ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ನಾಸಿಕ್ ಟಿಸಿಎಸ್ ಪ್ರಕರಣ: ನಿದಾ ಖಾನ್‌ಗೆ ನಿರೀಕ್ಷಣಾ ಜಾಮೀನು ತಿರಸ್ಕರಿಸಿದ ನ್ಯಾಯಾಲಯ

ಮಹಾರಾಷ್ಟ್ರದ ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಬಲವಂತದ ಮತಾಂತರ ಯತ್ನದ ಆರೋಪದಲ್ಲಿ ಬಂಧಿತಳಾಗಿರುವ ನಿದಾ ಖಾನ್‌ನ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಾಸಿಕ್ ರಸ್ತೆ ನ್ಯಾಯಾಲಯ ತಿರಸ್ಕರಿಸಿದೆ. ಡಿಜಿಟಲ್ ಪುರಾವೆಗಳು, ತನಿಖೆ ವಿಷಯಗಳನ್ನು ಆಧರಿಸಿ ಈ ಆದೇಶ ಹೊರಡಿಸುತ್ತಿರುವುದಾಗಿ ನ್ಯಾಯಾಲಯ ತಿಳಿಸಿದೆ.

ನಿದಾ ಖಾನ್ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕಾರ

ಸಂಗ್ರಹ ಚಿತ್ರ -

ಮಹಾರಾಷ್ಟ್ರ: ನಾಸಿಕ್ ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ ಪ್ರಕರಣದ (Nashik TCS case) ಪ್ರಮುಖ ಆರೋಪಿಯಾಗಿರುವ ನಿದಾ ಖಾನ್‌ಗೆ (Nida Khan) ನಿರೀಕ್ಷಣಾ ಜಾಮೀನನ್ನು (anticipatory bail plea) ನಾಸಿಕ್ ರಸ್ತೆ ನ್ಯಾಯಾಲಯ (Nasik court) ತಿರಸ್ಕರಿಸಿದೆ. ಡಿಜಿಟಲ್ ಪುರಾವೆ ಮಾತ್ತು ತನಿಖೆ ವಿಷಯಗಳನ್ನು ಆಧರಿಸಿ ಈ ಆದೇಶ ಹೊರಡಿಸುತ್ತಿರುವುದಾಗಿ ನ್ಯಾಯಾಲಯ ತಿಳಿಸಿದೆ. ಮಹಾರಾಷ್ಟ್ರದ (maharastra) ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮತ್ತು ಬಲವಂತದ ಮತಾಂತರ ಯತ್ನದ ಆರೋಪದಲ್ಲಿ ನಿದಾ ಖಾನ್ ಳನ್ನು ಬಂಧಿಸಲಾಗಿತ್ತು.

ನಾಸಿಕ್‌ನ ಟಿಸಿಎಸ್ ಕಚೇರಿಯಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಮತ್ತು ಬಲವಂತದ ಧಾರ್ಮಿಕ ಮತಾಂತರಕ್ಕೆ ಪ್ರಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿರುವ ನಿದಾ ಖಾನ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಾಸಿಕ್ ರಸ್ತೆ ನ್ಯಾಯಾಲಯ ಶನಿವಾರ ತಿರಸ್ಕರಿಸಿದೆ.

ಹೆಸರು ಬದಲಾವಣೆ, ಬುರ್ಖಾ ಧಾರಣೆಗೆ ತರಬೇತಿ, ಮಲೇಷ್ಯಾ ಉದ್ಯೋಗದ ಆಮಿಷ: ಟಿಸಿಎಸ್ ಕರ್ಮಕಾಂಡದ ಮತ್ತಷ್ಟು ವಿವರ ಬಹಿರಂಗ

ನಿದಾ ಖಾನ್ ಅವರ ಅರ್ಜಿ ವಿಚಾರಣೆಯನ್ನು ಏಪ್ರಿಲ್ 29ರಂದು ವಿಡಿಯೋ ಮೂಲಕ ನಡೆಸಲಾಗಿದ್ದು, ಈ ಸಂದರ್ಭದಲ್ಲಿ ವಿಶೇಷ ಸಾರ್ವಜನಿಕ ಅಭಿಯೋಜಕ ಅಜಯ್ ಮಿಶ್ರಾ ಅವರು ರಾಜ್ಯವನ್ನು ಪ್ರತಿನಿಧಿಸಿದರೆ, ವಕೀಲ ರಾಹುಲ್ ಕಾಸ್ಲಿವಾಲ್ ಆರೋಪಿ ಪರವಾಗಿ ಹಾಜರಾದರು.

ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರತಿನಿಧಿಯಾಗಿ ತನಿಖಾಧಿಕಾರಿ ಎಸಿಪಿ ಸಂದೀಪ್ ಮಿಟ್ಕೆ ಅವರು ಕೂಡ ಪ್ರಾಸಿಕ್ಯೂಷನ್‌ನ ನಿಲುವನ್ನು ಮಂಡಿಸಿ ಜಾಮೀನು ನೀಡುವುದನ್ನು ವಿರೋಧಿಸಿದರು. ಇದಕ್ಕೂ ಮೊದಲು ಏಪ್ರಿಲ್ 18ರಂದು ನಡೆದ ವಿಚಾರಣೆ ವೇಳೆಯಲ್ಲೂ ಆರೋಪಗಳ ಗಂಭೀರತೆ ಮತ್ತು ಹೆಚ್ಚಿನ ತನಿಖೆಯ ಅಗತ್ಯವನ್ನು ಉಲ್ಲೇಖಿಸಿ ಪ್ರಾಸಿಕ್ಯೂಷನ್ ಜಾಮೀನು ನೀಡುವುದನ್ನು ವಿರೋಧಿಸಿತು.

ನಿದಾ ಖಾನ್ ಹಿಂದುಳಿದ ವರ್ಗಕ್ಕೆ ಸೇರಿದ ಸಂತ್ರಸ್ತೆಗೆ ನಿರ್ದಿಷ್ಟ ಧಾರ್ಮಿಕ ಆಚರಣೆಗಳನ್ನು ನಡೆಸಲು ಪ್ರೇರೇಪಿಸಿದ್ದಾಳೆ. ಹಿಜಾಬ್ ಧರಿಸಲು ಒತ್ತಾಯಿಸಿದ್ದು, ಧರ್ಮಕ್ಕೆ ಸಂಬಂಧಿಸಿ ಮೊಬೈಲ್ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಒತ್ತಾಯಿಸಿದ್ದಾಳೆ. ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದ ಕೆಲವು ಲಿಂಕ್‌ಗಳನ್ನು ಕೂಡ ಹಂಚಿಕೊಂಡಿದ್ದಾಳೆ ಎಂದು ಪ್ರಾಸಿಕ್ಯೂಷನ್ ತಿಳಿಸಿದೆ.

ಟಿಸಿಎಸ್ ಕಂಪನಿ ಮತಾಂತರ ಕೇಸ್‌; ಗರ್ಭಿಣಿ ಎಂದು ನಿರೀಕ್ಷಣಾ ಜಾಮೀನು ಕೋರಲು ನಿದಾ ಖಾನ್ ಸಜ್ಜು?

ಪ್ರಕರಣಕ್ಕೆ ಸಂಬಂಧಿಸಿ ಪ್ರಮುಖ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದ್ದು, ಅವುಗಳನ್ನು ನ್ಯಾಯಾಲಯಕ್ಕೆ ಸಾಕ್ಷ್ಯವಾಗಿ ಪ್ರಸ್ತುತಪಡಿಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದರು. ಎರಡೂ ಕಡೆಯ ವಾದಗಳನ್ನು ಆಲಿಸಿದ ನ್ಯಾಯಾಲಯವು ಶನಿವಾರ ತೀರ್ಪು ನೀಡಿದ್ದು, ನಿದಾ ಖಾನ್‌ಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದೆ.

ಟಿಸಿಎಸ್‌ನ ನಾಸಿಕ್ ಬಿಪಿಒದಲ್ಲಿ ತಮ್ಮ ಸಹೋದ್ಯೋಗಿಗಳ ಮೇಲೆ ಅತ್ಯಾಚಾರ, ಲೈಂಗಿಕ ಕಿರುಕುಳ, ಧಾರ್ಮಿಕ ಬಲವಂತ ಮತ್ತು ಇತರ ರೀತಿಯ ಕಿರುಕುಳದ ಆರೋಪ ಹೊತ್ತಿರುವ ಎಂಟು ಉದ್ಯೋಗಿಗಳಲ್ಲಿ ಒಬ್ಬರಾಗಿರುವ ನಿದಾ ಖಾನ್ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಹೇಳಲಾಗಿದೆ. 26 ವರ್ಷದ ನಿದಾ ಖಾನ್ ಮದುವೆಯಾದ ಬಳಿಕ ಕಳೆದ ವರ್ಷ ಜನವರಿಯಲ್ಲಿ ಮುಂಬೈಗೆ ಸ್ಥಳಾಂತರಗೊಂಡಿದ್ದಳು.