆಯೇಷಾ ಸ್ಥಳದಿಂದ ಪರಾರಿಯಾಗಿದ್ದಾಳೆ.

Chikkaballapur News: ಧ್ಯಾನದ ಮೂಲಕ ಸಮಾಜದ ಪರಿವರ್ತನೆ ಸಾಧ್ಯ: ಕೋಲಾರ ಜಿಲ್ಲಾ ನ್ಯಾಯಾಧೀಶೆ ಬಿ.ಎಸ್.ಜಯಶ್ರೀ

ವಿಷಯ ತಿಳಿಯುತ್ತಿದ್ದಂತೆಯೇ ಗಲ್ ಪೇಟೆ ಪೊಲೀಸರು ಸ್ಥಳಕ್ಕೆ ಧಾವಿಸಿ, ನೋವಿನಿಂದ ನರಳುತ್ತಿದ್ದ ಮುಸ್ಕಾನ್ ಅವರನ್ನು ತಮ್ಮ ಜೀಪ್‌ನಲ್ಲೇ ಕರೆದೊಯ್ದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಎಸ್‌ಪಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಅಕ್ರಮ ಸಂಬಂಧಕ್ಕೆ ಪತಿ ಬಲಿ

ಅಕ್ರಮ ಸಂಬಂಧ ವಿರೋಧಿಸಿದ ಪತಿಯನ್ನು ಮಹಿಳೆಯೊಬ್ಬಳು ಕೊಂದು ಬಳಿಕ ದರೋಡೆ ಕಥೆ ಕಟ್ಟಿದ ಭೀಕರ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಉತ್ತರ ಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದ್ದು, ಪತಿಗೆ ಊಟದಲ್ಲಿ ಮತ್ತು ಬರುವ ಔಷಧಿ ಮಿಕ್ಸ್ ಮಾಡಿ ಕೊಟ್ಟ ಮಹಿಳೆ, ಆತ ಪ್ರಜ್ಞೆ ತಪ್ಪಿದ ಬಳಿಕ ಆತನನ್ನು ಪ್ರಿಯಕರನೊಂದಿಗೆ ಸೇರಿ ಕೊಂದು ಹಾಕಿದ್ದಾಳೆ. ಆಘಾತಕಾರಿ ಅಂಶವೆಂದರೆ ಪತಿಯ ಸಾವಿನ ಬಳಿಕ ಮಹಿಳೆ ಏನೂ ಆಗಿಲ್ಲವೇನೋ ಎಂಬಂತೆ ಗಂಡನ ಶವದ ಪಕ್ಕದಲ್ಲೇ ಮಕ್ಕಳೊಂದಿಗೆ ರಾತ್ರಿಯಿಡೀ ಮಲಗಿದ್ದಾಳೆ. ಬಳಿಕ ಮಾರನೇ ದಿನ ಬೆಳಗ್ಗೆ ದರೋಡೆ ಕಥೆ ಕಟ್ಟಿದ್ದಾಳೆ. ಪ್ರಸ್ತುತ ಪತಿಯನ್ನು ಕೊಲೆ ಮಾಡಿದ್ದಕ್ಕಾಗಿ ಮಹಿಳೆ, ಆಕೆಯ ಪ್ರಿಯಕರ ಮತ್ತು ಆತನ ಸ್ನೇಹಿತನನ್ನು ಬಂಧಿಸಲಾಗಿದೆ.