Murder Case: ಮಹಿಳೆಯ ಮೈಮೇಲಿನ ದೆವ್ವ ಬಿಡಿಸಲು ಯದ್ವಾತದ್ವಾ ಹೊಡೆತ, ಸಾವು
Murder Case: ಆಶಾ ಎಂಬ ಮಹಿಳೆ ತಮ್ಮ ಮೇಲೆ ಚೌಡಮ್ಮ ದೇವಿ ಬರುತ್ತಾಳೆ ಎಂದು ಊರವರಲ್ಲಿ ಮೌಢ್ಯ ಹಬ್ಬಿಸಿದ್ದಳು. ಇದನ್ನೇ ನಂಬಿದ್ದ ಗೀತಮ್ಮ ಕುಟುಂಬಸ್ಥರು ದೆವ್ವ ಬಂದಿದೆ ಎಂದು ಅವರನ್ನು ಆಶಾ ಬಳಿ ಕರೆದುಕೊಂಡು ಹೋಗಿದ್ದಾರೆ.

ಮೃತ ಗೀತಮ್ಮ

ಶಿವಮೊಗ್ಗ: ಮಹಿಳೆಯ ಮೈಗೆ ದೆವ್ವ (devil) ಮೆಟ್ಕೊಂಡಿದೆ ಎಂದು ಮನಸೋಯಿಚ್ಛೆ ಥಳಿಸಿದ್ದ ಪರಿಣಾಮ ಮಹಿಳೆ ಸಾವನ್ನಪ್ಪಿರುವಂತಹ (woman death) ಘಟನೆ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಸಮೀಪದ ಜಂಬರಗಟ್ಟೆ ಗ್ರಾಮದಲ್ಲಿ ನಡೆದಿದೆ. ಗೀತಮ್ಮ(53) ಮೃತ ಮಹಿಳೆ. ಗೀತಮ್ಮ ಮೇಲೆ ಹಲ್ಲೆ ಮಾಡಿದ ಆಶಾ ವಿರುದ್ಧ ಕೊಲೆ ಕೇಸ್ (murder case) ದಾಖಲಾಗಿದ್ದು, ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆಶಾ ಎಂಬ ಮಹಿಳೆ ತಮ್ಮ ಮೇಲೆ ಚೌಡಮ್ಮ ದೇವಿ ಬರುತ್ತಾಳೆ ಎಂದು ಊರವರಲ್ಲಿ ಮೌಢ್ಯ ಹಬ್ಬಿಸಿದ್ದಳು. ಇದನ್ನೇ ನಂಬಿದ್ದ ಗೀತಮ್ಮ ಕುಟುಂಬಸ್ಥರು ದೆವ್ವ ಬಂದಿದೆ ಎಂದು ಅವರನ್ನು ಆಶಾ ಬಳಿ ಕರೆದುಕೊಂಡು ಹೋಗಿದ್ದಾರೆ. ನಿನ್ನೆ ರಾತ್ರಿ 9 ಗಂಟೆಯಿಂದ ತಡರಾತ್ರಿ 3 ಗಂಟೆಯವರೆಗೂ ಆಶಾ ಗೀತಮ್ಮಳನ್ನು ಮನಸೋಯಿಚ್ಛೆ ತಳಿಸಿದ್ದಾರೆ. ಥಳಿತಕ್ಕೊಳಗಾದ ಗೀತಮ್ಮ ಅಸ್ವಸ್ಥಗೊಂಡಿದ್ದಾರೆ. ಬಳಿಕ ಅವರನ್ನು ಹೊಳೆಹೊನ್ನೂರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಿಸದೆ ಗೀತಮ್ಮ ಇಂದು ಮೃತಪಟ್ಟಿದ್ದಾರೆ. ಸ್ಥಳಕ್ಕೆ ಹೊಳೆಹೊನ್ನೂರು ಪೋಲಿಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
ಮ್ಯಾನೇಜರ್ ಕಿರುಕುಳ, ಕೆಎಸ್‌ಆರ್‌ಟಿಸಿ ಬಸ್ ಚಾಲಕ ಆತ್ಮಹತ್ಯೆ ಯತ್ನ
ಹಾಸನ : ಹಾಸನದಲ್ಲಿ (Hassan News)ಕೆಎಸ್ಆರ್ಟಿಸಿ (KSRTC) ಡಿಪೋ ಮ್ಯಾನೇಜರ್‌ನಿಂದ ಕಿರುಕುಳ (Harassment) ಆರೋಪದ ಹಿನ್ನೆಲೆಯಲ್ಲಿ ಕೆಎಸ್ಆರ್ಟಿಸಿ ಬಸ್ ಡ್ರೈವರ್ ಕಂ ಕಂಡಕ್ಟರ್ ಹರೀಶ್ ಎನ್ನುವವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಹಾಸನ ಜಿಲ್ಲೆಯ ಬೇಲೂರು ಪಟ್ಟಣದಲ್ಲಿ ನಡೆದಿದೆ. ಚಾಲಕರ ವಿಶ್ರಾಂತಿ ಕೊಠಡಿಯಲ್ಲಿ ವಿಷ ಕುಡಿದು ಚಾಲಕ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಡಿಪೋ ಮ್ಯಾನೇಜರ್ ಶಾಜಿಯಾ ಬಾನು ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದ್ದು, ಕೆಲಸದ ವಿಷಯವಾಗಿ ಹರೀಶ್ ಮತ್ತು ಶಾಜಿಯ ಬಾನು ನಡುವೆ ವಾಗ್ವಾದ ನಡೆದಿದೆ. ನಂತರ ವಿಶ್ರಾಂತಿ ಕೊಠಡಿಗೆ ಹೋಗಿ ಹರೀಶ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಅಸ್ವಸ್ಥಗೊಂಡ ಹರೀಶ್‌ಗೆ ಬೇಲೂರು ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಸ್ಥಳಕ್ಕೆ ಶಾಸಕ ಎಚ್. ಕೆ ಸುರೇಶ್ ಮತ್ತು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Fraud case: ಮಗುವಿಗೆ ಜ್ವರ; ದೆವ್ವದ ಕಥೆ ಹೇಳಿ ಮಹಿಳೆಗೆ 17 ಲಕ್ಷ ವಂಚಿಸಿದ ಜ್ಯೋತಿಷಿ!