ʻನಾನು ಸ್ಟಾರ್ ಆಗೋದಕ್ಕೆ ಆ ಒಂದು ಸಿನಿಮಾವೇ ಕಾರಣʼ; 20 ವರ್ಷ ಹಿಂದಕ್ಕೆ ಜಾರಿದ ನಟ ಮಹೇಶ್ ಬಾಬು!
Mahesh Babu: ವಾರಣಾಸಿ ಸಿನಿಮಾದ ಪ್ರಮೋಷನ್ ಕೆಲಸಗಳಲ್ಲಿ ಭಾಗಿಯಾಗಿರುವ ನಟ ಮಹೇಶ್ ಬಾಬು, ತಮ್ಮ ವೃತ್ತಿಜೀವನವನ್ನು ಬದಲಿಸಿದ ಸಿನಿಮಾ 'ಪೊಕಿರಿ' ಎಂದು ಹೇಳಿದ್ದಾರೆ. 2006ರಲ್ಲಿ ಬಿಡುಗಡೆಯಾಗಿ ಬ್ಲಾಕ್‌ಬಸ್ಟರ್ ಆದ ಈ ಸಿನಿಮಾ ತಮ್ಮನ್ನು ಒಬ್ಬ ಸೂಪರ್ ಸ್ಟಾರ್ ಹೀರೋವನ್ನಾಗಿ ಮಾಡಿತು ಎಂದಿದ್ದಾರೆ.
-
ಎಸ್.ಎಸ್. ರಾಜಮೌಳಿ ನಿರ್ದೇಶನದ 'ವಾರಣಾಸಿ' ಸಿನಿಮಾದಲ್ಲಿ ಮಹೇಶ್ ಬಾಬು ನಟಿಸುತ್ತಿದ್ದಾರೆ. ಇದು ಅವರ ವೃತ್ತಿಜೀವನದ 29ನೇ ಚಿತ್ರವಾಗಿದೆ. ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಭಾರೀ ಬಜೆಟ್‌ನಲ್ಲಿ ತಯಾರಾಗುತ್ತಿರುವ ಈ ಚಿತ್ರಕ್ಕಾಗಿ ಫ್ಯಾನ್ಸ್ ಕುತೂಹಲದಿಂದ ಕಾಯುತ್ತಿದ್ದಾರೆ. ಮಹೇಶ್ ಬಾಬು ಕೂಡ ಈ ಪ್ರಾಜೆಕ್ಟ್ ಬಗ್ಗೆ ತುಂಬಾ ಉತ್ಸುಕರಾಗಿದ್ದಾರೆ. ಈ ಮಧ್ಯೆ ತಮ್ಮ ಕರಿಯರ್‌ನ ಸೂಪರ್ ಹಿಟ್ ಸಿನಿಮಾದ ಬಗ್ಗೆಯೂ ಮಹೇಶ್ ಬಾಬು ಮಾತನಾಡಿದ್ದಾರೆ.
'ವಾರಣಾಸಿ' ಪ್ರಮೋಷನ್ ವೇಳೆ ಎದುರಾಯ್ತು ಪ್ರಶ್ನೆ
ಈಚೆಗೆ 'ವಾರಣಾಸಿ' ಚಿತ್ರತಂಡದ ಸಂದರ್ಶನದ ವೇಳೆ ನಿಮ್ಮ ಜೀವನವನ್ನೇ ಬದಲಿಸಿದ ಸಿನಿಮಾ ಯಾವುದು ಎಂಬ ಪ್ರಶ್ನೆ ಎದುರಾಯಿತು. ಅದಕ್ಕೆ ಮಹೇಶ್ ಬಾಬು ಅವರು ʻಪೊಕಿರಿʼ ಎಂದು ಹೇಳಿದ್ಧಾರೆ. "ನಿಜ ಹೇಳಬೇಕೆಂದರೆ, ಪ್ರತಿ ಸಿನಿಮಾ ಏನಾದರೊಂದು ಬದಲಾವಣೆ ತರುತ್ತದೆ. ನನ್ನನ್ನು ಬದಲಿಸಿದ ಸಿನಿಮಾಗಳಲ್ಲಿ 'ಪೋಕಿರಿ' ಕೂಡ ಒಂದು. ಅದು ನನ್ನನ್ನು ಒಬ್ಬ ಸ್ಟಾರ್ ಅನ್ನಾಗಿ ಮಾಡಿತು, ಹಾಗಾಗಿ ಸಹಜವಾಗಿಯೇ ಅದು ಕೆರಿಯರ್ ಅನ್ನು ಬದಲಿಸಿದ ಸಿನಿಮಾ ಎಂದು ಹೇಳಬೇಕು" ಎಂದು ಮಹೇಶ್ ಹೇಳಿದ್ದಾರೆ.
Varanasi: 'ವಾರಣಾಸಿ' ಚಿತ್ರದ ಪ್ರಚಾರಕ್ಕೆ ವಿಶಿಷ್ಟ ತಂತ್ರ ! ಟೈಟಲ್ ಹಾಕದೆ ರಿಲೀಸ್ ದಿನಾಂಕ ಘೋಷಣೆ?
ಪೊಕಿರಿ ಸಿನಿಮಾಗೆ 20 ವರ್ಷ
"2006ರಲ್ಲಿ ಬಂದ ಪೊಕಿರಿ ಸಿನಿಮಾ ತುಂಬಾ ದೊಡ್ಡ ಹಿಟ್ ಆಯಿತು. ಅದು ನನ್ನ ಜೀವನದಲ್ಲಿ ಎಷ್ಟು ಬದಲಾವಣೆ ತಂದಿತೆಂದರೆ, ಆ ಸಿನಿಮಾದ ನಂತರ ನಾನು ಗೊಂದಲಕ್ಕೆ ಒಳಗಾದೆ. ಮುಂದೆ ಏನು ಮಾಡಬೇಕೆಂದು ನನಗೆ ತಿಳಿಯಲಿಲ್ಲ. ಏಕೆಂದರೆ, ಪ್ರೇಕ್ಷಕರ ನಿರೀಕ್ಷೆಗಳು ತುಂಬಾ ಹೆಚ್ಚಿರುವ ಹಂತಕ್ಕೆ ನಾನು ತಲುಪಿದ್ದೆ. ಆ ಸಮಯದಲ್ಲಿ ನಂತರ ಎಂತಹ ಸಿನಿಮಾ ಮಾಡಬೇಕೆಂದು ತಿಳಿಯದ ಪರಿಸ್ಥಿತಿ ನಿರ್ಮಾಣವಾಗಿತ್ತು" ಎಂದಿದ್ದಾರೆ ಮಹೇಶ್ ಬಾಬು. ಅಂದಹಾಗೆ, ಪೊಕಿರಿ ತೆರೆಕಂಡು 20 ವರ್ಷ ಆಗುತ್ತಿದೆ.
Varanasi Release Date: ಈ ದಿನದಂದು ರಾಜಮೌಳಿ–ಮಹೇಶ್ ಬಾಬು ‘ವಾರಣಾಸಿ’ ರಿಲೀಸ್?
ಹೊಸ ಅನುಭವವನ್ನು ಪಡೆಯುತ್ತಿದ್ದೇನೆ
"ಪ್ರತಿ ಸಿನಿಮಾ ನಮ್ಮ ಮೈಂಡ್‌ಸೆಟ್ ಮತ್ತು ಆಲೋಚನಾ ವಿಧಾನವನ್ನು ಬದಲಾಯಿಸುತ್ತದೆ. ಆದರೆ ಈಗ 'ವಾರಣಾಸಿ' ಸಿನಿಮಾದ ವಿಷಯದಲ್ಲಿ, ಹಿಂದೆಂದೂ ಇಲ್ಲದ ಅನುಭವವನ್ನು ಪಡೆಯುತ್ತಿದ್ದೇನೆ. ಇದು ನಿಜಕ್ಕೂ ಸಂಪೂರ್ಣ ಭಿನ್ನವಾದ ಅದ್ಭುತ ಅನುಭವ" ಎಂದು ಮಹೇಶ್ ಬಾಬು ಹೇಳಿದ್ದಾರೆ.
ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ಮೂಡಿಬಂದ 'ಪೋಕಿರಿ' ಸಿನಿಮಾವು 2006 ಏಪ್ರಿಲ್ 28ರಂದು ಬಿಡುಗಡೆಯಾಗಿತ್ತು ಮತ್ತು ಬಾಕ್ಸ್ ಆಫೀಸ್‌ನಲ್ಲಿ ಬ್ಲಾಕ್ ಬಸ್ಟರ್‌ನಲ್ಲಿ ದೊಡ್ಡ ಯಶಸ್ಸು ಕಂಡಿತ್ತು. ಕಾಕತಾಳೀಯವೆಂದರೆ, 'ವಾರಣಾಸಿ' ಸಿನಿಮಾವನ್ನು ಕೂಡ ಏಪ್ರಿಲ್ ತಿಂಗಳಿನಲ್ಲಿಯೇ (2027ರ ಏಪ್ರಿಲ್ 7) ಬಿಡುಗಡೆ ಮಾಡಲಾಗುತ್ತಿದೆ.