ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

Woman Murder: ಪತಿಯೆದುರೇ ವೃದ್ಧೆಯನ್ನು ಕೊಂದು ಚಿನ್ನ ದೋಚಿದವನು ಪಕ್ಕದ ಮನೆಯವನೇ!

ಕರಣ ದಾಖಲಿಸಿಕೊಂಡ ನೆಲಮಂಗಲ ಟೌನ್ ಪೊಲೀಸರು ಸಿಸಿಟಿವಿಯ ದೃಶ್ಯ ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಮೈತುಂಬ ಸಾಲವಿದ್ದು, ಸಾಲ ತೀರಿಸೋಕೆ ಚಿನ್ನಾಭರಣ ದೋಚುವ ಸ್ಕೆಚ್ ಹಾಕಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಕೊಲೆಯಾದ ಆರು ಗಂಟೆಯಲ್ಲಿ ನೆಲಮಂಗಲ ಟೌನ್ ಪೊಲೀಸರು ಪ್ರಕರಣ ಬೇಧಿಸಿದ್ದಾರೆ.

ಪತಿಯೆದುರೇ ವೃದ್ಧೆಯನ್ನು ಕೊಂದು ಚಿನ್ನ ದೋಚಿದವನು ಪಕ್ಕದ ಮನೆಯವನೇ!

ಹತ್ಯೆಯಾದ ಶೋಭಾ, ಆರೋಪಿ ಶಿವಕುಮಾರ್ -

ಹರೀಶ್‌ ಕೇರ
ಹರೀಶ್‌ ಕೇರ Feb 19, 2026 2:45 PM

ನೆಲಮಂಗಲ, ಫೆ.19: ವ್ಹೀಲ್‌ಚೇರ್‌ನಲ್ಲಿ ಅಸಹಾಯಕನಾಗಿ ಕುಳಿತಿದ್ದ ಪತಿಯೆದುರೇ ವೃದ್ಧೆಯನ್ನು ಕತ್ತು ಹಿಸುಕಿ ಹತ್ಯೆ (Woman Murder case) ಮಾಡಿ, ಚಿನ್ನಾಭರಣ (gold) ದೋಚಿ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ನೆಲಮಂಗಲದಲ್ಲಿ (Nelamangala) ಕೃತ್ಯ ನಡೆದಿತ್ತು. ಶೋಭಾ (69) ಮೃತ ವೃದ್ಧೆ. ಬಂಧಿತ ಆರೋಪಿಯನ್ನು ಶಿವಕುಮಾರ್ ಎಂದು ಗುರುತಿಸಲಾಗಿದ್ದು, ಈತ ಪಕ್ಕದ ಮನೆಯಲ್ಲಿಯೇ ವಾಸವಾಗಿದ್ದ.

ವೃದ್ಧ ದಂಪತಿ ಇಬ್ಬರೇ ಮನೆಯಲ್ಲಿದ್ದಾಗ ಈತ ಕೃತ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ. ಬೆಂಗಳೂರು ಹೊರವಲಯದ ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ ಘಟನೆ ನಡೆದಿತ್ತು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ನೆಲಮಂಗಲ ಟೌನ್ ಪೊಲೀಸರು ಸಿಸಿಟಿವಿಯ ದೃಶ್ಯ ಪರಿಶೀಲನೆ ನಡೆಸಿ, ಆರೋಪಿಯನ್ನು ಬಂಧಿಸಿದ್ದಾರೆ. ಮೈತುಂಬ ಸಾಲವಿದ್ದು, ಸಾಲ ತೀರಿಸೋಕೆ ಚಿನ್ನಾಭರಣ ದೋಚುವ ಸ್ಕೆಚ್ ಹಾಕಿದ್ದ ಎಂದು ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಕೊಲೆಯಾದ ಆರು ಗಂಟೆಯಲ್ಲಿ ಪ್ರಕರಣ ಬೇಧಿಸಿದ ನೆಲಮಂಗಲ ಟೌನ್ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ. ನೆಲಮಂಗಲ ಟೌನ್ ಸಿಪಿಐ ಭರತ್ ಗೌಡ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.

ಇದನ್ನೂ ಓದಿ: Honour Killing: ರಾಜ್ಯದಲ್ಲಿ ಮತ್ತೊಂದು ಮರ್ಯಾದಾ ಹತ್ಯೆಗೆ ಯತ್ನ: ಗರ್ಭಿಣಿ ತಂಗಿಯನ್ನು ಕೊಡಲಿಯಿಂದ ಕೊಚ್ಚಿದ ಪಾಪಿ

ಓವರ್‌ಟೇಕ್‌ ವೇಳೆ ಲಾರಿ ಚಕ್ರಕ್ಕೆ ಬೈಕ್‌ ಸಿಲುಕಿ ಇಬ್ಬರು ಸಾವು

ಕೊಪ್ಪಳ: ಓವರ್ ಟೆಕ್ ಮಾಡುವ ವೇಳೆ ಲಾರಿ ಚಕ್ರಕ್ಕೆ ಬೈಕ್‌ ಸಿಲುಕಿ ಇಬ್ಬರು ಸವಾರರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಉಪಲದಿನ್ನಿ ಎಂಬ ಗ್ರಾಮದಲ್ಲಿ ನಡೆದಿದೆ.

ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪುರ ನಿವಾಸಿಗಳಾದ ಶ್ರೀನಿವಾಸ್ (26) ಹಾಗೂ ಸಿದ್ದನಗೌಡ (25) ಮೃತ ಸವಾರರು ಎಂದು ತಿಳಿದುಬಂದಿದೆ. ಸಂಬಂಧಿಕರೊಬ್ಬರ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಶ್ರೀನಿವಾಸ್ ಸ್ನೇಹಿತನ ಜತೆಗೆ ತೆರಳುತ್ತಿದ್ದರು. ಮುಸಲಾಪುರದಿಂದ ಬೈಕ್‌ನಲ್ಲಿ ಹಿರೇ ಅರಳಹಳ್ಳಿಗೆ ಇಬ್ಬರು ತೆರಳುತ್ತಿದ್ದರು. ಈ ವೇಳೆ ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವ ಭರದಲ್ಲಿ ನಿಯಂತ್ರಣ ತಪ್ಪಿ ಲಾರಿ ಕೆಳಗಡೆ ಸಿಲುಕಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಅಪಘಾತದ ಕುರಿತು ಬೇವೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.