ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Police Firing: ಗೋಪೂಜೆ ದಿನವೇ ಅಕ್ರಮ ಗೋ ಸಾಗಾಟಗಾರನ ಕಾಲಿಗೆ ಗುಂಡು

Cow trafficking: ಪೊಲೀಸರು ಲಾರಿಯನ್ನು ಅಡ್ಡಗಟ್ಟಿದ್ದಾರೆ. ಆದರೂ ನಿಲ್ಲದ ಚಾಲಕ ಪೊಲೀಸರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಪಿಎಸ್‌ಐ ಆರೋಪಿಯ ಮೇಲೆ ಎರಡು ಸುತ್ತು ಗುಂಡುಗಳನ್ನು ಫೈಯರ್ ಮಾಡಿದ್ದಾರೆ. ಇದರಿಂದ ಒಂದು ಗುಂಡು ವಾಹನದ ಮೇಲೆ ಹಾಗೂ ಮತ್ತೊಂದು ಆರೋಪಿಯ ಕಾಲಿಗೆ ಬಿದ್ದಿದೆ.

ಗೋಪೂಜೆ ದಿನವೇ ಅಕ್ರಮ ಗೋ ಸಾಗಾಟಗಾರನ ಕಾಲಿಗೆ ಗುಂಡು

-

ಹರೀಶ್‌ ಕೇರ ಹರೀಶ್‌ ಕೇರ Oct 22, 2025 2:41 PM

ಪುತ್ತೂರು: ಅಕ್ರಮ ಗೋವು ಸಾಗಣೆಯಲ್ಲಿ (cow trafficking) ಭಾಗಿಯಾಗಿ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದ ವ್ಯಕ್ತಿಯನ್ನು ಸಿನಿಮೀಯ ಶೈಲಿಯಲ್ಲಿ ಬೆನ್ನಟ್ಟಿ, ಕಾಲಿಗೆ ಗುಂಡು ಹಾರಿಸಿ (Police Firing) ಬಂಧನಕ್ಕೊಳಪಡಿಸಿರುವ ಘಟನೆ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿ ನಡೆದಿದೆ. ದೀಪಾವಳಿಯ ಗೋಪೂಜೆ ದಿನವೇ ಈ ಘಟನೆ ನಡೆದಿದೆ.

ಕೇರಳದ ಕಾಸರಗೋಡು ಮೂಲದ ಅಬ್ದುಲ್ಲಾ (40) ಬಂಧಿತ ಆರೋಪಿ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನಲ್ಲಿ ಮಂಗಳವಾರ ಸಂಜೆ ಈ ಘಟನೆ ನಡೆದಿದೆ, ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ. ಆರೋಪಿ ಐಸರ್​ ಲಾರಿಯಲ್ಲಿ ಸುಮಾರು 10 ಜಾನುವಾರುಗಳನ್ನು ಹಾಸನದಿಂದ ಕೇರಳಕ್ಕೆ ಸಾಗಾಟ ಮಾಡಲಾಗುತ್ತಿದ್ದ. ಈ ಬಗ್ಗೆ ಮಾಹಿತಿ ಪಡೆದ ಪೊಲೀಸರು ವಾಹನವನ್ನು ನಿಲ್ಲಿಸಲು ಸೂಚಿಸಿದಾಗ ಚಾಲಕ ನಿಲ್ಲಿಸದೇ ಮುಂದೆ ಸಾಗಿದ್ದಾರೆ. ಈ ವೇಳೆ ಪೊಲೀಸರು ಸುಮಾರು 10 ಕಿಮೀ ವರೆಗೂ ವಾಹನವನ್ನು ಬೆನ್ನಟ್ಟಿದ್ದಾರೆ.

ಬಳಿಕ ಲಾರಿಯನ್ನು ಅಡ್ಡಗಟ್ಟಿದ್ದಾರೆ. ಆದರೂ ನಿಲ್ಲದ ಚಾಲಕ ಪೊಲೀಸರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಪಿಎಸ್‌ಐ ಆರೋಪಿಯ ಮೇಲೆ ಎರಡು ಸುತ್ತು ಗುಂಡುಗಳನ್ನು ಫೈಯರ್ ಮಾಡಿದ್ದಾರೆ. ಇದರಿಂದ ಒಂದು ಗುಂಡು ವಾಹನದ ಮೇಲೆ ಹಾಗೂ ಮತ್ತೊಂದು ಆರೋಪಿಯ ಕಾಲಿಗೆ ಬಿದ್ದಿದೆ. ಘಟನೆಯ ಸಮಯದಲ್ಲಿ ಮತ್ತೋರ್ವ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಇದನ್ನೂ ಓದಿ: Kalaburagi crime news: ತಿಪ್ಪೆಗುಂಡಿಯಲ್ಲಿ ಆಸ್ಫೋಟ, ಪಿಸ್ತೂಲ್‌, ಗುಂಡುಗಳು ಪತ್ತೆ

ಬಂಧಿತ ಆರೋಪಿ ಅಬ್ದುಲ್ಲಾ ಮೂಲತಃ ಕೇರಳದ ಕಾಸರಗೋಡಿನಾಗಿದ್ದು, ಚಿಕಿತ್ಸೆಗಾಗಿ ಆತನನ್ನು ವೆನ್​ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಈತನ ಮೇಲೆ ಈ ಹಿಂದೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಗೋಹತ್ಯೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆಹಚ್ಚಲು ಪ್ರಯತ್ನಗಳು ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.