ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Deputy Lokayukta: ದೂರುದಾರರಿಗೆ ಕಾನೂನಾತ್ಮಕ ಪರಿಹಾರ ದೊರಕಿಸುವುದು ಕರ್ತವ್ಯವಾಗಲಿ: ಉಪಲೋಕಾಯುಕ್ತ ಫಣೀಂದ್ರ

ಇಲಾಖೆಗೆ ಸಾರ್ವಜನಿಕರಿಂದ ದೂರು ಅಥವಾ  ಅರ್ಜಿ ಬಂದಾಗ ಅದನ್ನು ಮೊದಲು ತಮಗೆ ಬರುತ್ತದೆ ಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿ ಪರಿಶೀಲನೆ ನಡೆಸಿ ಖಚಿತ ಪಡಿಸಿಕೊಳ್ಳ ಬೇಕು. ಒಂದು ವೇಳೆ ಆ ದೂರು ಅಥವಾ ಅರ್ಜಿ ತಮ್ಮ ವ್ಯಾಪ್ತಿಗೆ ಬರದಿದ್ದಲ್ಲಿ ಸಂಬಂಧಿಸಿದ ದೂರು ದಾರ ಅಥವಾ ಅರ್ಜಿದಾರರನ್ನು ಕರೆಯಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ದೂರು ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಿ ಮುಕ್ತಿ ದೊರಕಿಸಿಕೊಡಬೇಕೆ ಹೊರತು ಅನವಶ್ಯಕವಾಗಿ ಧೂಳು ತಿನ್ನುವಂತೆ ಮಾಡಿ ಕಾಲಹರಣ ಮಾಡಬಾರದು

ದೂರುದಾರರಿಗೆ ಕಾನೂನಾತ್ಮಕ ಪರಿಹಾರ ದೊರಕಿಸುವುದು ಕರ್ತವ್ಯವಾಗಲಿ

-

Ashok Nayak
Ashok Nayak Feb 7, 2026 11:49 PM

ಚಿಂತಾಮಣಿ ತಾಲೂಕು ಸೌಧದಲ್ಲಿ ಉಪ ಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಅವರಿಂದ ಲೋಕಾಯುಕ್ತ ದೂರು ಪ್ರಕರಣಗಳ ವಿಲೇವಾರಿ

ಚಿಕ್ಕಬಳ್ಳಾಪುರ: ಸರ್ಕಾರದ ಯಾವುದೇ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರಿಗೆ ಸಾರ್ವ ಜನಿಕರಿಂದ ಯಾವುದೇ ದೂರು ಅಥವಾ ಅರ್ಜಿ ಬಂದಲ್ಲಿ ಅದನ್ನು ಮೊದಲು ಪರಿಶೀಲಿಸಿ ತಮ್ಮ ವ್ಯಾಪ್ತಿಗೆ ಬರುತ್ತದೆಯೇ ಇಲ್ಲವೇ ಎಂಬುದನ್ನು ಖಚಿತಪಡಿಸಿಕೊಂಡು, ಒಂದು ವೇಳೆ ತಮ್ಮ ವ್ಯಾಪ್ತಿಗೆ ಬರುತ್ತದೆ ಎನ್ನುವುದಾದರೆ ಆ ದೂರು, ಅರ್ಜಿಗೆ ಸಂದರ್ಭೋಚಿತವಾಗಿ, ಸಮಯೋಚಿತ ವಾಗಿ ಆದಷ್ಟು ಶೀಘ್ರವಾಗಿ ಕಾನೂನಾತ್ಮಕವಾಗಿ ಪರಿಹಾರ ದೊರಕಿಸಿಕೊಡಬೇಕೆಂದು ಉಪ ಲೋಕಾಯುಕ್ತ ಕೆ.ಎನ್.ಫಣೀಂದ್ರ ಅವರು ಅಧಿಕಾರಿಗಳಿಗೆ ಕಿವಿ ಮಾತು ಹೇಳಿದರು.

ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ತಾಲ್ಲೂಕು ಪಂಚಾಯತ್ ನ ಸಾಮರ್ಥ್ಯ ಸೌಧದಲ್ಲಿ ಅವರು ಇಂದು ಚಿಂತಾಮಣಿ, ಬಾಗೇಪಲ್ಲಿ ,ಶಿಡ್ಲಘಟ್ಟ ಮತ್ತು ಚೇಳೂರು ತಾಲ್ಲೂಕುಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ ತನಿಖೆಗೆ ಬಾಕಿ ಇರುವ ಪ್ರಕರಣಗಳ ವಿಚಾರಣೆ ನಡೆಸುವ ಪ್ರಕ್ರಿಯೆಗೆ ಚಾಲನೆ ನೀಡಿ ಮಾತನಾಡಿದರು.

ಇಲಾಖೆಗೆ ಸಾರ್ವಜನಿಕರಿಂದ ದೂರು ಅಥವಾ  ಅರ್ಜಿ ಬಂದಾಗ ಅದನ್ನು ಮೊದಲು ತಮಗೆ ಬರುತ್ತದೆಯೇ ಎಂಬುದನ್ನು ಸಂಬಂಧಪಟ್ಟ ಅಧಿಕಾರಿ ಅಥವಾ ಸಿಬ್ಬಂದಿ ಪರಿಶೀಲನೆ ನಡೆಸಿ ಖಚಿತ ಪಡಿಸಿಕೊಳ್ಳಬೇಕು. ಒಂದು ವೇಳೆ ಆ ದೂರು ಅಥವಾ ಅರ್ಜಿ ತಮ್ಮ ವ್ಯಾಪ್ತಿಗೆ ಬರದಿದ್ದಲ್ಲಿ ಸಂಬಂಧಿಸಿದ ದೂರುದಾರ ಅಥವಾ ಅರ್ಜಿದಾರರನ್ನು ಕರೆಯಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು. ದೂರು ಅರ್ಜಿಯನ್ನು ಶೀಘ್ರ ವಿಲೇವಾರಿ ಮಾಡಿ ಮುಕ್ತಿ ದೊರಕಿಸಿಕೊಡಬೇಕೆ ಹೊರತು ಅನವಶ್ಯಕವಾಗಿ ಧೂಳು ತಿನ್ನುವಂತೆ ಮಾಡಿ ಕಾಲಹರಣ ಮಾಡಬಾರದು ಎಂದು ತಾಕೀತು ಮಾಡಿದರು.

ಇದನ್ನೂ ಓದಿ: Chikkaballapur News: ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ರೆಡ್ಡಿ ಆಯ್ಕೆ

ಸಂವಿಧಾನವು ಸರ್ಕಾರದ ಮೂಲಕ ನೀಡಿರುವ ಹುದ್ದೆ, ಸ್ಥಾನಮಾನ, ಅವಕಾಶ ಹಕ್ಕುಗಳನ್ನು ಸಾರ್ವಜನಿಕರ ಸೇವೆ ಅಥವಾ ಶ್ರೇಯೋಭಿವೃದ್ಧಿಗೆ ಪೂರಕವಾಗಿ ಬಳಸಬೇಕು. ಇದು ದೇವರಂತಿ ರುವ ಸಂವಿಧಾನ ನೀಡಿರುವ ಕರ್ತವ್ಯವಾಗಿದ್ದು, ಅದನ್ನು ನ್ಯಾಯಯುತ ರೀತಿ ಮಾರ್ಗದಲ್ಲಿ ಕಾರ್ಯಗತಗೊಳಿಸಲು ಹಿಂಜರಿಯುವುದು ಬೇಡ. ಯಾವುದೇ ಸಾರ್ವಜನಿಕರು ವೃಥಾ ದುರುದ್ದೇಶ ಪೂರಿತವಾಗಿ ದೂರು ಅಥವಾ ಅರ್ಜಿ ನೀಡುವುದಿಲ್ಲ. ಸಾರ್ವಜನಿಕರೂ ಈ ವಿಚಾರದಲ್ಲಿ ಅತ್ಯಂತ ಹೊಣೆಗಾರಿಕೆ ಮತ್ತು ಬದ್ಧತೆಯಿಂದ ನಡೆದುಕೊಳ್ಳಬೇಕು ಎಂದರು.

ಸಾರ್ವಜನಿಕರು ಯಾವುದೇ ಅಧಿಕಾರಿ ಅಥವಾ ನೌಕರರ ವಿರುದ್ಧದ ದೂರು ಅರ್ಜಿಯನ್ನು ಸಕಾರಾತ್ಮಕವಾಗಿ ನೀಡಬೇಕೇ ಹೊರತು ದುರುದ್ದೇಶಪೂರಿತವಾಗಿ ಅಲ್ಲ. ಅಧಿಕಾರಿ ಮತ್ತು ನೌಕರರು ಅದೇ ರೀತಿಯಲ್ಲಿ ಸಾರ್ವಜನಿಕರ ಸಮಸ್ಯೆ, ಕುಂದುಕೊರತೆ ದೂರು ಅರ್ಜಿಗಳನ್ನು ಪರಿಶೀಲಿಸದೆ ಏಕಾಏಕಿ ನಕಾರಾತ್ಮಕ ಮನೋಧೋರಣೆಯಿಂದ ನೋಡಬಾರದು. ನ್ಯಾಯಾಲಯ ಗಳಿಗೆ ಹೋಗುವವರೆಲ್ಲಾ ಜಗಳ ಮಾಡುವವರಲ್ಲ. ಬದಲಿಗೆ, ತಮ್ಮ ಹಕ್ಕು ಬಾಧ್ಯತೆಗಳನ್ನು ಕಾನೂನಾತ್ಮಕವಾಗಿ ಸ್ಥಾಪಿಸಿಕೊಳ್ಳಲು, ಪರಿಹರಿಸಿಕೊಳ್ಳಲು ಬಂದವರಾಗಿರುತ್ತಾರೆ ಎಂಬ ಸಾಮಾನ್ಯ ವಿಷಯವನ್ನು ಸೂಕ್ಷ್ಮವಾಗಿ ಗ್ರಹಿಸಬೇಕು ಎಂದರು.

samartys souwdha 2

ಲಂಚ ನಿಷೇಧ ಕಾಯ್ದೆ ಇದೆ, ಇರಲಿ ಅಥವಾ ಬಿಡಲಿ, ಲಂಚ ಮುಟ್ಟುವುದಿಲ್ಲ, ಯಾವುದೇ ಪ್ರಭಾವಕ್ಕೆ ಮಣಿಯುವುದಿಲ್ಲ, ಕೆಲಸವನ್ನು ನಿಷ್ಠೆ, ಪ್ರಾಮಾಣಿಕತೆಯಿಂದ ಮಾಡುತ್ತೇನೆಂಬ ಸಂಕಲ್ಪ ಮತ್ತು ಶಪಥ ಮಾಡಬೇಕು. ಮನೆ,ಮನವನ್ನ ಬೆಳಗುವ ಮೂಲಕ ಸೇವಾ ಕೈಂಕರ್ಯ ಮತ್ತು ದೇಶೋದ್ಧಾರದ ಕೈಂಕರ್ಯವನ್ನು ಸೂಕ್ತವಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಚಿಂತಾಮಣಿ, ಬಾಗೇಪಲ್ಲಿ, ಶಿಡ್ಲಘಟ್ಟ ಮತ್ತು ಚೇಳೂರು ತಾಲ್ಲೂಕುಗಳಿಗೆ ಸಂಬಂಧಪಟ್ಟಂತೆ ಮಾನ್ಯ ಲೋಕಾಯುಕ್ತ ನ್ಯಾಯಾಲಯದಲ್ಲಿ ದಾಖಲಾಗಿ ತನಿಖೆ ಬಾಕಿ ಇರುವ ಕೆಲವು ದೂರು ಪ್ರಕರಣಗಳ ಕುರಿತು ಇಂದು ವಿಚಾರಣೆ ನಡೆಸಿ ಸ್ಥಳದಲ್ಲೇ ದೂರುದಾರರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗಿದೆ. ಇಂದು ಒಟ್ಟು 75 ಪ್ರಕರಣಗಳನ್ನು ವಿಲೇ ಮಾಡಲು ಗುರುತಿಸ ಲಾಗಿದ್ದು, ಮುಖ್ಯವಾಗಿ ಕಂದಾಯ ಮತ್ತು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಇಲಾಖೆಗಳಿಗೆ ಸಂಬಂಧಪಟ್ಟ ದೂರು ಅರ್ಜಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದವು.

ಕೆಲವು ಸಂದರ್ಭಗಳಲ್ಲಿ ಸರ್ಕಾರಿ ಕೆಲಸ ಕಾರ್ಯಗಳು ವಿಳಂಬವಾಗುವುದರಿದ ಲಂಚ ಕೊಡದಿದ್ದರೆ ಸರ್ಕಾರದ ಯಾವುದೇ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ನಡೆಯುವುದಿಲ್ಲ ಎನ್ನುವ ಮನೋ ಭಾವನೆ ಸಾರ್ವಜನಿಕ ವಲಯದಲ್ಲಿ ಜನ ಜನಿತವಾಗಿದೆ.ಈ ಮನೋಭಾವನೆ ಬದಲಾಗುವಂತೆ ಬದ್ದತೆಯಿಂದ ಆಡಳಿತ ವರ್ಗ ಕೆಲಸ ಮಾಡಬೇಕಿದೆ. ಜಾತಿ ರಹಿತವಾಗಿ,ಆಮೀಷ ರಹಿತವಾಗಿ ಹಾಗೂ ಶಿಫಾರಸ್ಸು ಮತ್ತು ಒತ್ತಡ ರಹಿತ ಕಾನೂನು ರೀತ್ಯ ಕಡತಗಳ ವಿಲೆವಾರಿಯಾಗಬೇಕು. ಅರ್ಹ ರಿಗೆ ಸರ್ಕಾರಿ ಸೇವೆಗಳು ಅನಗತ್ಯ ಕಾಲವಿಳಂಬವಿಲ್ಲದೆ ಜನರಿಗೆ ದೊರಕಬೇಕು. ಕಾನೂನಿ ನಡಿ ಉತ್ಪತ್ತಿಯಾಗುವ ಹಕ್ಕುಗಳ ರಕ್ಷಣೆಯಾಗುಬೇಕು ಎಂದು ಹೇಳಿದರು.

ಕಾನುನಿನಡಿ ಉತ್ಪತ್ತಿಯಾಗುವ ಸೌಲತ್ತುಗಳು ಯಾವುದೇ ಒತ್ತಡಗಳಿಗೆ, ಪ್ರಲೋಬನೆಗಳಿಗೆ ಒಳಗಾಗದೆ ವಸ್ತುನಿಷ್ಠವಾಗಿ ಅರ್ಹರಿಗೆ ತಲುಪಬೇಕು. ಆಗ ನಾವು ಸರ್ಕಾರಿ ನೌಕರಿಯ ಸೇವೆಗೆ ಸೇರಿದ್ದಕ್ಕೆ ಸಾರ್ಥಕವಾಗುತ್ತದೆ. ಸರ್ಕಾರದ ಕೆಲಸ ದೇವರ ಕೆಲಸ ಎಂದು ಕರೆಯುತ್ತೇವೆ. ಆದ್ದರಿಂದ ದೇವರಿಗೆ ದ್ರೋಹ ಮಾಡುವ ರೀತಿಯಲ್ಲಿ ಕೆಲಸ ಮಾಡಬಾರದು. ಯಾವುದೇ ನಿರೀಕ್ಷೆ ಇಲ್ಲದೆ, ಎಲ್ಲಾ ಸರ್ಕಾರಿ ಅಧಿಕಾರಿಗಳು, ಸಿಬ್ಬಂದಿ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಎಲ್ಲರ ಮನೋಭಾವನೆ ಬದಲಾವಣೆ ಆಗಬೇಕು ಎಂದು ಉಪಲೋಕಾಯುಕ್ತರು ನೀತಿ ಪಾಠ ತಿಳಿಸಿದರು. ನಂತರ ಕ್ರಮಾನುಗತವಾಗಿ ಇಂದು 75 ಪ್ರಕರಣಗಳ ಕುರಿತು ವಿಚಾರಣೆ ನಡೆಸಿ ಕೆಲವು ಪ್ರಕರಣ ಗಳನ್ನು ಸ್ಥಳದಲ್ಲೇ ಪರಿಹಾರ ನೀಡಿ ನೊಂದವರಿಗೆ ನ್ಯಾಯ ಒದಗಿಸಿದರು. ಕೆಲವು ಪ್ರಕರಣಗಳಲ್ಲಿ ಕಾಲ ಮಿತಿಯಲ್ಲಿ ಕೆಲಸ ಮಾಡಿಕೊಡಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಜಿ.ಪ್ರಭು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಡಾ.ವೈ.ನವೀನ್ ಭಟ್, ಹಿರಿಯ ಸಿವಿಲ್ ನ್ಯಾಯಾಧೀಶರಾದ ಕಿರಣ್ ಎಂ ಪಾಟೀಲ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್  ನ್ಯಾಯಾಧೀಶ ರಾದ ಶಿಲ್ಪ, ಲೋಕಾಯುಕ್ತದ ಎಸ್.ಪಿ. ಆಂಟೋನಿ ಜಾನ್, ಡಿ.ವೈ.ಎಸ್.ಪಿ ವೀರೇಂದ್ರ ಕುಮಾರ್, ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಸಾರ್ವಜನಿಕರು ಉಪಸ್ಥಿತರಿದ್ದರು.