ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Gubbi News ಮಾದಾರ ಮಹಾಸಭಾದ ಕಡಬ ಹೋಬಳಿ ಘಟಕದ ಅಧ್ಯಕ್ಷರಾಗಿ ಲಕ್ಷ್ಮಣ್ ಉಪಾಧ್ಯಕ್ಷರಾಗಿ ಸುರೇಶ್ ಆಯ್ಕೆ

ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ಬೆಳೆಸುವ ಜೊತೆಗೆ ಒಗ್ಗಟ್ಟು ಪ್ರದರ್ಶನ ಹಾಗೂ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗುವುದು. ತಾಲ್ಲೂಕು ಕೇಂದ್ರದಲ್ಲಿ ಹಾಸ್ಟೆಲ್ ನಿರ್ಮಾಣ ಹಾಗೂ ಬಡ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಜೊತೆಗೆ ವಿದ್ಯಾವಂತ ಯುವಕರಿಗೆ ಸ್ವಯಂ ಉದ್ಯೋಗ ಸೃಷ್ಟಿ, ಆರೋಗ್ಯ ವಿಚಾರದಲ್ಲಿ ಸಹಕಾರ ಹೀಗೆ ಅನೇಕ ವಿಚಾರ ಮಹಾಸಭಾ ನಡೆಸಲಿದೆ

ಅಧ್ಯಕ್ಷರಾಗಿ ಲಕ್ಷ್ಮಣ್ ಉಪಾಧ್ಯಕ್ಷರಾಗಿ ಸುರೇಶ್ ಆಯ್ಕೆ

-

Ashok Nayak
Ashok Nayak Feb 8, 2026 12:10 AM

ಗುಬ್ಬಿ: ಮಾದರ ಮಹಾಸಭಾದ ಕಡಬ ಹೋಬಳಿ ಘಟಕದ ನೂತನ ಅಧ್ಯಕ್ಷರಾಗಿ ಲಕ್ಷ್ಮಣ್ ಡಿ.ಎಂ. ಮತ್ತು ಉಪಾಧ್ಯಕ್ಷರಾಗಿ ಸುರೇಶ್.ಕೆ.ಆರ್ ಸೇರಿದಂತೆ ನೂತನ ಪದಾಧಿಕಾರಿಗಳನ್ನು ತಾಲ್ಲೂಕು ಸಮಿತಿ ಪದಾಧಿಕಾರಿಗಳ ಸಮ್ಮುಖದಲ್ಲಿ ಇಂದು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ತಾಲೂಕಿನ ಕಡಬ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯ ಆವರಣದಲ್ಲಿ ತಾಲ್ಲೂಕು ಘಟಕದ ಅಧ್ಯಕ್ಷ ಕೊಡಿಯಾಲ ಮಹದೇವ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಕಡಬ ಹೋಬಳಿ ಘಟಕದ ನೂತನ ಸಮಿತಿ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯನ್ನು ನಡೆಸಲಾಯಿತು.

ಅಧ್ಯಕ್ಷರಾಗಿ ಲಕ್ಷ್ಮಣ್ ಡಿ.ಎಂ. ಉಪಾಧ್ಯಕ್ಷರಾಗಿ ಸುರೇಶ್, ಕಾರ್ಯದರ್ಶಿಯಾಗಿ ಬಸವರಾಜು ಜೀಗನಹಳ್ಳಿ, ಸಂಘಟನಾ ಕಾರ್ಯದರ್ಶಿ ರಾಮಕೃಷ್ಣ ಕಡಬ, ಖಂಜಾಚಿ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು. ಇನ್ನೂ ಕಾರ್ಯಕಾರಿ ಸಮಿತಿಯಲ್ಲಿ ಬಸವರಾಜು, ನಾರಾಯಣಪ್ಪ, ಆಯ್ಕೆಯಾದರು.

ಇದನ್ನೂ ಓದಿ: Gubbi News: ಅದ್ದೂರಿ ಜರುಗಿದ ಸ್ಟೆಲ್ಲಾ ಮೇರಿಸ್ ಶಾಲೆಯ ಆರಂಭ-2ಕೆ26 ವಾರ್ಷಿಕೋತ್ಸವ

ಇದೇ ಸಂದರ್ಭದಲ್ಲಿ ತಾಲ್ಲೂಕು ಸಮಿತಿಯ ಅಧ್ಯಕ್ಷರಾದ ಕೊಡಿಯಾಲ ಮಹದೇವು ಮಾತನಾಡಿ ನಮ್ಮ ಮಾದಿಗ ಸಮುದಾಯದ ಏಳಿಗೆಗೆ ಮಹಾಸಭಾ ರಾಜ್ಯ ವ್ಯಾಪಿ ಕೆಲಸ ಮಾಡಲಿದೆ. ಇಲ್ಲಿ ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ಬೆಳೆಸುವ ಜೊತೆಗೆ ಒಗ್ಗಟ್ಟು ಪ್ರದರ್ಶನ ಹಾಗೂ ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಲಾಗುವುದು. ತಾಲ್ಲೂಕು ಕೇಂದ್ರದಲ್ಲಿ ಹಾಸ್ಟೆಲ್ ನಿರ್ಮಾಣ ಹಾಗೂ ಬಡ ಮಕ್ಕಳ ಭವಿಷ್ಯ ರೂಪಿಸುವ ಕೆಲಸ ಜೊತೆಗೆ ವಿದ್ಯಾವಂತ ಯುವಕರಿಗೆ ಸ್ವಯಂ ಉದ್ಯೋಗ ಸೃಷ್ಟಿ, ಆರೋಗ್ಯ ವಿಚಾರದಲ್ಲಿ ಸಹಕಾರ ಹೀಗೆ ಅನೇಕ ವಿಚಾರ ಮಹಾಸಭಾ ನಡೆಸಲಿದೆ. ಗ್ರಾಮೀಣ ಭಾಗದಲ್ಲಿ ಮಾದಿಗ ಸಮುದಾಯ ಒಗ್ಗೂಡಿಸಿ ಸಮಾಜವನ್ನು ಮುಖ್ಯವಾಹಿನಿಗೆ ತರೋಣ ಎಂದು ಕರೆ ನೀಡಿದರು.

 ಈ ಸಂದರ್ಭದಲ್ಲಿ ಮಹಾಸಭಾದ ಉಪಾಧ್ಯಕ್ಷರಾದ ಫಣೀಂದ್ರ, ಪಾಂಡುರಂಗಯ್ಯ, ಕಾರ್ಯದರ್ಶಿ ಶ್ರೀಧರ್, ಜಿ.ವಿ.ಮಂಜುನಾಥ್, ಕಸಬಾ ಘಟಕದ ಅಧ್ಯಕ್ಷ ಮಡೇನಹಳ್ಳಿ ದೇವರಾಜು ಸೇರಿದಂತೆ ಶಿಕ್ಷಕರಾದ ಶಿವಣ್ಣ, ಕಡಬ ಶಂಕರ್, ರಾಘವೇಂದ್ರ, ಶಿವಣ್ಣ ಕಲ್ಲೂರು, ಯೋಗೀಶ್ ಮೇಳೇಕಲ್ಲಹಳ್ಳಿ, ಸಂತೋಷ್ ಕೋಣನಕೆರೆ, ಕಲ್ಲೇಶ್, ಈಶ್ವರಯ್ಯ, ನಟರಾಜು ಸೇರಿದಂತೆ ಕಡಬ ಹೋಬಳಿಯ ಮಾದರ ಮಹಾಸಭಾದ ನೂತನ ಪದಾಧಿಕಾರಿಗಳು ಸ್ಥಳದಲ್ಲಿದ್ದರು.