ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮೇರ್ಸ್ಕ್ ನ ‘ಕೋಡ್ ಕಾರ್ಗೋ 2025’: ಲಾಜಿಸ್ಟಿಕ್ಸ್‌ ಭವಿಷ್ಯವನ್ನು ರೂಪಿಸುವ ಪರಿಕಲ್ಪನೆಗಳು ಮತ್ತು ತಂತ್ರಜ್ಞಾನಗಳ ಪ್ರದರ್ಶನ

ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ತಂತ್ರಜ್ಞಾನ ಕೇಂದ್ರ, ಪರಿಕಲ್ಪನೆಗಳ ಪ್ರಮುಖ ಎಂಜಿನ್ ಆಗಿದ್ದು ಸಾಫ್ಟ್‌ ವೇರ್ ಅಭಿವೃದ್ಧಿ, ವಾಸ್ತುಶಿಲ್ಪ, ಸೈಬರ್ ಭದ್ರತೆ, ಡೇಟ ಸೈನ್ಸ್ ಮತ್ತು ಎಐ ಗಳಿಗೆ ಡಿಜಿಟಲ್ ಸಾಮರ್ಥ್ಯಗಳನ್ನು ಒದಗಿಸುತ್ತದೆ. 10+ ಕೃತಕ ಬುದ್ಧಿಮತ್ತೆ ಪೇಟೆಂಟ್‌ಗಳನ್ನು ಪಡೆದು ಕೊಂಡಿದೆ ಮತ್ತು ಜಾಗತಿಕ ಗ್ರಾಹಕರು ನೈಜ-ಸಮಯದಲ್ಲಿ ಸರಕನ್ನು ಕಂಡು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವಂತೆ ವೇದಿಕೆಗಳನ್ನು ಸೃಷ್ಟಿಸಿದೆ.

ಮೇರ್ಸ್ಕ್ ನ ‘ಕೋಡ್ ಕಾರ್ಗೋ 2025’

-

Ashok Nayak Ashok Nayak Sep 12, 2025 12:57 AM

ಬೆಂಗಳೂರು: ಕೋಡ್ ಕಾರ್ಗೋ 2025, ಸಮಗ್ರ ಲಾಜಿಸ್ಟಿಕ್ಸ್ ಕಂಪನಿಯಾದ ಎ.ಪಿ. ಮೊಲ್ಲರ್ - ಮೇರ್ಸ್ಕ್ (ಮೇರ್ಸ್ಕ್), ಬೆಂಗಳೂರಿನಲ್ಲಿ ಸಂಘಟಿಸಿದ್ದ ಒಂದು ಪ್ರಮುಖ ತಂತ್ರಜ್ಞಾನ ಪ್ರದರ್ಶನ ವಾಗಿದೆ. ಇದರಲ್ಲಿ ಸದರಿ ಕಂಪನಿಯ ಜಾಗತಿಕ ತಂತ್ರಜ್ಞಾನ ಮುಖಂಡರು, ಎಂಜಿನಿಯರ್‌ಗಳು ಮತ್ತು ಉದ್ಯಮದ ಪಾಲುದಾರರು ಒಟ್ಟಾಗಿ ಸೇರಿದ್ದರು. ಕೃತಕ ಬುದ್ಧಿಮತ್ತೆ, ಡೇಟ ಸೈನ್ಸ್ ಮತ್ತು ಪ್ಲಾಟ್‌ಫಾರ್ಮ್ ಎಂಜಿನಿಯರಿಂಗ್‌ನಂತಹ ಸುಧಾರಿತ ತಂತ್ರಜ್ಞಾನಗಳ ಮೂಲಕ ಮೇರ್ಸ್ಕ್, ಜಾಗತಿಕ ಲಾಜಿಸ್ಟಿಕ್ಸ್ ಗೆ ಹೇಗೆ ಹೊಸ ಅರ್ಥವನ್ನು ನೀಡಲಿದೆ ಎಂಬುದನ್ನು ಈ ಪ್ರದರ್ಶನದಲ್ಲಿ ಕಾಣಬಹುದಾಗಿತ್ತು. ಈ ರೂಪಾಂತರದಲ್ಲಿ ಭಾರತದ ಪಾತ್ರ ಪ್ರಮುಖವಾಗಿರುತ್ತದೆ.

ಕೋಡ್ ಕಾರ್ಗೋದಲ್ಲಿ ಪ್ರದರ್ಶಿಸಲಾದ ಪ್ರಮುಖ ಪರಿಕಲ್ಪನೆಗಳಲ್ಲಿ ಒಂದು, ಸ್ಟಾರ್ ಕನೆಕ್ಟ್. ಇದು, ಮೇರ್ಸ್ಕ್‌ ನ ಎಐ-ಚಾಲಿತ ಫ್ಲೀಟ್ ಎನರ್ಜಿ ಎಫಿಷ್ಯನ್ಸಿ ಪ್ಲ್ಯಾಟ್-ಫಾರ್ಮ್. ಎಡ್ಜ್ ಕಂಪ್ಯೂಟಿಂಗ್ ಬಳಸಿ ನಿರ್ಮಿಸಲಾದ ಸ್ಟಾರ್ ಕನೆಕ್ಟ್, ಯಾನದಲ್ಲಿ ಚುರುಕಾಗಿ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ವಾಗುವಂತೆ ನೈಜ ಸಮಯದಲ್ಲಿ 2.5 ಬಿಲಿಯನ್ ಐಒಟಿ ಡೇಟ ಪಾಯಿಂಟ್‌ಗಳನ್ನು ಸಂಸ್ಕರಿಸು ತ್ತದೆ. ಎಡ್ಜ್ ನಲ್ಲಿ ಮೆಷೀನ್ ಲರ್ನಿಂಗ್ ಮಾಡಲ್ ಗಳನ್ನು ಬಳಸಿಕೊಂಡು ಪ್ಲಾಟ್‌ಫಾರ್ಮ್ ಇಂಧನ ಬಳಕೆ, ಕಾರ್ಗೊಗೆ ಎದುರಾಗಬಹುದಾದ ಗಾಳಿಯ ಪ್ರತಿರೋಧ ಮತ್ತು ಪ್ಯಾರಾಮೆಟ್ರಿಕ್ ರೋಲ್‌ ಗಳಂತಹ ಅಪಾಯಗಳ ಬಗ್ಗೆ ಮುನ್ಸೂಚನೆಗಳನ್ನು ನೀಡುತ್ತದೆ; ಇದರಿಂದ ಆಪರೇಟರ್, ನಿಮಿಷ ಗಳಲ್ಲಿ ಪಥ ಮತ್ತು ವೇಗಗಳನ್ನು ಹೊಂದಿಸಿಕೊಳ್ಳಲು ನೆರವಾಗುತ್ತದೆ; ಕಾರ್ಯಾಚರಣೆ ಹೆಚ್ಚು ಸುರಕ್ಷವಾಗಿರುತ್ತದೆ; ಇಂಧನ ದಕ್ಷತೆ ಸುಧಾರಿಸುತ್ತದೆ ಮತ್ತು ಹೊರಸೂಸುವಿಕೆಯ ಮೇಲ್ವಿಚಾರಣೆ ಮತ್ತು ಮೇರ್ಸ್ಕ್‌ನ ದೀರ್ಘಕಾಲಿಕ ಡೀ-ಕಾರ್ಬೊನೈಸೇಶನ್ ಗುರಿಗಳನ್ನು ಸಾಧಿಸುವುದಕ್ಕೆ ಬಹಳ ನೆರವಾಗುತ್ತದೆ.

ಇದನ್ನೂ ಓದಿ: Gururaj Gantihole Column: ಕರಾವಳಿಯ ಬೇಲೂರು-ಬೈಂದೂರಿನ ಸೇನೇಶ್ವರ ದೇಗುಲ !

ಎ.ಪಿ. ಮೊಲ್ಲರ್ - ಮೇರ್ಸ್ಕ್‌ ನ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮತ್ತು ಮುಖ್ಯ ತಂತ್ರಜ್ಞಾನ ಮತ್ತು ಮಾಹಿತಿ ಅಧಿಕಾರಿ ನವನೀತ್ ಕಪೂರ್: “ಭಾರತ, ಮೇರ್ಸ್ಕ್‌ಗೆ ಕೇವಲ ಒಂದು ಬೆಳೆಯುತ್ತಿರುವ ಮಾರುಕಟ್ಟೆಯಲ್ಲ; ಇದು ನಮ್ಮ ಜಾಗತಿಕ ಡಿಜಿಟಲ್ ರೂಪಾಂತರದ ಮೆದುಳು ಮತ್ತು ಬೆನ್ನೆಲು ಬಿನ ಒಂದು ಅತೀ ಮುಖ್ಯ ಭಾಗವಾಗಿದೆ. ಜಾಗತಿಕ ವ್ಯಾಪಾರದ ಭವಿಷ್ಯವನ್ನು ರೂಪಿಸುವ ಅನೇಕ ಪರಿಕಲ್ಪನೆಗಳು ಮತ್ತು ತಂತ್ರಜ್ಞಾನಗಳನ್ನು ಭಾರತದಲ್ಲಿ ಕೋಡ್ ಮಾಡಲಾಗುತ್ತಿದೆ.

ಮುಖ್ಯವಾಗಿ, ಬೆಂಗಳೂರಿನಲ್ಲಿರುವ ನಮ್ಮ ತಂತ್ರಜ್ಞಾನ ಕೇಂದ್ರ, ನಾವು ಕಾರ್ಯನಿರ್ವಹಿಸುತ್ತಿರುವ 130 ದೇಶಗಳಲ್ಲಿ ವಿದ್ಯುತ್ ಸರಬರಾಜು ಸರಪಳಿಗಳನ್ನು ಹೊಂದಿರುವ ವೇದಿಕೆಗಳು, ಅಲ್ಗರಿದಮ್‌ ಗಳು ಮತ್ತು ಗ್ರಾಹಕರ ಅನುಭವಗಳನ್ನು ವಿನ್ಯಾಸಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.”

ಮೇರ್ಸ್ಕ್, 20,000+ ಭಾರತೀಯರನ್ನು ನೇಮಿಸಿಕೊಂಡಿದೆ. ಬೇರೆ ಯಾವುದೇ ದೇಶದವರಿಗಿಂತ ಭಾರತೀಯರೇ ಹೆಚ್ಚಿದ್ದಾರೆ ಈ ಕಂಪನಿಯಲ್ಲಿ. ಬೆಂಗಳೂರು, ಪುಣೆ, ಮುಂಬೈ ಮತ್ತು ಚೆನ್ನೈ ರಾಜ್ಯ ಗಳಲ್ಲಿರುವ ಮಾರ್ಸ್ಕ್ ಕಚೇರಿಗಳಲ್ಲಿ ಸುಮಾರು 2,900 ತಂತ್ರಜ್ಞಾನ ವೃತ್ತಿಪರರು ಇದ್ದಾರೆ. ಬೆಂಗಳೂರಿನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ತಂತ್ರಜ್ಞಾನ ಕೇಂದ್ರ, ಪರಿಕಲ್ಪನೆಗಳ ಪ್ರಮುಖ ಎಂಜಿನ್ ಆಗಿದ್ದು ಸಾಫ್ಟ್‌ ವೇರ್ ಅಭಿವೃದ್ಧಿ, ವಾಸ್ತುಶಿಲ್ಪ, ಸೈಬರ್ ಭದ್ರತೆ, ಡೇಟ ಸೈನ್ಸ್ ಮತ್ತು ಎಐ ಗಳಿಗೆ ಡಿಜಿಟಲ್ ಸಾಮರ್ಥ್ಯಗಳನ್ನು ಒದಗಿಸುತ್ತದೆ. 10+ ಕೃತಕ ಬುದ್ಧಿಮತ್ತೆ ಪೇಟೆಂಟ್‌ಗಳನ್ನು ಪಡೆದುಕೊಂಡಿದೆ ಮತ್ತು ಜಾಗತಿಕ ಗ್ರಾಹಕರು ನೈಜ-ಸಮಯದಲ್ಲಿ ಸರಕನ್ನು ಕಂಡು ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುವಂತೆ ವೇದಿಕೆಗಳನ್ನು ಸೃಷ್ಟಿಸಿದೆ.

ಬೆಂಗಳೂರಿನ ಮಾರ್ಸ್ಕ್ ತಂತ್ರಜ್ಞಾನ ಕೇಂದ್ರದ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯಸ್ಥ ರೇಷಮ್ ಸಾಹಿ: “ಮಾರ್ಸ್ಕ್‌ ತಂತ್ರಜ್ಞಾನ ಕೇವಲ ಪರಿಕರಗಳನ್ನು ನಿರ್ಮಿಸುವುದಷ್ಟೇ ಅಲ್ಲ ಜಾಗತಿಕ ಮಟ್ಟಕ್ಕೂ ಸರಿಹೊಂದುವಂತಹ ಸಾಮರ್ಥ್ಯಗಳನ್ನು ನಿರ್ಮಿಸುತ್ತದೆ; ನಮ್ಮ ಗ್ರಾಹಕರಿಗೆ ಲಾಜಿ ಸ್ಟಿಕ್ಸ್ ಸರಳವಾಗಬೇಕು ಮತ್ತು ಮುಖ್ಯವಾಗಿ, ಜಾಗತಿಕ ಪೂರೈಕೆ ಸರಪಳಿಗಳ ಮೇಲೆ ಪರಿಣಾಮ ಬೀರುವ ಅನಿಶ್ಚಿತತೆಗಳು ಮತ್ತು ಅಡಚಣೆಗಳು ಪರಿಹಾರವಾಗಬೇಕೆಂದು ಕೆಲಸ ಮಾಡುತ್ತಿದೆ. ಎಐ ನೀಡುವ ಪರಿಹಾರಗಳಿಂದ ಹಿಡಿದು ಎಂಟರ್‌ಪ್ರೈಸ್ ಆರ್ಕಿಟೆಕ್ಚರ್‌ವರೆಗೆ, ಭಾರತದಲ್ಲಿನ ನಮ್ಮ ತಂಡಗಳು ನಮ್ಮ ವ್ಯವಹಾರಕ್ಕೆ ಡಿಜಿಟಲ್ ಅಡಿಪಾಯವನ್ನು ಹಾಕುತ್ತಿವೆ. ಜಾಗತಿಕವಾಗಿ ನಮ್ಮಲ್ಲಿರುವ ತಾಂತ್ರಿಕ ಪ್ರತಿಭೆಗಳಲ್ಲಿ ಅರ್ಧದಷ್ಟು ಭಾರತದಲ್ಲಿಯೇ ಇದ್ದಾರೆ. ಮತ್ತು ನೈಜ-ಸಮಯದ ಗೋಚರತೆ, ಸ್ಮಾರ್ಟ್ ಗೋದಾಮು ಅಥವಾ ಕಸ್ಟಮರ್ ಆಟೋಮೇಷನ್ ಹೀಗೆ ನಮ್ಮ ಕೆಲವು ಅತ್ಯಾಧುನಿಕ ಪರಿಹಾರಗಳನ್ನು ಭಾರತದಿಂದಲೇ ಕಲ್ಪಿಸಲಾಗುತ್ತಿದೆ, ನಿರ್ಮಿಸಲಾಗುತ್ತಿದೆ ಮತ್ತು ಬೇಕಾದ ಪ್ರಮಾಣಕ್ಕೆ ತಕ್ಕಂತೆ ಸಿದ್ಧಪಡಿಸಲಾಗುತ್ತಿದೆ. ಇದು ನಮಗೆ ಹೆಮ್ಮೆಯ ಸಂಗತಿ."

ಭಾರತದಲ್ಲಿ ಸದೃಢವಾದ ಸಮಗ್ರ ಲಾಜಿಸ್ಟಿಕ್ಸ್ ನೆಟ್‌ವರ್ಕ್ ಇರುವುದರಿಂದ ದೇಶದ ಒಳಗೆ ಮತ್ತು ಹೊರಗೆ ಮೇರ್ಸ್ಕ್‌ ಜಾಗತಿಕ ವ್ಯಾಪಾರ ಮಾಡಲು ಸಾಧ್ಯವಾಗಿದೆ. ಕಂಪನಿ 15 ಬಂದರುಗಳು, 350,000+ ಚದರ ಮೀಟರ್‌ ವಿಸ್ತೀರ್ಣವನ್ನು ಹೊಂದಿರುವ 26 ಗೋದಾಮುಗಳ ಮೂಲಕ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ವಿತರಣಾ ಜಾಲ ಭಾರತದ 80+% ಪಿನ್ ಕೋಡ್‌ಗಳನ್ನು ತಲುಪುತ್ತದೆ. ವಾರ್ಷಿಕವಾಗಿ ಮೇರ್ಸ್ಕ್, ಭಾರತ ಮತ್ತು ಭಾರತದಾಚೆ ಸುಮಾರು 1 ಮಿಲಿಯನ್ ಕಂಟೇನರ್‌ಗಳನ್ನು ನಿರ್ವಹಿಸುತ್ತಿದೆ; ವಾರಕ್ಕೆ 7,000+ ರೈಲುಮಾರ್ಗಗಳ ಮೂಲಕ ಕಳುಹಿಸುತ್ತಿದೆ. ಕಂಪನಿ 55 ಸ್ಥಳಗಳಲ್ಲಿ ಕಸ್ಟಮ್ಸ್ ಸೌಲಭ್ಯಗಳನ್ನು ಸಹ ನಿರ್ವಹಿಸುತ್ತಿದೆ ಮತ್ತು 10 ವಿಮಾನ ನಿಲ್ದಾಣಗಳಿಂದ ವಿಮಾನಗಳ ಮೂಲಕ ಸರಕು ಸೇವೆಗಳನ್ನು ಒದಗಿಸುತ್ತಿದೆ. ಸ್ಥಳೀಯವಾಗಿ ಗಟ್ಟಿಯಾಗಿ ನೆಲೆಯೂರಿರುವುದರಿಂದ ಮೇರ್ಸ್ಕ್, ಭಾರತೀಯ ವ್ಯವಹಾರಗಳಿಗೆ ತಗಲುವ ಲಾಜಿ ಸ್ಟಿಕ್ಸ್ ವೆಚ್ಚವನ್ನು ಕಡಿಮೆ ಮಾಡಲು ಮತ್ತು ಜಾಗತಿಕ ಉತ್ಪಾದನೆ ಮತ್ತು ರಫ್ತು ಶಕ್ತಿಕೇಂದ್ರ ವಾಗಬೇಕೆಂಬ ದೇಶದ ಮಹತ್ವಾಕಾಂಕ್ಷೆಗೆ ನೆರವಾಗಲು ಶ್ರಮಿಸುತ್ತಿದೆ.

*

ಕೋಡ್ ಕಾರ್ಗೋ 2025 ಮೂಲಕ ಮೇರ್ಸ್ಕ್ ಮತ್ತೊಮ್ಮೆ ಒತ್ತಿ ಹೇಳಿರುವುದೇನೆಂದರೆ: ಭಾರತ ದಾದ್ಯಂತ ಪ್ರತಿಭಾವಂತ ತಂತ್ರಜ್ಞರು ಜಾಗತಿಕ ವ್ಯಾಪಾರದ ಭವಿಷ್ಯವನ್ನು ಮಾತ್ರವೇ ಬದಲಿಸು ತ್ತಿಲ್ಲ, ಕೋಡ್ ಮಾಡುತ್ತಾರೆ, ಎಂಜಿನಿಯರಿಂಗ್ ಮಾಡುತ್ತಾರೆ ಮತ್ತು ದಕ್ಷತೆಯನ್ನು ಹೆಚ್ಚಿಸುತ್ತಾರೆ.

ಎ.ಪಿ. ಮೊಲ್ಲರ್ ಬಗ್ಗೆ - ಮೇರ್ಸ್ಕ್

ಎ.ಪಿ. ಮೊಲ್ಲರ್ - ಮೇರ್ಸ್ಕ್ ತನ್ನ ಗ್ರಾಹಕರ ಸಪ್ಲೈ ಚೈನ್ ಗಳನ್ನು ಸಂಪರ್ಕಿಸಲು ಮತ್ತು ಸರಳಗೊಳಿಸಲು ಕೆಲಸ ಮಾಡುವ ಒಂದು ಸಮಗ್ರ ಲಾಜಿಸ್ಟಿಕ್ಸ್ ಕಂಪನಿಯಾಗಿದೆ. ಲಾಜಿಸ್ಟಿಕ್ಸ್ ಸೇವೆಗಳಲ್ಲಿ ಜಾಗತಿಕ ನಾಯಕನಾಗಿ ಈ ಕಂಪನಿಯು 100,000+ ಗ್ರಾಹಕರನ್ನು ಹೊಂದಿದ್ದು ಸುಮಾರು 130 ದೇಶಗಳಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 100,000+ ಜನರನ್ನು ನೇಮಿಸಿ ಕೊಂಡಿದೆ. ಹೊಸ ತಂತ್ರಜ್ಞಾನಗಳು, ಹೊಸ ಹಡಗುಗಳು ಮತ್ತು ಪರ್ಯಾಯ ಇಂಧನ ಪರಿಹಾರ ಗಳೊಂದಿಗೆ 2040 ರ ವೇಳೆಗೆ ತನ್ನ ಇಡೀ ಸಪ್ಲೈ ಚೈನ್ ನಲ್ಲಿ ನಿವ್ವಳ-ಶೂನ್ಯ ಹೊರಸೂಸುವಿಕೆ ಸಾಧಿಸಲು ಬದ್ಧವಾಗಿದೆ.