ಫೋಟೋ ಗ್ಯಾಲರಿ ಬಜೆಟ್​ T20 ವಿಶ್ವಕಪ್​ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ವಿದೇಶ ಕ್ರೈಂ ಧಾರ್ಮಿಕ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gudibande News: ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ವಿವಾಹಿತೆ: ಪತಿ ಸೇರಿ ಮೂವರ ವಿರುದ್ಧ ಎಫ್‌ಐಆರ್ ದಾಖಲು

ಮೃತ ವರಲಕ್ಷ್ಮಿಯ ತಂದೆ ನರಸಿಂಹಪ್ಪ (ಪಾಪನಾಯಕನಹಳ್ಳಿ, ಬಾಗೇಪಲ್ಲಿ ತಾಲೂಕು) ನೀಡಿರುವ ದೂರಿನ ಪ್ರಕಾರ, ಕಳೆದ 3 ವರ್ಷಗಳ ಹಿಂದೆ ಆರ್. ಚೊಕ್ಕನಹಳ್ಳಿ ಗ್ರಾಮದ ಗಂಗಪ್ಪ ಅವರ ಪುತ್ರ ಗಂಗರಾಜು ಜೊತೆ ವರಲಕ್ಷ್ಮಿಯ ವಿವಾಹ ನಡೆದಿತ್ತು. ಇವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ವರಪಕ್ಷಕ್ಕೆ ನೀಡಲಾಗಿತ್ತು

ವರದಕ್ಷಿಣೆ ಕಿರುಕುಳಕ್ಕೆ ಬಲಿಯಾದ ವಿವಾಹಿತೆ

ಮೃತ ವರಲಕ್ಷ್ಮೀ ಭಾವಚಿತ್ರ -

Ashok Nayak
Ashok Nayak Mar 9, 2026 12:52 AM

ಗುಡಿಬಂಡೆ: ವರದಕ್ಷಿಣೆ ಕಿರುಕುಳವನ್ನು ತಾಳಲಾರದೆ 25 ವರ್ಷದ ವಿವಾಹಿತೆಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ಆರ್. ಚೊಕ್ಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮೃತೆಯನ್ನು ವರಲಕ್ಷ್ಮಿ (25) ಎಂದು ಗುರುತಿಸ ಲಾಗಿದೆ. ಈ ಸಂಬಂಧ ಗುಡಿಬಂಡೆ ವ್ಯಾಪ್ತಿಯ ಪರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಘಟನೆಯ ಹಿನ್ನೆಲೆ: ಮೃತ ವರಲಕ್ಷ್ಮಿಯ ತಂದೆ ನರಸಿಂಹಪ್ಪ (ಪಾಪನಾಯಕನಹಳ್ಳಿ, ಬಾಗೇಪಲ್ಲಿ ತಾಲೂಕು) ನೀಡಿರುವ ದೂರಿನ ಪ್ರಕಾರ, ಕಳೆದ 3 ವರ್ಷಗಳ ಹಿಂದೆ ಆರ್. ಚೊಕ್ಕನಹಳ್ಳಿ ಗ್ರಾಮದ ಗಂಗಪ್ಪ ಅವರ ಪುತ್ರ ಗಂಗರಾಜು ಜೊತೆ ವರಲಕ್ಷ್ಮಿಯ ವಿವಾಹ ನಡೆದಿತ್ತು. ಇವರಿಬ್ಬರೂ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲಿ ಚಿನ್ನಾಭರಣ ಸೇರಿದಂತೆ ಹಲವು ವಸ್ತುಗಳನ್ನು ವರಪಕ್ಷಕ್ಕೆ ನೀಡಲಾಗಿತ್ತು.

ಆದರೆ ಮದುವೆಯಾದ ಕೆಲವೇ ದಿನಗಳಲ್ಲಿ ಸೈಟ್ ಖರೀದಿಸಲು ತವರು ಮನೆಯಿಂದ ಹಣ ತರುವಂತೆ ಪತಿ ಗಂಗರಾಜು, ಮಾವ ಗಂಗಪ್ಪ ಹಾಗೂ ಅತ್ತೆ ನರಸಮ್ಮ ನಿರಂತರವಾಗಿ ಕಿರುಕುಳ ನೀಡುತ್ತಿದ್ದರು ಎನ್ನಲಾಗಿದೆ. ಹಣ ತರದಿದ್ದರೆ ದೈಹಿಕ ಹಲ್ಲೆ ನಡೆಸಿ ವರಲಕ್ಷ್ಮಿ ಯನ್ನು ತವರು ಮನೆಗೆ ಕಳುಹಿಸುತ್ತಿದ್ದರು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: Bengaluru Crime: ಬೆಂಗಳೂರಿನಲ್ಲಿ ಭೀಕರ ಅತ್ಯಾಚಾರ ದಂಧೆ, ಡ್ರಗ್ಸ್‌ ನೀಡಿ 19 ಕಾಲೇಜು ಯುವತಿಯರ ಮೇಲೆ ದೌರ್ಜನ್ಯ

ಸಾವಿನ ಸುತ್ತ ಅನುಮಾನ: ಮಾರ್ಚ್ 7 ರಂದು ಸಹ ಹಣ ತರಲು ಒತ್ತಾಯಿಸಿ ಪತಿ ಹಾಗೂ ಅತ್ತೆ-ಮಾವ ವರಲಕ್ಷ್ಮಿಗೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸ ಲಾಗಿದೆ. ಬಳಿಕ ಮಾ.8ರಂದು ಬೆಳಿಗ್ಗೆ ಸುಮಾರು 5:30ರ ಸುಮಾರಿಗೆ ವರಲಕ್ಷ್ಮಿಯನ್ನು ಗುಡಿಬಂಡೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಲಕ್ಷ್ಮಿನಾರಾಯಣಪ್ಪ ಅವರು ನರಸಿಂಹಪ್ಪ ಅವರಿಗೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.

ತಕ್ಷಣ ಆಸ್ಪತ್ರೆಗೆ ಧಾವಿಸಿದ ತಂದೆ ನರಸಿಂಹಪ್ಪ ಅವರು ನೋಡಿದಾಗ ವರಲಕ್ಷ್ಮಿ ಮೃತ ಪಟ್ಟಿರುವುದು ತಿಳಿದುಬಂದಿದೆ. ವರದಕ್ಷಿಣೆಗಾಗಿ ನಿರಂತರ ಕಿರುಕುಳ ನೀಡಿ ತಮ್ಮ ಮಗಳನ್ನು ಕೊಲೆ ಮಾಡಲಾಗಿದೆ ಎಂದು ನರಸಿಂಹಪ್ಪ ಗಂಭೀರ ಆರೋಪ ಮಾಡಿದ್ದಾರೆ.  ಈ ಕುರಿತು ತಂದೆಯ ದೂರಿನ ಆಧಾರದ ಮೇಲೆ ಪರೇಸಂದ್ರ ಪೊಲೀಸರು ಪ್ರಮುಖ ಆರೋಪಿಗಳಾದ ಗಂಗರಾಜು (ಪತಿ), ಗಂಗಪ್ಪ (ಮಾವ) ಮತ್ತು ನರಸಮ್ಮ (ಅತ್ತೆ) ವಿರುದ್ಧ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.