ಬಂಧಿತ ಆರೋಪಿಗಳಿಂದ 80 ಸಾವಿರ ರೂ.ಬೆಲೆ ಬಾಳುವ ಒಂದು ಕೆಜಿ ಗಾಂಜಾ ವಶ
ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರೂ ವ್ಯಕ್ತಿಗಳನ್ನು ಬಂಧಿಸುವಲ್ಲಿ ಕೆಂಚಾರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ವರದಾಪುರ ಗ್ರಾಮದ ಗಣೇಶ್ ಬಿನ್ ಮುನಿರಾಜು ಮತ್ತು ವಾಸೀಂಖಾನ್ ಬಿನ್ ಏಜಾಜ್ ಖಾನ್ ಎಂದು ಗುರುತಿಸಲಾಗಿದೆ.
-
Ashok Nayak
Jun 11, 2025 3:24 PM
ಚಿಂತಾಮಣಿ: ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರೂ ವ್ಯಕ್ತಿಗಳನ್ನು ಬಂಧಿಸುವಲ್ಲಿ ಕೆಂಚಾರಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತ ಆರೋಪಿಗಳನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ವರದಾಪುರ ಗ್ರಾಮದ ಗಣೇಶ್ ಬಿನ್ ಮುನಿರಾಜು ಮತ್ತು ವಾಸೀಂಖಾನ್ ಬಿನ್ ಏಜಾಜ್ ಖಾನ್ ಎಂದು ಗುರುತಿಸಲಾಗಿದೆ.
ಇದನ್ನೂ ಓದಿ: M. Chinnaswamy Stadium: ಸ್ಥಳಾಂತರವಾಗುತ್ತಾ ಚಿನ್ನಸ್ವಾಮಿ ಸ್ಟೇಡಿಯಂ: ಸಿಎಂ ಹೇಳಿದ್ದೇನು?
ಚಿಂತಾಮಣಿ ತಾಲೂಕಿನ ಮುರುಗಮಲ್ಲ ಗ್ರಾಮದ ಜಂಗ್ಲೀಫೀರ್ ದರ್ಗಾದ ಬಳಿ ಅಕ್ರಮವಾಗಿ ಮಾರಾಟ ಮಾಡಲು ತಂದಿದ್ದ 1 ಕೆಜಿ ಮೌಲ್ಯದ ಗಾಂಜಾವನ್ನು ಕೆಂಚ್ ರ್ಲಹಳ್ಳಿ ಪೊಲೀಸರು ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದುಕೊಂಡು ಇಬ್ಬರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದಾರೆ.