Murder Case: ದಾವಣಗೆರೆಯಲ್ಲಿ ರೌಡಿಶೀಟರ್ ಕೊಚ್ಚಿ ಕೊಂದ ದುಷ್ಕರ್ಮಿಗಳು
ಆಟೋದಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳ ತಂಡ ದಾವಣಗೆರೆಯ ಖಾಸಗಿ ಆಸ್ಪತ್ರೆಯೊಂದರ ಮುಂಭಾಗ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ ಬೀಳಿಸಿ ರೌಡಿ ಶೀಟರ್ ಸಂತೋಷ್ ಕುಮಾರ್‌ನನ್ನು ಕೊಚ್ಚಿ ಹತ್ಯೆಗೈದು (Murder Case) ಪರಾರಿಯಾಗಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.

ಕೊಲೆಯಾದ ಸಂತೋಷ್ ಕುಮಾರ್

ದಾವಣಗೆರೆ: ಕುಖ್ಯಾತ ರೌಡಿಶೀಟರ್ (Rowdy sheeter) ಸಂತೋಷ್ ಕುಮಾರ್ ಎಂಬಾತನನ್ನು ಹಾಡಹಗಲೇ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ (hacked to death) ಬರ್ಬರವಾಗಿ ಹತ್ಯೆ (murder case) ಮಾಡಿದ್ದಾರೆ. ಮೃತನನ್ನು ಸಂತೋಷ್ ಕುಮಾರ್ ಅಲಿಯಾಸ್ ಕಣುಮಾ ಎಂದು ಗುರುತಿಸಲಾಗಿದೆ. ಆಟೋದಲ್ಲಿ ಬಂದ ನಾಲ್ಕೈದು ಜನ ದುಷ್ಕರ್ಮಿಗಳ ತಂಡ ದಾವಣಗೆರೆಯ ಖಾಸಗಿ ಆಸ್ಪತ್ರೆಯೊಂದರ ಮುಂಭಾಗ ಕಣ್ಣಿಗೆ ಪೆಪ್ಪರ್ ಸ್ಪ್ರೇ ಮಾಡಿ ಬೀಳಿಸಿ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ. ಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಘಟನಾ ಸ್ಥಳಕ್ಕೆ ದಾವಣಗೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿದ್ದು ಹತ್ಯೆಯ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಕೊಲೆಯಾದ ರೀತಿ ನೋಡಿದರೆ ವೈಯಕ್ತಿಕ ದ್ವೇಷ ಹಾಗೂ ಗ್ಯಾಂಗ್ ಇರುವ ಸಾಧ್ಯತೆ ಇದೆ. ಸುತ್ತಮುತ್ತಿನ ಸಿಸಿ ಟಿವಿ ಫೂಟೇಜ್‌ಗಳನ್ನು ಪರಿಶೀಲಿಸಲಾಗುತ್ತಿದೆ.
ಬೀದಿಯಲ್ಲಿ ಹೆಣ್ಣು ಮಕ್ಕಳ ಪೀಡಿಸಿದ ಪುಂಡನ ಬಂಧನ
ಬೆಂಗಳೂರು: ನಡುರಸ್ತೆಯಲ್ಲಿ ಹೆಣ್ಣು ಮಕ್ಕಳಿಗೆ (Women) ಲೈಂಗಿಕ ಕಿರುಕುಳ (Harassment) ನೀಡುವವರಲ್ಲಿ ಬೀದಿ ರೌಡಿಗಳು ಮಾತ್ರವಲ್ಲ, ಒಳ್ಳೆಯ ಉದ್ಯೋಗದಲ್ಲಿ ಇರುವವರು ಕೂಡ ಇದ್ದಾರೆ ಎಂದು ಮತ್ತೆ ಮತ್ತೆ ರುಜುವಾತಾಗುತ್ತಿದೆ. ದೇವರಬೀಸನಹಳ್ಳಿಯ ಇಕೋ ವರ್ಲ್ಡ್ ಟೆಕ್ ಪಾರ್ಕ್‌ನ ಮುಖ್ಯ ದ್ವಾರದ ಬಳಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ (Harasser) ಮೇಲೆ ಮಾರತ್ತಹಳ್ಳಿ ಪೊಲೀಸರು (Bengaluru crime news) ಎಂಬಿಎ ಪದವಿಧರ, ಖಾಸಗಿ ಕಂಪನಿಯ ಉದ್ಯೋಗಿಯನ್ನು ಭಾನುವಾರ ಬಂಧನಕ್ಕೊಳಪಡಿಸಿದ್ದಾರೆ.
ಆರೋಪಿಯನ್ನು ದೇವರಬೀಸನಹಳ್ಳಿ ನಿವಾಸಿ ಶ್ರೀಕಾಂತ್ (32) ಎಂದು ಗುರುತಿಸಲಾಗಿದೆ. ಈತ ಎಂಬಿಎ ಪದವೀಧರನಾಗಿದ್ದು, ನಗರದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾನೆಂದು ತಿಳಿದುಬಂದಿದೆ. ಏಪ್ರಿಲ್ 30ರಂದು ಭೋಗನಹಳ್ಳಿ ನಿವಾಸಿ 26 ವರ್ಷದ ಮಹಿಳೆಯೊಬ್ಬರು ಟೆಕ್ ಪಾರ್ಕ್‌ನ ಮುಖ್ಯ ದ್ವಾರದ ಬಳಿ ನಡೆದುಕೊಂಡು ಹೋಗುತ್ತಿದ್ದಾಗ ಘಟನೆ ನಡೆದಿತ್ತು.
ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಶ್ರೀಕಾಂತ್ ಹಿಂದಿನಿಂದ ಬಂದು ಮಹಿಳೆಗೆ ಬೆನ್ನಿಗೆ ಕೆಳಗೆ ಹೊಡೆದಿದ್ದಾನೆ. ನಂತರ ಮುಂದೆ ಹೋಗಿ ಮತ್ತೆ ಯೂಟರ್ನ್ ತೆಗೆದುಕೊಂಡು ಮತ್ತೊಮ್ಮೆ ಮಹಿಳೆಗೆ ಕಿರುಕುಳ ನೀಡಿ, ಪರಾರಿಯಾಗಿದ್ದಾನೆ. ಈ ವೇಳೆ ಸ್ಥಳೀಯರಾರೂ ನೆರವಿಗೆ ಬರಲಿಲ್ಲ ಎಂದು ದೂರಿನಲ್ಲಿ ಮಹಿಳೆ ಹೇಳಿದ್ದರು. ದೂರ ಹಿನ್ನೆಲೆಯಲ್ಲಿ ಮಾರತಹಳ್ಳಿ ಪೊಲೀಸರು ಆರೋಪಿ ಬಂಧಿಸಲು ವಿಶೇಷ ತಂಡಗಳನ್ನು ರಚಿಸಿದ್ದರು. ಇದರಂತೆ ಸ್ಥಳೀಯ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಾಗಿ ಹುಡುಕಾಟ ನಡೆಸಿದ್ದ ಅಧಿಕಾರಿಗಳು, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಈ ವ್ಯಕ್ತಿ ಅಪರಾಧ ಪ್ರವೃತ್ತಿಯವನೇ, ಈ ಹಿಂದೆ ಇಂಥ ಕೃತ್ಯ ಎಸಗಿದ್ದಾನೆಯೇ ಎಂದು ತಿಳಿಯಲು ತನಿಖೆ ನಡೆಸಲಾಗುತ್ತಿದೆ ಎಂದು ವೈಟ್‌ಫೀಲ್ಡ್ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: Murder Case: ಮೊಬೈಲ್ ಸ್ಪೀಕರ್ ಹಾಕಲು ಒತ್ತಾಯಿಸಿದ ಪತ್ನಿಯ ಕತ್ತು ಹಿಸುಕಿ ಕೊಲೆ