ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

CSK vs MI: ಇಂದಿನ ಪಂದ್ಯದಲ್ಲಿ ಆಡಲಿದ್ದಾರಾ ಧೋನಿ-ರೋಹಿತ್‌?; ಬಿಗ್‌ ಅಪ್‌ಡೇಟ್‌ ಕೊಟ್ಟ ಕೋಚ್‌

IPL 2026: ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ಮಾಜಿ ನಾಯಕ ಎಂಎಸ್ ಧೋನಿ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದು ಉತ್ತಮವಾಗಿದ್ದು, ಶೀಘ್ರದಲ್ಲೇ ಅವರು ಮತ್ತೆ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದು, 2026 ರ ಐಪಿಎಲ್‌ನಲ್ಲಿ ಅವರು ಆಡಲು ಇಡೀ ಚೆನ್ನೈ ತಂಡ ಕಾಯುತ್ತಿದೆ ಎಂದು ಹೇಳಿದರು.

ಇಂದಿನ ಪಂದ್ಯಕ್ಕೆ ಧೋನಿ-ರೋಹಿತ್‌ ಲಭ್ಯ?; ಅಪ್‌ಡೇಟ್‌ ಕೊಟ್ಟ ಕೋಚ್‌

MS Dhoni and Rohit Sharma -

Abhilash BC
Abhilash BC May 2, 2026 10:40 AM

ಚೆನ್ನೈ, ಮೇ 2: ಶನಿವಾರ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿರುವ 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಮತ್ತು ಮುಂಬೈ ಇಂಡಿಯನ್ಸ್ (CSK vs MI) ತಂಡಗಳ ಸ್ಟಾರ್‌ ಆಟಗಾರರಾದ ಎಂಎಸ್ ಧೋನಿ(MS Dhoni) ಮತ್ತು ರೋಹಿತ್ ಶರ್ಮಾ(Rohit Sharma) ಲಭ್ಯತೆ ಬಗ್ಗೆ ತಂಡಗಳು ಕೋಚ್‌ ಮಹತ್ವದ ಅಪ್‌ಡೇಟ್‌ ನೀಡಿದ್ದಾರೆ.

ಗಾಯಗೊಂಡಿರುವ ಆರಂಭಿಕ ಆಟಗಾರ ರೋಹಿತ್ ಶರ್ಮಾ ಸ್ನಾಯು ಸೆಳೆತದಿಂದ ಚೇತರಿಸಿಕೊಳ್ಳುತ್ತಿದ್ದು, ಅವರ ಸೇರ್ಪಡೆ ಬಗ್ಗೆ ಫ್ರಾಂಚೈಸಿಯ ವೈದ್ಯಕೀಯ ತಂಡ ನಿರ್ಧರಿಸಲಿದೆ ಎಂದು ಮುಂಬೈ ಇಂಡಿಯನ್ಸ್ ಮುಖ್ಯ ಕೋಚ್ ಮಹೇಲ ಜಯವರ್ಧನೆ ಹೇಳಿದ್ದಾರೆ.

ಈ ಋತುವಿನಲ್ಲಿ ಕೇವಲ ನಾಲ್ಕು ಪಂದ್ಯಗಳಲ್ಲಿ ಮಾತ್ರ ಆಡಿರುವ ರೋಹಿತ್, ಮಂಡಿರಜ್ಜು ಗಾಯದಿಂದಾಗಿ ಕಳೆದ ನಾಲ್ಕು ಪಂದ್ಯಗಳನ್ನು ತಪ್ಪಿಸಿಕೊಂಡ ನಂತರ ಶುಕ್ರವಾರ ಚೆನ್ನೈನಲ್ಲಿ ನೆಟ್ಸ್‌ನಲ್ಲಿ ಬ್ಯಾಟಿಂಗ್ ಮಾಡಿದರು.

"ಅವರು(ರೋಹಿತ್‌) ಹೇಗೆ ಚೇತರಿಸಿಕೊಳ್ಳುತ್ತಾರೆ ಎಂಬುದನ್ನು ನಾವು ನೋಡುತ್ತೇವೆ. ಆದ್ದರಿಂದ ನಾವು ನಿರ್ಧಾರ ತೆಗೆದುಕೊಳ್ಳುತ್ತೇವೆ. ಅವರು ಅಭ್ಯಾಸ ಮಾಡುವುದನ್ನು ನಾವು ನೋಡುತ್ತೇವೆ. ಪಂದ್ಯಕ್ಕೂ ಮುನ್ನ ವೈದ್ಯಕೀಯ ತಂಡವು ನಮಗೆ ಏನು ಹೇಳುತ್ತದೆ ಎಂದು ನೋಡೋಣ" ಎಂದು ಜಯವರ್ಧನೆ ಪಂದ್ಯಕ್ಕೂ ಮುನ್ನ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.



ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬ್ಯಾಟಿಂಗ್ ಕೋಚ್ ಮೈಕೆಲ್ ಹಸ್ಸಿ, ಮಾಜಿ ನಾಯಕ ಎಂಎಸ್ ಧೋನಿ ಗಾಯದಿಂದ ಚೇತರಿಸಿಕೊಳ್ಳುತ್ತಿರುವುದು ಉತ್ತಮವಾಗಿದ್ದು, ಶೀಘ್ರದಲ್ಲೇ ಅವರು ಮತ್ತೆ ತಂಡಕ್ಕೆ ಮರಳಲಿದ್ದಾರೆ ಎಂದು ಹೇಳಿದ್ದು, 2026 ರ ಐಪಿಎಲ್‌ನಲ್ಲಿ ಅವರು ಆಡಲು ಇಡೀ ಚೆನ್ನೈ ತಂಡ ಕಾಯುತ್ತಿದೆ ಎಂದು ಹೇಳಿದ್ದಾರೆ. 42 ವರ್ಷದ ಧೋನಿ, ಋತುವಿಗೆ ಮುನ್ನ ಉಂಟಾದ ಗಾಯದಿಂದಾಗಿ ಮೂರು ವಾರಗಳ ಕಾಲ ಆಟದಿಂದ ಹೊರಗುಳಿದಿದ್ದಾರೆ.

ಬ್ಯಾಟ್‌ನಲ್ಲಿ ಹೊಡೆಯಲು ಬಂದ ಜಡೇಜಾರನ್ನು ತಳ್ಳಿದ ಕುಲ್‌ದೀಪ್‌; ವಿಡಿಯೊ ವೈರಲ್‌

"ಅವರು ಸಾಧ್ಯವಾದಷ್ಟು ಬೇಗ ಹಿಂತಿರುಗುತ್ತಾರೆ ಎಂದು ಆಶಿಸುತ್ತೇನೆ. ನಾಳೆಯೋ ಅಥವಾ ಅದರ ನಂತರದ ಮುಂದಿನ ಪಂದ್ಯವೋ ನನಗೆ ತಿಳಿದಿಲ್ಲ, ಆದರೆ ಅವರು ನಿಜವಾಗಿಯೂ ಉತ್ತಮವಾಗಿ ಪ್ರಗತಿ ಸಾಧಿಸುತ್ತಿದ್ದಾರೆ" ಎಂದು ಮೈಕೆಲ್ ಹಸ್ಸಿ ಹೇಳಿದರು. ಆಡುವ ಅಂತಿಮ ನಿರ್ಧಾರ ಧೋನಿಯದ್ದೇ ಎಂದು ಹಸ್ಸಿ ಒತ್ತಿ ಹೇಳಿದರು.

ಮುಂಬೈ ಮತ್ತು ಚೆನ್ನೈ ತಂಡದ ಕೋಚ್‌ಗಳು ನೀಡಿದ ಮಾಹಿತಿ ಪ್ರಕಾರ ಧೋನಿ ಮತ್ತು ರೋಹಿತ್‌ ಇನ್ನೂ ಕೆಲವು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆ ಕಂಡುಬಂದಿದೆ.

ಸಂಭಾವ್ಯ ಆಡುವ ಬಳಗ

ಚೆನ್ನೈ ಸೂಪರ್ ಕಿಂಗ್ಸ್: ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್ (ನಾಯಕ), ಡೆವಾಲ್ಡ್ ಬ್ರೆವಿಸ್, ಶಿವಂ ದುಬೆ, ಕಾರ್ತಿಕ್ ಶರ್ಮಾ, ಜೇಮಿ ಓವರ್ಟನ್, ಅಕೇಲ್ ಹೊಸೈನ್, ನೂರ್ ಅಹ್ಮದ್, ಅನ್ಶುಲ್ ಕಾಂಬೋಜ್, ಗುರ್ಜಪ್ನೀತ್ ಸಿಂಗ್, ಮುಖೇಶ್ ಚೌಧರಿ

ಇಂಪ್ಯಾಕ್ಟ್ ಪ್ಲೇಯರ್: ಉರ್ವಿಲ್ ಪಟೇಲ್.

ಮುಂಬೈ ಇಂಡಿಯನ್ಸ್: ವಿಲ್ ಜಾಕ್ಸ್, ರಿಯಾನ್ ರಿಕಲ್ಟನ್ (ವಿಕೆಟ್ ಕೀಪರ್), ನಮನ್ ಧೀರ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ (ನಾಯಕ), ಶಾರ್ದೂಲ್ ಠಾಕೂರ್, ಟ್ರೆಂಟ್ ಬೌಲ್ಟ್, ಅಶ್ವನಿ ಕುಮಾರ್, ಜಸ್ಪ್ರೀತ್ ಬುಮ್ರಾ, ಎ.ಎಮ್ ಗಜನ್ಫರ್

ಇಂಪ್ಯಾಕ್ಟ್ ಪ್ಲೇಯರ್: ರಾಬಿನ್ ಮಿಂಜ್.

ಪಂದ್ಯ ಆರಂಭ: ರಾತ್ರಿ 7 ಗಂಟೆಗೆ

ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌, ಜಿಯೋ ಹಾಟ್‌ಸ್ಟಾರ್‌.