ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಪುಣೆ ಉದ್ಯಮಿ ಹತ್ಯೆ ಪ್ರಕರಣ: ನನ್ನ ಮಗನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾರೆ ಎಂದ ಆರೋಪಿ ಚೇತನ್ ತಂದೆ

ಪುಣೆ ಲೋಹಗಢ ಕೋಟೆ ಹತ್ಯೆ ಪ್ರಕರಣದಲ್ಲಿ ಬಂಧಿತನಾಗಿರುವ ಚೇತನ್ ಚೌಧರಿ ನಿರಪರಾಧಿ ಎಂದು ಆತನ ತಂದೆ ಬಾಬುಲಾಲ್ ಚೌಧರಿ ಹೇಳಿದ್ದಾರೆ. ಸಹ ಆರೋಪಿ ಸಿಯಾ ಗೋಯಲ್ ತನ್ನನ್ನು ರಕ್ಷಿಸಿಕೊಳ್ಳಲು ತಮ್ಮ ಮಗನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ. ಈ ನಡುವೆ, ಸಿಸಿಟಿವಿ ದೃಶ್ಯಗಳು ಹಾಗೂ ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಪೊಲೀಸರು ಇಬ್ಬರ ವಿರುದ್ಧ ಪೂರ್ವನಿಯೋಜಿತ ಸಂಚಿನ ಆರೋಪ ಮಾಡಿದ್ದಾರೆ.

'ನನ್ನ ಮಗ ನಿರಪರಾಧಿ': ಚೇತನ್ ಚೌಧರಿ ತಂದೆ!

ಸಿಯಾ ಗೋಯಲ್ - ಕೇತನ್ -

Profile
Sushmitha Jain Jun 25, 2026 2:39 PM

ನವದೆಹಲಿ: ಪುಣೆಯ ಲೋಹಗಢ ಕೋಟೆ ಯಲ್ಲಿ ನಿಶ್ಚಿತಾರ್ಥಗೊಂಡಿದ್ದ ಯುವಕನನ್ನು ಕಂದಕಕ್ಕೆ ತಳ್ಳಿದ ಪ್ರಕರಣ (Murder Case) ದಲ್ಲಿ ಬಂಧಿತನಾಗಿರುವ ಚೇತನ್ ಚೌಧರಿ (Chetan Chaudhary) ನಿರಪರಾಧಿ ಎಂದು ಆತನ ತಂದೆ ಬಾಬುಲಾಲ್ ಚೌಧರಿ (Babulal Chaudhary) ಹೇಳಿದ್ದಾರೆ. ಸಹ ಆರೋಪಿ ಸಿಯಾ ಗೋಯಲ್ (Siya Goyal) ತನ್ನನ್ನು ರಕ್ಷಿಸಿಕೊಳ್ಳಲು ಸುಳ್ಳು ಪ್ರಕರಣದಲ್ಲಿ ಸಿಲುಕಿಸಿದ್ದಾಳೆ ಎಂದು ಅವರು ಆರೋಪಿಸಿದ್ದಾರೆ.

ಜೂನ್ 18ರಂದು ಪುಣೆ ಸಮೀಪದ ಲೋಹಗಢ ಕೋಟೆಯಲ್ಲಿ, 20 ವರ್ಷದ ಸಿಯಾ ಗೋಯಲ್ ಹಾಗೂ ಆಕೆಯ ಪ್ರಿಯಕರ ಚೇತನ್ ಚೌಧರಿ ಸೇರಿ, ಸಿಯಾ ಅವರ ನಿಶ್ಚಿತಾರ್ಥದ ವರ 26 ವರ್ಷದ ಕೇತನ್ ಅಗರ್‌ವಾಲ್ ಅವರನ್ನು ಕಂದಕಕ್ಕೆ ತಳ್ಳಿ ಹತ್ಯೆ ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಇಬ್ಬರನ್ನೂ ಜೂನ್ 23ರಂದು ಪೊಲೀಸರು ಬಂಧಿಸಿದ್ದರು.

'ಆಕೆಯನ್ನು ನಾವು ಎಂದಿಗೂ ನೋಡಿಲ್ಲ'

ಮಾಧ್ಯಮಗಳೊಂದಿಗೆ ಮಾತನಾಡಿದ ಬಾಬುಲಾಲ್ ಚೌಧರಿ, "ಸಿಯಾ ಎಂಬ ಯುವತಿಯನ್ನು ನಾವು ಎಂದಿಗೂ ನೋಡಿಲ್ಲ. ಆಕೆಯ ಹೆಸರು ಕೂಡ ಇತ್ತೀಚೆಗೆ ಮಾತ್ರ ತಿಳಿಯಿತು. ಪೊಲೀಸ್ ಠಾಣೆಯಲ್ಲಿ ಮೊದಲ ಬಾರಿಗೆ ಆಕೆಯನ್ನು ನೋಡಿದ್ದೇವೆ" ಎಂದು ಹೇಳಿದರು.

ತಮ್ಮ ಮಗ ಪೊಲೀಸ್ ಠಾಣೆಯಲ್ಲಿ ಭೇಟಿಯಾದಾಗ, ಘಟನೆ ನಡೆದ ವೇಳೆ ತಾನು ಸಿಯಾ ಮತ್ತು ಕೇತನ್‌ನಿಂದ ಬಹಳ ದೂರದಲ್ಲಿದ್ದೆ ಎಂದು ಹೇಳಿದ್ದಾನೆ ಎಂದು ಅವರು ತಿಳಿಸಿದ್ದಾರೆ.

'ನನ್ನ ಮಗ ನಿರಪರಾಧಿ'

"ನನ್ನ ಮಗ ಅಂತಹ ವ್ಯಕ್ತಿಯಲ್ಲ. ಅವನು ದಿನವೂ ನಮ್ಮ ಕಿರಾಣಿ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ. ಅವನಿಗೆ ಈ ಪ್ರಕರಣದೊಂದಿಗೆ ಯಾವುದೇ ಸಂಬಂಧ ಇಲ್ಲ" ಎಂದು ತಂದೆ ಹೇಳಿದ್ದಾರೆ.

ಚೇತನ್‌ನ ಚಿಕ್ಕಪ್ಪ ಉದಯರಾಮ್ ಚೌಧರಿ ಕೂಡ, "ಚೇತನ್ ಒಬ್ಬ ಕ್ರೀಡಾಪಟು. ಅವನ ವಿರುದ್ಧ ಯಾವುದೇ ದೂರು ಇರಲಿಲ್ಲ. ಆತ ಅಳುತ್ತಾ ತನ್ನನ್ನು ಸುಳ್ಳು ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದಾನೆ" ಎಂದು ತಿಳಿಸಿದ್ದಾರೆ.



ವಕೀಲರ ವಾದವೇನು?

ಚೇತನ್ ಪರ ವಕೀಲ ರಾಮ್ ಶಹಾನೆ, "ಎಫ್‌ಐಆರ್‌ನಲ್ಲಿ ಚೇತನ್‌ನ ಪಾತ್ರವನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿಲ್ಲ. ಆತ ಮುಖ್ಯ ಆರೋಪಿಯ ಪ್ರಿಯಕರ ಎಂಬ ಕಾರಣಕ್ಕೆ ಮಾತ್ರ ಪ್ರಕರಣದಲ್ಲಿ ಸೇರಿಸಲಾಗಿದೆ" ಎಂದು ವಾದಿಸಿದ್ದಾರೆ.

ಪ್ರಿಯಕರನಿಗಾಗಿ ಭಾವಿ ಪತಿಯನ್ನೇ ಹತ್ಯೆಗೈದ ಸಿಯಾ; ಸಹೋದರಿಯ ಅನುಮಾನದಿಂದ ಬಯಲಾಯ್ತು ಭೀಕರ ಸಂಚು ಸಂಚು

ಹತ್ಯೆಗೆ ಮುನ್ನ ಹಲವು ಬಾರಿ ಪ್ರಯತ್ನ?

ಪೊಲೀಸರ ತನಿಖೆಯ ಪ್ರಕಾರ, ಸಿಯಾ ಗೋಯಲ್ ಕೇತನ್ ಅವರನ್ನು ಹಲವು ಬಾರಿ ಲೋಹಗಢ ಕೋಟೆಗೆ ಕರೆದುಕೊಂಡು ಹೋಗಲು ಯತ್ನಿಸಿದ್ದಳು.

  • ಮೇ 31ರಂದು ಇಬ್ಬರೂ ಕೋಟೆಗೆ ತೆರಳಿದ್ದರು.
  • ನಾಲ್ಕು ದಿನಗಳ ಬಳಿಕ ಮತ್ತೆ ಹೋಗಲು ಸಿಯಾ ಒತ್ತಾಯಿಸಿದ್ದರೂ, ಕೇತನ್ ತಾಯಿ ಅನುಮತಿ ನೀಡಿರಲಿಲ್ಲ.
  • ಜೂನ್ 14ರಂದು, ಕೋಟೆಗೆ ತೆರಳಿದ್ದ ವೇಳೆ ಸಿಯಾ ಕೇತನ್ ಅವರನ್ನು ಕಂದಕಕ್ಕೆ ತಳ್ಳಲು ಯತ್ನಿಸಿದ್ದಾಳೆ ಎನ್ನಲಾಗಿದೆ. ಆದರೆ ಅವರು ಮರದ ಕೊಂಬೆಯನ್ನು ಹಿಡಿದು ಪ್ರಾಣಾಪಾಯದಿಂದ ಪಾರಾಗಿದ್ದರು.
  • ಬಳಿಕ ಹಾವು ಕಂಡು ತಳ್ಳಿದ್ದೆ ಎಂದು ಸಿಯಾ ಹೇಳಿದ್ದಳು ಎಂದು ತನಿಖೆಯಲ್ಲಿ ತಿಳಿದುಬಂದಿದೆ.



ಸಿಸಿಟಿವಿಯಿಂದ ಬಯಲಾಯ್ತು ಸಂಚು

ಜೂನ್ 18ರಂದು ಸಿಯಾ ಮತ್ತು ಚೇತನ್ ಪುಣೆಯ ಕಾಫೆಯಲ್ಲಿ ಭೇಟಿಯಾಗಿ ಹತ್ಯೆಯ ಸಂಚು ರೂಪಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕೋಟೆಯ ಸಿಸಿಟಿವಿ ದೃಶ್ಯಗಳಲ್ಲಿ ಹುಡಿ ಧರಿಸಿದ್ದ ಚೇತನ್, ಸಿಯಾ ಮತ್ತು ಕೇತನ್ ಅವರನ್ನು ಹಿಂಬಾಲಿಸುತ್ತಿರುವುದು ಹಾಗೂ ಕೈ ಸನ್ನೆಗಳ ಮೂಲಕ ಸಿಯಾಗೆ ಸೂಚನೆ ನೀಡುತ್ತಿರುವುದು ಕಂಡುಬಂದಿದೆ.

33 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶವಿದ್ದರೂ ಹುಡಿ ಧರಿಸಿದ್ದ ವಿಚಾರ ಪೊಲೀಸರಲ್ಲಿ ಅನುಮಾನ ಮೂಡಿಸಿತ್ತು. ಬಳಿಕ ತಾಂತ್ರಿಕ ಸಾಕ್ಷ್ಯಗಳು, ಸಿಸಿಟಿವಿ ದೃಶ್ಯಗಳು ಮತ್ತು ಸಾಮಾಜಿಕ ಜಾಲತಾಣದ ಮಾಹಿತಿಗಳನ್ನು ಪರಿಶೀಲಿಸಿದ ಪೊಲೀಸರು ಇಬ್ಬರೂ ಪೂರ್ವನಿಯೋಜಿತ ಸಂಚು ರೂಪಿಸಿದ್ದರೆಂದು ಪತ್ತೆಹಚ್ಚಿದರು.

2,000ಕ್ಕೂ ಹೆಚ್ಚು ಕರೆಗಳು

ದೀಪಾವಳಿ ಸಂದರ್ಭದಲ್ಲಿ ಪರಿಚಯವಾದ ಸಿಯಾ ಮತ್ತು ಚೇತನ್ ಕಳೆದ ಆರು ತಿಂಗಳಲ್ಲಿ 2,000ಕ್ಕೂ ಹೆಚ್ಚು ಬಾರಿ ದೂರವಾಣಿ ಮೂಲಕ ಮಾತನಾಡಿದ್ದು, ಒಟ್ಟು 238 ಗಂಟೆಗಳ ಕಾಲ ಸಂಪರ್ಕದಲ್ಲಿದ್ದರು ಎಂದು ತನಿಖೆಯಲ್ಲಿ ಬಹಿರಂಗವಾಗಿದೆ.