Anil Shetty: ಸ್ಟಾರ್ಟಪ್ ಉದ್ಯಮಿ ಅನಿಲ್ ಶೆಟ್ಟಿ ಮೊದಲ ಚಿತ್ರದ ಟೈಟಲ್ ರಿವೀಲ್
Lambodhara 2.0 Movie: ಅನಿಲ್ ಶೆಟ್ಟಿ ಅವರ ಹೋಂ ಬ್ಯಾನರ್ ಮಾಸ್ ಪ್ರೊಡಕ್ಷನ್ ಕಂಪನಿ ನಿರ್ಮಿಸುತ್ತಿರುವ ಸಿನಿಮಾ ಲಂಬೋಧರ 2.0ದಲ್ಲಿ ಅನಿಲ್ ಶೆಟ್ಟಿ ನಾಯಕನಾಗಿ ಅಭಿನಯಿಸುತ್ತಿದ್ದು, ಇದು ಅವರ ಮೊದಲ ಸಿನಿಮಾ. 'ಬ್ಯಾಚುಲರ್ ಪಾರ್ಟಿ' ಚಿತ್ರ ನಿರ್ದೇಶಕ ಅಭಿಜಿತ್ ಮಹೇಶ್ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದಾರೆ.

Anil Shetty -

ಬೆಂಗಳೂರು: ಗಣೇಶನ ಹೆಸರಿನಲ್ಲಿ ಸಿನಿಮಾಗಳು ಬರದೆ ಕೆಲವು ವರ್ಷ ಆಯಿತು. ನೀವು ಮತ್ತೆ ಯಾವಾಗ ಬರುತ್ತೀಯ ಎನ್ನುವ ಭಕ್ತರ ಪ್ರಶ್ನೆಗೆ ಉತ್ತರಿಸುವ ಗಣೇಶ, ನಾನು ಹೈಟೆಕ್ ಆಗಿ ಅಪ್‌ಡೇಟ್ ಆಗಿದ್ದೀನಿ. ನಿಮ್ಮ ಬಳಿ ಒಬ್ಬನನ್ನು ಕಳುಹಿಸುತ್ತಿದ್ದೇನೆ. ಆದರೆ ನಿಮ್ಮ ಮೊಬೈಲ್ ಪಾಸ್‌ವರ್ಡ್‌ಗೆ ನೀವೇ ಜವಾಬ್ದಾರರು ಎಂದು ಭಕ್ತರನ್ನು ಎಚ್ಚರಿಸುವ ಟೈಟಲ್ ಟೀಸರ್ ಇದೀಗ ವೈರಲ್ ಆಗಿದೆ.
ಅನಿಲ್ ಶೆಟ್ಟಿ (Anil Shetty) ಅವರ ಹೋಂ ಬ್ಯಾನರ್ ಮಾಸ್ ಪ್ರೊಡಕ್ಷನ್ ಕಂಪನಿ ನಿರ್ಮಾಣ ಮಾಡುತ್ತಿರುವ ಸಿನಿಮಾ ʼಲಂಬೋಧರ 2.0ʼ (Lambodhara 2.0)ದಲ್ಲಿ ಅನಿಲ್ ನಾಯಕನಾಗಿ ಅಭಿನಯಿಸುತ್ತಿದ್ದು ಒಂದು ಒಳ್ಳೆ ಸಿನಿಮಾ ಮಾಡಲು ಸೃಜನಶೀಲ ತಾಂತ್ರಿಕ ತಂಡವನ್ನು ಕಟ್ಟು ತ್ತಿದ್ದಾರೆ. 'ಬ್ಯಾಚುಲರ್ ಪಾರ್ಟಿ' ಚಿತ್ರ ನಿರ್ದೇಶಕ ಅಭಿಜಿತ್ ಮಹೇಶ್ ಚಿತ್ರಕಥೆ ಮತ್ತು ಸಂಭಾಷಣೆ ಬರೆಯುತ್ತಿದ್ದು, ಸದ್ಯದಲ್ಲೇ ಇಡಿ ಚಿತ್ರತಂಡದ ವಿವರ ಘೋಷಣೆಯಾಗಲಿದೆ.
ಇದನ್ನು ಓದಿ:Landlord Movie: ದುನಿಯಾ ವಿಜಯ್ ಪುತ್ರಿ ರಿತನ್ಯಾ ಹುಟ್ಟುಹಬ್ಬಕ್ಕೆ ʼಲ್ಯಾಂಡ್ ಲಾರ್ಡ್ʼ ಫಸ್ಟ್ ಲುಕ್ ರಿಲೀಸ್
'ಲಂಬೋದರ 2.0' ಚಿತ್ರದ ಟೈಟಲ್ ಟೀಸರ್ ಇದು ಗಣೇಶನ ಭಕ್ತಿಯನ್ನು ಸಾರುವ ಕಥೆ ಎನ್ನುವ ಸೂಚನೆ ನೀಡಿದೆ. ಆಧುನಿಕ ತಂತ್ರಜ್ಞಾನದೊಂದಿಗೆ ವಿಭಿನ್ನ ಕಥಾಹಂದರವನ್ನು ಈ ಚಿತ್ರ ಹೊಂದಿದ್ದು, ಟೀಸರ್‌ನಲ್ಲಿ ಗಣೇಶ ಭಕ್ತರೊಡನೆ ಸಂವಾದ ನಡೆಸುವ ದೃಶ್ಯವಿದೆ. ಗಣೇಶ ಚತುರ್ಥಿಯ ಸಂದರ್ಭದಲ್ಲಿಯೇ ಟೈಟಲ್ ಟೀಸರ್ ಬಿಡುಗಡೆಯಾಗಿರುವುದು ಸಿನಿಪ್ರಿಯರಿಗೆ ಮತ್ತಷ್ಟು ಖುಷಿ ನೀಡಿದೆ. ಅನಿಲ್ ಶೆಟ್ಟಿ ಫ್ಯಾಷನ್, ಟೆಕ್, ಮತ್ತು ಯುವ ಸಬಲೀಕರಣದ ಕ್ಷೇತ್ರ ಗಳಲ್ಲಿ ತಮ್ಮ ಸ್ಟಾರ್ಟಪ್‌ಗಳ ಮೂಲಕ ಗುರುತಿಸಿಕೊಂಡಿದ್ದು ಈಗ ಚಲನಚಿತ್ರ ರಂಗಕ್ಕೆ ಕಾಲಿಟ್ಟಿದ್ದು ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.