ಬಿಗ್​ಬಾಸ್ ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Delhi blast: ದೆಹಲಿ ಸ್ಪೋಟದ ಹಿಂದೆ ಮುಸ್ಲಿಂ ಧರ್ಮಗುರು ಮೌಲ್ವಿ ಇರ್ಫಾನ್ ಅಹ್ಮದ್ ?

ದೆಹಲಿ ಕೆಂಪು ಕೋಟೆ ಸಮೀಪ ಸೋಮವಾರ ರಾತ್ರಿ ನಡೆದ ಬಾಂಬ್ ಸ್ಫೋಟ (Delhi blast) ಪ್ರಕರಣದಲ್ಲಿ ಮುಸ್ಲಿಂ ಧರ್ಮಗುರುವಿನ ಪಾತ್ರ ಇದೆಯೇ? ಹೀಗೊಂದು ಸಂದೇಹ ಈಗ ಹುಟ್ಟಿಕೊಂಡಿದೆ. ಯಾಕೆಂದರೆ ಫರಿದಾಬಾದ್ ನಲ್ಲಿ ವಿದ್ಯಾರ್ಥಿಗಳನ್ನು ಭಯೋತ್ಪಾದಕರನ್ನಾಗಿ ಮಾಡುವಲ್ಲಿ ಮೌಲ್ವಿಯೊಬ್ಬರ ಹೆಸರು ಕೇಳಿ ಬಂದಿದೆ. ಅದು ಯಾರು? ಅವರಿಗೂ ದೆಹಲಿ ಬಾಂಬ್ ಸ್ಪೋಟಕ್ಕೂ ಏನು ಸಂಬಂಧ ? ಇಲ್ಲಿದೆ ಸಂಪೂರ್ಣ ಮಾಹಿತಿ.

ದೆಹಲಿ ಸ್ಪೋಟದ ಹಿಂದೆ ಮೌಲ್ವಿ ಕೈವಾಡ?

ಬಂಧಿತ ಡಾ. ಮುಜಮ್ಮಿಲ್ ಶಕೀಲ್, ಡಾ. ಅದೀಲ್ ಅಹ್ಮದ್ ರಾಥರ್, ಅಹ್ಮದ್ ಮೊಹಿಯುದ್ದೀನ್ ಸಯ್ಯದ್ (ಸಂಗ್ರಹ ಚಿತ್ರ) -

ನವದೆಹಲಿ: ದೆಹಲಿಯ ಕೆಂಪುಕೋಟೆಯಲ್ಲಿ ಸೋಮವಾರ ರಾತ್ರಿ ನಡೆದ ಬಾಂಬ್ ಸ್ಪೋಟದ (Delhi blast) ಹಿಂದೆ ಜಮ್ಮು ಮತ್ತು ಕಾಶ್ಮೀರದ (Jammu and kashmir) ಶೋಪಿಯಾನ್‌ನ ಮೌಲ್ವಿ ಇರ್ಫಾನ್ ಅಹ್ಮದ್ (Maulvi Irfan Ahmed) ಪಾತ್ರವಿದೆಯೇ ಎನ್ನುವ ಕುರಿತು ಈಗ ಶಂಕೆ ವ್ಯಕ್ತವಾಗಿದೆ. ಮೌಲ್ವಿ ಇರ್ಫಾನ್ ಅಹ್ಮದ್ ವೈದ್ಯಕೀಯ ವಿದ್ಯಾರ್ಥಿಗಳನ್ನು ಭಯೋತ್ಪಾದಕರನ್ನಾಗಿ ಮಾಡುವಲ್ಲಿ ಪ್ರಮುಖ ಪಾತ್ರವಹಿಸಿದ್ದಾನೆ ಎನ್ನಲಾಗುತ್ತಿದೆ. ಶ್ರೀನಗರದ ಜಿಎಂಸಿಯಲ್ಲಿ ಅರೆವೈದ್ಯನಾಗಿದ್ದ ಆತ ಎಲ್ಲಾ ವಿದ್ಯಾರ್ಥಿಗಳೊಂದಿಗೆ ಸಂಪರ್ಕದಲ್ಲಿದ್ದಾನೆ. ಕೆಂಪು ಕೋಟೆಯಲ್ಲಿ ಸ್ಫೋಟ ಸಂಭವಿಸುವ ಕೆಲವು ಗಂಟೆಗಳ ಮೊದಲು ಆತ ಫರಿದಾಬಾದ್ ಸಂಪರ್ಕದಲ್ಲಿದ್ದ ಎಂದು ಗುಪ್ತಚರ ಮೂಲಗಳು ತಿಳಿಸಿವೆ.

ಶ್ರೀನಗರದ ನೌಗಮ್ ಮಸೀದಿಯಲ್ಲಿ ಇಮಾಮ್ ಆಗಿದ್ದ ಮೌಲ್ವಿ ಇರ್ಫಾನ್ ಅಹ್ಮದ್ ವಿರುದ್ಧ ಮತ್ತೊಂದು ಆರೋಪವು ಇದೆ. ಕಳೆದ ಅಕ್ಟೋಬರ್ 27 ರಂದು ನೌಗಾಮ್‌ನಲ್ಲಿ ಭಯೋತ್ಪಾದಕ ಸಂಘಟನೆಯಾದ ಜೈಶ್-ಎ-ಮೊಹಮ್ಮದ್ (ಜೆಇಎಂ) ಗೆ ಬೆಂಬಲ ನೀಡುವ ಪೋಸ್ಟರ್‌ಗಳು ಕಾಣಿಸಿಕೊಂಡಿತ್ತು. ಇದರ ತನಿಖೆ ನಡೆದ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಕಾರ್ಮಿಕರನ್ನು ಬಂಧಿಸಿದ್ದರು. ಅವರು ಮೌಲ್ವಿ ಇರ್ಫಾನ್ ಅಹ್ಮದ್‌ ವಿರುದ್ಧ ಹೇಳಿಕೆ ನೀಡಿದರು. ಬಳಿಕ ಆತನ ಮಾಹಿತಿ ಮೇರೆಗೆ ಆತನೊಂದಿಗೆ ಸಂಬಂಧ ಹೊಂದಿದ್ದ ಡಾ. ಅದೀಲ್ ಅಹ್ಮದ್ ರಾಥರ್ ಮತ್ತು ಜಮೀರ್ ಅಹಂಗರ್ ನನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ: Bihar Exit Poll 2025: ಬಿಹಾರ ಚುನಾವಣೆಯ ಎಕ್ಸಿಟ್‌ ಪೋಲ್‌ ಹೇಗೆ ನಡೆಯುತ್ತದೆ? ಎಲ್ಲಿ ವೀಕ್ಷಿಸಿಬಹುದು.. ಇಲ್ಲಿದೆ ಸಂಪೂರ್ಣ ಮಾಹಿತಿ

ಇದೇ ಕಾರಣದಿಂದ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಮೌಲ್ವಿಯ ಒಡೆತನದ ಕೊಠಡಿಗಳಿಂದ ಕಾರ್ಯನಿರ್ವಹಿಸುತ್ತಿದ್ದ ಡಾ. ಮುಜಮ್ಮಿಲ್ ಶಕೀಲ್ ನನ್ನು ಪತ್ತೆ ಹಚ್ಚಿದ್ದಾರೆ. ಫರಿದಾಬಾದ್‌ನ ಧೌಜ್‌ನಲ್ಲಿರುವ ಅಲ್ ಫಲಾಹ್ ವಿಶ್ವವಿದ್ಯಾಲಯದಲ್ಲಿ ವೈದ್ಯನಾಗಿ ಕೆಲಸ ಮಾಡುತ್ತಿದ್ದ ಡಾ. ಮುಜಮ್ಮಿಲ್ ಶಕೀಲ್ ಮೌಲ್ವಿ ಹಾಗೂ ಡಾ. ಉಮರ್ ಜೊತೆ ಸಂಪರ್ಕದಲ್ಲಿದ್ದನು ಎನ್ನಲಾಗಿದೆ.

ಇವರ ಕಾರ್ಯಾಚರಣೆಗೆ ಹಣಕಾಸು ನೆರವು ಒದಗಿಸಿರುವುದು ಉತ್ತರ ಪ್ರದೇಶದ ಮಹಿಳಾ ವೈದ್ಯೆ ಡಾ. ಶಾಹೀನ್ ಸಯೀದ್. ಫರಿದಾಬಾದ್‌ನ ಅಲ್ ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಅಧ್ಯಯನ ಮಾಡಿದ ಶಾಹೀನ್ ಕೂಡ ಡಾ. ಉಮರ್ ಜೊತೆ ಸಂಪರ್ಕ ಹೊಂದಿದ್ದಳು. ದೆಹಲಿಯಲ್ಲಿ ಸೋಮವಾರ ನಡೆದ ಬಾಂಬ್ ಸ್ಫೋಟದ ಕಾರನ್ನು ಡಾ. ಉಮರ್ ಚಲಾಯಿಸುತ್ತಿದ್ದ ಎನ್ನಲಾಗಿದೆ.

ಇವರೆಲ್ಲ ಕಾರ್ಯಾಚರಣೆ ನಡೆಸುತ್ತಿದ್ದ ಬಾಡಿಗೆ ಕೊಠಡಿಗಳಲ್ಲಿ 350 ಕೆಜಿ ಅಮೋನಿಯಂ ನೈಟ್ರೇಟ್, ಶಸ್ತ್ರಾಸ್ತ್ರಗಳು ಮತ್ತು ಬಾಂಬ್ ತಯಾರಿಸುವ ಘಟಕಗಳು, ಎಕೆ-47 ರೈಫಲ್, ಹರಿಯಾಣದ ಫರಿದಾಬಾದ್‌ನಲ್ಲಿರುವ ಮತ್ತೊಂದು ನಿವಾಸದಲ್ಲಿ 2,563 ಕೆಜಿ ಶಂಕಿತ ಸ್ಫೋಟಕಗಳನ್ನು ಭದ್ರತಾ ಪಡೆಗಳು ವಶಕ್ಕೆ ಪಡೆದಿವೆ.

ಇದನ್ನೂ ಓದಿ: Delhi Terror Attack 2025: ದೆಹಲಿ ಭಯೋತ್ಪಾದಕ ದಾಳಿಗೆ ಫರಿದಾಬಾದ್ ಅಲ್ ಫಲಾಹ್ ವಿವಿಯಲ್ಲಿ ಸಂಚು ?

ವೈದ್ಯಕೀಯ ವಿದ್ಯಾರ್ಥಿಗಳನ್ನು ಭಯೋತ್ಪಾದಕರನ್ನಾಗಿ ಮಾಡುವಲ್ಲಿ ಜೈಶ್-ಎ-ಮೊಹಮ್ಮದ್ (ಜೆಇಎಂ) ನಿಂದ ಪ್ರೇರಿತನಾಗಿದ್ದ ಮೌಲ್ವಿ ಇರ್ಫಾನ್ ಅಹ್ಮದ್ ಕೆಲಸ ಮಾಡುತ್ತಿದ್ದ. ಇದರ ವಿಡಿಯೊಗಳನ್ನು ಆತ ವಿದ್ಯಾರ್ಥಿಗಳಿಗೆ ತೋರಿಸುತ್ತಿದ್ದನು. ಅಲ್ಲದೇ ಅಫ್ಘಾನಿಸ್ತಾನದೊಂದಿಗೆ ಸಂಪರ್ಕದಲ್ಲಿರುವುದು ಕೂಡ ತನಿಖೆ ಬಹಿರಂಗವಾಗಿದೆ ಎಂದು ಗುಪ್ತಚರ ಮೂಲಗಳು ತಿಳಿಸಿವೆ.