Stabbed Case: ಗಣೇಶ ವಿಸರ್ಜನೆ ವೇಳೆ ವ್ಯಕ್ತಿಗೆ ಚಾಕು ಇರಿತ; ಗಂಭೀರ ಗಾಯ
ಗಣೇಶ ವಿಸರ್ಜನೆ ವೇಳೆ ಅಹಿತಕರ ಘಟನೆ ನಡೆದಿದ್ದು ಇಡೀ ಹುಬ್ಬಳ್ಳಿ ನಗರವನ್ನೇ ಬೆಚ್ಚಿ ಬೀಳಿಸಿದೆ. ಹುಬ್ಬಳ್ಳಿಯ ಕೊಪ್ಪೀಕರ ರಸ್ತೆಯಲ್ಲಿ ನಿನ್ನೆ ರಾತ್ರಿ ಒಂದು ಘಟನೆ ನಡೆದಿದ್ದು ಪ್ರತಾಪ್ ಅಲಿಯಾಸ್ ಚೇತನ ಗೌಡರ (32) ಗೆ ಚಾಕು ಇರಿಲಾಗಿದೆ.

-

ಹುಬ್ಬಳ್ಳಿ: ಗಣೇಶ ವಿಸರ್ಜನೆ ವೇಳೆ ಅಹಿತಕರ ಘಟನೆ ನಡೆದಿದ್ದು ಇಡೀ (Stabbed Case) ಹುಬ್ಬಳ್ಳಿ ನಗರವನ್ನೇ ಬೆಚ್ಚಿ ಬೀಳಿಸಿದೆ. ಹುಬ್ಬಳ್ಳಿಯ ಕೊಪ್ಪೀಕರ ರಸ್ತೆಯಲ್ಲಿ ನಿನ್ನೆ ರಾತ್ರಿ ಒಂದು ಘಟನೆ ನಡೆದಿದ್ದು ಪ್ರತಾಪ್ ಅಲಿಯಾಸ್ ಚೇತನ ಗೌಡರ (32) ಗೆ ಚಾಕು ಇರಿಲಾಗಿದೆ. ಹುಬ್ಬಳ್ಳಿ ತಾಲೂಕಿನ ಬಿಡನಾಳ ಮಾರುತಿ ನಗರದ ನಿವಾಸಿ ಪ್ರತಾಪ್ ಗೌಡ ಎಂದು ತಿಳಿದು ಬಂದಿದ್ದು, ಸೋನಿಯಾ ಗಾಂಧಿನಗರದ ಶಿರಿ ಹಾಗೂ ಇನ್ನಿಬ್ಬರಿಂದ ಕೃತ್ಯ ಎಸಗಿರುವ ಆರೋಪ ಕೇಳಿ ಬಂದಿದೆ.
ಗಣೇಶ ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಪ್ರತಾಪ್ ಗೆ ಚಾಕು ಇರಿದಿದ್ದಾರೆ. ಮೂತ್ರ ವಿಸರ್ಜನೆಗೆ ಎಂದು ಹೋಗುತ್ತಿದ್ದಾಗ ಏಕಾಏಕಿ ಚಾಕು ಇರಿಯಲಾಗಿದೆ. ಟ್ರಾನ್ಸ್ಪೋರ್ಟ್ ಕಂಪನಿ ಒಂದರಲ್ಲಿ ಪ್ರತಾಪ್ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದ ಕಳೆದ ಒಂದು ತಿಂಗಳ ಹಿಂದೆ ಅಷ್ಟೇ ಪ್ರತಾಪ್ ಮದುವೆಯಾಗಿದ್ದಾನೆ. ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರತಾಪ್ ಗೆ ಚಿಕಿತ್ಸೆ ನೀಡಲಾಗುತ್ತಿದೆ. ಆಸ್ಪತ್ರೆಗೆ ಹುಬ್ಬಳ್ಳಿ ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಭೇಟಿ ನೀಡಿದ್ದಾರೆ ಹುಬ್ಬಳ್ಳಿಯ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
ಹುಬ್ಬಳ್ಳಿಯ ಗಣೇಶ ವಿಸರ್ಜನೆ ಸಾಕಷ್ಟು ಇತಿಹಾಸ ಹೊಂದಿದೆ. ಮೆರವಣಿಗೆಯಲ್ಲಿ ಸುಮಾರು 4 ಲಕ್ಷ ಜನ ಸೇರಿದ್ದರು. ಇದೇ ಸಮಯದಲ್ಲಿಯೇ ಯುವಕನಿಗೆ ಚಾಕು ಇರಿಯಲಾಗಿದೆ. ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮನೆಗೆ ಬೆಂಕಿ ಹಚ್ಚಿದ ಮಗ
ಕುಡಿಯಲು ಹಣ ನೀಡಲಿಲ್ಲ ಎಂದು ಭೂಪನೊಬ್ಬ ಮನೆಗೇ ಬೆಂಕಿ ಹಚ್ಚಿ ವಿಕೃತಿ ಮೆರೆದಿದ್ದಾನೆ. ಮೈಸೂರಿನ ರಮ್ಮನಹಳ್ಳಿಯಲ್ಲಿ ಪ್ರಕರಣ ನಡೆದಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಶಿವಪ್ರಸಾದ್ (26) ಮನೆಗೇ ಬೆಂಕಿ ಹಚ್ಚಿದ ಕಿಡಿಗೇಡಿ. ತಾಯಿ ಕಲಾವತಿ ರಮ್ಮನಹಳ್ಳಿಯಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದಾರೆ. ಕಲಾವತಿ ಅವರ ಪತಿ ಎರಡನೇ ಮದುವೆ ಮಾಡಿಕೊಂಡು ಪ್ರತ್ಯೇಕ ಸಂಸಾರ ನಡೆಸುತ್ತಿದ್ದಾರೆ. ಕಲಾವತಿಗೆ ಇಬ್ಬರು ಮಕ್ಕಳಿದ್ದು, ಸಂಕಷ್ಟದಲ್ಲಿ ಜೀವನ ನಡೆಸುತ್ತಿದ್ದಾರೆ.
ಈ ಸುದ್ದಿಯನ್ನೂ ಓದಿ: Vijayapura crime news: ಭೀಮಾ ತೀರದ ಗ್ರಾಮ ಪಂಚಾಯತ್ ಅಧ್ಯಕ್ಷನ ಕೊಲೆ, ಚಡಚಣ ಪಿಎಸ್‌ಐ ಅಮಾನತು
ಎರಡನೇ ಮಗ ಶಿವಪ್ರಸಾದ್ ಕುಡಿತದ ಚಟಕ್ಕೆ ಬಿದ್ದಿದ್ದಾನೆ. ಅಂತೆಯೇ ಆಗಾಗ ತಾಯಿಗೆ ಕಿರುಕುಳ ನೀಡಿ ಹಣ ಕಿತ್ತುಕೊಂಡು ಹೋಗುತ್ತಿದ್ದ. ಎರಡು ದಿನಗಳ ಹಿಂದೆ ಶಿವಪ್ರಸಾಸ್ ಕುಡಿಯಲು ಹಣ ಕೇಳಿದ್ದ. ಕಲಾವತಿಯವರು ಹಣ ನೀಡುವುದಿಲ್ಲವೆಂದು ನಿರಾಕರಿಸಿದ್ದರು. ಇದರಿಂದ ಜಗಳ ತೆಗೆದ ಶಿವಪ್ರಸಾದ್ ಮನೆಗೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದ. ಮೊದಲು ಮನೆಯಿಂದ ಹೊರಬಂದು ತೆಂಗಿನಗರಿಗೆ ಬೆಂಕಿ ಹಚ್ಚಿದ್ದ. ಕೆಲ ಸಮಯದಲ್ಲಿ ಪೆಟ್ರೋಲ್ ಸುರಿದು ಬೆಂಕಿ ವ್ಯಾಪಿಸುವಂತೆ ಮಾಡಿ ನಾಪತ್ತೆಯಾಗಿದ್ದ. ನೆರೆಹೊರೆಯವರು ಕಲಾವತಿ ಅವರನ್ನ ಬಚಾವ್ ಮಾಡಿದ್ದಾರೆ.